ಚಳಿಗಾಲದಲ್ಲಿ ದೇಹದ ಕಾಳಜಿ ಮಾಡಿ..!

  • by

ಚಳಿಗಾಲದಲ್ಲಿ ಕೂದಲಿನ ತ್ವಚೆಯ ಆರೈಕೆ
ಕೆಲವರಿಗೆ ಚಳಿಗಾಲ ಬರುತ್ತಿರುವಾಗಲೆ ನಡುಕ ಪ್ರಾರಂಭವಾಗುತ್ತದೆ, ಅದು ಚಳಿಯಿಂದಾಗಿ ಅಲ್ಲ
ಕಾಲದಲ್ಲಿ ಉಂಟಾಗುವ ತ್ವಚೆ ಸಮಸ್ಯೆಗಳಿಂದ. ಬೇರೆ ಕಾಲದಲ್ಲಿ ತ್ವಚೆ ಸಮಸ್ಯೆ ಉಂಟಾಗುತ್ತಿದ್ದರೂ
ಚಳಿಗಾಲದಲ್ಲಿ ತ್ವಚೆಯ ಸಮಸ್ಯೆ ಹೆಚ್ಚಾಗುವುದು. ಅದರಲ್ಲಿ ಚರ್ಮ ಒಡೆಯುವುದು ಒಂದು ಪ್ರಮುಖ
ಸಮಸ್ಯೆಯಾಗಿರುತ್ತದೆ. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಚಳಿಗಾಲ ಚರ್ಮದ ಸಮಸ್ಯೆಕ್ಕೆ ಪರಿಹಾರ
ಕಂಡುಕೊಳ್ಳಬಹುದಾಗಿದೆ .ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಇರಬೇಕಾಗುತ್ತದೆ ಅದಕ್ಕಾಗಿ
ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು, ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು
ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಚಳಿಗಾಲದಲ್ಲಿ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನು ಬಳಸಬೇಕು, ಅತಿ
ಬೆಚ್ಚಗಿನ ನೀರು ಚರ್ಮಕ್ಕೆ ಒಳ್ಳೆಯದಲ್ಲ, ಮೈಗೆ ಸೋಪು ಕೂಡ ಅತಿ ನೊರೆ ಬರುವ ಹಾಗೆ ಉಜ್ಜುವುದು
ಒಳ್ಳೆಯದಲ್ಲ. ಸ್ನಾನ ಮಾಡುವಾಗ ಚೇರಿ ಅಥವಾ ಸ್ಮ್ರಬ್ಬರ್ ಬಳಸುವುದರಿಂದ ದೇಹಕ್ಕೆ ಫ್ರೆಶ್ ಲುಕ್
ಸಿಗುವುದು.
ಚಳಿಗಾಲದಲ್ಲಿ ಪಾದದಲ್ಲಿ ಬಿರುಕು ಉಂಟಾಗೋದು ಸಾಮಾನ್ಯ. ಇದಕ್ಕೆ ಮೊದಲೇ ಎಚ್ಚರಿಕೆ ವಹಿಸಿದ್ರೆ
ಉತ್ತಮ. ಆದ್ದರಿಂದ ಹೊರಗಡೆ ಹೋಗುವಾಗ ಕಾಲಿಗೆ ಶೂ, ಸಾಕ್ಸ್ ಧರಿಸಿ. ಹಾಗೂ ಬಿರುಕು
ಉಂಟಾಗಿದ್ದರೆ ಚಿಂತೆ ಬೇಡ. ರಾತ್ರಿ ಮಲಗುವ ಮುನ್ನ ಕಾಲನ್ನ ಬೆಚ್ಚಗಿನ ನೀರಿನಲ್ಲಿ ತೊಳೆದು,
ಬಟ್ಟೆಯಿಂದ ಒರೆಸಿ, ವ್ಯಾಸಲೀನ್ ಅಥವಾ ಬಾಡಿ ಲೋಷನ್/ಫುಟ್ ಕ್ರೀಮ್ ಹೆಚ್ಚಿಕೊಳ್ಳಿ. ಪಾದದಲ್ಲಿ
ಜಾಸ್ತಿ ಬಿರುಕಿದ್ದರೆ ಅದಕ್ಕೆಂದೇ ಇರುವ ಕ್ರ್ಯಾಕ್ ಹೀಲ್ ಆಯಿಂಟ್‍ಮೆಂಟ್ ಹಚ್ಚಿ. ವ್ಯಾಸಲೀನ್ ಕೂಡ
ಬಳಸಬಹುದು. ಒಂದೆರಡು ನಿಮಿಷಗಳ ನಂತರ ಸಾಕ್ಸ್ ಧರಿಸಿ ನಂತರ ಮಲಗಿ. ಬೆಳಗ್ಗೆ ಎದ್ದ ನಂತರ
ನಿಮ್ಮ ಕಾಲು ಸಾಫ್ಟ್ ಆಗಿರೋದನ್ನ ನೀವೇ ಗಮನಿಸಬಹುದು.
ಚಳಿಗಾಲದಲ್ಲಿ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದು ಒಳ್ಳೆಯದು, ವಾರಕ್ಕೊಮ್ಮೆ ಎಣ್ಣೆ ಸ್ನನ
ಮಾಡುವುದರಿಂದ ಅದು ದೇಹದ ಕಾಂತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತುಟಿ ಒಣಗುವುದು ಚಳಿಗಾಲದಲ್ಲಿ
ಸಾಮಾನ್ಯ, ಆದ್ದರಿಂದ ತುಟಿಗೆ ಬಾಮ್ ಅಥವಾ ತುಪ್ಪ ಸವರ ಬೇಕು, ಇದರಿಂದ ತುಟಿ ಒಡೆಯುವುದಿಲ್ಲ.
ಚಳಿಗಾಲವೆಂದರೆ ಅದು ದೇಹವನ್ನು ಹಿಂಡಿಹಿಪ್ಪೆ ಮಾಡುವಂತಹ ಸಮಯ. ಯಾಕೆಂದರೆ ಈ ಸಮಯದಲ್ಲಿ
ಶೀತ ವಾತಾವರಣದಲ್ಲಿ ದೇಹದ ಪ್ರತಿಯೊಂದು ಅಂಗಾಂಗಗಳಿಗೆ ಕೂಡ ಪ್ರಭಾವ ಉಂಟಾಗುವುದು.
ಇದರಲ್ಲಿ ಕೂದಲು ಕೂಡ ಒಂದಾಗಿದೆ. ಆದರೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ವಾರದಲ್ಲಿ

ಮೂರು ಸಲವಾದರೂ ಕೂದಲನ್ನು ತೊಳೆಯಬೇಕು. ಅದರಲ್ಲೂ ಚಳಿಗಾಲದಲ್ಲಿ ಕೂದಲಿನ ಬಗ್ಗೆ ಹೆಚ್ಚಿನ
ಕಾಳಜಿ ವಹಿಸುವುದು ಅತೀ ಅಗತ್ಯ. ಕೂದಲನ್ನು ಚಳಿಗಾಲದಲ್ಲಿ ತೊಳೆಯುವಾಗ ನೀವು ಪಾಲಿಸಬೇಕಾದ
ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಚಳಿಗಾಲದಲ್ಲಿ ಬಿಸಿ ನೀರು ದೇಹಕ್ಕೆ ತುಂಬಾ ಹಿತವನ್ನು ನೀಡುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ
ತಿಳಿದಿರುವ ವಿಚಾರ. ಆದರೆ ಬಿಸಿಯಾದ ನೀರಿನಿಂದ ಕೂದಲು ತೊಳೆಯುವಂತಹ ತಪ್ಪನ್ನು ನೀವು
ಮಾಡಬೇಡಿ. ಉಗುರುಬೆಚ್ಚಗಿನ ನೀರು ಮಾತ್ರ ಬಳಸಿ. ಬಿಸಿ ನೀರು ಕೂದಲನ್ನು ಎಳೆಗಳನ್ನು
ಸ್ಥಿರವಲ್ಲದಂತೆ ಮಾಡುವುದು ಮತ್ತು ಇದರಿಂದ ಅದರ ಕೋಶಗಳು ತುಂಬಾ ದುರ್ಬಲವಾಗುವುದು.
ಚಳಿಗಾಲವು ತುಂಬಾ ಒಣಗುವಂತೆ ಮಾಡುವುದು ಮತ್ತು ನಿಮ್ಮ ಕೂದಲು ಮೊದಲೇ ಒಣ
ಕೂದಲಾಗಿದ್ದರೆ ಶಾಂಪೂ ಹಾಕಿ ತೊಳೆದರೆ ಮತ್ತಷ್ಟು ಕೂದಲು ಒಣಗುವುದರಲ್ಲಿ ಸಂಶಯವಿಲ್ಲ.
ಮೊಶ್ಚಿರೈಸರ್ ಉಳಿದುಕೊಳ್ಳಲು ಕಂಡೀಷನರ್ ಬಳಸಿ. ಆದರೆ ಕೂದಲು ತುಂಬಾ ತೆಳು ಮತ್ತು ಎಣ್ಣೆಯುಕ್ತ
ತಲೆಬುರುಡೆಯಿದ್ದರೆ ಸಲ್ಫೇಟ್ ಇಲ್ಲದಿರುವ ಶಾಂಪೂ ಬಳಸಿ. ಅತಿಯಾಗಿ ತಲೆಬುರುಡೆಯು ಒಣಗಿ
ಹೋದರೆ ಅದರಿಂದ ಕೋಶಗಳು ಸಡಿಲಗೊಂಡು ಕೂದಲು ಉದುರುವುದು ಮತ್ತು ತಲೆಹೊಟ್ಟು
ಉಂಟಾಗುವುದು. ಚಳಿಗಾಲದಲ್ಲಿ ನೀವು ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ
ತಲೆಬುರುಡೆಯಲ್ಲಿ ತೇವಾಂಶವು ಉಳಿದುಕೊಳ್ಳುವುದು. ಶಾಂಪೂ ಹಾಕಿಕೊಳ್ಳುವ ಮೊದಲು ನೀವು
ಸರಿಯಾಗಿ ಕೂದಲನ್ನು ಬೇರ್ಪಡಿಸಿಕೊಳ್ಳಿ. ಇದರಿಂದ ಕೂದಲು ತುಂಡಾಗುವುದು ಮತ್ತು ಗಡುಸಾಗುವುದು
ತಪ್ಪುವುದು. ಕೂದಲಿಗೆ ತುಂಬಾ ಮೃಧುವಾಗಿರುವ ಬಾಚಣಿಗೆ ಬಳಸಿಕೊಳ್ಳಿ. ಕೂದಲು ತೊಳೆಯುವ
ಮೊದಲು ಸರಿಯಾದ ಆರೈಕೆ ಕ್ರಮ ಪಾಲಿಸಿ ಇದು ತುಂಬಾ ಕಠಿಣವೆನಿಸಿದರೂ ನೀವು ವಾರದಲ್ಲಿ ಒಂದು
ಸಲ ಕೂದಲು ತೊಳೆಯುವ ಮೊದಲು ಕೆಲವು ಕ್ರಮ ಪಾಲಿಸಬೇಕು. ಕೂದಲು ತೊಳೆಯುವ ಮೊದಲು
ನೈಸರ್ಗಿಕ ಹೇರ್ ಪ್ಯಾಕ್ ಅಥವಾ ಕೂದಲಿನ ಪ್ರೋಟೀನ್ ಕ್ರೀಮ್ ಬಳಸಿ. ಕೂದಲು ತೊಳೆದ ಬಳಿಕ
ಸರಿಯಾದ ಸೀರಮ್ ಬಳಸಿ. ಕೂದಲು ತೊಳೆಯುವಾಗ ಒಂದಕ್ಕೊಂದನ್ನು ಉಜ್ಜಿಕೊಳ್ಳಬೇಡಿ
ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಕೈಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಕೂದಲಿಗೆ
ಶಾಂಪೂ ಹಚ್ಚಿಕೊಳ್ಳಿ. ಅಂಗೈ ಬಳಸಬೇಡಿ ಅಥವಾ ಗಟ್ಟಿಯಾಗಿ ಉಜ್ಜಿಕೊಳ್ಳಬೇಡಿ. ಚಳಿಗಾಲದಲ್ಲಿ
ಕೂದಲು ಒರಟು ಹಾಗೂ ಒಣಗಿದಂತೆ ಕಾಣುತ್ತದೆ. ಇದು ಮಾಯಿಶ್ಚರೈಸ್ ಅನ್ನು ಕಳೆದುಕೊಳ್ಳುತ್ತದೆ

ಹಾಗೂ ಕೂದಲಿನ ಅಂದವನ್ನು ಬದಲಾಯಿಸುತ್ತದೆ. ಹಾಗಾಗಿ ಬಿಸಿ ಎಣ್ಣೆಯ ಮಸಾಜ್ ಕೂದಲಿನ
ಶೈಲಿಯನ್ನು ಬದಲಾಯಿಸುತ್ತದೆ, ಹಾಗೂ ಮರು – ಹೈಡ್ರೇಟ್ಸ್ ಅನ್ನು ಒದಗಿಸುತ್ತದೆ. ಬಿಸಿ ಎಣ್ಣೆಯು
ಚಳಿಗಾಲದಲ್ಲಿ ಉಂಟಾಗಿರುವ ಕೂದಲಿನ ಒರಟನ್ನು ಹೋಗಲಾಡಿಸುತ್ತದೆ. ಬಿಸಿ ಎಣ್ಣೆ ಮಸಾಜ್ ಅನ್ನು
ಯಾವುದೇ ಎಣ್ಣೆಯನ್ನು ಬಳಸಿಕೊಂಡು ಕೂಡ ಮಾಡಬಹುದು. ಚಲಿಗಾಲದಲ್ಲಿ ಇದನ್ನು ನಿರಂತರವಾಗಿ
ಮಾಡಿದರೆ, ತುಂಬಾ ಉಪಯುಕ್ತವಾಗಿರುತ್ತದೆ. ಚಳಿಗಾಲಕ್ಕೆ ಕಂಡೀಷನರ್‌ಗಳು ತುಂಬಾ
ಉತ್ತಮವಾದುದು. ಉತ್ತಮ ಗುಣಮಟ್ಟದ ಕಂಡೀಷನರ್‌ಗಳಿಂದ ಕೂದಲಿನ ತುದಿ ಸೀಳಾಗುವಿಕೆ
ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಕಂಡೀಷನ್‌ನ ಬಳಕೆ ಅತ್ಯವಶ್ಯಕವಾದುದು. ನೀವು ಶಾಂಪು
ಬಳಸುವುದಕ್ಕಿಂತ ಮುನ್ನ ಕಂಡೀಷನರ್ ಅನ್ನು ಬಳಸಬಹುದು. ಕಂಡೀಷನರ್ ಅನ್ನು ಹಚ್ಚಿ 5 ನಿಮಿಷಗಳ
ಕಾಲ ಹಾಗೆ ಬಿಡಿ. ಕೂದಲಿನ ತುದಿಗೆ ಹಚ್ಚುವುದು ಉತ್ತಮ ಬುಡಕ್ಕೆ ಕಂಡೀಷನರ್ ಅಗತ್ಯವಿಲ್ಲ. ನಂತರ
ತಣ್ಣೀರಿನಲ್ಲಿ ಕೂದಲು ತೊಳೆಯಿರಿ. ಶಾಂಪೂ ಬಳಸಿದ ನಂತರ ಕೂಡ ಈ ವಿಧಾನವನ್ನು ಮಾಡಿ. ಹೇರ್
ಪ್ಯಾಕ್‌ಗಳನ್ನು ನೈಸರ್ಗಿಕ ಸಾಮಾಗ್ರಿಗಳಿಂದ ಮಾಡಿಕೊಳ್ಳುವುದು ತುಂಬಾ ಉತ್ತಮವಾದುದು. ಈ
ಹೇರ್ ಪ್ಯಾಕ್‌ಗಳು ಕೂದಲಿಗೆ ತೇವಾಂಶವನ್ನು ಒದಗಿಸುವುದರೊಂದಿಗೆ, ತಲೆಹೊಟ್ಟನ್ನು ನಿವಾರಿಸಿ
ಕೂದಲಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ. ನೈಸರ್ಗಿಕವಾಗಿ ದೊರೆಯುವ ಮನೆಯಲ್ಲೇ
ಮಾಡಿಕೊಳ್ಳಬಹುದಾದ ಹೇರ್ ಪ್ಯಾಕ್‌ಗಳು ಸಾಕಷ್ಟಿವೆ, ಆದರೆ ಅವುಗಳ ಉಪಯೋಗವನ್ನು ನಾವು
ಯೋಗ್ಯ ರೀತಿಯಲ್ಲಿ ಮಾಡಿಕೊಳ್ಳಬೇಕು. ಅಂದರೆ ಮೊಸರು, ಹೆನ್ನಾ (ಮದರಂಗಿ), ಹಾಲು, ಬೇವು ಹಾಗೂ
ಲಿಂಬೆ ಹಣ್ಣು. ಈ ಸಾಮಾಗ್ರಿಗಳಿಂದ ಮಾಡಿದ ಹೇರ್ ಪ್ಯಾಕ್‌ಗಳು ಉತ್ತಮ ಫಲಿತಾಂಶವನ್ನು
ನೀಡುವುದರಲ್ಲಿ ಸಂಶಯವಿಲ್ಲ. ಪ್ರತಿ ಋತುವಿಗೆ ಅನುಗುಣವಾಗಿ ನಿಮ್ಮ ಶ್ಯಾಂಪು ಮತ್ತು
ಕಂಡೀಷನರ್‌ಗಳನ್ನು ಬದಲಾಯಿಸಿ. ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಶಾಂಪೂವನ್ನು ಚಳಿಗಾಲದಲ್ಲಿ
ಬಳಸಿ. ಕೂದಲು ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಶಾಂಪು ಮತ್ತು ಕಂಡೀಷನರ್ ಬಳಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ