ಒಣ ಕೆಮ್ಮಿನ ಕಿರಿ ಕಿರಿಗೆ ಇಲ್ಲಿದೆ ಮನೆ ಮದ್ದು..!

  • by

ಮಳೆಗಾಲ ಚಳಿಗಾಲ ಅಥವಾ ಬೇಸಿಗೆಕಾಲ ಈ ಮೂರು ಕಾಲಗಳಲ್ಲೂ ನಮ್ಮನ್ನು ಸದಾ ಕಾಡುವ ರೋಗಗಳಲ್ಲಿ ಈ ಒಣಕೆಮ್ಮು ಒಂದು, ಪ್ರತಿಯೊಬ್ಬ ವ್ಯಕ್ತಿಯು ಈ ಕೆಮ್ಮಿನ ಸಮಸ್ಯೆಯಿಂದ ತೊಂದರೆ ಅನುಭವಿಸಿರುತ್ತಾರೆ. ಒಣ ಕೆಮ್ಮಿನಿಂದ ಕೆಲವೊಮ್ಮೆ ಗಂಟಲಿನಲ್ಲಿ ಕೆರೆತ  ಅಥನಾ ಕಿರಿಕಿರಿಯಾಗುತ್ತದೆ. ಗಂಟಲಿನ್ಲಲಿ ಕೆರೆತ ಅಥವಾ ಕಿರಿಕಿರಿಯಾದರೆ ಕೆಮ್ಮು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಕೆಮ್ಮು ಉಂಟಾದಾಗ ಕೆಲವು ಮನೆ ಮದ್ದುಗಳನ್ನು ಮಾಡುವುದರ ಮೂಲಕ ಉಪಶಮನವನ್ನು ಕಾಣಬಹುದು. ಹಾಗಾದರೆ ಆ ಮನೆಮದ್ದುಗಳೇನು..? ಎಂದು ತಿಳಿಯೋಣ.

Dry cough. Home remedies , ಒಣ ಕೆಮ್ಮು, ಮನೆ ಮದ್ದು,

ಜೇಷ್ಠಮದ್ದು ಪುಡಿಯನ್ನು ಬಿಸಿ ಬಿಸಿ ಹಾಲಿಗೆ ಸೇರಿಸಿಕೊಂಡು ದಿನಕ್ಕೆ 2 ಬಾರಿ ಸೇವಿಸಿದರೆ ಒಣಕೆಮ್ಮು ಕಡಿಮೆಯಾಗುತ್ತದೆ.

ಹಸಿಶುಂಠಿ ರಸಕ್ಕೆ ಜೇನುತುಪ್ಪ ಸೇರಿಸಿ ಪದೇ ಪದೇ ಸೇವಿಸಿದರೂ ಒಣ ಕೆಮ್ಮು ಕಡಿಮೆಯಾಗುತ್ತದೆ.

ಒಣಶುಂಠಿ, ಕರಿಮೆಣಸು ಹಾಗೂ ಕಲ್ಲುಸಕ್ಕರೆ ಸೇರಿಸಿ ಪುಡಿ ಮಾಡಿ 2 ಚಿಟಿಕೆ ಅದರ ಪುಡಿಯನ್ನು ಪದೇ ಪದೆ ಬಾಯಗೆ ಹಾಕಿ ಚೀಪಿದರೆ ಒಣಕೆಮ್ಮು ಗುಣವಾಗುತ್ತದೆ. 

ಹಸಿ ಈರುಳ್ಳಿ ರಸವನ್ನು ದಿನಕ್ಕೆ 3 ರಿಂದ 4 ಬಾರಿ ಕುಡಿದರೆ ಒಣಕೆಮ್ಮು ಶಮನವಾಗುತ್ತದೆ. 

ಮಕ್ಕಳಲ್ಲಿ ಒಣಕೆಮ್ಮಿದ್ದರೆ ಒಣದ್ರಾಕ್ಷಿಯನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ಕಾಲು ಚಮಚದಿಂದ ಅರ್ಧ ಚಮಚ ಕಷಾಯವನ್ನು ಪದೇ ಪದೆ ಕುಡಿಸಿದರೆ ಕೆಮ್ಮು ಬೇಗ ನಿಲ್ಲುತ್ತದೆ. 

ಶುಂಠಿ ಬೆರೆಸಿ ಕುಡಿದರೆ ಒಣಕೆಮ್ಮು ಶಮನವಾಗುತ್ತದೆ.

ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿದರೆ ಕೂಡಾ ಶೀಘ್ರವಾಗಿ ಒಣಕೆಮ್ಮು ನಿವಾರಣೆ ಆಗುತ್ತದೆ

ನೆಗಡಿ, ಕೆಮ್ಮು, ಸಮಸ್ಯೆಗಳಿಗೆ ಕಷಾಯಗಳು..! 

ಶುಂಠಿ ಪೆಪ್ಪರ್ ಕಷಾಯ:

ಒಂದು ಪಾತ್ರೆಯಲ್ಲಿ 1 1/2 ಗ್ಲಾಸಿನಷ್ಟು ನೀರು ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಪೆಪ್ಪರ್ ಹಾಕಿ 10 ನಿಮಿಷಗಳ ಕಾಲ ಮುಚ್ಚಿಟ್ಟು ಕುದಿಸಿ. ಹೀಗೆ ಕುದಿಸಿದ ಕಷಾಯದ ನೀರನ್ನು ಸ್ವಲ್ಪ ಆರಲು ಬಿಟ್ಟು ಬಳಿಕ ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಬಿಸಿ ಬಿಸಿಯಾಗಿ ಕುಡಿಯಿರಿ. ಹೀಗೆ ದಿನಕ್ಕೆ ಎರಡುಬಾರಿ ಮಾಡುವುದರಿಂದ ನೆಗಡಿ ಕೆಮ್ಮು ,ಅಕ್ಫ ನಿವಾರಣೆಯಾಗುತ್ತದೆ.

ದಾಲ್ಚಿನ್ನಿ ಕಷಾಯ:

ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು 1 ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ವಾಸಿಯಾಗುತ್ತದೆ.

ಹಾಲು-ಅರಿಷಿಣ ಕಷಾಯ:

ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ ಕುಡಿದರೆ ನೆಗಡಿ, ಕೆಮ್ಮು, ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ.

Dry cough. Home remedies , ಒಣ ಕೆಮ್ಮು, ಮನೆ ಮದ್ದು,

ಓಮಕಾಳು ಕಷಾಯ

ಓಮ ಕಾಳು ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರೂ ಸಾರಿ ಕುಡಿದರೆ ಕಫಾ ನಿವಾರಣೆಯಗುತದೆ.

ಲೇಹ:

ಕಾಳು ಮೆಣಸನ್ನು ಹುರಿದು ನುಣ್ಣಗೆ ಪುಡಿಮಾಡಿ ಕಾಲು ಚಮಚ ಪುಡಿಯನ್ನು ಜೇನುತುಪ್ಪ ದಲ್ಲಿ ಕಲಸಿ ದಿನಕ್ಕೆ 2 ಸಲ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಗುಣವಾಗುತ್ತದೆ.

ಲೇಹ:

ಅರಿಶಿಣದ ಪುಡಿ ಮತ್ತು ಬೆಲ್ಲವನ್ನು ಸ್ವಲ್ಪ ಹಾಲಿನೊಂದಿಗೆ ಕಲಸಿ ಗಂಟಲಿನ ಮೇಲ್ಭಾಗಕ್ಕೆ ಹಚ್ಹುವದರಿಂದ ಶೀತದ ಗಂಟಲು ನೋವು ನಿವಾರಣೆಯಾಗುತ್ತದೆ.

ಜೇನುತುಪ್ಪ , ಈರುಳ್ಳಿ ರಸ ಹಾಗೂ ಬೆಳ್ಳುಳ್ಳಿ

ತಳ ಆಳವಿರುವ ಪಾತ್ರೆಯಲ್ಲಿ ಸ್ವಲ್ಪ ಈರುಳ್ಳಿ ರಸವನ್ನು ತೆಗೆದುಕೊಂಡು ಬಿಸಿ ಮಾಡಿಕೊಳ್ಳಿ. ಬಳಿತ ಇದಕ್ಕೆ ಬೆಳ್ಳುಳ್ಳಿಯ ಒಂದೆರೆಡು ದಳವನ್ನು ಜಜ್ಜಿ ಇದಕ್ಕೆ ಸೇರಿಸಿಕೊಂಡು, ಚೆನ್ನಾಗಿ ಉರಿದುಕೊಳ್ಳಿ. ಇಷ್ಟಾದ ನಂತಪ ಈ ಮಿಶ್ರಣವನ್ನುಒಂದು ದೊಡ್ಡ ಗ್ಲಾಸ್ ನಷ್ಟು ಉಗುರು ಬೆಚ್ಚಗಿನ ಬಿಸಿ ನೀರಿಗೆ ಸೇರಿಸಿ. ಹಾಗೂ ೧ ಟೇಬಲ್ ಚಮಚದಷ್ಟು ಜೇನುತುಪ್ಪ ಸೇರಿಸಿ. ಚೆನ್ನಾಗಿ ಕಲಸಿಕೊಂಡು, ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬಂದರೆ. ಕೆಮ್ಮನ ಸಮಸ್ಯೆ ಕೂಡಲೇ ನಿವಾರಣೆಯಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ