ತೂಕ ಇಳಿಸಬೇಕೆ..?

  • by

ಸರಾಸರಿ ತೂಕಕ್ಕಿಂತ ದೇಹದ ತೂಕವು ಹೆಚ್ಚಾಗಿ ಬೊಜ್ಜು ಆವರಿಸಿಕೊಂಡರೆ ಆಗ ಕಪಾಟಿನಲ್ಲಿರುವಂತಹ ಯಾವುದೇ ಬಟ್ಟೆ ಕೂಡ ಧರಿಸಲು ಆಗದು, ಇದು ಮಾತ್ರವಲ್ಲದೆ ಲಿಫ್ಟ್ ಕೆಟ್ಟು ಹೋದರೆ ಎರಡು ಮಹಡಿ ಮೆಟ್ಟಿಲು ಏರಿಕೊಂಡು ಹೋಗಲುಅಸಾಧ್ಯವಾಗುವುದು. ಈ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಕೆಲವರು ಹಾಗೆ ಬೊಜ್ಜು ದೇಹದೊಂದಿಗೆ ಜೀವನ ಸಾಗಿಸುತ್ತಾಇರುವರು. ಇನ್ನು ಕೆಲವರು ಅಂತಿಮ ಹಂತದಲ್ಲಿ ತಮ್ಮ ದೇಹದ ತೂಕ ಇಳಿಸಲು ವೈದ್ಯರು ಹೇಳಿದ ಕಾರಣದಿಂದಾಗಿ ತೂಕ ಇಳಿಸಲು
ಪ್ರಯತ್ನಿಸುವರು.

ಸರಿಯಾದ ವ್ಯಾಯಾಮ ಮತ್ತು ಕಠಿಣ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಇಂದಿನ ದಿನಗಳಲ್ಲಿ ನೂರಾರು ವಿಧಾನಗಳು ಇಂಟರ್ ನೆಟ್‌ನಲ್ಲಿ ನಿಮಗೆ ಸಿಗುವುದು. ಅದೇ ರೀತಿಯಾಗಿ ಮಾರುಕಟ್ಟೆಯಲ್ಲಿ ಕೂಡ ಹಲವಾರು ಉತ್ಪನ್ನಗಳು ತೂಕ ಇಳಿಸುವ ಭರವಸೆ ನೀಡುವುದು. ಹೀಗೆ ತೂಕಇಳಿಸಿಕೊಳ್ಳಬೇಕೆಂದು ದೃಢಸಂಕಲ್ಪ ಮಾಡಿದರೆ, ಆಗ ಖಂಡಿತವಾಗಿಯೂ ದಾರಿ ಇದೆ. ಅದಕ್ಕಾಗಿ ಜೀವನ ಕ್ರಮ ಹಾಗೂ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಈ ಲೇಖನದಲ್ಲಿ ಕೆಲವೊಂದು ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರಿಂದ
ತೂಕ ಕಳೆದುಕೊಳ್ಳಲು ಸಹಕಾರಿ ಆಗಲಿದೆ. ಆ ಆಹಾರಗಳು ಯಾವುದು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ತೂಕ ಇಳಿಸಲು ಏನಿದೆ ದಾರಿ..? ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ

ಪಪ್ಪಾಯಿ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಅದರಿಂದ ತೂಕ ಇಳಿಸಲು ತುಂಬಾ ನೆರವಾಗಲಿದೆ.

ಯಾಕೆಂದರೆ ಈ ಅದ್ಭುತ ಹಾಗೂ ರುಚಿಕರ ಹಣ್ಣಿನಲ್ಲಿ ಪಪೈನ್ ಎನ್ನುವ ಅಂಶವಿದೆ ಮತ್ತು ಇದು ಕೊಬ್ಬು ಕರಗಿಸಿ, ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು ಹಾಗೂ ದೇಹದಲ್ಲಿರುವಂತಹ ಅತಿಯಾದ ನೀರಿನಾಂಶವನ್ನು ತೆಗೆಯುವುದು. ಇದರಲ್ಲಿ ಹೀರಿಕೊಳ್ಳಬಹುದಾದ ನಾರಿನಾಂಶವಿದೆ ಮತ್ತು
ತುಂಬಾ ಕಡಿಮೆ ಕ್ಯಾಲರಿ ಇದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆಗ ಖಂಡತವಾಗಿಯೂ ದೇಹಕ್ಕೆ ಹಲವಾರು ಲಾಭಗಳು ಸಿಗುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಇದು ಹೆಚ್ಚು ತೂಕ ಕೂಡ ಹಾಕುವುದಿಲ್ಲ. ತೂಕ ಕೂಡ ಹಾಕುವುದಿಲ್ಲ.

ಸಲಾಡ್
ಹಣ್ಣುಗಳು ಹಾಗೂ ತರಕಾರಿಯಿಂದ ತಯಾರಿಸಿಕೊಂಡಿರುವಂತಹ ಸಲಾಡ್ ನ್ನು ಬೆಳಗ್ಗೆ ಸೇವಿಸಿದರೆ, ಖಂಡತವಾಗಿಯೂ ಅದರಿಂದ
ಹಲವಾರು ಲಾಭಗಳು ಇವೆ. ತರಕಾರಿ ಹಾಗೂ ಹಣ್ಣುಗಳಲ್ಲಿ ಹೀರಿಕೊಳ್ಳಬಹುದಾದ ನಾರಿನಾಂಶವಿದೆ ಮತ್ತು ಇದು ಹೊಟ್ಟೆಯನ್ನು
ತುಂಬುವಂತೆ ಮಾಡುವುದು. ಅದೇ ರೀತಿಯಾಗಿ ಇವುಗಳಲ್ಲಿ ಕ್ಯಾಲರಿ ಅಂಶವು ಕಡಿಮೆ ಇದೆ. ಇದರಿಂದ ಹೊಟ್ಟೆ ಭಾರ ಮತ್ತು
ಅಹಿತರವಾಗಿ ಇರದು. ತರಕಾರಿ ಹಾಗೂ ಹಣ್ಣುಗಳಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದರೊಂದಿಗೆ
ವಿಟಮಿನ್ ಗಳು ಹಾಗೂ ಖನಿಜಾಂಶಗಳು ಯಥೇಚ್ಛವಾಗಿದೆ.

ಸೇಬು

. ಸೇಬಿನಲ್ಲಿ ಇರುವಂತಹ ಅದ್ಭುತವಾದ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಸಹಕಾರಿ . ತೂಕ ಇಳಿಸಿಕೊಳ್ಳಲು ಬಯಸಿದರೆ
ಈ ಹಣ್ಣು ತುಂಬಾ ಪರಿಣಾಮಕಾರಿ. ಸೇಬಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಇದೆ ಮತ್ತು ಹೀರಿಕೊಳ್ಳಬಹುದಾದ ನಾರಿನಾಮಶವಿದೆ.
ಇದು ಬೇಗನೆ ಹೊಟ್ಟೆ ತುಂಬುವಂತೆ ಮಾಡುವುದು ಮತ್ತು ದೇಹಕ್ಕೆ ಯಾವುದೇ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಆಗುವುದಿಲ್ಲ.
ಬಾದಾಮಿ
ನೀರಿನಲ್ಲಿ ನೆನಸಲು ಹಾಕಿರುವಂತಹ ಬಾದಾಮಿ ಸೇವಿಸಿದರೆ ಅದು ಮೆದುಳಿಗೆ ತುಂಬಾ ಒಳ್ಳೆಯದು ಎಂದು
ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಆದರೆ ಬಾದಾಮಿ ತಿಂದು ತೂಕ ಇಳಿಸಬಹುದು ಎಂದು ನಿಮಗೆ ತಿಳಿದಿದೆಯಾ?

ಒಂದು ದಶಕದ ಮೊದಲು ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ ದಿನವಿಡಿ ಬಾದಾಮಿ ಸೇವಿಸಿರುವಂತಹ ಜನರು ಆರು ತಿಂಗಳಲ್ಲಿ ಶೇ.18ರಷ್ಟು ದೇಹದ ತೂಕವನ್ನು ಇಳಿಸಿಕೊಂಡಿರುವರು ಎಂದು ಹೇಳಿದೆ.
ದಾಲ್ಚಿನ್ನಿ ನೀರು ದಾಲ್ಚಿನಿಯು ಇನ್ಸುಲಿನ್ ನ ತದ್ರೂಪವಾಗಿದೆ. ಇದರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಮತ್ತು ಕೊಬ್ಬುಶೇಖರಣೆ ನಿಯಂತ್ರಿಸುವಂತಹ ಗುಣವು ಇದೆ. ತೂಕ ಇಳಿಸಿಕೊಳ್ಳಲು ಇದ್ದರೆ ಆಗ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ
ದಾಲ್ಚಿನಿ ನೀರು ಕುಡಿಯಿರಿ. ಇದನ್ನು ತಯಾರಿಸುವ ವಿಧಾನ ಹೀಗಿದೆ. ½ ಚಮಚ ದಾಲ್ಚಿನಿ ಹುಡಿಯನ್ನು ಒಂದು ಲೋಟ ಬಿಸಿ ನೀರಿಗೆ
ಹಾಕಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಒಂದು ಚಮಚ ಜೇನುತುಪ್ಪ ಹಾಕಿ ಸರಿಯಾಗಿ ಕಲಸಿಕೊಂಡು ಕುಡಿಯಿರಿ.
ಇದು ಬಿಸಿ ಇರುವಾಗಲೇ ಸೇವಿಸಿ.

  • ಕಲ್ಲಂಗಡಿ
  • ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಹಾಗೂ ಹೀರಿಕೊಳ್ಳಬಹುದಾದ ನಾರಿನಾಂಶವಿದೆ. ಇದರಿಂದ ಬೆಳಗ್ಗೆ ಖಾಲಿ
  • ಹೊಟ್ಟೆಯಲ್ಲಿ ಇದನ್ನು ತಿಂದರೆ ಅದು ಎರಡು ದೊಡ್ಡ ಲೋಟ ನೀರು ಕುಡಿದಷ್ಟು ಸಮಾನವಾಗಿರುವುದು. ಇದರಿಂದ ನೀವು ತೂಕ
  • ಇಳಿಸಲು ಬಯಸಿದ್ದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿರಿ.

ಜೇನುತುಪ್ಪ
ಜೇನುತುಪ್ಪವು ತುಂಬಾ ಸಂಕೀರ್ಣ, ಅರ್ಧ ಜೀರ್ಣಗೊಂಡಿರುವ ಜೇನುಹುಳದ ಉತ್ಪನ್ನವಾಗಿದ್ದು, ಐದು ವಿಧದ ಸಕ್ಕರೆ
ಇದರಲ್ಲಿದೆ. ಇದರಿಂದ ನೀವು ಸಾಮಾನ್ಯ ಸಕ್ಕರೆ ಬದಲು ಜೇನುತುಪ್ಪವನ್ನು ಸಕ್ಕರೆಗೆ ಪರ್ಯಾಯವಾಗಿ ಬಳಸಿಕೊಂಡರೆ
ತುಂಬಾ ಒಳ್ಳೆಯದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ
ಕುಡಿದರೆ ಖಂಡಿತವಾಗಿಯೂ ತೂಕ ಇಳಿಸಲು ಸಹಕಾರಿ ಆಗಿರುವುದು.
ಲಿಂಬೆ ಪಾನೀಯ

ತಾಜಾ ಲಿಂಬೆ ಹಣ್ಣಿನ ರಸ ತೆಗೆದು ಅದನ್ನು ಒಂದು ಲೋಟ ಬಿಸಿ ನೀಡಿಗೆ ಹಿಂಡಿಕೊಂಡು, ಸಕ್ಕರೆ ಮತ್ತು ಉಪ್ಪು ಹಾಕದೆ
ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆಗ ಖಂಡಿತವಾಗಿಯೂ ತೂಕ ಇಳಿಸಲು ಇದು ಸಹಕಾರಿ. ಯಾಕೆಂದರೆ ಇದರಲ್ಲಿ ಉನ್ನತ
ಮಟ್ಟದ ವಿಟಮಿನ್ ಸಿ ಇದೆ. ಇದು ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು ಮತ್ತು ಚಯಾಪಚಯ ಕ್ರಿಯೆ
ವೃದ್ಧಿಸುವುದು.
ಹೀಗೆ ಪರಿಣಾಮಕಾರಿಯಾದ ಜೀವನ ಶೈಲಿ ಮತ್ತು ಆಹಾರ ವ್ಯಾಯಾಮಗಳನ್ನು ಮಾಡುವುದರಿಂದ ದೇಹದ ತೂಕವನ್ನು
ಶೀಘ್ರವೇ ಇಳಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ