ಬಾಡಿ ಆಯಿಲ್ v/s ಬಾಡಿ ಲೋಷನ್.. ಹೋಳಿ ವೇಳೆ ಮುಖದ ಮೇಲಿನ ಬಣ್ಣ ನಿವಾರಿಸಲು ಯಾವುದು ಸೂಕ್ತ..!

  • by

ವರ್ಷದ ಅತ್ಯಂತ ವರ್ಣರಂಜಿತ ಹಬ್ಬವೆಂದರೆ ಅದು ಹೋಳಿ.. ನಮ್ಮ ದೇಶದ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಹೋಳಿ ಕೂಡಾ ಒಂದು. ಸಾಂಪ್ರದಾಯಿಕಾಗಿ ಹೋಳಿ ಹಬ್ಬವನ್ನು ಬಣ್ಣ ಎರೆಚುವುದರ ಮೂಲಕ , ಕೆಲವು ಕಡೆ ನತ್ಯ ಮಾಡುವುದರ ಮೂಲಕ ಆಚರಿಸಲಾಗುತ್ತದೆ. ಇನ್ನು ಹೋಳಿ ಸಂದರ್ಭದಲ್ಲಿ ನೂರಾರು ಬಣ್ಣಗಳಿಂದ ನಮ್ಮ ಸ್ನೇಹಿತರು, ಆಪ್ತರು, ಕುಟುಂಬದವರು ಜತೆ ರಂಗಿನ ಓಕುಳಿ ಆಡುತ್ತೇವೆ. ಅಂಥ ಸಂಧರ್ಭದಲ್ಲಿ ಬಣ್ಣಗಳು ನಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡಬಲ್ಲದ್ದು. ಹಾಗಾಗಿ ಚರ್ಮದ ಕಡೆ ಕಾಳಜಿ ವಹಿಸಬೇಕಾಗುತ್ತದೆ.

ಚರ್ಮವನ್ನು ಬಣ್ಣಗಳಿಂದ ಮುಕ್ತವಾಗಿಸಲು ಬಾಡಿ ಲೋಷನ್ ಬಳಸಬೇಕೇ ಅಥವಾ ಬಾಡಿ ಆಯಿಲ್ ಬಳಸಬೇಕೇ ಎಂಬ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಇದ್ರಿಂದ ಗೊಂದಲಕ್ಕೀಡಾಗುತ್ತಾರೆ. ಇವರೆಡರಲ್ಲಿ ಯಾವುದು ಉತ್ತಮವಾದದ್ದು ಎಂದು ಇಲ್ಲಿದೆ ಮಾಹಿತಿ.


holi colours, body oil, lotion , protect skin, hair,
ಬಾಡಿ ಆಯಿಲ್ , ಬಾಡಿ ಲೋಷನ್.. ಹೋಳಿ ಬಣ್ಣ , ನಿವಾರಿಸಲು ಟಿಪ್ಸ್,

ಬಾಡಿ ಆಯಿಲ್ ಅಥವಾ ಬಾಡಿ ಲೋಷನ್ ಯಾವುದು ಹೆಚ್ಚು ಸೂಕ್ತ..?

ಹೋಳಿ ಆಡುವ ಮೊದಲು ಎಣ್ಣೆ ಅಥವಾ ಲೋಷನ್ ಹಚ್ಚಬೇಕೇ ಎಂದು ಜನರಲ್ಲಿ ದೊಡ್ಡ ಪ್ರಶ್ನೆಯಾಗಿರುತ್ತದೆ. ರಾಸಾಯನಿಕ ಆಧಾರಿತ ಎಲ್ಲಾ ಬಣ್ಣಗಳು ಹಾನಿಯನ್ನುಂಟು ಮಾಡಬಲ್ಲವು. ಎರಡೂ ಸಹ ನೀವು ಬಳಕೆ ಮಾಡಬಹುದು. ರಾಸಾಯನಿಕಗಳಿಂದ ನಿಮ್ಮನ್ನು ರಕ್ಷಿಸಲು ಎರಡನ್ನೂ ಬಳಕೆ ಮಾಡಬಹುದು.

ಹೋಳಿ ಮೊದಲ ರಾತ್ರಿ..!

ಹೋಳಿಗಾಗಿ ತ್ವಚೆ ಆರೈಕೆ ಸಿದ್ಧತೆ ಪ್ರಾರಂಭವಾಗುವ ಸಮಯವಿದು. ಹೇಗಾದರೂ ನೀವು ಹೋಳಿ ಬಣ್ಣವನ್ನು ಆಡುವ ಮೊದಲು , ಹಬ್ಬವನ್ನು ಆನಂದದಿಂದ ಆಚರಿಸಲು ಸಿದ್ಧರಾಗಿರಬೇಕು. ಹೋಳಿಗೂ ಮುನ್ನ ಒಂದು ರಾತ್ರಿ ಮೊದಲು, ನೀವು ಸಾಮಾನ್ಯ ಪ್ರಮಾಣದ ಬಾಡಿ ಲೋಷನ್ ಹಚ್ಚಬೇಕು.


holi colours, body oil, lotion , protect skin, hair,
ಬಾಡಿ ಆಯಿಲ್ , ಬಾಡಿ ಲೋಷನ್.. ಹೋಳಿ ಬಣ್ಣ , ನಿವಾರಿಸಲು ಟಿಪ್ಸ್,

ಮೊಣಕೈ ಹಾಗೂ ಮೊಣಕಾಲುಗಳಿಗೆ ನೀವು ದೇಹದ ಒಣ ಭಾಗಗಳಿಗೆ ವ್ಯಾಸಲಿನ್ ಬಳಸಬಹುದು. ಅಗತ್ಯ ಪ್ರಮಾಣದ ತೇವಾಂಶದಿಂದ ಪೋಷಿಸಬಹುದು. ಅಲ್ಲದೇ, ಹೋಳಿ ಆಡಲು ನೀವು ಯಾವುದೇ ಬಾಡಿ ಲೋಷನ್ ಅನ್ನು ಬಳಸಬಹುದು. ಆದ್ರೆ ಸರಿಯಾದ ಸಮಯಕ್ಕೆ ಹಚ್ಚಿಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಹೋಳಿ ಹಬ್ಬದ ಹಿನ!

ಹೋಳಿ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುವ ದಿನವಿದು. ಯಾವುದೇ ಬ್ಯಾಕ್ಟೇರಿಯಾವನ್ನು ನಿವಾರಿಸಲು, ಬೆಳಿಗ್ಗೆ ಎದ್ದು ಹೊರಗೆ ಹೋಗುವ ಮೊದಲು ಸ್ನಾನ ಮಾಡಿ. ಸ್ನಾನ ಮಾಡಿದ ನಂತರ, ನಿಮ್ಮ ದೇಹದ ಮೇಲೆ ಎಣ್ಣೆ ಹಚ್ಚಿ. ಮತ್ತು ಬಾಡಿ ಆಯಿಲಿಂಗ್ ಮಾಡಿ. ನೀವು ಯಾವುದೇ ದುಬಾರಿ ಎಣ್ಣೆ ಖರೀದಿಸಬೇಕಾಗಿಲ್ಲ. ತೆಂಗಿನ ಎಣ್ಣೆಯಂತಹ ಅಗ್ಗದ ಎಣ್ಣೆಯನ್ನು ಹಚ್ಚಬಹುದು. ಇದು ಮೈಮೇಲಿನ ಬಣ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಮುಖಕ್ಕೆ ಬಾದಾಮಿ ಎಣ್ಣೆಯನ್ನು ಹಚ್ಚಬಹುದು. ನಿಮ್ಮ ಕೂದಲಿಗೆ ಎಣ್ಮೆ ಹಾಕುವುದನ್ನು ಮರೆಯಬೇಡಿ. ರಾಸಾಯನಿಕ ಬಣ್ಣಗಳಿಂದ ಹಾಗೂ ಸೂರ್ಯನ ಕಿರಣಗಳಿಂದ ಕೂದಲನ್ನು ರಕ್ಷಿಸಲು ಕೂದಲನ್ನು ಬೀಡುವ ಬದಲು ಕಟ್ಟಿಕೊಳ್ಳಿ.

ಬಾಡಿ ಆಯಿಲಿಂಗ್ ಮತ್ತು ಬಾಡಿ ಲೋಷನ್ ನಿಮ್ಮ ಚರ್ಮವನ್ನು ಮೈ ಬಣ್ಣಗಳಿಂದ ರಕ್ಷಿಸುತ್ತದೆ. ಇದನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ಮನೆಯಿಂದ ಹೊರಡುವ ಮೊದಲು, ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಲು ಮರೆಯದಿರಿ. ನಿಮ್ಮ ದೇಹ ಸಂಪೂರ್ಣವಾಗಿ ಆವರಿಸಿರುವ ಬಟ್ಟೆಗಳನ್ನು ಬಳಸಿ. ಅಲ್ಲದೇ ದಪ್ಪ ಸ್ಕಾರ್ಫ್ ಗಳಿಂದ ನಿಮ್ಮ ತಲೆಯನ್ನು ಸಂಪೂರ್ಣವಾಗಿ ಕವರ್ ಮಾಡಿ.


holi colours, body oil, lotion , protect skin, hair,
ಬಾಡಿ ಆಯಿಲ್ , ಬಾಡಿ ಲೋಷನ್.. ಹೋಳಿ ಬಣ್ಣ , ನಿವಾರಿಸಲು ಟಿಪ್ಸ್,


ಬಣ್ಣ ಹಚ್ಚುವಾಗ ನಿಮ್ಮ ಕಣ್ಣುಗಳಿಗೆ ಬಣ್ಣ ತಾಗದಂತೆ ನೋಡಿಕೊಳ್ಳಿ. ಕನ್ನಡಕ ಬಳಸುವುದು ಉತ್ತಮ. ಹೋಳಿ ಹಬ್ಬದ ಸಂಬರ್ಧದಲ್ಲಿ ಗುಲಾಬಿ ಹಾಗೂ ಕೆಂಪು ಬಣ್ಣವನ್ನು ಬಳಸಿರಿ. ಏಕೆಂದರೆ. ಇವುಗಳನ್ನು ಸುಲಭವಾಗಿ ತೊಳೆಯಬಹುದು. ನೇರಳೆ, ಹಳದಿ, ಹಾಗೂ ಹಸಿರು ಬಣ್ಣಗಳು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಈ ಬಣ್ಣಗಳನ್ನು ಅವೈಡ್ ಮಾಡಿ.

ಹೋಳಿಯಲ್ಲಿ ಬಣ್ಣ ಹಚ್ಚಿಕೊಂಡು ಬಿಸಿಲಿನಲ್ಲಿ ಕುಳಿತುಕೊಳ್ಳಬೇಡಿ. ಏಕೆಂದರೆ ಅಪಾಯಕಾರಿ ರಾಸಾಯನಿಕ ಬಣ್ಣಗಳು ದೇಹಕ್ಕೆ ಮತ್ತಷ್ಟು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತೆಗೆದುಹಾಕಲು ತೊಂದರೆಯಾಗಬಹುದು. ನೆರಳಿನಲ್ಲಿ ಕುಳಿತುಕೊಳ್ಳುವುದು ಉತ್ತಮ.
ಅಪಾಯಕಾರಿ ರಾಸಾಯನಿಕ ಯುಕ್ತ ಚರ್ಮದ ಮೇಲೆ ಬಣ್ಣದ ಕಲೆಯಾಗದಂತೆ ತಪ್ಪಿಸಲು ನಿಮ್ಮ ಉಗುರುಗಳಲ್ಲಿ ಹಾಗೂ ನಿಮ್ಮ ಕಿವಿಯ ಹಿಂಭಾಗದಲ್ಲಿ ಸ್ವಲ್ಪ ಎಣ್ಣೆಯನ್ನು ಹಚ್ಚಿ.

ಹೋಳಿ ಹಬ್ಬದ ವೇಳೆ ನಿಮ್ಮ ಕೂದಲಿಗೆ ಬಣ್ಣವಾಗದಂತೆ ನೋಡಿಕೊಳ್ಳಿ. ನಿಮ್ಮ ಕೂದಲ ರಕ್ಷಣೆಗೆ ಮೊದಲು ಎಣ್ಣೆ ಬಳಸಿ. ರಾಸಾಯನಿಕಯುಕ್ತ ಬಣ್ಣಗಳಿಂದ ಕೂದಲನ್ನು ರಕ್ಷಿಸಲು ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆ ಹೆಚ್ಚು ಪರಿಣಾಮಕಾರಿ ಎಂದು ಹೇಳಬಹುದು.

ಬಣ್ಣಗಳು ನಿಮ್ಮ ಮೈಮೇಲೆ ಬಿದ್ದಾಗ, ಚರ್ಮವು ಒಣಗುತ್ತದೆ. ಇದರಲ್ಲಿರುವ ರಾಸಾಯನಿಕಗಳು ನಿಮ್ಮ ಚರ್ಮಕ್ಕೆ ಹೋಗಬಹುದು. ಆದ್ದರಿಂದ ಇದನ್ನು ತಪ್ಪಿಸಲು, ಹೆಚ್ಚು ಹೆಚ್ಚು ನೀರು ಕುಡಿಯುವ ಮೂಲಕ ನೀವೇ ಹೈಡ್ರೀಕರಿಸಿ ಮತ್ತು ದ್ರವ ಪದಾರ್ಥಗಳನ್ನು ಸೇವಿಸಿ.ಚರ್ಮಕ್ಕೆ ಹಚ್ಚಲಾದ ಬಣ್ಣವನ್ನು ನಿವಾರಿಸಲು ಸೀಮೆಎಣ್ಣೆ, ಪೆಟ್ರೋಲ್,ಇತ್ಯಾದಿಗಳನ್ನು ಬಳಸಬೇಡಿ. ಸಮುದ್ರದ ಉಪ್ಪು, ಮತ್ತು ಗ್ಲಿಸರಿನ್ ಇತ್ಯಾದಿಗಳನ್ನು ಬಳಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ