ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಮನೆ ಮದ್ದು..!

  • by

ಕೆಲವರಿಗೆ ಆಗಾಗ ಹೊಟ್ಟೆಯ ಗ್ಯಾಸ್ ಕಾಡುತ್ತಿರುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಬಂದಾಕ್ಷಣ ತಿನ್ನಲು ಹಾಗೂ ಕುಡಿಯಲು ಕಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವು ಜನರು ಗ್ಯಾಸ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದ ಉಸಿರಾಲು ಸಮಸ್ಯೆಯಾಗುತ್ತದೆಯಲ್ಲದೇ. ಹೊಟ್ಟೆಯಲ್ಲಿ ಭಾರ , ನೋವು , ಕಣ್ಣುಗಳಲ್ಲಿ ಉರಿಯೂತ, ವಾಂತಿ, ಮತ್ತು ತಲೆನೋವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೊಟ್ಟೆಯ ಗ್ಯಾಸ್ ನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಇದು ಬರು ಬರುತ್ತಾ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮಲಬದ್ಧತೆ, ಆಮ್ಲೀಯತೆ, ಹೊಟ್ಟೆಯ ಹುಣ್ಣು ಇತ್ಯಾದಿ ರೋಗಗಳು ಗ್ಯಾಸ್ ನಿಂದ ಉಂಟಾಗುತ್ತವೆ.

Home remedies ,stomach gas problem, ಹೊಟ್ಟೆಯ ಗ್ಯಾಸ್, ಸಮಸ್ಯೆ, ಪರಿಹಾರ, ಮನೆ ಮದ್ದುಗಳು

ಹೊಟ್ಟೆಯ ಗ್ಯಾಸ್ ಅಂದ್ರೆ ಏನು?

ಹೊಟ್ಟೆಯಲ್ಲಿ ಲೋಕೋಸಾ ಎಂದು ಕರೆಯಲ್ಪಡುವ ಒಳ ಪದರವಿದೆ. ಈ ಪದರದಲ್ಲಿ ಅನೇಕ ಸಣ್ಣ ಗ್ರಂಥಿಗಳಿವೆ. ಇದು ಸ್ಟುಮಾಚ್ ಆಸಿಡ್ ಮತ್ತು ಪೆಪ್ಸಿನ್ ಎಂಬ ಕಿಣ್ವವನ್ನು ಜೀರ್ಣಿಸುತ್ತದೆ. ಈ ಒಳಪದರದಲ್ಲಿ ಊತವಾದಾಗ, ನಂತರ ಹೊಟ್ಟೆಯಲ್ಲಿ ಗ್ಯಾಸ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದಾಗಿ ಹೊಟ್ಟೆ ಆಮ್ಲ ಮತ್ತು ಪೆಪ್ಸಿನ್ ಉತ್ಪಾದನೆಯ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಮತ್ತು ಹೊಟ್ಟೆ ಅಪ್ಸಟ್ ಆಗುತ್ತದೆ.

ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಲು ಕಾರಣವೇನು…?

ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಹಲವು ಕಾರಣಗಳಿವೆ. ಆಸ್ಪಿರಿನ್, ಐಬುಪ್ರೋಫೇನ್, ನ್ಯಾಪ್ರೊಕ್ಸೆನ್ ನಂತಹ ಔಷಧಿಗಳ ಬಳಕೆ

1.ಹೆಚ್ಚು ಆಲ್ಕೋಹಾಲ್ ಮತ್ತು ಟೀ- ಕಾಫಿ ಸೇವನೆ ಮಾಡುವುದು.
2.ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಹೊಟ್ಟೆಯ ಸೋಂಕನ್ನು ಹೊಂದಿರುವುದು.
3. ಹೊಟ್ಟೆಯಲ್ಲಿ ಪಿತ್ತರಸ ಆಮ್ಲದ ಶೇಖರಣೆ
4. ಕೋಕೇನ್ ಚಟ
5. ಗ್ಯಾಸ್ ಗೆ ಕಾರಣವಾಗುವ ಆಹಾರ ಸೇವನೆ
6.ಹೆಚ್ಚು ಫೈಬರ್ ಭರಿತ ಆಹಾರವನ್ನು ಸೇವಿಸುವುದು
7.ಸೈಟೋಮೆಗಾಲೊವೈರಸ್ ಮತ್ತು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ನಂತಹ ರೋಗ ನಿರೋಧಕ ಶಕ್ತಿಯ ದುರ್ಬಲತೆ.
8.ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಜೀರ್ಣಿಸಿಕೊಳ್ಳಲು ಅಸಾಧ್ಯ
9. ಅತಿಯಾದ ಒತ್ತಡ
10.ಕರುಳಿನಲ್ಲಿ ಉರಿಯೂತ ಅಥವಾ ಕಿರಿಕಿರಿ ಇದ್ದರೆ
11.ಮಧುಮೇಹ ಸಮಸ್ಯೆ

Home remedies ,stomach gas problem, ಹೊಟ್ಟೆಯ ಗ್ಯಾಸ್, ಸಮಸ್ಯೆ, ಪರಿಹಾರ, ಮನೆ ಮದ್ದುಗಳು

ಹೊಟ್ಟೆಯ ಗ್ಯಾಸ್ ಲಕ್ಷಣಗಳು…!

ಗ್ಯಾಸ್ ಸಮಸ್ಯೆ ಮತ್ತೆ ಮತ್ತೆ ಮರುಕಳಿಸುವುದು..
ಗ್ಯಾಸ್ ನಿಂದ ವಾಸನೆ
ವಾಂತಿಯಾಗುವ ಭಾವನೆ
ಹಸಿವಿನ ಕೊರತೆ
ಹೊಟ್ಟೆ ಸೆಳೆತ
ಸಾಂದರ್ಭಿಕ ಜ್ವರ
ಮಲಬದ್ಧತೆ
ಮಲದ ಬಣ್ಣ ಬದಲಾವಣೆ , ರಕ್ತಸ್ರಾವವಾಗುವುದು..

ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಔಷಧಿಗಳನ್ನು ಆಶ್ರಯಿಸುವ ಬದಲು, ಮನೆಮದ್ದುಗಳನ್ನು ಉಪಯೋಗಿಸುವುದು ಉತ್ತಮ.
ಹೊಟ್ಟೆಯ ಗ್ಯಾಸ್ ನಿಯಂತ್ರಣದಲ್ಲಿಡಲು ಮನೆ ಮದ್ದುಗಳು

ಬೇಕಿಂಗ್ ಸೋಡಾ

ಅಡುಗೆ ಸೋಡಾವನ್ನು 1 ಲೋಟಾ ನೀರಿನ 1 ಚಮಚಾ ಅಡುಗೆ ಸೋಡಾ ಹಾಕಬೇಕು. ನಂತರ ಅಡುಗೆ ಸೋಡಾವನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಕುಡಿಯಿರಿ. ಗ್ಯಾಸ್ ಇದ್ದಾಗ ಹೊಟ್ಟೆಯಲ್ಲಿ ಉರಿಯೂತ ಇರುವುದು ಸಾಮಾನ್ಯ. ಅಡಿಗೆ ಸೋಡಾವನ್ನು ಸೋಡಿಯಂ ಕಾರ್ಬೋಹೈಡ್ರೇಟ್ ಎಂದು ಕರೆಯುತ್ತಾರೆ.

Home remedies ,stomach gas problem, ಹೊಟ್ಟೆಯ ಗ್ಯಾಸ್, ಸಮಸ್ಯೆ, ಪರಿಹಾರ, ಮನೆ ಮದ್ದುಗಳು

ಅಲೋವೆರಾ

2 ಟೀ ಚಮಚ ಅಲೋವೆರಾ ಜೆಲ್ ಅನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುಡಿಯಿರಿ. ನೀವು ದಿನಕ್ಕೆ 1 ಅಥವಾ 2 ಲೋಟಗಳನ್ನು ಕುಡಿಯಬಹುದು.
ಅಲೋವೆರಾ ಜೆಲ್ ಅತ್ಯುತ್ತಮ ಪರಿಹಾರವಾಗಿದೆ. ಇದು ಹೊಟ್ಟೆಯ ಒಳ ಪದರದಲ್ಲಿ ಊರಿಯೂತವನ್ನು ಕಡಿಮೆ ಮಾಡುತ್ತದೆ. ಇದ್ರಿಂದ ಸೋಂಕು ಹರಡುವ ಬ್ಯಾಕ್ಟೇರಿಯಾವನ್ನು ಕೊಲ್ಲುವ ಸಾಮರ್ಥ್ಯವಿದೆ.

ತೆಂಗಿನ ನೀರು.

ನೀವು ಯಾವುದೇ ಸಮಯದಲ್ಲಾದರೂ ಇದನ್ನು ಕುಡಿಯಬಹುದು. ದಿನವಿಡೀ ಮೂರರಿಂದ ನಾಲ್ಕು ಲೋಟ ತೆಂಗಿನ ನೀರನ್ನು ಸೇವಿಸುವುದರಿಂದ ಪ್ರಯೋಜನವಾಗಲಿದೆ. ತೆಂಗಿನ ನೀರಿನಲ್ಲಿ ವಿವಿಧ ಜೀವಸತ್ವಗಳು ಮತ್ತು ಪೋಷಕಾಂಶಗಳಿವೆ. ಇದು ಹೊಟ್ಟೆಯ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ.

ಗ್ರೀನ್ ಟೀ..

ನೀರನ್ನು ಚೆನ್ನಾಗಿ ಬಿಸಿ ಮಾಡಿದ ನಂತರ, ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಇದರ ನಂತರ, ಗ್ರೀನ್ ಟೀ ಪೌಡರ್ ಅಥವಾ ಗ್ರೀನ್ ಟೀ ಬ್ಯಾಗ್ ನ್ನು ನೀರಿನಲ್ಲಿ ಹಾಕಿ. ಇದನ್ನು ಫಿಲ್ಟರ್ ಮಾಡಿದ ನಂತರ ಕುಡಿಯಿರಿ. ದಿನವಿಡೀ ಸುಮಾರು 2 ಕಪ್ ಚಹಾವನ್ನು ಕುಡಿಯಬಹುದಾಗಿದೆ.
ಹಸಿರು ಚಹಾ ಸಾಕಷ್ಟು ಉತ್ಕರ್ಷಣಾ ನಿರೋಧಕಗಳನ್ನು ಹೊಂದಿರುತ್ತದೆ. ಇದು ಹೊಟ್ಟೆಯ ಒಳ ಪದರವನ್ನು ನೇರವಾಗಿ ಪರಿಣಾಮ ಬೀರುತ್ತದೆ. ಇದು ಅನಿಲ ಸಮಸ್ಯೆಯನ್ನು ಕ್ರಮೇಣ ಕಡಿಮೆ ಮಾಡಲು ಕಾರಣವಾಗುತ್ತದೆ. ಈ ಚಹಾವನ್ನು ಔಷಧಿಯ ರೂಪದಲ್ಲಿ ಬಳಸಬಹುದಾಗಿದೆ. ದೀರ್ಘಕಾಲದ ಗ್ಯಾಸ್ ನಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.

ಆಪಲ್ ವಿನೆಗರ್

1 ಚಮಚ ಆಪಲ್ ವಿನೆಗರ್ ಚಮಚ ಜೇನುತುಪ್ಪ, ಹಾಗೂ 1 ಲೋಟ ನೀರು ಈ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ಈ ಮಿಶ್ರಣವನ್ನು ದಿನಕ್ಕೆ 1 ಅಥವಾ 2 ಬಾರಿ ಕುಡಿಯಬಹುದು.

ಶುಂಠಿ

1 ಸಣ್ಣ ತುಂಡು ಶುಂಠಿ ಹಾಗೂ 1 ಕಪ್ ನೀರು. ಮೊದಲು 1 ಸಣ್ಣ ತುಂಡು ಶುಂಠಿ ತೆಗೆದುಕೊಂಡು ಚೆನ್ನಾಗಿ ಅಗೆಯಿರಿ, ನಂತರ ನೀರಿನ ಸಹಾಯ ದಿಂದ ನುಂಗಿ. ಅದಲ್ಲದೇ, ಶುಂಠಿ ಪುಡಿ, ಕಲ್ಲು ಉಪ್ಪು, ಇಂಗು ಹಾಗೂ 1 ಕಪ್ ಬಿಸಿ ನೀರು ತೆಗೆದುಕೊಂಡು ಈ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಸುರಿಯಿರಿ ಹಾಗೂ ಕುಡಿಯಬೇಕು. ಪ್ರತಿ ದಿನ ಬೆಳಿಗ್ಗೆ ಇದನ್ನು ಸೇವಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ