ದೀರ್ಘಕಾಲ ಕಾಡುವ ಕತ್ತು ನೋವಿಗೆ ಮನೆ ಮದ್ದು..!?

  • by

ಕೆಲಮೊಮ್ಮೆ ನಾವು ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿ ಬೀಡುತ್ತೇವೆ. ಕಾಲ ನಂತರದಲ್ಲಿ ಆ ಸಮಸ್ಯೆ ಗಂಭೀರವಾಗತೊಡಗುತ್ತದೆ. ಅಂತಹ ಸಮಸ್ಯೆಗಳಲ್ಲಿ ಕುತ್ತಿಗೆ ನೋವು ಕೂಡಾ ಒಂದು. ಕೆಲಮೊಮ್ಮೆ ಕುತ್ತಿಗೆ ನೋವು ಧಿಡೀರ್ ಆಗಿ ಕಾಣಿಸಿಕೊಳ್ಲುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸರಿಯಾದ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಅನೇಕ ಬಾರಿ ತಲೆ, ಕೈ ಹಾಗೂ ಭುಜಗಳು ಇದರ ಹಿಡಿತಕ್ಕೆ ಒಳಗಾಗುತ್ತವೆ. ಕುತ್ತಿಗೆ ನೋವು ವಿಪರೀತವಾಗಿ ಕಾಡಲು ಪ್ರಾರಂಭವಾಗುತ್ತದೆ. ಕುತ್ತಿಗೆ ನೋವಿಗೆ ಕಾರಣಗಳು, ಹಾಗೂ ಮನೆ ಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.


home remedies, Neck Pain ,
    ಕತ್ತು ನೋವಿಗೆ ,ಮನೆ ಮದ್ದು

ಲೆಸರ್ ಚಿಕಿತ್ಸೆ

ಕೆಲವೊಮ್ಮೆ ಕುತ್ತಿಗೆ ನೋವು ಕಡಿಮೆ ಮಾಡಲು ಲೇಸರ್ ಥೆರಪಿ ಅಗತ್ಯವಿರುತ್ತದೆ. ತೀವ್ರವಾದ ನೋವಿನ ಸಂದರ್ಭದಲ್ಲಿ ಇದನ್ನು ವೈದ್ಯಕೀಯ ತಜ್ಞರು ಮಾಡಿರುವುದು ಒಳ್ಳೆಯದು. ಲೇಸರ್ ಥೆರಪಿಯನ್ನು ಕೋಲ್ಡ್ ಲೇಸರ್ ಥೆರಪಿ ಎಂದು ಕರೆಯಲಾಗುತ್ತದೆ. ಇತರ ಲೇಸರ್ ಚಿಕಿತ್ಸೆಗಳಂತೆ ಲೇಸರ್ ಚಿಕಿತ್ಸೆಯೂ ಉರಿಯೂತವನ್ನು ಕಡಿಮೆ ಮಾಡುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕುತ್ತಿಗೆ ನೋವು ಕಡಿಮೆ ಮಾಡುವಲ್ಲಿ ಲೇಸರ್ ಥೆರಪಿ ಪರಿಣಾಮಕಾರಿಯಾಗಿದೆ ಎಂದು ಹೇಳಬಹುದು.

ಆಕ್ಯುಪಂಕ್ಚರ್

ಆಕ್ಯುಪಂಕ್ಚರ್ ಎನ್ನುವುದು ಒಂದು ಚಿಕಿತ್ಸೆಯ ವಿಧಾನವಾಗಿದ್ದು , ಇದನ್ನು ಸಣ್ಣ ಸೂಜಿಯಲ್ಲಿ ನೋವಿನ ಸ್ಥಳದಲ್ಲಿ ಇರಿಸಲಾಗುತ್ತದೆ. ನೋವು ನಿವಾರಿಸಲು ಈ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ದೇಹದ ಯಾವುದೇ ಭಾಗದಲ್ಲಿ ಅಕ್ಯುಪಂಕ್ಚರ್ ಮಾಡಿದಾಗ , ರಕ್ತ ಪರಿಚಲನೆ ಸುಲಭವಾಗುತ್ತದೆ. ಮಸಾಜ್ ನೋವನ್ನು ನಿವಾರಿಸಲು ಇದು ನೆರವಾಗುತ್ತದೆ. ಯಾರಿಗಾದರೂ ಹೆಚ್ಚು ನೋವು ಇದ್ದರೆ, ಆ ಭಾಗವನ್ನು ಉಜ್ಜಬೇಡಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಜೀವಸತ್ವಗಳು ..!

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಜೀವಸತ್ವಗಳು ಸಹಾಯ ಮಾಡುತ್ತವೆ. ದೇಹದಿಂದ ಜೀವಸತ್ವಗಳು ಕಡಿಮೆಯಾಗಲು ಪ್ರಾರಂಭಿಸಿದಾಗ, ಅನೇಕ ಸಮಸ್ಯೆಗಳು ಉದ್ಭವಿಸಲು ಪ್ರಾರಂಭವಾಗುತ್ತದೆ. ಇವುಗಳಲ್ಲಿ ಒಂದು ದೇಹದ ನೋವು ಕುತ್ತಿಗೆ ನೋವಿನಿಂದ ನಿರಂತರವಾಗಿ ಹೋರಾಡುತ್ತಿದ್ದರೆ. ಅಗತ್ಯವಾದ ಜೀವಸತ್ವಗಳನ್ನು ತೆಗೆದುಕೊಳ್ಳುವುದರಿಂದ ನಿವಾರಿಸಬಹುದು. ಜೀವಸತ್ವಗಳನೆಂದರೆ ವಿಟಮಿನ್ ಡಿ , ವಿಟಮಿನ್ ಬಿ, ಮಿಟಮಿನ್ ಸಿ, ಹಾಗೂ ವಿಟಮಿನ್ ಇ ಅಗತ್ಯವಿರುತ್ತದೆ. ಇದು ರೋಗ ನಿರೋಧಕಗಳನ್ನು ಹೊಂದಿರುತ್ತದೆ. ನೋವನ್ನು ಕಡಿಮೆ ಮಾಡುವಲ್ಲಿ ಪ್ರಮುಖವಾದದ್ದು.

ಕುತ್ತಿಗೆ ನೋವಿಗೆ ವ್ಯಾಯಾಮ!

ಕುತ್ತಿಗೆ ನೋವನ್ನು ವ್ಯಾಯಾಮದ ಮೂಲಕವು ಚಿಕಿತ್ಸೆ ನೀಡಬಹುದು. ಈ ನಿಟ್ಟಿನಲ್ಲಿ ನಡೆಸಿದ ಅಧ್ಯಯನವು ವ್ಯಾಯಾಮ ಮಾಡುವುದರಿಂದ ಕುತ್ತಿಗೆ ನೋವು ಸುಧಾರಿಸಬಹುದು. ಅಲ್ಲದೇ, ವ್ಯಾಯಾಮವು ದೇಹದಲ್ಲಿ ಸುಲಭವಾಗಿ ಮಾಡುತ್ತದೆ. ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕುತ್ತಿಗೆ ಮೃದುವಾಗಿದ್ದಾಗ ನೋವು ತೊಂದರೆಗಳು ಕಡಿಮೆಯಾಗಬಹುದು. ವ್ಯಾಯಾಮ ಮಾಡುವುದರಿಂದ ಕುತ್ತಿಗೆ ನೋವಿಗೆ ತಕ್ಷಣ ಪರಿಹಾರ ಸೀಗುತ್ತದೆ.

ಕತ್ತು ನೋವು ಎಂದರೇನು…?

ಕತ್ತಿನ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ರಕ್ತನಾಳಗಳು, ಮೂಳೆಗಳು, ಕೀಲುಗಳು ಮತ್ತು ಮೂಳೆಗಳ ನಡುವೆ ಯಾರಿಗಾದರೂ ಕುತ್ತಿಗೆ ನೋವು ಬಂದಾಗ ಅವರು, ಕುತ್ತಿಗೆಯನ್ನು ಅಲುಗಾಡಿಸಲು ಕಷ್ಟವಾಗಬಹುದು. ಕುತ್ತಿಗೆಯ್ನು ಒಂದು ಬದಿಯಲ್ಲಿ ತಿರುಗಿಸುವುದು ಅಥವಾ ಅದನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ತಿರುಗಿಸುವುದಾಗಿರುತ್ತದೆ. ಈ ನೋವು ಜುಮ್ಮೆನಿಸುವಿಕೆ, ದೌರ್ಬಲ್ಯಕ್ಕೂ ಕಾರಣವಾಗಬಹುದು.

ಕುತ್ತಿಗೆ ನೋವಿಗೆ ಕಾರಣಗಳೇನು?

ದೈನಂದಿನ ಚಟುವಟಿಕೆ, ಸ್ನಾಯುಗಳ ಒತ್ತಡ, ಹಾಗೂ ಸಾಮಾನ್ಯ ಕಾರಣಗಳು ಇದಕ್ಕೆ ಕಾರಣಗಳಾಗಿರಬಹುದು. ಹಾಗಾಗಿ ಗಂಟಲಿನ ಒಂದು ಬದಿಯಲ್ಲಿ ಗಂಟೆಗಟ್ಟಲೆ ಓರೆಯಾಗಿಸಿ. ಕೆಟ್ಟ ಭಂಗಿಯಲ್ಲಿ ಕುಳಿತುಕೊಳ್ಳುವುದು. ಕಂಪ್ಯೂಟರ್ ಮಾನಿಟರ್ ಹೆಚ್ಚು ಅಥವಾ ಕಡಿಮೆ ಅಂತರದಲ್ಲಿದ್ದರೆ. ಅಹಿತಕರ ಭಂಗಿಯಲ್ಲಿ ಮಲಗುವುದು. ವಸ್ತುಗಳನ್ನು ಬೇಗನೇ ಅಥವಾ ಕೆಟ್ಟ ಭಂಗಿಯಲ್ಲಿ ಎತ್ತುವುದು. ಅಪಘಾತ ಅಥವಾ ಕುಸಿತವು ಕುತ್ತಿಗೆಯ ಗಾಯಗಳಿಗೆ ಕಾರಣವಾಗಬಹುದು. ಇದು ಕುತ್ತಿಗೆ ಯ ನೋವನ್ನು ಉಂಟು ಮಾಡಬಹುದು.


home remedies, Neck Pain ,
    ಕತ್ತು ನೋವಿಗೆ ,ಮನೆ ಮದ್ದು

ಮನೆ ಮದ್ದು ಗೇಳನು?

ತೈಲಗಳು
ಲ್ಯಾವೆಂಡರ್ ಎಣ್ಣೆ ಕೆಲವು ಹನಿ ಹಾಗೂ ತುಳಸಿ ಎಣ್ಣೆಯ ಕೆಲವು ಹನಿಗಳು

ಬಳಕೆಯ ವಿಧಾನ!

ಎರಡೂ ಸಾರಭೂತ ತೈಲಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣದಿಂದ ಕುತ್ತಿಗೆಗೆ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಈ ಪ್ರಕ್ರಿಯೆಯನ್ನು ದಿನಕ್ಕೆ 2 ಬಾರಿ ಪುನರಾವರ್ತಿಸಬಹುದು.

ಎಷ್ಟು ಪ್ರೋಜನಕಾರಿ…?

ಲ್ಯಾವೆಂಡರ್ ಹಾಗೂ ತುಳಸಿ ಎಣ್ಣೆಯಿಂದ ಮಾಡಿದ ಮಿಶ್ರಣದಿಂದ ಕುತ್ತಿಗೆಗೆ ಮಸಾಜ್ ಮಾಡುವುದರಿಂದ ಕುತ್ತಿಗೆ ನೋವು ನಿವಾರಣೆಯಾಗುತ್ತದೆ. ಲ್ಯಾವೆಂಡರ್ ಎಣ್ಣೆ ನೋವು ನಿವಾರಕ ಗುಣಗಳನ್ನು ಹೊಂದಿದೆ. ಅದೇ ಸಮಯದಲ್ಲಿ ತುಳಸಿ ಎಣ್ಣೆಯೂ ನೋವು ನಿವಾರಿಸಲು ಸಹಾಯ ಮಾಡುತ್ತದೆ.

ಆಪಲ್ ವಿನೆಗರ್ !

ಆಪಲ್ ವಿನೆಗರ್ ಹಾಗೂ ಕರವಸ್ತ್ರವನ್ನು ತೆಗೆದುಕೊಳ್ಳಿ. ಕರವಸ್ತ್ರವನ್ನು ಆಪಲ್ ವಿನೆಗರ್ ನಲ್ಲಿ ನೆನೆಸಿ ಕುತ್ತಿಗೆಯ ಬಳಿ ಇರಿಸಿ. 1 ಗಂಟಯವರೆಗೂ ಕುತ್ತಿಗೆಯ ಬಳಿ ಇರುವುದಕ್ಕೆ ಬಿಡಿ. ಇದನ್ನು ದಿನಕ್ಕೆ 2 ಬಾರಿ ಬಳಸಬಹುದು.


home remedies, Neck Pain ,
    ಕತ್ತು ನೋವಿಗೆ ,ಮನೆ ಮದ್ದು

ಎಷ್ಟು ಪ್ರಯೋಜನಾಕಾರಿ..!

ಕುತ್ತಿಗೆ ನೋವಿಗೆ ಪರಿಹಾರ ನೀಡುವಲ್ಲಿ ಆಪಲ್ ವಿನೆಗರ್ ಅತ್ಯುತ್ತಮ ಮನೆಮದ್ದಾಗಿದೆ. ವಿನೆಗರ್ ಕೀಲು ನೋವು ಕಡಿಮೆ ಮಾಡುವುದಲ್ಲದೇ, ಸಂಧಿವಾತ ದಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ಕುತ್ತಿಗೆ ನೋವನ್ನು ಸಹ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಐಸ್ ಪ್ಯಾಕ್ !

ಐಸ್ ಪ್ಯಾಕ್ ನ್ನು ಕೆಲ ಸಮಯದವರೆಗೆ ನೋವಿರುವ ಜಾಗದಲ್ಲಿ ಇಟ್ಟಿಕೊಳ್ಳಬೇಕು. ಯಾರಿಗಾದರೂ ಕುತ್ತಿಗೆ ನೋವು ಇದ್ದರೆ ಐಸ್ ಪ್ಯಾಕ್ ಬಳಸಬಹುದು. ವಾಸ್ತವವಾಗಿ ಕುತ್ತಿಗೆ ಊತವನ್ನು ಕಡಿಮೆ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ