ಕೊರೊನಾ ಭೀತಿ.. ಜನರಲ್ಲಿರುವ ತಪ್ಪು ಮಾಹಿತಿಗಳು, ಮತ್ತು ವಾಸ್ತವಿಕತೆ..!

  • by

ಕರೊನಾ ವೈರಸ್ ಬಗ್ಗೆ ಭೀತಿ ಪ್ರಪಂಚದಾದ್ಯಂತ ಹರಡುತ್ತಲೇ ಇದೆ. ಹಾಗೆಯೇ ನಕಲಿ ತಪ್ಪು ಮಾಹಿತಿ ಗಳು , ಫೇಕ್ ಸುದ್ದಿಗಳು ಜನರನ್ನು ಮತ್ತಷ್ಟು ತಲ್ಲಣ ಗೊಳಿಸಿವೆ. ರೋಗದ ಬಗ್ಗೆ ತಪ್ಪು ಮಾಹಿತಿ ಎಲ್ಲೆಡೆ ಹರಡುತ್ತಿದೆ. ಹಾಗಾದ್ರೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಯಾವುತು ಸತ್ಯ , ಯಾವುದು ನಿಜವಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ.

ವಾಸ್ತವಿಕತೆ : ಅಂತರ್ಜಾಲದಲದಲ್ಲಿ ಓದಿದ ಎಲ್ಲವನ್ನು ನಂಬಬೇಡಿ.

ಕರೊನೊ ವೈರಸ್ , ಏಕಾಏಕಿ ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟಾಗಿ ಬದಲಾಗಿದೆ. ವೈರಸ್ ನ ಉಗಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡ ವದಂತಿಗಳು, ಯಾವುದೇ ವಿಶ್ವಾಸಾರ್ಹತೆ ಪಡೆದುಕೊಂಡಿಲ್ಲ.

ಕಲ್ಪನೆ : ಮನೆ ಮದ್ದುಗಳು ವೈರಸ್ ಗುಣಪಡಿಸಬಹುದೇ..?

ವಾಸ್ತವಿಕತೆ

ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. ಇದರ ನೀರು ಕುೂಡಾ ಉತ್ತಮವಾದದ್ದು, ವಿಟಮಿನ್ ಸಿ ಇದರಲ್ಲಿ ಹೇರಳವಾಗಿದೆ. ಆದ್ರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆ ನಡೆಯುತ್ತಿದೆ. ಬೆಳ್ಳುಳ್ಳಿ ತಿಂದ್ರೆ ಕೊರೊನಾ ವೈರಸ್ ತಡೆಗಟ್ಟಬಹುದು. 15 ನಿಮಿಷಕ್ಕೊಮ್ಮೆ ನೀರು ಕುಡಿಯುವುದು, ಅಥವಾ ವಿಟಮಿನ್ ಸಿ ಆಹಾರವನ್ನು ತೆಗೆದುಕೊಳ್ಳುವುದರಿಂದ ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇನ್ನು ದೇಹದ ಮೇಲೆ ಎಳ್ಳಿನ ಎಣ್ಣೆ ಹಾಕುವುದು, ಅಥವಾ ಅಲ್ಕೋಹಾಲ್ ಅಥವಾ ಕ್ಲೋರಿನ್ ನೊಂದಿಗೆ ಸಿಂಪಡಿಸುವುದರಿಂದ ಕೊರೊನಾ ವೈರಸ್ ನಾಶವಾಗುತ್ತದೆ ಎಂದು ಕೆಲ ಪೋಸ್ಟ್ ಗಳಲ್ಲಿ ಕಾಣಬಹುದು. ಆದ್ರೆ ಇದು ಸುಳ್ಳು.

ಬ್ಲೀಚ್, ಎಥೆನಾಲ್ , ಪೆರಾಸೆಟಿಕ್ ಆ್ಯಸಿಡ್ ಮತ್ತು ಕ್ಲೋರೊಫಾರ್ಮ್ ಸೇರಿದಂತೆ ರಾಸಾಯನಿಕ ಸೋಂಕು ನಿವಾರಕಗಳಿವೆ. ಅವು ಮೇಲ್ಮೆಯಲ್ಲಿ ವೈರಸ್ ಅನ್ನು ಕೊಲ್ಲಬಹುದು. ಆದ್ರ ವೈರಸ್ ಈಗಾಗ್ಲೇ ನಿಮ್ಮ ದೇಹದಲ್ಲಿದ್ದರೆ, ಆ ಪದಾರ್ಥಗಳನ್ನು ನಿಮ್ಮ ಚರ್ಮದ ಮೇಲೆ ಉಪಯೋಗಿಸುವುದರಿಂದ ವೈರಸ್ ಕೊಲ್ಲುವುದಿಲ್ಲ. ಇದು ನಿಜಕ್ಕೂ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಕೊರೊನಾ ವೈರಸ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ..?

ಪ್ರತಿ ಶೀತ, ಹಾಗೂ ಜ್ವರ ಸಂದರ್ಭದಲ್ಲಿ ಏನು ಮಾಡಬೇಕೆಂಬುದನ್ನು ಉತ್ತಮ ಮಾರ್ಗವೆಂದರೆ, ಸೋಂಕಿಗೆ ಒಳಗಾಗಿರುವ ವ್ಯಕ್ತಿಯಿಂದ ಕನಿಷ್ಠ ಮೂರು ಅಡಿ ದೂರವಿರಿ. ಕನಿಷ್ಠ 20 ಸೆಕೆಂಡ್ ಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ನಿಮ್ಮ ಮೊಣಕೈ ಸಹಾಯದಿಂದ ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿ. ಮತ್ತು ನೀವು ಸ್ಪರ್ಶಿಸುವ ವಸ್ತುಗಳು ಮತ್ತು ಮೇಲ್ಮೆಗಳನ್ನು ಸೋಂಕು ರಹಿತಗೊಳಿಸಿ.
ನೆಗಡಿಯಂತಹ ರೋಗಲಕ್ಷಣಗಳನ್ನು ನೀವು ಹೊಂದಿದ್ದರೆ, ಆರಂಭಿಕ ಚಿಕಿತ್ಸೆ ಪಡೆಯಿರಿ.

ತಪ್ಪು ಮಾಹಿತಿ ಕಪ್ಪು ಬಣ್ಣದ ಜನರಿಗೆ ಕೊರೊನಾ ವೈರಸ್ ಬರುವುದಿಲ್ಲ.
ರಿಯಾಲಿಟಿ… ಯಾರಿಗಾದರೂ ಕೊರೊನಾ ವೈರಸ್ ಬರಬಹುದು. ಸೋಂಕಿಗೆ ಒಳಗಾದ ಯಾರೊಂದಿಗಾದರೂ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿ ವೈರಸ್ ತುತ್ತಾಗುವ ಅಪಾಯವಿದೆ ಎಂದು ಸಿಡಿಸಿ ತಿಳಿಸಿದೆ.

ಕಲ್ಪನೆ: ಎಲ್ಲರೂ ಮಾಸ್ಕ್ ಧರಿಸಬೇಕು..!

ಇದು ಸ್ವಲ್ಪ ರಕ್ಷಣೆಯ ತಂತ್ರವಾಗಿದೆ. ಚೆನ್ನಾಗಿರುವ ವ್ಯಕ್ತಿಗಳು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಸಿಡಿಸಿ ಹೇಳಿದೆ. ಆದರೆ ಅಮೇರಿಕಾದ ಸರ್ಜನ್ ಜನರಲ್ ಜೆರೋಮ್ ಆಡಮ್ಸ್ ಪ್ರಕಾರ, ಮಾಸ್ಕ್ ಗಳನ್ನು ಧರಿಸಿದರೆ ಅಪಾಯವನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ. ಮಾಸ್ಕ್ ಗಳ ಬೇಡಿಕೆ ಹಾಗೂ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಯುಎಸ್ ಅಧಿಕಾರಿಗಳು ವಿಶೇಷವಾಗಿ ಎನ್ 95 ಮಾಸ್ಕ್ ಗಳನ್ನು ಸಂಗ್ರಹಿಸಿದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ವೈದ್ಯರು, ಆರೋಗ್ಯ ಕಾರ್ಯಕರ್ತರು, ಸೋಂಕಿತ ವ್ಯಕ್ತಿಯ ಜತೆ ನಿಕಟ ಸಂಪರ್ಕ ಹೊಂದಿರುವ ಜನರು, ಸೋಂಕು ತಗುಲಿರುವವರು, ಇವೆರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.

ಇನ್ನು ವೈರಸ್ ಹರಡುವುದನ್ನು ತಡೆಗಟ್ಟಲು ಜನರು ವಿಶೇಷವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಅಥವಾ ಜನದಟ್ಟಣೆಯ ಸ್ಥಳಗಳಲ್ಲಿ ಸರ್ಜಿಕಲ್ ಫೇಸ್ ಮಾಸ್ಕ್ ಗಳನ್ನು ಧರಿಸಬೇಕು ಎಂದು ಏಷ್ಯಾದಾದ್ಯಂತ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಕಲ್ಪನೆ : ಬಿಸಿಲು ವೈರಸ್ ನ್ನು ಕೊಲ್ಲುತ್ತದೆಯೇ..?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಹ್ಯಾಂಡ್ ಡ್ರೈಯರ್ ಗಳು ವೈರಸ್ ಗಳನ್ನು ಕೊಲ್ಲಲು ಸಾಧ್ಯವಿಲ್ಲ. ಕೈಗಳನ್ನು ಹಾಗೂ ದೇಹದ ಇತರ ಭಾಗಗಳನ್ನು ಯುವಿ ದೀಪಗಳನ್ನು ಬಳಸಬಾರದು ಎಂದು ಆರೋಗ್ಯ ಸಂಸ್ಥೆ ಹೇಳಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ , ಬಿಸಿಲು ವೈರಸ್ ನ್ನು ಕೊಲ್ಲುತ್ತದೆ ಎಂದು ಹೇಳಿದ್ದರು. ಆದ್ರೆ ಇದರ ಬಗ್ಗೆ ಯಾವುದೇ ಖಚಿತತೆ ಇಲ್ಲ..

WHO ಪ್ರಕಾರ, ಚೀನಾದ ಪ್ಯಾಕೇಡ್, ಪ್ರೊಡೆಕ್ಟ್ ಗಳನ್ನು ಪಡೆಯುವುದರಿಂದ ವೈರಸ್ ಹರಡುವ ಅಪಾಯವಿಲ್ಲ ಎಂದು ತಿಳಿಸಿದೆ.
ಹೊಸ ಕೊರೊನಾ ವೈರಸ್ ಹೇಗೆ ಸೋಂಕು ತಗುಲುತ್ತದೆ ಎಂದು ಸಂಶೋಧಕರು ಪತ್ತೆ ಹಚ್ಚುತ್ತಿದ್ದಾರೆ.

ಕಲ್ಪನೆ: ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ತಗುಲುವುದಿಲ್ಲ..!?

ವಾಸ್ತವಿಕತೆ

ಯಾವುದೇ ವಯಸ್ಸಿನ, ಯಾರಿಗಾದರೂ ಕೊರೊನಾ ವೈರಸ್ ಸೋಂಕು ಬರಬಹುದು.

ಕಲ್ಪನೆ : ಕೊರೊನಾ ವೈರಸ್ ಪಡೆದ ಜನರು ಸಾಯುತ್ತಾರೆ..!

ವಾಸ್ತವಿಕತೆ

ಅಧಿಕಾರಿಗಳು ಈ ವೈರಸ್ ನ ಸಾವಿನ ಪ್ರಕರಣಗಳನ್ನು ಜಾಗತಿಕ ಮಟ್ಟದಲ್ಲಿ ಸುಮಾರು ಶೇ 3 ರಿಂದ ಶೇ 4 ರಷ್ಟು ಅಂದಾಜಿಸಿದ್ದಾರೆ. ಮಾಹಿತಿ ಪ್ರಕಾರ, ಮಾಹಿತಿ ಆಧಾರದ ಮೇಲೆ ಈ ಸಂಖ್ಯೆ ಕುಸಿಯುತ್ತಿದೆ ಎಂದು ನಿರೀಕ್ಷಿಸಲಾಗಿದೆ. ಕೊರೊನಾ ವೈರಸ್ ಸೋಂಕು ಹೊಂದಿರುವ ಜನರು ನೆಗಡಿಯಂತಹ ಮಧ್ಯಮ ಶ್ವಾಸೇಂದ್ರಿಯ ಕಾಯಿಲೆ ಪಡೆದು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮೂಗು ಸೋರುವುದು, ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲು, ತಲೆನೋವು ಮತ್ತು ಜ್ವರ ಒಂದೆರೆಡು ದಿನಗಳವರೆಗೆ ಇರುತ್ತದೆ. ಹೆಚ್ಚಿನ ಸಮಯ, ರೋಗ ಲಕ್ಷಣಗಳು ಇದರ ಮೇಲೆ ಅವಲಂಬಿಸಿದೆ. ರೋಗವು ಮಾರಕವಾಗಬಹುದು. ಆದ್ರೆ ಪ್ರಕರಣಗಳು ವಿರಳ ಎಂದು ಹೇಳಲಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಇರುವವರು, ವೃದ್ಧರು, ಮತ್ತು ಚಿಕ್ಕವರು, ನ್ಯುಮೋನಿಯಾ ಹೆಚ್ಚು ಅಪಾಯವಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ