ದಟ್ಟ ಕೂದಲಿಗೆ ಬೇಕು ದಾಸವಾಳದ ಎಣ್ಣೆ..!

  • by

ಸೊಂಪಾದ ಕೂದಲಿಗೆ ದಾಸವಾಳದ ಎಣ್ಣೆ
ಆಯುರ್ವೇದದಲ್ಲಿ ದಾಸವಾಳವು ಹೆಚ್ಚು ಜನಪ್ರಿಯ ಎಂದೆನಿಸುವ ಗಿಡವಾಗಿದ್ದು ಇದರ ಎಲೆಯಿಂದ
ಹೂಗಳವರೆಗೂ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಇದು ಕೂದಲಿನ ಬೆಳವಣಿಗೆಗೆ
ಸಹಕಾರಿಯಾಗಿದೆ ಮತ್ತು ಇದರ ಗಿಡಗಳು ನಿಮ್ಮ ಉದ್ಯಾನವನದ ಅಂದವನ್ನು ಹೆಚ್ಚಿಸುತ್ತದೆ ಕೂಡ.
ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ದಾಸವಾಳವು ಅದ್ಭುತವನ್ನೇ ನಿಮ್ಮ
ಕೂದಲಿಗೆ ಉಂಟುಮಾಡಲಿದೆ. ಇದೊಂದು ನೈಸರ್ಗಿಕ ಗಿಡಮೂಲಿಕೆ ಎಂದೇ ಹೆಸರುವಾಸಿಯಾಗಿದ್ದು ಹಿತ್ತಲ
ಮದ್ದು ಎಂಬ ಇನ್ನೊಂದು ಹೆಸರೂ ದಾಸವಾಳಕ್ಕಿದೆ. ದಾಸವಾಳ ಹೂವು ಮತ್ತು ಎಲೆ ಕೂದಲಿನ
ಸಮಸ್ಯೆಗಳಿಗೆ ರಾಮಬಾಣವಾಗಿದ್ದು ತಲೆಹೊಟ್ಟು, ನೆರೆತ, ಕೂದಲಿನ ಹೊಳಪು ಕಳೆದುಕೊಳ್ಳುವಿಕೆ,
ಕೂದಲಿನ ಬುಡದ ಸಾಮರ್ಥ್ಯಕ್ಕೆ ಹೀಗೆ ಇದರ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು.

ಕೂದಲಿನ ಬೆಳವಣಿಗೆಯನ್ನು ಇದು ಪರಿಣಾಮಕಾರಿಯಾಗಿ ಉತ್ತೇಜಿಸುತ್ತದೆ. ಇದರ ಹೂಗಳಲ್ಲಿರುವ
ಅಮಿನೊ ಆಸಿಡ್‌ಗಳು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಅಮಿನೊ ಆಸಿಡ್ ಒಂದು ರೀತಿಯ
ಪ್ರೊಟೀನ್ ಅನ್ನು ಉತ್ಪಾದಿಸುತ್ತದೆ ಇದನ್ನು ಕೆರಟಿನ್ ಎಂದು ಕರೆಯಲಾಗಿದೆ ಇದು ಕೂದಲಿನ
ಬ್ಲಾಕ್‌ಗಳನ್ನು ರಚಿಸುವಲ್ಲಿ ಸಹಕಾರಿಯಾಗಿದೆ. ಕೆರಟಿನ್ ಕೂದಲು ಮುರಿಯುವಿಕೆಯನ್ನು ತಡೆಯುತ್ತದೆ
ಮತ್ತು ಕೂದಲು ದಪ್ಪನಾಗಿ ಬೆಳೆಯಲು ಅನುಕೂಲಕಾರಿಯಾಗಿದೆ. ಕೆರಟಿನ್ ಚಿಕಿತ್ಸೆಯನ್ನು ನೀವು
ದಾಸವಾಳ ಹೂವನ್ನು ಬಳಸುವ ಮೂಲಕ ಆರಂಭಿಸಬಹುದು ಇದರಿಂದ ದುಬಾರಿ ವೆಚ್ಚವನ್ನು
ಭರಿಸಬಹುದು.

ಕೂದಲಿಗೆ ಉತ್ತಮ ಕಂಡೀಷನರ್
ಹೆಚ್ಚಿನ ರಾಸಾಯನಿಕ ಶ್ಯಾಂಪೂಗಳ ಬಳಕೆಯಿಂದ ಕೂದಲು ನಿಸ್ತೇಜವಾಗುತ್ತದೆ. ನೀವು ದಾಸವಾಳದ
ಎಲೆಗಳನ್ನು ಜಜ್ಜಿ ಇದರಿಂದ ಉತ್ಪಾದನೆಗೊಂಡ ಲೋಳೆಯನ್ನು ಕೂದಲಿಗೆ ಶ್ಯಾಂಪೂ ರೀತಿಯಲ್ಲಿ
ಬಳಸಬಹುದು. ಶ್ಯಾಂಪೂ ಮಾಡಿದ ಮೇಲೆ ಕಂಡೀಷನರ್‌ನಂತೆ ಈ ಲೋಳೆಯನ್ನು ಕೂದಲಿಗೆ
ಹಚ್ಚಬಹುದು. ದಾಸವಾಳದ ಎಲೆಯಲ್ಲಿ ನೈಸರ್ಗಿಕ ಕಂಡೀಷನಿಂಗ್ ಅಂಶಗಳಿದ್ದು ಇದು ನೈಸರ್ಗಿಕ
ಅಂಶಗಳನ್ನು ನಿಮ್ಮ ಕೂದಲಿಗೆ ತಲುಪುವಂತೆ ಮಾಡಿ ಕೂದಲನ್ನು ರೇಷಿಮೆಯಂತೆ ನಯಗೊಳಿಸುತ್ತದೆ.
ಬಕ್ಕತಲೆನಿವಾರಣೆ
ದಾಸವಾಳದ ಎಲೆಯ ಸಾರವನ್ನು ಬಕ್ಕತಲೆ ಸಮಸ್ಯೆಯನ್ನು ನಿವಾರಿಸುವಲ್ಲಿ ಬಳಸಲಾಗುತ್ತಿದೆ ಎಂಬುದು
ಇತ್ತೀಚಿನ ಅಧ್ಯಯನಗಳಿಂದ ತಿಳಿದು ಬಂದಿರುವ ಅಂಶವಾಗಿದೆ. ಇದು ಕೂದಲಿನ ಪಿಎಚ್ ಬ್ಯಾಲೆನ್ಸ್ ಅನ್ನು
ನಿರ್ವಹಿಸುತ್ತದೆ

ಡ್ಯಾಂಡ್ರಫ್ ಅನ್ನು ತೊಲಗಿಸಿ ಕೂದಲನ್ನು ಶುದ್ಧಗೊಳಿಸುವ ಶಕ್ತಿಯನ್ನು ದಾಸವಾಳ ಹೊಂದಿದೆ. ಎಲೆ
ಮತ್ತು ಹೂಗಳಲ್ಲಿರುವ ನೈಸರ್ಗಿಕ ಸಾರವು ಕೂದಲಿನ ಪೋಷಣೆಯನ್ನು ತುಂಬಾ ಅಚ್ಚುಕಟ್ಟಾಗಿ
ಮಾಡುತ್ತದೆ.

ಕೂದಲಿಗೆ ದಾಸವಾಳದ ಎಲೆಯ ಬಳಕೆ
ದಾಸವಾಳದ ಎಲೆ ಮತ್ತು ಹೂವು ಹಲವಾರು ವಿಧಾನದಲ್ಲಿ ಕೂದಲಿಗೆ ಸಂರಕ್ಷಣೆಯನ್ನು ಒದಗಿಸಿ
ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಇದರಿಂದ ತಯಾರಿಸಿದ ಎಣ್ಣೆಯು ಕೂದಲಿಗೆ ಉತ್ತಮ
ಆರೋಗ್ಯವನ್ನು ಕಾಂತಿಯನ್ನು ಹಾಗೂ ಪೋಷಣೆಯನ್ನು ನೀಡುತ್ತದೆ. ಮೊದಲಿಗೆ 8 ದಾಸವಾಳ ಎಲೆ
ಮತ್ತು 8 ದಾಸವಾಳ ಹೂವುಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಒಂದು
ಕಪ್‌ನಷ್ಟು ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಈ ಮಿಶ್ರಣವನ್ನು ಹಾಕಿ ಇವುಗಳು ಚೆನ್ನಾಗಿ
ಮಿಶ್ರವಾಗಲಿ ಎಣ್ಣೆ ತಣ್ಣಗಾಗಲು ಬಿಡಿ.

ದಾಸವಾಳದ ಎಣ್ಣೆ ಸಿದ್ಧವಾಗಿದೆ. ನಿಮ್ಮ ತಲೆಬುಡಕ್ಕೆ ಇದನ್ನು ಹಚ್ಚಿ 30 ನಿಮಿಷ ಹಾಗೆಯೇ ಬಿಡಿ.
ನಂತರ ನಿಮ್ಮ ಕೂದಲನ್ನು ಮೃದುವಾದ ಶ್ಯಾಂಪೂವಿನಿಂದ ತೊಳೆದುಕೊಳ್ಳಿ.

20 ಒಣಗಿಸಿದ ದಾಸವಾಳದ ಹೂಗಳು, ½ ಕಪ್ ಅಥವಾ 500 ಮಿ.ಲೀ. ತೆಂಗಿನೆಣ್ಣೆ *1 ಚಮಚ
ಮೆಂತೆಕಾಳು 2 ಚಮಚ ಹರಳೆಣ್ಣೆ 1 ತವಾ

1.ಕಡಿಮೆ ಬೆಂಕಿಯ ಉರಿಯಲ್ಲಿ ಒಂದು ತವಾವನ್ನಿಡಿ. 2. ತೆಂಗಿನೆಣ್ಣೆ ತವಾಗೆ ಹಾಕಿ ಮತ್ತು ಐದು ನಿಮಿಷ
ಇದನ್ನು ಬಿಸಿ ಮಾಡಿ. 3. ಒಣಗಿಸಿದ ದಾಸವಾಳದ ಹೂಗಳನ್ನು ಇದಕ್ಕೆ ಸೇರಿಸಿಕೊಳ್ಳಿ. ದಾಸವಾಳದ
ಹೂಗಳನ್ನು ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಹೂವಿನಲ್ಲಿ ನೀರಿನಾಂಶವಿರಲ್ಲ. 4. ತವಾದಲ್ಲಿರುವ
ಎಣ್ಣೆಯು ಬಣ್ಣ ಬದಲಾಯಿಸಿದಾಗ ಅದಕ್ಕೆ ಒಂದು ಚಮಚ ಮೆಂತೆ ಕಾಳು ಹಾಕಿಕೊಳ್ಳಿ. 5. ಮೆಂತೆ
ಕಾಳುಗಳನ್ನು ಹಾಕಿದ ಬಳಿಕ ಐದು ನಿಮಿಷ ಕಾಲ ಎಣ್ಣೆ ಬಿಸಿಯಾಗಲಿ, ಕಾಳುಗಳು ಕರಗಿ ಹೋಗಲಿ. 6.
ಗ್ಯಾಸ್ ಆಫ್ ಮಾಡಿ ಸಂಪೂರ್ಣ ರಾತ್ರಿ ಎಣ್ಣೆ ಹಾಗೆ ಇರಲಿ. 7. ಮರುದಿನ ಬೆಳಿಗ್ಗೆ ಎಣ್ಣೆ ಸೋಸಿಕೊಂಡು
ಒಂದು ಗಾಜಿನ ಪಾತ್ರೆಗೆ ಹಾಕಿ. 8. ಈ ಎಣ್ಣೆಗೆ ಎರಡು ಚಮಚ ಹರಳೆಣ್ಣೆ ಸೇರಿಸಿಕೊಂಡು ಮತ್ತೆ ಈ
ಎಣ್ಣೆಯನ್ನು ಸೋಸಿಕೊಳ್ಳಿ. 9. ದಾಸವಾಳ-ತೆಂಗಿನೆಣ್ಣೆ-ಹರಳೆಣ್ಣೆಯ ಮಿಶ್ರಣದ ಎಣ್ಣೆಯು
ಉಪಯೋಗಿಸಲು ಸಿದ್ಧವಾಗಿದೆ.

ಕೆಲವು ತಾಜಾ ದಾಸವಾಳದ ಹೂವುಗಳನ್ನು ಸಂಗ್ರಹಿಸಿ. ಇನ್ನೂ ಬಿರಿಯದಿರುವ ಮೊಗ್ಗುಗಳು ಇನ್ನೂ
ಉತ್ತಮ. ಈ ಹೂವುಗಳನ್ನು ನೈಸರ್ಗಿಕ ಕೊಬ್ಬರಿ ಎಣ್ಣೆಯಲ್ಲಿ ಸುಮಾರು ನಾಲ್ಕೈದು ನಿಮಿಷ ಕುದಿಸಿ.
ಉರಿ ಚಿಕ್ಕದಾಗಿಸಿ. ಯಾವುದೇ ಕಾರಣಕ್ಕೂ ಈ ಹೂವುಗಳು ಸುಡಬಾರದು. ಒಂದು ವೇಳೆ ದಾಸವಾಳದ ಗಿಡ
ನಿಮ್ಮ ಮನೆಯಲ್ಲಿಯೇ ಇದ್ದರೆ ಕೆಲವು ಎಲೆಗಳನ್ನೂ ಈ ಎಣ್ಣೆಯಲ್ಲಿ ಬೆರೆಸಿ. ಈ ಎಲೆಗಳಲ್ಲಿಯೂ
ಕೂದಲ ಪೋಷಣೆಗೆ ಪೂರಕವಾದ ಗುಣಗಳಿವೆ.
ದಾಸವಾಳದ ಎಣ್ಣೆಯನ್ನು ಸಂಗ್ರಹಿಸುವ ಇನ್ನೊಂದು ವಿಧಾನವೆಂದರೆ ಈಗಾಗಲೇ ಬಿಸಿಯಾಗಿರುವ
ಕೊಬ್ಬರಿ ಎಣ್ಣೆಯಲ್ಲಿ ಈ ಹೂವುಗಳನ್ನು ಹತ್ತು ನಿಮಿಷ ಇರಿಸಿ. ಇದರಿಂದ ಹೂವಿನಲ್ಲಿರುವ
ಎಣ್ಣೆಯಂಶ ಕೊಬ್ಬರಿ ಎಣ್ಣೆಯಲ್ಲಿ ಬೆರೆಯುತ್ತದೆ. ಇನ್ನೊಂದು ವಿಧಾನದಲ್ಲಿ ಹೂವುಗಳನ್ನು ಬೆರೆಸಿದ
ಎಣ್ಣೆಯನ್ನು ಮೈಕ್ರೋವೇವ್ ನಲ್ಲಿ ಐದು ನಿಮಿಷ ಇರಿಸಿ ಕನಿಷ್ಟ ಶಕ್ತಿಯಲ್ಲಿ ಬಿಸಿಮಾಡಿ. ಒಳಗಿಟ್ಟ
ಗಾಜಿನ ಬೋಗುಣಿಯನ್ನು ಇನ್ನೊಂದು ಗಾಜಿನ ತಟ್ಟೆಯಿಂದ ಮುಚ್ಚುವುದನ್ನು ಮಾತ್ರ ಮರೆಯಬಾರದು.
ಇಲ್ಲದಿದ್ದರೆ ಪ್ರಖರ ಕಿರಗಣಗಳು ಎಣ್ಣೆಯ ಶಕ್ತಿಗುಂದಿಸಬಹುದು.
ಈ ಎಣ್ಣೆಯನ್ನು ತಣಿಸಿದ ಬಳಿಕ ಕನಿಷ್ಟ ವಾರಕ್ಕೊಮ್ಮೆ ತಲೆಗೆ ಹಚ್ಚಿಕೊಂಡು ಕೂದಲ ಬುಡಕ್ಕೆ
ನಯವಾಗಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ಕೂದಲು ಕಪ್ಪಗಾಗುವುದನ್ನು ಗಮನಿಸಬಹುದು. ಈ
ಎಣ್ಣೆಯ ಹೇರ್ ಪ್ಯಾಕ್ ಸಹಾ ಉತ್ತಮ ಪರಿಣಾಮ ಒದಗಿಸುತ್ತದೆ ಹಾಗೂ ಕೂದಲು ಹೆಚ್ಚು ಘನ, ಗಾಢ
ಹಾಗೂ ಶಕ್ತಿಯುತವಾಗುತ್ತದೆ.
ಹೀಗೆ ದಾಸವಾಳದ ಹೂವು ಮತ್ತು ಎಲೆ ಕೂದಲಿಗೆ ಪ್ರಯೋಜನಕಾರಿ ಎಂದೆನಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ