ಗುಲಾಬಿ ತುಟಿಗಳಿಗಾಗಿ ಇಲ್ಲಿದೆ ಟಿಪ್ಸ್..!

 • by

ಚೆಂದುಟಿ ಪಡೆಯಲು ಮನೆಮದ್ದು
ಚೆಂದುಟಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಒಡಕಿಲ್ಲದ ಸುಂದರ ಗುಲಾಬಿ ತುಟಿಗಳು ಎಲ್ಲಾ
ಹೆಣ್ಣು ಮಕ್ಕಳ ಬಯಕೆಯಾಗಿದೆ. ಆದರೆ ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ
ಮೂಲಕ ನಿಮ್ಮ ತುಟಿಯನ್ನು ಕೆಂಪಾಗಿಸಿಕೊಳ್ಳಬಹುದು. ಬನ್ನಿ ಹೇಗೆ ಎಂಬುದನ್ನು ನೋಡೋಣ.
ಟೂಥ್ ಬ್ರಶ್: ತುಟಿ ಮೃದುವಾಗಿಸಲು ಹಳೆಯ ಮತ್ತು ಮೃದುವಾದ ಟೂಥ್ ಬ್ರಶ್ ನಿಂದ
ಮೆತ್ತಗೆ ಉಜ್ಜಬೇಕು. ಇದರಿಂದ ತುಟಿಯ ಮೇಲಿದ್ದ ನಿರ್ಜೀವ ಮತ್ತು ಕಿತ್ತುಬಂದ ಚರ್ಮ
ನಿವಾರಣೆಯಾಗಿ ತುಟಿ ಕೆಂಪಾಗಿ ಹೊಳೆಯುತ್ತದೆ.

ಜೇನು: ಜೇನು ಮತ್ತು ಗುಲಾಬಿ ಪೇಸ್ಟ್ ನಿಂದ ತುಟಿಗೆ ಮೆತ್ತಗೆ ಮಸಾಜ್ ಮಾಡಿಕೊಳ್ಳುವುದರಿಂದ
ತುಟಿ ಕೆಂಪಗಾಗುತ್ತದೆ.

 1. ಕ್ಯಾರೆಟ್ ಬೀಟ್ ರೂಟ್: ತುಟಿಗೆ ಕ್ಯಾರೆಟ್ ಅಥವಾ ಬೀಟ್ ರೂಟ್ ರಸದಿಂದ ಅದ್ದಿದ
  ಹತ್ತಿಯನ್ನು ತುಟಿಯ ಮೇಲಿಟ್ಟುಕೊಂಡರೆ ಚೆಂದುಟಿ ನಿಮ್ಮದಾಗುತ್ತದೆ.
 2. ಕಿತ್ತಳೆ ಸಿಪ್ಪೆ: ಕಿತ್ತಳೆ ಸಿಪ್ಪೆಯನ್ನು ಎಸೆಯಬೇಡಿ. ಇದನ್ನು ತುಟಿಯ ಮೇಲೆ ಉಜ್ಜಿದರೆ
  ತುಟಿಗಳು ಕೋಮಲವಾಗುತ್ತದೆ.
 3. ಕೇಸರಿ, ತುಪ್ಪ: ಕೇಸರಿಯನ್ನು ತುಪ್ಪದೊಂದಿಗೆ ಬೆರೆಸಿ ತುಟಿ ಒಣಗಿದಂತಾಗಲೆಲ್ಲಾ
  ಹಚ್ಚಿಕೊಂಡರೆ ಬೇಗನೆ ಫಲಿತಾಂಶ ನೀಡುತ್ತದೆ.
 4. ಐಸ್ ಕ್ಯೂಬ್: ಐಸ್ ಕ್ಯೂಬ್ ನಿಂದ ತುಟಿಯನ್ನು ಮಸಾಜ್ ಮಾಡಿಕೊಳ್ಳುತ್ತಿದ್ದರೆ ತುಟಿ
  ಮೃದುಗೊಳ್ಳುವುದರೊಂದಿಗೆ ತೇವಾಂಶವೂ ಇರುವಂತೆ ನೋಡಿಕೊಳ್ಳುತ್ತದೆ.
 5. ಗುಲ್ಕನ್: ರೋಸ್ ಗುಲ್ಕನ್ ಕೇವಲ ತಿನ್ನಲು ಮಾತ್ರ ಸಿಹಿಯಾಗಿರುವುದಿಲ್ಲ. ತುಟಿ
  ಕೆಂಪೇರಿಸಲೂ ಬಳಸಬಹುದು. ಇದರಲ್ಲಿನ ಸಕ್ಕರೆ ಅಂಶ ನಿಮ್ಮ ತುಟಿಯನ್ನು ಹೆಚ್ಚು ಕಾಲ
  ಮೆತ್ತಗಿರುವಂತೆ ನೋಡಿಕೊಳ್ಳುತ್ತದೆ.

ರಾತ್ರಿ ಮಲಗುವ ಮೊದಲು ತುಟಿಗೆ ಜೇನುತುಪ್ಪ ಹಚ್ಚಿಕೊಂಡು ಮಲಗಿದರೆ ನಿಮ್ಮ ತುಟಿಗಳು
ತುಂಬಾ ಮೃದುವಾಗಿರುತ್ತವೆ.
2 ಟೀಸ್ಪೂನ್ ಸಕ್ಕರೆ ಮತ್ತು ಜೇನುತುಪ್ಪವನ್ನು ಸೇರಿಸಿ ತುಟಿಗೆ ಹಚ್ಚುವುದರಿಂದ ತುಟಿಗಳು
ಕೋಮಲವಾಗುತ್ತವೆ. ರಾತ್ರಿ ಊಟದ ನಂತರ ತುಟಿಗಳಿಗೆ ತುಪ್ಪವನ್ನು ಹಚ್ಚುವುದರಿಂದ
ತುಟಿಗಳು ಮೃದುವಾಗಿಯೂ ಮತ್ತು ಕಾಂತಿಯುತವಾಗಿ ಕಂಗೊಳಿಸುತ್ತವೆ.

ಇದರ ಜೊತೆಗೆ ತುಟಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ದೇಹದಲ್ಲಿ ನೀರಿನ ಅಂಶ
ಕಡಿಮೆಯಾದಾಗ ತುಟಿಗಳು ಶುಷ್ಕತೆಯಿಂದ ಒಡೆಯುವುದು. ಅದೇ ರೀತಿ ರಕ್ತದ ಕೊರತೆ
ಉಂಟಾದರೆ ತುಟಿಯು ಬಣ್ಣವನ್ನು ಕಳೆದುಕೊಂಡು ಬಿಳುಚಾಗಿ ಕಾಣಿಸಿಕೊಳ್ಳುತ್ತದೆ. ಹೀಗೆ ಅನೇಕ
ಆರೋಗ್ಯ ಸಮಸ್ಯೆಗಳು ಉಂಟಾದಾಗ ಅವು ತುಟಿಗಳ ಮೂಲಕ ವ್ಯಕ್ತವಾಗುತ್ತದೆ.
ತುಟಿಗಳ ಮೇಲೆ ಚಿಕ್ಕದಾದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇವು ಅತ್ಯಂತ ನೋವಿನಿಂದ
ಕೂಡಿದ್ದು, ತುಟಿ ಒಡೆಯುವ ಮೂಲಕ ಅಧಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆಗಳಿರುತ್ತವೆ. ಈ
ಸಮಸ್ಯೆಯು ಹರ್ಪಿಸ್ ವೈರಸ್‍ನಿಂದ ಉಂಟಾಗುವುದು. ಈ ರೋಗವು ಸಾಂಕ್ರಾಮಿಕ ರೋಗ.
ಇಂತಹ ವ್ಯಕ್ತಿಗಳು ಬಳಸಿದ ತುಟಿ ಉತ್ಪನ್ನಗಳನ್ನು ಬಳಸಬಾರದು.

ತುಟಿಯ ಮೂಲೆಗಳು ಸೀಳುವಿಕೆಯಿಂದ ನೋವನ್ನು ಅನುಭವಿಸುತ್ತಿದ್ದೀರಿ ಎಂದಾದರೆ ದೇಹದಲ್ಲಿ
ಜೀವಸತ್ವದ ಕೊರತೆ ಉಂಟಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದು ಕೆಲವೊಮ್ಮೆ ಶಿಲೀಂದ್ರಗಳ
ಸೊಂಕು ಎನ್ನುವುದನ್ನು ಸಹ ಸೂಚಿಸುತ್ತದೆ. ಒತ್ತಡ ಮತ್ತು ಆತಂಕಗಳು ಹೆಚ್ಚಾದಾಗ ಈ ಸಮಸ್ಯೆ
ಉಂಟಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

ನಿಮ್ಮ ತುಟಿಗಳು ಆಗಾಗ ಒಣಗಿದಂತೆ ಆಗಿರುತ್ತದೆ ಎಂದಾಗ ಲಿಪ್ ಬಾಮ್ ಹಚ್ಚುವುದರ ಮೂಲಕ
ಸಮಸ್ಯೆಯನ್ನು ಮರೆಮಾಚಲು ಪ್ರಯತ್ನಿಸದಿರಿ. ಇದು ದೇಹದಲ್ಲಿ ನೀರಿನ ಪ್ರಮಾಣ
ಕಡಿಮೆಯಾಗಿದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಹಾಗಾಗಿ ಅಂತಹ ಕುರುಹು ಕಂಡುಬಂದರೆ
ಮೊದಲು ಆದಷ್ಟು ನೀರನ್ನು ಸೇವಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.

ಕೆಲವೊಮ್ಮೆ ನಮ್ಮ ತುಟಿಗಳು ಕಂದು ಬಣ್ಣಕ್ಕೆ ತಿರುಗಬಹುದು ಅಥವಾ ಗಾಢವಾದ ಬಣ್ಣಕ್ಕೆ
ತಿರುಗಬಹುದು. ಇದು ಅತಿಯಾಗಿ ಧೂಮಪಾನ ಮಾಡುವುದರಿಂದಲೂ ಉಂಟಾಗುತ್ತದೆ.
ಕೆಲವೊಮ್ಮೆ ಯಕೃತ್ತಿನ ಸಮಸ್ಯೆ ಉಂಟಾದರೆ ತುಟಿಗಳು ಗಾಢವಾದ ಬಣ್ಣಕ್ಕೆ ತಿರುಗುತ್ತವೆ.
ಇದ್ದಕ್ಕಿದ್ದಂತೆ ತುಟಿಯ ಬಣ್ಣ ಗಾಢ ಅಥವಾ ಕಂದು ಬಣ್ಣಕ್ಕೆ ತಿರುಗಿದರೆ ವೈದ್ಯರಲ್ಲಿ
ಪರೀಕ್ಷಿಸಿಕೊಳ್ಳುವುದು ಉತ್ತಮ.

ತುಟಿಯಲ್ಲಿ ಊತ ಕಾಣಿಸಿಕೊಳ್ಳುತ್ತಿದೆ ಎಂದರೆ ಆಂತರಿಕ ಅಲರ್ಜಿ ಕಾರಣವಾಗಿರುತ್ತದೆ. ತುಟಿಗೆ
ಅನ್ವಯಿಸುವ ಬಣ್ಣ, ಲಿಪ್ ಬಾಮ್, ಔಷಧಿ ಸೇರಿದಂತೆ ಇನ್ನಿತರ ಸೌಂದರ್ಯ ವರ್ಧಕ
ಉತ್ಪನ್ನಗಳಿಂದಲೂ ಉಂಟಾಗುವುದು. ಇಂತಹ ಅಲರ್ಜಿ ಮಾರಣಾಂತಿಕ ಕಾಯಿಲೆಯೂ ಆಗುವ
ಸಾಧ್ಯತೆಗಳಿರುತ್ತವೆ. ಆದ್ದರಿಂದ ಬಹುಬೇಗ ವೈದ್ಯರಲ್ಲಿ ತೋರಿಸಿಕೊಳ್ಳಲು ಮರೆಯದಿರಿ

ತುಟಿಯಲ್ಲಿ ನೋವು ಕಾಣಿಸಿಕೊಂಡರೆ ನಿಮ್ಮ ತುಟಿಗೆ ಅಲರ್ಜಿ ಉಂಟಾಗಿದೆ ಎಂದು ತಿಳಿಸುತ್ತದೆ.
ತುಟಿಗೆ ಬಳಸುವ ಸೌಂದರ್ಯ ವರ್ಧಕ ಉತ್ಪನ್ನಗಳು ಮತ್ತು ಟೂತ್‍ಪೇಸ್ಟ್ ಅಲರ್ಜಿಯಿಂದಲೂ
ಸಹ ತುಟಿಯಲ್ಲಿ ಅಲರ್ಜಿ ಉಂಟಾಗಬಹುದು. ಸಮಸ್ಯೆಗಳು ಗಮನಕ್ಕೆ ಬಂದಾಗ ಬಹುಬೇಗ
ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ, ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ
ತುಟಿಯ ಸಂದುಗಳಲ್ಲಿ ಸೀಳುವಿಕೆ ಕಾಣಿಸಿಕೊಳ್ಳುತ್ತದೆ(ಆಂಗುಲರ್ ಚೆಲಿಟಿಸ್). ಈ ಸ್ಥಿತಿಯು
ರೋಗಿಗಳಿಗೆ ಮತನಾಡಲು, ನಗಲು ಅಷ್ಟೆ ಅಲ್ಲ ತಿನ್ನಲು ಕೂಡ ತೊಂದರೆ ಮಾಡುತ್ತದೆ.
ಆಂಗುಲರ್ ಚೆಲಿಟಿಸ್ ಬೇರೆ ಅನೇಕ ರೋಗಗಳ ಲಕ್ಷಣ ಕೂಡ ಆಗಿದೆ, ಆದ್ದರಿಂದ ಬೇಗನ ರಕ್ತ
ಪರೀಕ್ಷೆ ಮಾಡಿಸಿಕೊಳ್ಳಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ