ಹಾರ್ಮೋನುಗಳ ಅಸಮೋತಲನ ಸಮಸ್ಯೆಗೆ ಪರಿಹಾರ

  • by

ಆರೋಗ್ಯವಾಗಿರಲು ಹಾರ್ಮೋನುಗಳ ಸಮತೋಲನ ಬಹಳ ಮುಖ್ಯ . ನಮ್ಮ ಹಸಿವು ಹಾರ್ಮೋನುಗಳಿಂದ ಪ್ರಭಾವಿತವಾಗಿರುತ್ತದೆ. ನಿದ್ರೆಯ ಕೊರತೆ, ರುಚಿ, ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.ಚಯಾಪಚಯ ಹಾಗೂ ಸಂತಾನೋತ್ಪತ್ತಿಯಂತಹ ಹಲವಾರು ಪ್ರಮುಖ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ದೇಹದ ರಾಸಾಯನಿಕ ಸಂದೇಶ ವಾಹಕನಂತೆ ಕಾರ್ಯ ನಿರ್ವಹಿಸುತ್ತದೆ. ಎಂಡೋಕ್ರೈನ್ ಗ್ರಂಥಿಗಳಿಂದ ಹಾರ್ಮೋನುಗಳು ರೂಪಗೊಳ್ಳುತ್ತವೆ.

ಮಹಿಳೆಯರಲ್ಲಿ ಉಂಟಾಗುವ ಹಾರ್ಮೋನು ಅಸಮೋತಲನಕ್ಕೆ ಹಲವಾರು ಕಾರಣಗಳಿವೆ. ಈ ಕಾರಣಗಳಿಂದಾಗಿ ಮಹಿಳೆಯರಲ್ಲಿ ಹಾರ್ಮೋನುಗಳ ಅಸಮೋತನ ಕಂಡು ಬರಬಹುದು.


Hormonal imbalance, ಹಾರ್ಮೋನು ಅಸಮತೋಲನ

ಹಾರ್ಮೋನು ಅಸಮೋತಲನ ಲಕ್ಷಣಗಳು

ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಬಹಳ ಸುಲಭವಾಗಿ ಗುರುತಿಸಬಹುದಾಗಿದೆ. ವಾಸ್ತವವಾಗಿ ಹಾರ್ಮೋನ್ ಅಸಮತೋಲನದಿಂದಾಗಿ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ದೇಹದ ಯಾವುದೇ ಗ್ರಂಥಿಯೂ ಸರಿಯಾಗಿ ಕಾರ್ಯನಿರ್ಹಹಿಸುವುದಿಲ್ಲ. ಹಾರ್ಮೋನುಗಳ ಅಸಮತೋಲನ ಸಮಸ್ಯೆಯ ಲಕ್ಷಣಗಳು ಪ್ರತಿ ಮಹಿಳೆಯಲ್ಲೂ ಭಿನ್ನವಾಗಿರುತ್ತವೆ.

1 ಆಯಾಸ ಹಾರ್ಮೋನುಗಳ ಅಸಮೋತಲನಿಂದ ಉಂಟಾಗುತ್ತದೆ. ಯಾವುದೇ ಪರಿಶ್ರಮ ಇಲ್ಲದಿದ್ದರೂ ಮಹಿಳೆಯರು ಅಸಮತೋಲನವನ್ನು ಎದುರಿಸುತ್ತಾರೆ. ಇಂಥ ಮಹಿಳೆರಲ್ಲಿ ಆಯಾಸವು ಇಡೀ ದಿನ ಇರುತ್ತದೆ.ತೂಕ ಹೆಚ್ಚಾಗುವುದು , ಬೊಜ್ಜು ಅಥವಾ ತೂಕ ಹೆಚ್ಚಾಗುವುದು ಈ ಸಮಸ್ಯೆಯ ಲಕ್ಷಣಗಳಲ್ಲಿ ಒಂದಾಗಿದೆ. ಅಂದರೆ ಇದ್ದಕ್ಕಿಂದತೆ ತೂಕ ಹೆಚ್ಚಾಗುವುದು ಹಾರ್ಮೋನ್ ಅಸಮೋತಲನದಿಂದ ಉಂಟಾಗುತ್ತದೆ.ಒಣ ಚರ್ಮ ಹಾರ್ಮೋನ್ ಅಸಮತೋಲನ ಯಿಂದಾಗಿ ಚರ್ಮವು ಒಣಗುತ್ತದೆ.ಒತ್ತಡ ಮತ್ತು ಖಿನ್ನತೆ ಸಮಸ್ಯೆಯು ಹಾರ್ಮೋನು ಅಸಮತೋಲನದ ಲಕ್ಷಣವಾಗಿರಬಹುದು. ಕೂದಲು ತೆಳುವಾಗುವುದು. ಕೂದಲು ಬಿರುಕು ಮೂಡುವುದು, ಮಲಬದ್ಧತೆ ಹಾಗೂ ಅತಿಸಾರ ಹಾರ್ಮೋನುಗಳ ಅಸಮತೋಲನದಿಂದಾಗಿ ಉಂಟಾಗುತ್ತದೆ.ಬಂಜೆತನ ವು ಸಹ ಹಾರ್ಮೋನು ಅಸಮತೋಲನದಿಂದ ಉಂಟಾಗಬಹುದು.

Hormonal imbalance, ಹಾರ್ಮೋನು ಅಸಮತೋಲನ

ಪ್ರಕಾರಗಳು

ಪ್ರೊಜೆಸ್ಟರಾನ್ ಕೊರತೆ
ಈಸ್ಟ್ರೋಜನ್ ಕೊರತೆ
ಹೆಚ್ಚುವರಿ ಈಸ್ಟ್ರೋಜನ್ ಕೊರತೆ
ಹೆಚ್ಚುವರಿ ಆಂಡ್ರೋಜನ್ ಸಮಸ್ಯೆ
ಹೈಪೋಥೈರಾಯ್ಡಿಸಮ್


ಹಾರ್ಮೋನು ಅಸಮತೋಲನಕ್ಕೆ ಮನೆ ಮದ್ದುಗಳೇ ಪ್ರಥಮ ಚಿಕಿತ್ಸೆ ಎಂದು ಹೇಳಬಹುದು. ನಿಯಮಿತವಾಗಿ ಸಾಕಷ್ಟು ಪೋಷಕಾಂಶಗಳನ್ನು ಹಾಗೂ ಜೀವನಶೈಲಿ ಬದಲಾವಣೆ ಮೂಲಕ ಹಾರ್ಮೋನುಗಳ ಅಸಮತೋಲನ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

ಒಮೆಗಾ -3 ಕೊಬ್ಬಿನಾಮ್ಲಗಳು
ಮಹಿಳೆಯರ ಹಾರ್ಮೋನುಗಳ ಅಸಮತೋಲನಕ್ಕೆ ಮಹಿಳೆಯರು ಹೆಚ್ಚಾಗಿ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇವಿಸಬೇಕು. ಒಮೆಗಾ -3 ಕೊಬ್ಬಿನಾಮ್ಲಗಳು ಮಹಿಳೆಯರಲ್ಲಿ ಈ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಆತಂಕ ಹಾಗೂ ಒತ್ತಡವನ್ನು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಸುಮಾರು 250 ರಿಂದ 500 ಮಿಗ್ರಾಂ ಒಮೆಗಾ -3 ಫ್ಯಾಟಿ ಆಸಿಡ್ ಆಹಾರಗಳನ್ನು ಪ್ರತಿದಿನ ಸೇವಿಸಬೇಕು.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ ಔಷಧಿಯನ್ನಾಗಿ ಬಳಸಲಾಗುತ್ತದೆ. ಲ್ಯಾವೆಂಡರ್ ಎಣ್ಣೆಯನ್ನು ಒತ್ತಡ ಹಾಗೂ ಆತಂಕ ನಿವಾರಿಸಲು ನಿದ್ರೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಸಮಸ್ಯೆ ಇರುವವರು ತಮ್ಮ ದಿಂಬಿನ ಮೇಲೆ ಕೆಲ ಹನಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ. ಇಲ್ಲವೇ ಸ್ನಾನದ ನೀರಿಗೆ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ ಸ್ನಾನ ಮಾಡುವುದರಿಂದ ಈ ಸಮಸ್ಯೆ ಹತೋಟಿಗೆ ತರಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ