ಉದ್ದನೆಯ ಕೂದಲು ಬೇಕೆ..? ಹೀಗೆ ಮಾಡಿ

  • by

ದಪ್ಪ ಉದ್ದನೆಯ ಕೂದಲಿಗಾಗಿ ಮನೆಮದ್ದುಗಳು
ಹೆಂಗಳೆಯರಿಗೆ ಉದ್ದ ದಪ್ಪನೆಯ ಕೂದಲು ಎಂದರೆ ಎಲ್ಲಿಲ್ಲದ ಪ್ರೀತಿ. ಯಾರಾದರೂ ಉದ್ದ ಕೂದಲಿನ ಹೆಂಗಸರು
ಬಂದಾಗ ನಮ್ಮ ದೃಷ್ಟಿ ಅವರ ಮೇಲೆ ಹೋಗುತ್ತದೆ. ಕೇಶವೇ ಹೆಣ್ಣಿಗೆ ಶೃಂಗಾರವೆಂದು ಕವಿಗಳು ವರ್ಣಿಸಿದ್ದು ಸುಮ್ಮನೆ
ಅಲ್ಲ. ಕೂದಲು ಮಹಿಳೆಗೆ ಆತ್ಮವಿಶ್ವಾಸದ ಪ್ರತೀಕವಾಗಿದೆ. ಕೂದಲು ಉದುರುವುದು ಮತ್ತು ಕಾಂತಿ ಕಳೆದುಕೊಳ್ಳುವುದು
ವಾತಾವಾರಣದ ಧೂಳು ಕಾರಣವಾದರೆ ನಾವು ಕೂದಲಿನ ಆರೈಕೆ ಮಾಡದೇ ಇರುವುದು ಇನ್ನೊಂದು ಕಾರಣವಾಗಿದೆ.
ಉದ್ದನೆಯ ದಟ್ವವಾದ ಕೂದಲು ಬೇಕೆಂದರೆ ಅದರ ಕಾಳಜಿ ಕೂಡ ನಾವು ಹಾಗೆಯೇ ಮಾಡಬೇಕು.

ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು, ಸಿಕ್ಕುಬಿಡಿಸಿ ಕೂದಲನ್ನು ಬಾಚುವುದು, ಹೇರ್ ಪ್ಯಾಕ್, ತಲೆಯನ್ನು
ಸ್ವಚ್ಛವಾಗಿ ತೊಳೆದುಕೊಳ್ಳುವುದು ಸೀಳು ಕೂದಲಿನ ನಿವಾರಣೆ, ಕೂದಲನ್ನು ಟ್ರಿಮ್ ಮಾಡಿಕೊಳ್ಳುವುದು ಹೀಗೆ ಕೂದಲಿನ
ಕಾಳಜಿಯನ್ನು ಮರೆಯದೆ ಮಾಡಬೇಕು. ಜೊತೆಗೆ ನೀವು ಸೇವಿಸುವ ಆಹಾರ ಕೂಡ ಕೂದಲ ಬೆಳವಣಿಗೆಗೆ ಸಹಕಾರಿ
ಎಂಬುದನ್ನು ಮರೆಯಬಾರದು. ಹೆಚ್ಚಿನ ಪ್ರೊಟೀನ್ ಅಂಶಗಳಿರುವ ಆಹಾರ ನಿಮ್ಮ ಕೂದಲಿನ ಬೆಳವಣಿಗೆಯನ್ನು
ಮಾಡುತ್ತದೆ. ಹೊಸ ಕೂದಲು ಹುಟ್ಟಲು ಕಾರಣವಾಗುತ್ತದೆ.

ಇಂದಿನ ಲೇಖನದಲ್ಲಿ ದಟ್ಟ ಮತ್ತು ಉದ್ದ ಕೂದಲಿಗಾಗಿ ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು
ತಿಳಿದುಕೊಳ್ಳೋಣ.

ತೆಂಗಿನೆಣ್ಣೆ
ತೆಂಗಿನೆಣ್ಣೆಯನ್ನು ಬಳಸಿಗೆ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಬಿಸಿ ನೀರಿನ ಟವೆಲ್ ಕಟ್ಟಿಕೊಂಡು 30 ನಿಮಿಷ
ಹಾಗೆಯೇ ಬಿಡಿ. ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ವಾರದಲ್ಲಿ 2-3 ಬಾರಿ ಹೀಗೆ ಮಾಡಿ.

ಅವಕಾಡೊ ಮಾಸ್ಕ್
ಅವಕಾಡೊ, ಮೊಟ್ಟೆ, ಆಲೀವ್ ಎಣ್ಣೆಯನ್ನು ಬಳಸಿಕೊಂಡು ಮಾಸ್ಕ್ ತಯಾರಿಸಬಹುದು. ಮೊಟ್ಟೆಯನ್ನು ಪಾತ್ರೆಗೆ ಹಾಕಿ
ಇದಕ್ಕೆ ಅವಕಾಡೊ ತಿರುಳು ಸೇರಿಸಿ ಎರಡು ಚಮಚ ಆಲೀವ್ ಎಣ್ಣೆ ಸೇರಿಸಿ ನಿಮ್ಮ ಕೂದಲಿಗೆ ಹಚ್ಚಿ 20-30 ನಿಮಿಷ
ಹಾಗೆಯೇ ಬಿಡಿ. ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

ಜೇನುತುಪ್ಪ ಎಣ್ಣೆ ಮಾಸ್ಕ್
ಒಂದು ಪಾತ್ರೆಗೆ ಇದೆಲ್ಲಾವನ್ನು ಹಾಕಿಕೊಂಡು ಮಿಶ್ರ ಮಾಡಿ ಕೂದಲಿಗೆ ಹಚ್ಚಿ. ಶವರ್ ಕ್ಯಾಪ್‌ನಿಂದ ಕೂದಲನ್ನು 30
ನಿಮಿಷ ಹಾಗೆಯೇ ಬಿಡಿ. ನಂತರ ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ.

ಕರಿಬೇವು ತಲೆಬುರುಡೆಗೆ ತೇವಾಂಶ ನೀಡುವುದು ಮತ್ತು ತಲೆಬುರುಡೆಗೆ ಮಾಯಿಶ್ಚರೈಸ್ ನೀಡುವ ಕಾರಣದಿಂದ ಇದು
ಕೂದಲಿಗೆ ಶಕ್ತಿಯನ್ನು ನೀಡುವುದು. ಒಂದು ಹಿಡಿ ಕರಿಬೇವನ್ನು ತೆಗೆದುಕೊಂಡು 2-3 ಚಮಚ ತೆಂಗಿನಎಣ್ಣೆಯೊಂದಿಗೆ
ಅದನ್ನು ಬೇಯಿಸಿ. ಇದು ಕೆಲವು ನಿಮಿಷ ಬೇಯಲು ಬಿಡಿ ಮತ್ತು ತಂಪಾದ ಬಳಿಕ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ.
ಕರಿಬೇವಿನಲ್ಲಿರುವಂತಹ ವಿಟಮಿನ್ ಬಿ6 ಕೂದಲಿನ ಬುಡಕ್ಕೆ ಶಕ್ತಿಯನ್ನು ನೀಡಿ ಕೂದಲು ಉದುರುವ ಸಮಸ್ಯೆಯನ್ನು
ನಿವಾರಣೆ ಮಾಡುವುದು.

ಮೊಸರು ಈರುಳ್ಳಿ ರಸ ಮಿಶ್ರ ಮಾಡಿ ಕೂದಲಿಗೆ ಹಚ್ಚಿ ಇದರಿಂದ ಕೂದಲು ಮೃದುವಾಗಿ ಹೊಟ್ಟು ಮಾಯವಾಗುತ್ತದೆ

ಲೋಳೆಸರವನ್ನು ಕೂದಲಿಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ

ಒಣಗಿಸಿದ ತುಳಸಿ ಎಲೆ, ತೆಂಗಿನ ಎಣ್ಣೆ, ಮೆಂತ್ಯ ಬಿಸಿ ಮಾಡಿ ಶೋಧಿಸಿ ಬಳಸುವುದರಿಂದ ದಟ್ಟವಾದ ಕೂದಲನ್ನು
ಪಡೆದುಕೊಳ್ಳಬಹುದು
ಬಾಳೆಹಣ್ಣಿನ ಪೇಸ್ಟ್, ಮೊಸರು ಹಾಗೂ ಹರಳೆಣ್ಣೆ ಮಿಶ್ರ ಮಾಡಿ ಬಳಸುವುದರಿಂದ ಕೂದಲು ಒರಟಾಗುವುದನ್ನು
ತಡೆಯಬಹುದು.

ತೆಂಗಿನೆಣ್ಣೆ ಕರಿಬೇವು ಈರುಳ್ಳಿ ರಸ ಮಿಶ್ರ ಮಾಡಿ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.

ಪ್ರತಿ ರಾತ್ರಿ ನೀವು ಮಲಗುವ ಮುನ್ನ ನಿಮ್ಮ ಕೂದಲನ್ನು ಬಾಚಿಕೊಂಡು ಮಲಗಿ

ಪರಂಗಿ ಹಣ್ಣು, ಕ್ಯಾರೆಟ್, ಕಲ್ಲಂಗಡಿ, ಸೇಬು, ಸೋರೆಕಾಯಿಗಳಲ್ಲಿ ಕೂದಲು ಆರೋಗ್ಯವಾಗಿ ಇಡಬಲ್ಲ ಪೌಷ್ಠಿಕ
ಅಂಶಗಳು ಹೆಚ್ಚಿವೆ ಆದಕಾರಣ ಇಂತಹುವುಗಳ ಸೇವನೆ ಕಡ್ಡಾಯ.
ಚಾಕೋಲೆಟ್, ಸಿಹಿ, ತಿನಿಸುಗಳು ಕೇಕ್ ಮತ್ತು ಕುಕೀಸ್ ಗಳಿಂದ ಆದಷ್ಟು ದೂರವಾಗಿರಿ. ಅದು ನಿಮ್ಮ ಚರ್ಮ ಹಾಗೂ
ಕೂದಲ ಮೇಲೆ ಪರಿಣಾಮಬೀರುತ್ತದೆ.
ಎಣ್ಣೆಯಲ್ಲಿ ಕರಿದ ಆಹಾರ ಪಧಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸಿ
ಕ್ಯಾಲಿಶಿಯಂ ಅಂಶ ಒಳಗೊಂಡಿರುವ ಹಾಲನ್ನು ಪ್ರತಿ ನಿತ್ಯ ಕುಡಿಯಿರಿ
ತಲೆಹೊಟ್ಟಿನ ಸಮಸ್ಯೆಯಿದ್ದರೇ ರಾತ್ರಿ ಮಲಗುವ ಮುನ್ನ ವಿನಿಗರ್‍ ಮತ್ತು ನೀರಿನ ಮಿಶ್ರಣವನ್ನು ತಲೆಕೂದಲಿನ ಬುಡಕ್ಕೆ
ಹಚ್ಚಿ, ಬೆಳಗ್ಗೆ ನೀರಿನಿಂದ ಕೂದಲನ್ನು ತೊಳೆಯಿರಿ

ಕೂದಲಿಗೆ ಮಸಾಜ್

ಹರ್ಬಲ್ ಎಣ್ಣೆ ಬಳಸುವುದರಿಂದ ನಿಮ್ಮ ಕೂದಲು ಉದುರುವುದು, ಮುರಿಯುವುದು, ತಲೆಹೊಟ್ಟಿನ ಸಮಸ್ಯೆಗಳಿಂದ
ಅದಷ್ಟು ದೂರವಿರುತ್ತೀರಾ
ರಾತ್ರಿ ಮಲಗುವ ಮುನ್ನ ಯಾವುದಾದರೂ ನೈಸರ್ಗಿಕ ಎಣ್ನೆಯಿಂದ ನಿಮ್ಮ ತಲೆಕೂದಲಿಗೆ ಎಣ್ಣೆಯನ್ನು ಹಚ್ಚಿ ಮಸಾಜ್
ಮಾಡಿಕೊಳ್ಳಿ
ನ್ಯಾಚರಲ್ ಹೇರ್‍ ಪ್ರೋಟಿನ್ ಮತ್ತು ವಿಟಮಿನ್ ಈ ಯುಕ್ತ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುತ್ತಿದ್ದರೆ,
ನೆತ್ತಿಯಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಆಗ ಕೂದಲು ಸೊಂಪಾಗಿ ಬೆಳಯುತ್ತದೆ.

ಮೆಂತೆ ಕಾಳಿನಲ್ಲಿ ಇರುವಂತಹ ವಿಟಮಿನ್ ಬಿ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆದು ಕೂದಲಿನ ಬುಡಕ್ಕೆ
ಆಗುವ ಸಮಸ್ಯೆಯನ್ನು ತಪ್ಪಿಸುತ್ತದೆ. *ಮೆಂತೆ ಕಾಳುಗಳು ಕೂದಲು ಉದುರುವುದನ್ನು ತಡೆಯುವುದು ಮತ್ತು ಕೂದಲು
ತೆಳ್ಳಗಾಗದಂತೆ ಮಾಡುವುದು. ಮೆಂತೆ ಕಾಳಿನಲ್ಲಿ ಇರುವಂತಹ ಲೆಸಿತಿನ್ ಎನ್ನುವ ಅಂಶವು ಕೂದಲಿಗೆ ಕಾಂತಿ ಹಾಗೂ
ಹೊಳಪನ್ನು ನೀಡುವುದು. * ಮೆಂತೆ ಕಾಳಿನಲ್ಲಿ ಸಮೃದ್ಧವಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ದೀರ್ಘಕಾಲದ ತನಕ
ತಲೆಬುರುಡೆಯನ್ನು ತೇವಾಂಶದಿಂದ ಇಡುತ್ತದೆ ಮತ್ತು ಕೂದಲಿನ ಸತ್ತ ಕೋಶಗಳನ್ನು ತೆಗೆದುಹಾಕುವುದು. * ಮೆಂತೆ
ಕಾಳುಗಳು ಕೂದಲನ್ನು ಬುಡದಿಂದ ಬಲಿಷ್ಠಗೊಳಿಸಲು ತುಂಬಾ ಪರಿಣಾಮಕಾರಿ ಮತ್ತು ಕೂದಲಿನ ಕೋಶಗಳ
ಸಮಸ್ಯೆಯನ್ನು ನಿವಾರಿಸುತ್ತದೆ.

ಕರಿಬೇವು
ನೈಸರ್ಗಿಕವಾದ ಕೂದಲ ಟಾನಿಕ್ ಅನ್ನು ತಯಾರಿಸಿಕೊಳ್ಳುವುದಕ್ಕಾಗಿ, ಯಾವುದೇ ಕೇಶರಾಶಿಯ ತೈಲದಲ್ಲಿ (ಕೂದಲಿಗೆ
ಹಚ್ಚಿಕೊಳ್ಳಲು ಬಳಸುವ) ಕರಿಬೇವಿನ ಎಲೆಗಳನ್ನು ಕುದಿಸಿರಿ ಹಾಗೂ ತದನ೦ತರ ಅದನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿರಿ.
ರಕ್ತಪರಿಚಲನೆಯನ್ನು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನೆತ್ತಿಯನ್ನು ಚೆನ್ನಾಗಿ ಮಾಲೀಸು
ಮಾಡಿಕೊಳ್ಳಿರಿ.ಕೇಶರಾಶಿಯ ಸಮೃದ್ಧ ಬೆಳವಣಿಗೆಗಾಗಿ ಈ ಕ್ರಮವನ್ನು ವಾರಕ್ಕೆರಡು ಬಾರಿ ಕೈಗೊಳ್ಳಿರಿ. ಹೀಗೆ ಕೂದಲನ್ನು
ದಟ್ಟ ಮತ್ತು ಉದ್ದವಾಗಿ ಪಡೆದುಕೊಳ್ಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ