ತುಳಸಿಯ ಲಾಭಗಳು.. ತುಳಸಿ ಯಾಕೆ ಅಗಿಯ ಬಾರದು?

  • by

ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡ ನೋಡೋದಕ್ಕೆ ಸೀಗುತ್ತೆ.. ತುಳಸಿ ಗಿಡವನ್ನು ಹೆಚ್ಚು ಔಷಧೀಯ ಗುಣಗಳು ಹೊಂದಿದ್ದು, ಹಿಂದೂ ಧರ್ಮದಲ್ಲಿ ದೇವತೆಯಂತೆ ಇದನ್ನು ಪೂಜಿಸಲ್ಪಡುತ್ತದೆ. ಸಾಮಾನ್ಯವಾಗಿ ಎಲ್ಲರ  ಮನೆಯ ಮುಂದೆ ಒಂದು ತುಳಸಿ ಗಿಡ ಇದ್ದೇ ಇರುತ್ತದೆ. ಈ ಗಿಡ ಆಮ್ಲಜನಕ ಉತ್ಪನ್ನ ಮಾಡುವುದಲ್ಲದೇ, ಕ್ರಿಮಿ ಕೀಟಗಳನ್ನು ತಡೆಯುತ್ತದೆ. 

holy-basil benefits, ತುಳಸಿ, ಆರೋಗ್ಯ ಪ್ರಯೋಜನಗಳು

ತುಳಸಿ ಗಿಡವನ್ನು ಮನೆಯ ಮುಂಭಾಗ ಬೆಳೆಸಿದರೆ ಒಳ್ಳೆಯದಾಗುತ್ತದೆ ಎಂದು ನಂಬುವರಿದ್ದಾರೆ. ತುಳಸಿಯ ಹಲವಾರು ಅದ್ಭುತಗಳನ್ನು ಕಾಣಬಹುದು. ಔಷಧೀಯ ಗುಣಗಳು ತುಳಸಿಯಲ್ಲಿ ಹೇರಳವಾಗಿವೆ.

ತುಳಿಸಿಯ ಲಾಭಗಳು..!

ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ತೆಗೆದುಕೊಂಡಲ್ಲಿ ನೋವಿನ ಬಾಧೆ ಕಡಿಮೆಯಾಗುತ್ತದೆ. ಹೀಗೆ ಬಹುವಿಧ ಕಾಯಿಲೆಗಳಿಗೆ ಮನೆ ಮದ್ದಾಗಿದೆ. ಹೆಚ್ಚು ಖರ್ಚಿಲ್ಲದೇ ಬೆಳೆಸಬಹುದಾದ ಗಿಡ ಇದಾಗಿದೆ. 

ಬೊಜ್ಜನ್ನು ನಿವಾರಿಸುತ್ತದೆ

ತುಳಸಿ ಕೊಲೆಸ್ಟ್ರಾಲ್ ನ್ನು ನಿವಾರಣೆ ಮಾಡುತ್ತದೆ. ರಕ್ತದಲ್ಲಿನ ಕೊಬ್ಬಿನಂಶವನ್ನು ನಿಯಂತ್ರಿಸುತ್ತದೆ. ಜ್ವರ, ಕೆಮ್ಮು, ಟಿಬಿ ರೋಗಗಳೂ 3 ಗ್ರಾಂ ತುಳಸಿ ಪ್ರತಿ ದಿನ ಸೇವಿಸಿದರೆ ಉಪಯೋಗ ಹೆಚ್ಚು. 

ಹೊಳೆಯುವ ತ್ವಚೆಗೆ ತುಳಸಿ ಅತ್ಯುತ್ತಮ ಅಂತಲೇ ಹೇಳಬಹುದು. ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚಾಗುತ್ತದೆ. 

ತುಳಸಿ ಜ್ಞಾನಪಶಕ್ತಿ ಹೆಚ್ಚಿಸುತ್ತದೆ. ಪ್ರತಿ ದಿನ ಇದನ್ನು ತಿಂದರೆ, ರೋಗ ದೂರವಿರಿಸಬಹುದು. ಇದರ ಸೇವನೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗಿ ಬುದ್ಧಿವಂತಿಕೆಯೂ ಚುರುಕುಗೊಳ್ಳುತ್ತದೆ. ಇದನ್ನು ವಯಸ್ಸಾದವರು ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ. 

ಒತ್ತಡವನ್ನು ನಿವಾರಣೆ ಮಾಡುತ್ತದೆ.

ತುಳಸಿ ಇಡೀ ದಿನದ ಆಯಾಸವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಒತ್ತಡದಿಂದ ತೊಂದರಗೀಡಾಗಿದ್ದರೆ, ನಂತರ ಪ್ರತಿ ರಾತ್ರಿ ತುಳಸಿಯ ಕೆಲವು ಎಲೆಗಳನ್ನು ಹಾಲಿನಲ್ಲಿ ಕುದಿಸಿ ನಂತರ ಈ ಹಾಲನ್ನು ಕುಡಿಯಿರಿ. ಇದು ನರಮಂಡಲವನ್ನು ಸಡಿಲಗೊಳಿಸುತ್ತದೆ. ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. 

ತುಳಸಿ ಎಲೆಯ ಕಷಾಯ 

ಕೃಷ್ಣ ತುಳಸಿ ಗಿಡದ ಎಲೆಗಳನ್ನು (೫-೮) ಎಲೆಗಳನ್ನು ಚೆನ್ನಾಗಿ ತೊಳೆದು ಕುಡಿಯುವುದರಿಂದ ವಿಷಯ ಜ್ವರ ಕಡಿಮೆಯಾಗುತ್ತದೆ. 

ಕಫ ನಿವಾರಿಸುವ ಗುಣಗಳು ತುಳಸಿಯಲ್ಲಿವೆ. ತುಳಸಿ ಗಿಡದ ಎಲೆಗಳನ್ನು 5 ರಿಂದ 16 ಎಲೆಗಳನ್ನು ತೊಳೆದು, ಅದರ ರಸಕ್ಕೆ 1 ಲವಂಗ, 1ಯ2 ಇಂಚು ಶುಂಠಿ, 1 ಚಿಟಿಕೆ ಅರಶಿಣ ಹಾಕಿ ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಸಿ ಕಷಾಯ ತಯಾರಿಸಿ. 

5-8 ತುಳಸಿ ಗಿಡದ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದ್ರಿಂದ ಒತ್ತಡ ನಿವಾರಣೆಯಾಗುತ್ತದೆ. 

ತುಳಸಿ ರಸ, ಶುಂಠಿ ರಸ, ವೀಳ್ಯದೆಲೆ ರಸ ಮತ್ತು ಪೂದೀನ ಸೊಪ್ಪಿನ ರಸವನ್ನು ಸಮ ಪ್ರಮಾಣದಲ್ಲಿ 1 ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ಮೂರು ಚಮಚ ತುಳಸಿ ರಸವನ್ನು ಕಾಲು ಕಪ್ ಹಾಲಿನಲ್ಲಿ ಬೆರೆಸಿ 15 ದಿನಗಳ ಕಾಲ ಬರಿಹೊಟ್ಟೆಯಲ್ಲಿ ಕುಡಿದರೆ ಚರ್ಮರೋಗ ಶಮನವಾಗುತ್ತದೆ. 

holy-basil benefits, ತುಳಸಿ, ಆರೋಗ್ಯ ಪ್ರಯೋಜನಗಳು

ತುಳಸಿ ರಸ , ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು  ಸಮಭಾಗ ತೆಗೆದುಕೊಂಡು ಮಿಶ್ರಣ ಮಾಡಿ ತಯಾರಿಸಿ, ಮೂರು ದಿನಗಳಿಗೊಮ್ಮೆ 1 ಚಮಚ ಸೇವಿಸಿದರೆ ಅಜೀರ್ಣದ ಹೊಟ್ಟೆ ನೋವು ಭಾದಿಸುವುದಿಲ್ಲ. 

ತುಳಸಿ ಎಲೆಯನ್ನು ಬಾಯಲ್ಲಿ ಹಾಕಿ ಅಗಿಯುವುದರಿಂದ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ. 

ತುಳಸಿ ಎಲೆ, ಕರ್ಪೂರ,. ಲವಂಗ ಸೇರಿಸಿ ಕುಟ್ಟಿ ಗುಳಿಗೆ ಮಾಡಿ ಹಲ್ಲು ನೋವಿದ್ದ ಜಾಗಕ್ಕೆ ಇಟ್ಟರೆ ಹಲ್ಲು ನೋವು ನಿವಾರಣೆಯಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 1 ಚಮಚ ತುಳಸಿ ಎಲೆಯ ಚೂರ್ಣವನನ್ನು ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. 

ಜ್ವರದ ತಾಪ ಕಡಿಮೆಯಾಗಲು 1 ಚಮಚ ತುಳಸಿ ರಸ ದೊಂದಿಗೆ ನಾಲ್ಕಾರು ಕಾಳು ಮೆಣಸಿನ ಕಾಳು ಹಾಕಿ ಪುಡಿ ಮಾಡಿ, ಜೇನುತುಪ್ಪದೊಂದಿಗೆ ದಿನಕ್ಕೆ 2 ಬಾರಿ ಸೇವಿಸಿದರೆ ಉಪಯುಕ್ತವಾಗಲಿದೆ. 

ಚಿಕಿತ್ಸೆಯಲ್ಲಿ ತುಳಸಿ ಬಳಕೆ

ಹೊಟ್ಟೆಯ ಹುಣ್ಣು, ಕೊಲೆಸ್ಟ್ರಾಲ್ , ಬೊಜ್ಜು , ಸಕ್ಕರೆ, ಕ್ಯಾನ್ಸರ್ , ಏಡ್ಸ್ ನಂತಹ ಗಂಭೀರ ಸಮಸ್ಯೆಗಳಿಗೆ ತುಳಸಿಯನ್ನು ಬಳಸುತ್ತಾರೆ. ಸೌಂದರ್ಯ ಚಿಕಿತ್ಸೆಯಲ್ಲೂ ತುಳಸಿ ಪುಡಿ ಬಳಕೆಯಾಗುತ್ತದೆ. ಮುಖದ ಮೇಲಿನ ಕಪ್ಪುಕಲೆ, ಸುಕ್ಕು ನಿವಾರಿಸಲು ತುಳಸಿ ತಾಜಾತನದಿಂದ ಹೊಳೆಯುತ್ತದೆ.

ತುಳಸಿ ಗಿಡಕ್ಕೆ ಪೂಜೆ ಹೇಗೆ ಪೂಜಿಸಲಾಗುತ್ತದೆ… ತುಳಸಿ ಗಿಡಕ್ಕೆ ಪೂಜೆ ಮಾಡಿ, ತುಪ್ಪದ ದ್ವೀಪವನ್ನು ಹಚ್ಚಿಡಬೇಕು. ಇದರಿಂದ ದಾಂಪತ್ಯ ಸುಖವು ಪ್ರಾಪ್ತಿಯಾಗುತ್ತದೆ. ಎನ್ನುವ ನಂಬಿಕೆ ಹಲವರಲ್ಲಿದೆ.

ಆದ್ರೆ ತುಳಸಿ ಗಿಡಕ್ಕೆ ಅವಮಾನ ಮಾಡುವುದು , ಅನುಪಯುಕ್ತ ಕೆಲಸಗಳಿಗೆ ತುಳಸಿ ಬಳಸುವುದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಿಂಧು, ಧರ್ಮ ಹಾಗೂ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಪ್ರಕಾರ, ಪವಿತ್ರ ತುಳಸಿ ಎಲೆಯೊಂದಿಗೆ ಕೆಲವು ಅಸಂಬದ್ಧ ಕೆಲಸವನ್ನು ಮಾಡಬಾರದು. ಹಾಗಾದರೆ, ಯಾವವು ಮಾಡಬಾರದು.

ಪುರಾಣದಲ್ಲಿ ತುಳಸಿ ಬಗ್ಗೆ 

ಜಲಂಧರ ಎನ್ನವ ರಾಕ್ಷಸನ ಪತ್ನಿ ವೃಂದ , ಪತಿವೃತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ಜಲಂಧರನ ಉಪಟಳ ತಾಳಲಾರದೇ, ಜನರೆಲ್ಲರೂ ಶಿವ ಮತ್ತು ವಿಷ್ಣುವನ್ನು ಪ್ರಾರ್ಥನೆಯ ಮೂಲಕ ತಮ್ಮನ್ನು ಕಾಪಾಡುವಂತೆ ಕೇಳಿಕೊಂಡರು. ಆಗ ಶಿವ ಮತ್ತು ವಿಷ್ಣು ಜಲಂಧರನನ್ನು ಸೋಲಿಸಲು ಬಂದರು. ವಿಷ್ಣು ಜಲಂಧರನ ರೂಪವನ್ನು ತಾಳಿ ವೃಂದಾಳ ಪಾತಿವೃತ್ಯವನ್ನು ಭಂಗಗೊಳಿಸಿದರು. ಶಿವನು ಜಲಂಧರನನ್ನು ಸಾಯಿಸಿದನು. ತುಳಸಿಯ ಅವತಾರವಾದ ವೃಂದ ಶಿವನನ್ನು ಪೂಜಿಸುವಾಗ ತನ್ನ ಎಲೆಯನ್ನು ಬಳಸಬಾರದು ಎಂದು ಶಾಪ ನೀಡಿದಳು. ವಿಷ್ಣುವಿನ ಆಶೀರ್ವಾದ ಪಡೆದ ವೃಂದ ಜಲಂಧರನ ಭಸ್ಮದಲ್ಲಿ ತಾನೂ ಸಹ ಬೂದಿಯಾದಳು. 

ಪಾರ್ವತಿ ವೃಂದಾವನದಲ್ಲಿ ಹುಟ್ಟಿದ ತುಳಸಿ

ಜಲಂಧರನ ಭಸ್ಮದೊಂದಿಗೆ ಆಹುತಿಯಾದ ವೃಂದಾ ನಂತರ ತರ ಪಾರ್ವತಿ ದೇವಿ ನಿರ್ಮಿಸಿದ ಬೃಂದಾವನದಲ್ಲಿ ತುಳಸಿಯ ರೂಪದಲ್ಲಿ ಹುಟ್ಟಿ ಬಂದಳು. ಇನ್ನೊಂದು ಕಥೆ ಪ್ರಕಾರ, ವೃಂದಾ ರುಕ್ಮಿಣಿಯಾಗಿ ಹುಟ್ಟಿ ಬಂದಳು ಎಂದು ಹೇಳಲಾಗುತ್ತದೆ. ನಂತರ ಕಾರ್ತಿಕ ಮಾಸದ ದ್ವಾದಶಿಯಂದು ಕೃಷ್ಣನನ್ನು ವಿವಾಹವಾದಳು ಎನ್ನುವ ಕಥೆ ಇರುವುದನ್ನು ಸಹ ತಿಳಿಯಬಹುದು. ಈ ಹಿನ್ನೆಲೆಯಲ್ಲಿ ವಿಷ್ಣು ದೇವರಿಗೆ ತುಳಸಿ ಎಂದರೆ ಅತ್ಯಂತ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. 

ಶಿವಲಿಂಗಕ್ಕೆ ತುಳಸಿ ಯಾಕೆ ಅರ್ಪಿಸಬಾರದು..

ಹಿಂದೂ ಕಥೆ ಪುರಾಣಗಳ ಪ್ರಕಾರ, ವಿಷ್ಣುವು ತುಳಸಿಯ ಪತಿ. ಆದ್ದರಿಂದ ವಿಷ್ಣುವಿನ ಅವತಾರಗಳಾದ ಶ್ರೀ ಕೃಷ್ಣ , ರಾಮ , ವಿಷ್ಣುವಿಗೆ ಮಾತ್ರ ತುಳಸಿ ಎಲೆಯನ್ನು ಅರ್ಪಿಸುತ್ತಾರೆ. ಶಿವನು ಸರಳ ಹಾಗೂ ಶಕ್ತಿಗೆ ಹೆಸರಾದವರು. ಹಾಗಾಗಿ ಶಿವನ ಪೂಜೆ ಅಥವಾ ಶಿವಲಿಂಗದ ಪೂಜೆಗೆ ತುಳಸಿ ಎಲೆ ಹಾಗೂ ದಳವನ್ನು ಎಂದಿಗೂ ಬಳಸಬಾರದು. 

ಯಾವ ದಿನಗಳಲ್ಲಿ ತುಳಸಿ ಕೀಳಬಾರದು

ಸೂರ್ಯಗ್ರಹಣ, ಚಂದ್ರಗ್ರಹಣ , ಭಾನುವಾರ, ಹಾಗೂ ಏಕಾದಶಿ ಸಮಯದಲ್ಲಿ ತುಳಸಿ ಎಲೆಯನ್ನು ಕೀಳುವುದು, ಗಿಡವನ್ನು ಕತ್ತರಿಸುವುದು ಅಥವಾ ಬಿಸಾಡುವ ಕೆಲಸವನ್ನು ಎಂದಿಗೂ ಮಾಡಬಾರದು ಎಂದು ಹೇಳಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಅದು ಪಾಪ ಕೃತ್ಯ. ಹಾಗಾಗಿ ಶಾಪ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. 

ತುಳಸಿ ಅಗಿಯ ಬಾರದೇಕೆ..?

ಜನರು ಎಲೆಯು ಆರೋಗ್ಯಕರ ಗುಣಗಳಿಂದ ಕೂಡಿದೆ ಅಂತಾ ಜನರು ತುಳಸಿ ಎಲೆಯನ್ನು ಅಗೆಯುತ್ತಾರೆ. ಆದ್ರೆ ತುಳಸಿ ಎಲೆಯಲ್ಲಿ ಕೆಲವು ವಿಷಕಾರಿ ಲೋಳೆಗಳು ಇರುತ್ತವೆ. ಅವುಗಳಲ್ಲಿ ಉತ್ತಮವಾದುದ್ದಲ್ಲ.  ಅವುಗಳಲ್ಲಿ ಹಲ್ಲಿನಲ್ಲಿ ಜಗೆದಾಗ ನಮ್ಮ ಬಾಯಿಯಲ್ಲಿ ಲೋಳೆಯೊಂದಿಗೆ ಸೇರಿಕೊಂಡು ದವಡೆಗಳಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತವೆ. 

ತುಳಸಿ ಗಿಡ ಎಲ್ಲಿರಬೇಕು?

ತುಳಸಿ ಗಿಡವನ್ನು ಪ್ರತಿ ಮನೆಯ ಹೊರಗೆ ಹಾಗೂ ದೇವಾಲಯದ ಹೊರ ಭಾಗದಲ್ಲಿ ನೆಡಲಾಯಿತು. ನಂತರ ತುಳಸಿ ದೇವಿಗೆ ವಿಶೇಷ ಪೂಜೆ ಹಾಗೂ ಹಬ್ಬದ ಆಚರಣೆಯನ್ನು ಸಹ ಮಾಡಲಾಯಿತು ಎನ್ನುವ ಪ್ರತೀತ ಇದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ