ಗ್ಲಾಮರಸ್ ಆಗಿ ಕಾಣಬೇಕೇ.. ? ದುಪ್ಪಟ್ಟಾ ಹೀಗಿರಲಿ

  • by

ಇವತ್ತಿನ ದಿನಗಳಲ್ಲಿ ಯೂಥ್ ಫ್ಯಾಶನ್ ಹಾಗೂ ಸ್ಟೈಲಿಶ್ ವಿಚಾರದಲ್ಲಿ ಮುಂದೇ ಇದ್ದಾರೆ ಡ್ರೆಸ್ ಸೆನ್ಸ್ ಹಿಡಿದು ಮೇಕಪ್ ವರೆಗೂ ತುಂಬಾ ಕಾಳಜಿ ವಹಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವತಿಯರು ಗ್ಲಾಮರಸ್ ಆಗಿ ಕಾಣಲು ಬಯಸುತ್ತಾರೆ. ಇನ್ನು ಲೆಹಂಗಾ ಜತೆ ದುಪ್ಪಟ್ಟಾ, ಸೆಲ್ವಾರ್ ಜತೆ ದುಪ್ಪಟ್ಟಾ  ಹುಡುಗಿಯರ ಮೆಚ್ಚಿನ ಕಾಂಬಿನೇಷನ್ ಗಳಲ್ಲಿ ಒಂದು.

ಭುಜದಿಂದ ತೋಳಿನವರೆಗೆ ಟ್ರೆಡಿಂಗ್ 

ಚೂಡಿದಾರ ಹಾಗೂ ಲೆಹಂಗಾ ನೆಕ್ ಗೆ ವಿಶೇಷವಾದ ವಿನ್ಯಾ, ಮಾಡಿಕೊಳ್ಳಲು ಭುಜದಿಂದ ತೋಳಿನವರೆಗಿನ ದುಪ್ಪಟ್ಟಾ ವನ್ನು ಪಿನ್ ಮಾಡಬಹುದು. ಎಡಕೈಯಲ್ಲಿ ಅದನ್ನು ಹಿಡಿದುಕೊಳ್ಳಬೇಕು. ಇದು ಉಡುಪಿನ ಅಂದ ಹೆಚ್ಚಿಸುತ್ತದೆ. 

ಕುತ್ತಿಗೆ ಸುತ್ತ ಸುತ್ತಿಕೊಳ್ಳಿ 

ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. ಟ್ರೆಂಡ್ ಇದು . ಶರ್ಟ್ , ಕುರ್ತಾಗಳಿಗೂ ಹೀಗೆ ಧರಿಸಬಹುದು. ಕುತ್ತಿಗೆಗೆ ಸುತ್ತಿ , ಎರಡು ಬದಿಯಿಂದ ಇಳಿ ಬಿಡುವುದು ಕ್ಯಾಶುವಲ್ ನೋಟ ನೀಡುತ್ತದೆ. 

ಮುಂದಕ್ಕೆ ಇಳಿಯಬಿಡುವುದು.

ಕೆಲವೊಂದು ವೇಲ್ ಗಳು ಪಿನ್ ಹಾಕದಿದ್ದರೆ, ಮಾತೇ ಕೇಳುವುದಿಲ್ಲ ಹೇಗೆ ಹಾಕಿಕೊಂಡರೂ ಜಾರಿ ಬೀಡುತ್ತದೆ.ಅದಕ್ಕಾಗಿ ಹಲವರು ಅದನ್ನು ಮುಂದಕ್ಕೆ ಇಳಿ ಬಿಡುತ್ತಾರೆ. ಇದೊಂದು ಫ್ಯಾಶನ್ ಕೂಡಾ ಹೌದು. ಕಾಟನ್ , ತೆಳುವಾದ ವೇಲ್ ಗಳನ್ನು ಈ ರೀತಿ ಬಳಸಿದರೆ ಚಂದ ಕಾಣುತ್ತದೆ. ಬಾದನಿ ದುಪ್ಪಟ್ಟ ಈಗಲೂ ಧರಿಸುವುದನ್ನು ನೋಡಿದ್ದೇವೆ.

ಗುಜುರಾತಿ ಮಹಿಳೆಯರು ಸಾಮಾನ್ಯವಾಗಿ ಸಾಂಪ್ರದಾಯಿಕ ಉಡುಗೆ ಚೋಲಿ, ಓಡನಿಗಳನ್ನು ಧರಿಸುತ್ತಾರೆ. ಉಡುಗೆ,. ವಿಶಿಷ್ಟ ಕಸೂತಿ, ಕುಪ್ಪಸದ ಚೋಲಿ, ಹಾಗೂ ಹಗುರವಾದ ಪಾರದರ್ಶಕ ಬಟ್ಟೆ, ತಲೆಯ ಭಾಗದಲ್ಲಿ ಅಲಂಕರಿಸುವ ಓಡನಿ ಧರಿಸುತ್ತಾರೆ. 

ಗುಜುರಾತಿ ಮಹಿಳೆಯರ ವಸ್ತ್ರಗಳು ಗಾಢ ಬಣ್ಣದ ವೈವಿಧ್ಯ.. ಹೊಂದಿರುವುದರಿಂದ ಜತೆಗೆ ವಿವಿಧ ಹರಳುಗಳಿಂದ ಪುಟ್ಟ ಕನ್ನಡಿ, ಹಾಗೂ ಮಣಿ ಅಲಂಕೃತವಾಗಿರುತ್ತದೆ. ಬನಿ, ರಬರಿ, ಬವೆಲಿಯಾ ಬಗೆಯ ಕಸೂತಿ ವಿನ್ಯಾಸಗಳು ಅಧಿಕವಾಗಿ ಕಂಡು ಬರುತ್ತವೆ. ಹೀಗೆ ಕಸೂತಿ ವಿನ್ಯಾಸಗಳಿಂದ ಚೆಂದಗೊಳಿಸಿದ ಉಡುಗೆಗಳು ಚಿನ್ನದ ಬಣ್ಣದ ಅಥವಾ ಬೆಳ್ಳಿಯ ಬಣ್ಣದ ಜರಿಗಳಿಂದ ಅಲಂಕೃತಗೊಂಡು ವಿಶೇಷ ಸೊಬಗು ಬೀರುತ್ತದೆ. 

ಜಾಟ್ ಸಮುದಾಯದ ಗುಜುರಾತಿ ಮಹಿಳೆಯರು ಕಪ್ಪು ಹಾಗೂ ಕೆಂಪು ಬಣ್ಣದ ಚುನರಿ ಬಳಸುತ್ತಾರೆ. ರಬರಿ ಸಮುದಾಯದ ಗುಜುರಾತಿ ಮಹಿಳೆಯರು ಕಪ್ಪು ಮಿಶ್ರಿತ ಬಣ್ಣಗಳುಳ್ಳ, ಕನ್ನಡಿಗಳಿಂದ ಅಲಂಕೃತಗೊಂಡ ಉತ್ತ ಕುಪ್ಪಸದಂತಹ ವಸ್ತ್ರ ವಿನ್ಯಾಸ ಮಾಡುತ್ತಾರೆ. ಚಾಟ್ ಸಮುದಾಯ ಗುಜುರಾತಿ ಮಹಿಳೆಯರು ಕಪ್ಪುಮಿಶ್ರಿತ ಬಣ್ಣಗಳುಳ್ಳ ಕನ್ನಡಿಗಳಿಂದ ಕೂಡಿದ ಕಸೂತಿಯಿಂದ ಅಲಂಕೃತವಾದ ಉದ್ದ ಕುಪ್ಪಸದಂತಹ ವಸ್ತ್ರ ವಿನ್ಯಾಸ ಧರಿಸುತ್ತಾರೆ. 

ಬಾಂದನಿ ಶೈಲಿಯ ದುಪ್ಪಟ್ಟಾ…  

ಬಾಂದನಿ ಶೈಲಿಯ ದುಪ್ಪಟ್ಟಾಗಳನ್ನು ಇಂದಿಗೂ ಜನರು ಧರಿಸುತ್ತಾರೆ. ಬಣ್ಣ ಬಣ್ಣದ ಬಾಂದನಿ ಶೈಲಿಯ ದುಪ್ಪಟ್ಟಾಗಳು. ರಾಜಸ್ಥಾನ ಮತ್ತು ಗುಜುರಾತ್ ಬಾಂದನಿ ದುಪ್ಪಟ್ಟಾಗಳಿಗೆ ಪ್ರಸಿದ್ಧಿ ಪಡೆದಿದೆ. ಬಾಂದಿನಿ ಶೈಲಿಯ ಸೀರೆಗಳು , ದುಪ್ಪಟ್ಟಾಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ. ಬಿಳಿ ಹಾಗೂ ಕಪ್ಪು ಕುರ್ತಾ ಧರಿಸಿದ್ದರೆ. ಬಾಂದನಿ ಹೆಚ್ಚು ಮೆರಗು ನೀಡುತ್ತದೆ. 

ಚಂದೇರಿ ಸಿಲ್ಕ್ ದುಪ್ಪಟ್ಟಾ… 

ಚಂದೇರಿ ಸಿಲ್ಕ್ ದುಪ್ಪಟ್ಟಾ ನಿಮ್ಮ ಉಡುಪುಗಳಿಗೆ ಮೆರಗು ಹೆಚ್ಚಿಸುತ್ತವೆ. ಶ್ರೇಷ್ಠವಾದ ದುಪ್ಪಟ್ಟಾಗಳಲ್ಲಿ ಮಧ್ಯಪ್ರದೇಶ ಚಂದೇರಿ. ಎಂಬ ಸಣ್ಣ ಪಟ್ಟಣದಿಂದ ತಯಾರಿಸಲ್ಪಡುತ್ತವೆ. ಆದ್ರೆ ಇಲ್ಲಿನ ದುಪ್ಪಟ್ಟ ಸೊಬಗು ಹಾಗೂ ಸರಳತೆಗೆ ಹೆಚ್ಚು ಖ್ಯಾತಿ ಪಡೆದಿವೆ. ಚಾಂದೇರಿ ರೇಷ್ಮೆ ಹತ್ತಿ, ಮುಂತಾದವುಗಳಿಂದ ತಯಾರಿಸಲಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ