ಪಾದಗಳ ನೋವಿನಿಂದ ಬಳಲುತ್ತಿದ್ದೀರಾ? ಮನೆ ಮದ್ದು ಇಲ್ಲಿದೆ.!

  • by

ಇತ್ತೀಚಿನ ದಿನಗಳಲ್ಲಿ ಒತ್ತಡ ಕಿರಿಕಿರಿ, ಕೋಪ, ಆತಂಕದಿಂದ ಕಾಲು ನೋವು, ಪಾದಗಳ ನೋವು ಸಾಮಾನ್ಯವಾಗಿ ಬಿಟ್ಟಿದೆ. ಅಂತಹ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಏನು ಮಾಡಬೇಕು ಎಂದು ತಿಳಿದಿರುವುದಿಲ್ಲ. ಕಾಯಿಲೆ ಉಲ್ಭಣಗೊಳ್ಳುತ್ತಿದ್ದಂತೆ ಸಾಕಷ್ಟು ಜನರು ಆತಂಕಕ್ಕೆ ಒಳಗಾಗುತ್ತಾರೆ. ಇದಕ್ಕಾಗಿ ಸಾಕಷ್ಟು ನೋವು ನಿವಾರಕ ಮಾತ್ರೆಗಳ ಮೇಲೆ ಅವಲಂಬಿಸುತ್ತಾರೆ. ಆದ್ರೆ ಹೆಚ್ಚು ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯಕಾರಿ. ಕಾಲು ನೋವಿನ ಲಕ್ಷಣಗಳೇನು.. ಪರಿಹಾರಗಳೇನು.. ಕಾರಣವೇನು.. ಮತ್ತು ಚಿಕಿತ್ಸೆ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 

Foot pain,  home remedies ,
ಪಾದಗಳ ನೋವು, ಮನೆ ಮದ್ದು

ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತರೆ ಕಾಲು , ಪಾದಗಳ ನೋವು ಉಂಟಾಗುತ್ತದೆ. ಸಾಕಷ್ಟು ಹೊತ್ತು ಕಾಲುಗಳನ್ನು  ಬಿಟ್ಟು ಕುಳಿತುಕೊಳ್ಳುವುದು. ಅಥವಾ ನಿಲ್ಲುವುದು, ಅಲ್ಲದೇ ದೇಹದಲ್ಲಿ ದೌರ್ಬಲ್ಯ , ಕೆಲಮೊಮ್ಮೆ ಆಂತರಿಕ ಗಾಯದಿಂದಾಗಿ , ಎತ್ತರವಾದ ಪಾದರಕ್ಷೆಗಳನ್ನು ಧರಿಸಿದಾಗ, ಅಥವಾ ಬೊಜ್ಜು , ತೂಕ ಹೆಚ್ಚಾಗಿರುವುವುದರಿಂದ ಪಾದಗಳ ನೋವು ಕಾಣಿಸಿಕೊಳ್ಳಬಹುದು. 

ಲಕ್ಷಣಗಳೇನು..?

ಕಾಲು ನೋವು ಸಾಮಾನ್ಯವಾಗಿ ಕಾಲುಗಳಲ್ಲಿ ಸೆಳೆತ.. ಸೊಂಟದವರೆಗೆ ಕಾಲು ನೋವು , ಗಾಯಗೊಂಡಾಗ ಪಾದದ ಮೇಲೆ ಒತ್ತುವಾಗ ನೋವು ಕಾಣಿಸಿಕೊಳ್ಳುತ್ತದೆ. ಇದ್ರಿಂದ ಪಾದಗಳಲ್ಲಿ  ಊತ ಕಾಣಿಸಿಕೊಳ್ಳಬಹುದು. ಇನ್ನು ಕಾಲು ನೋವಿನಿಂದ ನಿದ್ರಾ ಹೀನತೆ, ನಡೆಯುವಾಗ ನೋವು ಕಾಣಿಸಿಕೊಳ್ಳುವುದು. ಎದ್ದು ಕುಳಿತುಕೊಳ್ಳುವಾಗ ನೋವಾಗುವುದು. ದೇಹದಲ್ಲಿ ದೌರ್ಬಲ್ಯತೆ , ಕಾಲುಗಳಲ್ಲಿ ನಿರಂತರ ನೋವು ಕಾಣಿಸಿಕೊಳ್ಳುವುದು ಇವೆಲ್ಲಾ ಲಕ್ಷಣಗಳು ಕಂಡು ಬರಬಹುದು.

Foot pain,  home remedies ,
ಪಾದಗಳ ನೋವು, ಮನೆ ಮದ್ದು
Illustration of difficulties caused by uncomfortable

ನೋವಿಗೆ ಚಿಕಿತ್ಸೆಗಳೇನು?

ನಿಮ್ಮ ಪಾದಗಳಲ್ಲಿ ಊತ ಅಥವಾ ನೋವು ಇದ್ದರೆ, ಬೆಚ್ಚಗಿನ ನೀರಿನಲ್ಲಿ ಉಪ್ಪು ಸೇರಿಸಿ, ಮತ್ತು ಸ್ವಲ್ಪ ಸಮಯದವರೆಗೆ ಪಾದಗಳನ್ನು ನೆನೆ ಹಾಕಿ. ಬೆಚ್ಚಗಿನ ನೀರಿನಿಂದ ಪಾದಗಳ ರಕ್ತ ಪರಿಚಲನೆ ಉತ್ತಮವಾಗುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮತ್ತು ನೋವನ್ನು ನಿವಾರಿಸುತ್ತದೆ. ನಿಮ್ಮ ಪಾದಗಳಲ್ಲಿ ನೋವಿಗೆ ಕಾರಣ ದೇಹದ ದೌರ್ಬಲ್ಯ.. ನಂತರ ಸಮತೋಲನದ ಆಹಾರ ಕೊರತೆ, ವೈದ್ಯರ ಸಲಹೆಯ ಮೇರೆಗೆ ಕೆಲವು ಔಷಧಿ ಗಳನ್ನು ತೆಗೆದುಕೊಳ್ಳಿ. ಪಾದದ ಸೆಳೆತದ ನೋವನ್ನು ನಿವಾರಿಸುತ್ತದೆ. 

ದೇಹದ ಬೊಜ್ಜು ಕಡಿಮೆ ಮಾಡಿ.. ಕಾಲು, ಪಾದಗಳ ನೋವು ನಿವಾರಿಸಲು ವ್ಯಾಯಾಮ ಮಾಡಬೇಕು. ಯಾವಾಗಲೂ ಮೃದು ಪಾದರಕ್ಷೆಗಳನ್ನು ಹಾಕಿಕೊಳ್ಳಬೇಕು.. ಹೈ ಹೀಲ್ಸ್ ಗಳನ್ನು ಹಾಕಬೇಡಿ. ಜುಮ್ಮನೆಯುವುದು ಹಾಗೂ ಕಾಲು ನೋವಿನಿಂದ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಯಾಕೆಂದರೆ ಅಂತಹ ಸುದೀರ್ಘ ಅವಧಿಯ ಕೆಲವು ಗಂಭೀರ ಅನಾರೋಗ್ಯ ಕಾಡಬಹುದು. 

Foot pain,  home remedies ,
ಪಾದಗಳ ನೋವು, ಮನೆ ಮದ್ದು

ನೀವು ಆಗಾಗ್ಗೆ ಪಾದಗಳಲ್ಲಿ ನೋವು ಹೊಂದಿದ್ದರೆ, ಮೊದಲನೇಯದಾಗಿ ಐಸ್ ತುಂಡುಗಳನ್ನು ಬಟ್ಟೆಯಲ್ಲಿ ಸುತ್ತಿ ನೋವಿನ ಭಾಗದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮಗೆ ತ್ವರಿತ ಪರಿಹಾರ ದೊರೆಯುತ್ತದೆ. ಇದನ್ನು 2-3 ಬಾರಿ ಮಾಡಬಹುದು. 

ವಿನೆಗರ್ 

ಸಂಧಿವಾತದಂತಹ ತೀವ್ರ ರೋಗಗಳಿಗೆ ಚಿಕಿತ್ಸೆ ನೀಡಲು ವಿನೆಗರ್ ಸಹಾಯ ಮಾಡುತ್ತದೆ. ಸಂಧಿವಾತಗಳಲ್ಲಿ  ಪಾದಗಳ ನೋವನ್ನು ತಪ್ಪಿಸಲು , ೧ ಚಮಚ ವಿನೆಗರ್ ಅನ್ನು ಬಿಸಿ ನೀರಿನ ತೊಟ್ಟೆಯಲ್ಲಿ ಹಾಕಿ , ಮತ್ತು ಪಾದಗಳನ್ನು ಅರ್ಧ ಗಂಟೆಯವರೆಗೆ ಮುಳುಗಿಸಿ, ನಿಮಗೆ ರಿಲ್ಯಾಕ್ಸ್ ದೊರೆಯುತ್ತದೆ. 

ಕಲ್ಲು ಉಪ್ಪು 

ವಿನೆಗರ್ ಜತೆಗೆ ಕಾಲು ನೋವಿನ ಚಿಕಿತ್ಸೆಯಲ್ಲಿ ಕಲ್ಲು ಉಪ್ಪು ಸಹಕಾರಿಯಾಗಬಲ್ಲದ್ದು, ಅಲ್ಲದೇ ಮಸಾಜ್ ಮಾಡುವುದರಿಂದ ಕಾಲು ನೋವಿನಲ್ಲಿ ಹೆಚ್ಚಿನ ಪರಿಹಾರ ಸಿಗುತ್ತದೆ. ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ದಿನಕ್ಕೆ ೨-೩ ಬಾರಿ ಮಸಾಜ್ ಮಾಡುವುದರಿಂದ ಸಹಾಯ ಮಾಡುತ್ತದೆ. 

ಅರಿಶಿಣ 

ಅರಿಶಿಣವನ್ನು ಬಳಸುವುದರಿಂದ ಪಾದಗಳ ನೋವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಅರಿಶಿಣವನ್ನು ಬಿಸಿ ಎಳ್ಳು ಎಣ್ಣೆಯಲ್ಲಿ ಬೆರೆಸಿ ನೋವಿನ ಭಾಗಗಳಿಗೆ ಹಚ್ಚಿ. ಇದಲ್ಲದೇ, ಬಿಸಿ ಹಾಲಿಗೆ , ಅರಶಿಣ ಬೆರೆಸಿ ಕುಡಿಯುವುದರಿಂದ ನೋವು ನಿವಾರಣೆಯಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ