ಕತ್ತು, ಕೈ ಕಾಲು ಕಪ್ಪಗಾಗಿದೇಯಾ?

  • by

ಬಿಸಿಲಿನ ತಾಪದಿಂದ ಮುಖ, ಕೈ ಕಾಲುಗಶಳು ಕಪ್ಪಾಗುವುದು ಸಹಜ. ಇಂಥ ಸಂದರ್ಭದಲ್ಲಿ ಬಹಳ ಮಹಿಳೆಯರು ಚಿಂತೆ ಗೀಡಾಗುತ್ತಾರೆ. ಮಾರುಕಟ್ಟೆಯಲ್ಲಿ ಕೈಗೆ ಸೀಗುವ ಕ್ರೀಮ್ ಗಳನ್ನು ಹಚ್ಚಿ, ಮತ್ತಷ್ಟು ಚರ್ಮವನ್ನು ಹಾನಿ ಮಾಡಿಕೊಳ್ಳುತ್ತಾರೆ.  ಕತ್ತು , ಮೊಣಕೈ ಭಾಗಗಲ್ಲಿ ಕಪ್ಪಾಗಿದೇಯಾ.. ಹಾಗಾದ್ರೆ ಯೋಚಿಸಬೇಕಾಗಿಲ್ಲ. ಮನೆ ಮದ್ದು ಉಪಯೋಗಿಸಿ, ಈ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. 

ಟ್ಯಾನ್ ಆದರೆ ಏನು ಮಾಡಬೇಕು?

1 ಬಟ್ಟಲಿಗೆ 2 ಚಮಚ ಕಾಫಿ ಪುಡಿ, ಸ್ನಲ್ಪ ನಿಂಬೆ ರಸ ಹಾಗೂ 1 ಟೀ ಚಮಚ ರೋಜ ವಾಟರ್ ಹಾಕಿ ಚೆನ್ನಾಗಿ ಬೆರೆಸಿ, ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ನಿಂಬೆಹಣ್ಣಿನ ಸಿಪ್ಪೆಯಿಂದ ಮಿಶ್ರಣವನ್ನು ತೆಗೆದುಕೊಂಡು ಕತ್ತು, ಮೊಣಕೈ, ಮೊಣಕಾಲು ಜಾಗಕ್ಕೆ ಹಚ್ಚಿಕೊಳ್ಳಬೇಕು.  10-15 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಬೇಕು. 

ಕಪ್ಪು ಕಲೆಗಳನ್ನು ಹೋಗಲಾಡಿಸಿ, ಕಾಂತಿಯುತ ಚರ್ಮ ನಿಮ್ಮದಾಗಬೇಕಾದರೆ. ಕಾಫಿ ಪುಡಿಯಲ್್ಲಿ ಆಂಟಿ ಆತ್ಯಿಡೆಂಟ್ ಹೇರಳವಾಗಿದ್ದು, ರಕ್ತ ಚಲನೆಗೂ ಇದು ಸಹಕಾರಿಯಾಗುತ್ತಗೆ .

ಓಟ್ಸ್ ಬ್ರೇಕ್ ಫಾಸ್ಟ್.. ಬಿಸಿಲಿನಿಂದ ಉಂಟಾದ ಕಪ್ಪಾದ ಚರ್ಮ ನಿವಾರಣೆಗೆ ನೈಸರ್ಗಿಕ ಚಿಕಿತ್ಸೆ ನೀಡಲು ಉರಿಯೂತವನ್ನು ಕಡಿಮೆ ಮಾಡಬಹುದು. ಓಟ್ಸ್ ಉಪಹಾರ ನಿಮ್ಮ ಚರ್ಮದ ಕಾಂತಿ ಕಾಪಾಡಲು ಸಹಕಾರಿಯಾಗಿದೆ. 

ಸೋಡಾ ಬಳಕೆ 

Home Remedies , Dark skin , 
ಚರ್ಮ ಕಪ್ಪಾಗುವಿಕೆ, ಮನೆ ಮದ್ದು,

ಸೋಡಾದಲ್ಲಿರುವ ಬೈಕಾರ್ಬನೇಟ್ ಚರ್ಮದ ಉರಿಯೂತವನ್ನು ಶಮನಗೊಳಿಸುತ್ತದೆ. ತುರಿಕೆ ಕಡಿಮೆ ಮಾಡಲು ಮತ್ತು ಬಿಸಿಲಿನ ಬೇಗೆಯಿಂದ ರಕ್ಷಣೆ ಒದಗಿಸುತ್ತದೆ. ಸ್ನಾನದ ನೀರಿನಲ್ಲಿ ಸ್ವಲ್ಪ ಸೋಡಾ ಹಾಕಿ 20 ನಿಮಿಷಗಳವರೆಗೂ ಕೈಗಳನ್ನು ಇಟ್ಟರೆ, ಚರ್ಮದ ಕಾಂತಿ ಹೆಚ್ಚಗುತ್ತದೆ.  1 ಕಪ್ ಬೇಕಿಂಗ್ ಸೋಡಾ. 1 ಕಪ್ ಆವಿಯಾಗಿರುವ ಹಾಲು 2.4 ಕಪ್ ನುಣ್ಣಗೆ ಮಾಡಿದ ಓಟ್ಸ್ ಈ ಮೂರು ಉರಿಯೂತದ ವಿರುದ್ಧ ಹೋರಾಡುತ್ತದೆ. 

ವೈಟ್ ವೀನಿಗರ್ ನಲ್ಲಿ ಆಸ್ಪಿರಿನ್ ಅಂಶ ಆಸಿಟಿಕ್ ಆಮ್ಲವನ್ನು ಹೊಂದಿರುತ್ತದೆ. ಹೀಾಗಿ ಬಿಸಿಲಿನಿಂದಾಗುವ ತುರಿಕೆ , ನೋವನ್ನು ನಿವಾರಿಸುತ್ತದೆ. ಕಾಗದ ಟಾವೆಲ್ ನ್ನು ಬಳಸಿ ವೀನಿಗರ್ ಜತೆ ಹಚ್ಚಿಕೊಂಡರೆ ನೋವಿರುವ ಭಾಗಗಳನ್ನು ನಿವಾರಿಸುತ್ತದೆ. ಆದ್ರೆ ಕಣ್ಣುಗಳ ಸುತ್ತಲೂ ಜಾಗರೂಕವಾಗಿರಬೇಕು. 

ನಿಂಬೆಹಣ್ಣು

ನಿಂಬೆಹಣ್ಣನ್ನು ಕಟ್ ಮಾಡಿ  ಟ್ಯಾನ್ ಆಗಿರುವ ಜಾಗಕ್ಕೆ ಹಚ್ಚಿ. 5-15 ನಿಮಿಷ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ 2 ರಿಂದ 3 ವಾರ ಮಾಡಿದರೆ ಟ್ಯಾನ್ ಸಮಸ್ಯೆ ನಿವಾರಣೆಯಾಗುತ್ತದೆ. 

Home Remedies , Dark skin , 
ಚರ್ಮ ಕಪ್ಪಾಗುವಿಕೆ, ಮನೆ ಮದ್ದು,

ಕಡಲೆಹಿಟ್ಟು

1ಚಮಚಾ ಕಡಲೆಹಿಟ್ಟಿಗೆ 1 ಚಿಟಿಕೆ ಅರಶಿಣ ಹೆರೆಸಿ ಹಾಲು ಅಥವಾ ರೋಸ್ ವಾಟರ್ ಹಾಕಿ ಕಲಸಿಕೊಳ್ಳಿ. ಆ ಮಿಶ್ರಣವನ್ನು ಕೈ ಕಾಲು ಹಾಗೂ ಟ್ಯಾನ್ ಆದ ಭಾಗಗಳಿಗೆ ಹಚ್ಚಿ , 15 ನಿಮಿಷದ ಬಳಿಕ ತೊಳೆಯಿರಿ. 

ಟೊಮೋಟೋ, ಅಲೋವೇರಾ

1 ಚಮಚಾ , ಮೈಸೂರು ಬೇಳೆಯನ್ನು ನೀರಿನಲ್ಲಿ ನೆನೆಹಾಕಿ, ನಂತರ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಟೋಮೋಟೋ ರಸ ಹಾಗೂ ಅಲೋವೇರಾ ಬೆರೆಸಿ ಕಲಸಿಕೊಳ್ಳಿ. ಟ್ಯಾನ್ ಆದ ಭಾಗಕ್ಕೆ ಹಚ್ಚಿದರೆ ,ಸಮಸ್ಯೆ ನಿವಾರಣೆಯಾಗುತ್ತದೆ. 

ಸೌತೆ ಕಾಯಿ ರಸ 

1 ಬೌಲ್ ನಲ್ಲಿ ಸೌತೆಕಾಯಿಯ ತಿರುಳನ್ನು 1 ಚಮಚಾ ನಿಂಬೆ ರಸ ಹಾಗೂ 1 ಚಮಚ ರೋಸ್ ವಾಟರ್, ಹಾಕಿ ಕಲಸಿಕೊಂಡ ನಂತರ, ಕೈ ಕಾಲುಗಳ ಭಾಗಕ್ಕೆ ಹಚ್ಚಿ, 15-20 ನಿಮಿಷದ ನಂತರ ತೊಳೆಯಬೇಕು. 

ಜೇನುತುಪ್ಪ

ಅರ್ಧ ಕಪ್ ಪಪ್ಪಾಯ ಹಣ್ಣಿನ ಪೇಸ್ಟ್ ಗೆ 1 ಚಮಚಾ ಜೇನುತುಪ್ಪ ಮಿಕ್ಸ್ ಮಾಡಿಕೊಂಡ ನಂತರ, ಇದನ್ನು ಟ್ಯಾನ್ ಆಗಿರುವ ಭಾಗಗಳಿಗೆ ಹಚ್ಚಿ 30 ನಿಮಿಷದ ನಂತರ ತೊಳೆಯಬೇಕು. 

ಹಸಿರು ಚಹಾದ ಉತ್ಕರ್ಷಣಾ ನಿರೋಧಗಳನ್ನು ಹೊಂದಿದೆ. ನಿಮ್ಮ ಚರ್ಮಕ್ಕೆ ನಿಯಮಿತವಾಗಿ ಬಿಸಿಲಿನಿಂದ ಉಂಟಾಗುವ ಕಪ್ಪಾಗುವಿಕೆಯನ್ನು ತಡೆಗಟ್ಟುತ್ತದೆ. ಸೂರ್ಯನ ಕಿರಣಗಳಿಂದ ಉರಿ ಯೂತ ಹೆಚ್ಚಾಗಿ ಕಂಡು ಬರುತ್ತದೆ.  

ತೆಂಗಿನ ಎಣ್ಣೆ, ಶ್ರೀಗಂಧದ ಪುಡಿ, ಬಾದಾಮಿ ಎಣ್ಣೆ

ಶ್ರೀಗಂಧ ಉರಿಯೂತ ಶಮನಕಾರಿ ಗುಣ ಹೊಂದಿದೆ. ಮತ್ತು ಇದು ಉರಿ ಯೂತಕ್ಕೆ ಒಳಗಾಗಿರುವ ಚರ್ಮವನ್ನು ಶಾಂತಗೊಳಿಸುತ್ತದೆ. ಬಾದಾಮಿ ಎಣ್ಣೆಯಲ್ಲಿ ಮೊಶ್ಚರೈಸ್ ಗುಣಗಳು ಇದ್ದು, ಇದು ಹಾನಿಗೊಳಗಾದ ಚರ್ಮಕ್ಕೆ ರಕ್ಷಣೆ ನೀಡುತ್ತದೆ. 

ತೆಂಗಿನ ಎಣ್ಣೆ ಮತ್ತು ಆಪಲ್ ಸೀಡರ್ ವಿನೇಗರ್ 

ತೆಂಗಿನ ಎಣ್ಣೆ ಮತ್ತು ಆ್ಯಪಲ್ ಸೀಡರ್ ವಿನೇಗರ್ ಜತೆಯಾಗಿ ಸೇರಿಕೊಂಡರೆ ಉರಿಯೂತ ಶಮನ ಮಾಡುತ್ತದೆ. ಮತ್ತು ಬಿಸಿಲಿನಿಂದ ಸುಟ್ಟ ಗಾಯದಿಂದಾಗುವ ಕಿರಿಕಿರಿಯನ್ನು  ಕಡಿಮೆ ಮಾಡುತ್ತದೆ. 

ತೆಂಗಿನ ಎಣ್ಣೆ ಮತ್ತು ಹರಳೆಣ್ಣೆ

ತೆಂಗಿನ ಎಣ್ಣೆ ಮತ್ತು ಹರಳೆಣ್ಣೆ ಚರ್ಮಕ್ಕೆ  ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಹರಳೆಣ್ಣೆಯಲ್ಲಿ  ಇರುವಂತಹ ಉರಿಯೂತ ಶಮನಕಾರಿ ಗುಣವು ಚರ್ಮಕ್ಕೆ ಶಮನ ನೀಡುವುದು. ಬಿಸಿಲಿನ ಸುಟ್ಟ ಗಾಯ ದಿಂದ ಆಗಿರುವಂತಹ ನೋವು ಮತ್ತು ಉರಿಯೂತವನ್ನು ಇದು ಕಡಿಮೆ ಮಾಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ