ಕೊರೊನಾ ಎಫೆಕ್ಟ್… ಹೋಳಿ ವೇಳೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?

  • by

ಭಾರತದೆಲ್ಲೆಡೆ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಎಲ್ಲರೂ ಸಿದ್ಧತೆ ನಡೆಸಿದ್ದಾರೆ. ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳಲು ಸಾರ್ವಜನಿಕರು ಉತ್ಸುಕತೆಯಿಂದ ಕಾಯುತ್ತಿದ್ದಾರೆ.ಭಾರತೀಯರಿಗೆ ಹೋಳಿ ಅಂದ್ರೆ ತುಂಬಾ ಸ್ಪೆಷಲ್, ಈ ಹಬ್ಬವನ್ನು ಏಕತೆ, ವೈವಿಧ್ಯತೆಯನ್ನು ಸಾರುತ್ತದೆ. ಯಾವುದೇ ಜಾತಿ, ಮತ ಭೇದವಿಲ್ಲದೇ, ಹಿರಿಯರು ಕಿರಿಯರು ಸೇರಿ ಹೋಳಿ ಆಡುತ್ತಾರೆ. ಆದ್ರೆ ಇದೀಗ ಹೋಳಿ ಹಬ್ಬಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಈಗಾಗ್ಲೇ ಕೊರೊನಾ ವೈರಸ್ ಏಕಾಏಕಿ ಯಾಗಿ ಆತಂಕ ಮೂಡಿಸಿದ್ದರಿಂದ ಹೋಲಿ ಮಿಲನ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಅಲ್ಲದೇ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಹೋಳಿ ಆಡದಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.


holi festival, Coronavirus disease, prevent coronavirus,
ಕೊರೊನಾ ಎಫೆಕ್ಟ್, 
 ಹೋಳಿ ಹಬ್ಬ, ರಕ್ಷಣೆ,

ಹೋಳಿ ಹಬ್ಬದ ಸಂಭ್ರಮ..
ಕೆಮ್ಮು ಹಾಗೂ ಶೀತದಿಂದ ಬಳಲುತ್ತಿರುವ ಜನರಿಂದ ಸುಮಾರು 3 ಅಡಿಗಳಷ್ಟು ದೂರವಿರಬೇಕು ಎಂದು ಆಗಾಗ್ಗೆ ಎಚ್ಚರಿಸಲಾಗುತ್ತದೆ. ಆದ್ರೆ ಕೊರೊನಾ ವೈರಸ್ ಭೀತಿ ಸಂದರ್ಭದಲ್ಲಿ ಹೋಳಿಯಂತಹ ಹಬ್ಬದ ಸಂಭ್ರಮವನ್ನು ಕಡೆಗಣಿಸುವುದು ಸವಾಲಿನ ಸಂಗತಿ. ಹೋಳಿ ಹಬ್ಬದ ವೇಳೆ ಸಾಕಷ್ಟು ಜನರು ಪರಸ್ಪರ ಭೇಟಿಯಾಗುತ್ತಾರೆ. ಇದ್ರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಹೋಳಿ ಆಡುವಾಗ ಜಾಗರೂಕರಾಗಿರಿ!

ಪರಸ್ಪರ ತಬ್ಬಿಕೊಳ್ಳುವುದು ಬೇಡ.!

ನಿಮಗೆ ಕೆಮ್ಮು ಅಥವಾ ಸೀನು ಉಂಟಾದಾಗ, ಇತರರನ್ನು ತಬ್ಬಿಕೊಳ್ಳುವುದು , ಅವರ ಮೇಲೆ ಬಣ್ಣ ಎರಚುವುದು. ಮುಂತಾದ ದೈಹಿಕ ಸಂಪರ್ಕವನ್ನು ತಪ್ಪಿಸಬೇಕಾಗುತ್ತದೆ. ನೀವು ಶೀತ ಹಾಗೂ ಜ್ವರ ಇರುವ ಜನರ ಸಂಪರ್ಕದಲ್ಲಿದ್ದರೆ ತಕ್ಷಣ ನಿಮ್ಮ ಕೈಗಳನ್ನು ತೊಳೆಯಬೇಕು.


holi festival, Coronavirus disease, prevent coronavirus,
ಕೊರೊನಾ ಎಫೆಕ್ಟ್, 
 ಹೋಳಿ ಹಬ್ಬ, ರಕ್ಷಣೆ,

ಹ್ಯಾಂಡ್ ವಾಶ್ ಮರೆಯಬೇಡಿ..!

ನಿಮ್ಮ ಕೈಗಳ ಹಿಂಭಾಗ ಮತ್ತು ಬೆರಳುಗಳ ನಡುವೆ ಬೆರಳಿನ ಉಗುರುಗಳ ಕೆಳಗೆ ಸ್ವಚ್ಛ ಮಾಡಿಕೊಳ್ಳಬೇಕು. 20 ಸೆಕೆಂಡುಗಳ ಕಾಲ ಹ್ಯಾಂಡ್ ವಾಶ್ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಸೀನುವುದು, ಕೆಮ್ಮುವುದನ್ನು ತಡೆಗಟ್ಟಲು, ನಿಮ್ಮ ಬಾಯಿಯನ್ನು ಕರವಸ್ತ್ರದಿಂದ ಮುಚ್ಚುವ ಮೂಲಕ ಸೋಂಕನ್ನು ತಡೆಗಟ್ಟಬಹುದಾಗಿದೆ.

ಹೋಳಿ ವೇಳೆ ಮನೆಯಿಂದ ಹೊರಗೆ ಹೋಗಬೇಡಿ..!

ಕೆಮ್ಮು ಸೀನು ಹಾಗೂ ನೆಗಡಿಯಂತಹ ಲಕ್ಷಣಗಳನ್ನು ಹೊಂದಿರುವ ಜನರು ಹೋಳಿ ಸಮಯದಲ್ಲಿ ಹೊರಗೆ ಹೋಗಕೂಡದು. ಏಕೆಂದರೆ ಸೋಂಕಿಗೆ ಒಳಾಗಾಗಿದ್ದಾರೋ, ಅಥವಾ ಇಲ್ಲವೋ ಯಾರಿಗೂ ತಿಳಿದಿರುವುದಿಲ್ಲ.


holi festival, Coronavirus disease, prevent coronavirus,
ಕೊರೊನಾ ಎಫೆಕ್ಟ್, 
 ಹೋಳಿ ಹಬ್ಬ, ರಕ್ಷಣೆ,

ಯಾತ್ರೆಗಾಗಿ ಬಂದ ಜನರಿಂದ ದೂರವಿರಿ!

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇತ್ತೀಚಿಗೆ ವಿದೇಶಗಳಿಂದ ಜನರು ಭಾರತಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಹೆಚ್ಚು. ಅವರಲ್ಲಿ ಸೋಂಕು ಇದೆಯೋ, ಇಲ್ಲವೋ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಭಾರತದಿಂದ ಹೊರ ದೇಶಗಳಲ್ಲಿ ಇದ್ದು, ಭಾರತಕ್ಕ ಆಗಮಿಸಿದ ಜನರ ಜತೆ ಹೋಳಿ ಆಡುವುದನ್ನು ತಪ್ಪಿಸಬೇಕು. ಪ್ರಾರಂಭದಲ್ಲಿ ಅವರು ಆರೋಗ್ಯವಾಗಿದ್ದರೂ ಸಹ, ಈ ವೈರಸ್ ರೋಗಲಕ್ಷಣಗಳನ್ನು 14 ದಿನಗಳ ನಂತರ ಕಂಡು ಬರುವ ಸಾಧ್ಯತೆ ಹೆಚ್ಚು.

ಸ್ವಚ್ಛತೆ ಕಡೆ ಗಮನ ವಿರಲಿ..!

ಬೇರೆಯವರೂ ಹೋಳಿ ಆಡುತ್ತಿದ್ದರೆ, ನಂತರ ಕೈಗಳನ್ನು ಸ್ವಚ್ಛಗೊಳಿಸಬೇಕು. ಹೋಳಿಯಾಡಿದ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ನಂತರ ಸ್ನಾನ ಮಾಡಬೇಕು

holi festival, Coronavirus disease, prevent coronavirus,
ಕೊರೊನಾ ಎಫೆಕ್ಟ್, 
 ಹೋಳಿ ಹಬ್ಬ, ರಕ್ಷಣೆ,

ಹೋಳಿ ಸಮಯದಲ್ಲಿ ಚರ್ಮದ ಕಾಳಜಿ ವಹಿಸುವುದು ಹೇಗೆ..?

ಹೋಳಿ ಬಣ್ಣಗಳು ಕೆಲಮೊಮ್ಮೆ ಚರ್ಮದ ಮೇಲೆ ವಿಶೇಷವಾಗಿ ಮುಖದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದ್ದು. ಚರ್ಮ ಸಾಕಷ್ಟು ಸೂಕ್ಷ್ಮವಾಗಿರುವುದರಿಂದ ಚರ್ಮದ ಬಗ್ಗೆ ಕಾಳಜಿ ವಹಿಸಬೇಕಾಗುತ್ತೆದೆ.

ಐಸ್ ನಿಂದ ತ್ವಚೆಯನ್ನು ಉಜ್ಜಿಕೊಳ್ಳಿ..!

ಬರ್ಫ್ ತುಂಡುಗಳನ್ನು ತೆಗೆದುಕೊಂಡು,, ಒಂದು ಶುದ್ಧವಾದ ಬಟ್ಟೆಯಲ್ಲಿ ಕಟ್ಟಿ, 10 ರಿಂದ 15 ನಿಮಿಷವರೆಗೂ ಚರ್ಮದ ಮೇಲೆ ಇಟ್ಟು ಉಜ್ಜಿಕೊಳ್ಳಿ.

ಮುಖ, ಹಾಗೂ ಕೂದಲಿಗೆ ಎಣ್ಣೆ ಹಚ್ಚಿ

ಆಯಿಲ್ ಕೇವಲ ಕೂದಲಿಗೆ ಅಷ್ಟೇ ಬಳಸಬಾರದು. ಇದನ್ನು ಮುಖಕ್ಕೂ ಹಚ್ಚಬಹುದು. ಕೂದಲಿಗೆ ಪೂರ್ತಿಯಾಗಿ ಎಣ್ಣೆ ಹಚ್ಚಬೇಕು. ನಂತರ
ಮುಖಕ್ಕೂ, ಚರ್ಮಕ್ಕೂ ಎಣ್ಣೆ ಹಚ್ಚಬೇಕು. ಇದ್ರಿಂದ ಮುಖದ ಮೇಲಿರುವ ಬಣ್ಣವನ್ನು ಸುಲಭವಾಗಿ ನಿವಾರಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ