ಹೆಲ್ತಿ ಜೀವನಶೈಲಿ ಇವುಗಳನ್ನು ಫಾಲೋ ಮಾಡಿ – (Follow Five Practice for a Healthy Lifestyle)

  • by

ಜೀವನದಲ್ಲಿ ಅತ್ಯಂತ ಕಷ್ಟಕರವಾದ ವಿಷಯವೆಂದರೆ ಸರಳ, ಹಾಗೂ ಸಮತೋಲಿತ ಜೀವನಶೈಲಿ ಅಳವಡಿಸಿಕೊಳ್ಳುವುದು. ಆದರೆ ಇದು ಅಸಾಧ್ಯವಾದುದಲ್ಲ. ನೀವು ಚಿಕ್ಕ ಚಿಕ್ಕ ವಿಷಯಗಳನ್ನು ದಿನಚರಿಯ ಭಾಗವಾಗಿಸಿದರೆ, ಇದು ನಿಮಗೆ ಅಭ್ಯಾಸವಾಗಬಹುದು. ಆರೋಗ್ಯಕರ ಜೀವನಶೈಲಿಗೆ ಸಹಾಯಕಾರಿಯಾಗಬಲ್ಲದ್ದು. ನಿಮ್ಮ ಜೀವನಶೈಲಿಯನ್ನು ಮತ್ತಷ್ಟು ಉತ್ತಮಗೊಳಿಸಲು ಸಲಹೆಗಳು ಇಲ್ಲಿವೆ.

 Healthy Lifestyle, kannada tips.,ಹೆಲ್ತಿ , ಜೀವನಶೈಲಿ

ಬಟ್ಟೆ ಸ್ವಚ್ಛವಾಗಿಟ್ಟುಕೊಳ್ಳುವುದು

ತುಂಬಾ ಜನರು ಪದೇ ಪದೇ ಧರಿಸಿರುವ ಬಟ್ಟೆಗಳನ್ನೇ ಧರಿಸುತ್ತಾರೆ. ಕೆಟ್ಟ ವಾಸನೆ ಬಂದಾಗ ಮಾತ್ರ ಬಟ್ಟೆಗಳನ್ನು ತೊಳೆಯುತ್ತಾರೆ. ಈ ಸಮಯದಲ್ಲಿ ನೀವು ಜನದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರೆ, ಆ ಬಟ್ಟೆಯನ್ನು ಬಿಸಿಲಿನಲ್ಲಿ ಇಟ್ಟು ತೊಳೆಯಿರಿ. ಈ ಅಭ್ಯಾಸವನ್ನು ಶಾಶ್ವತವಾಗಿ ಅಳವಡಿಸಿಕೊಂಡರೆ, 2 ಬಾರಿ ಅದಕ್ಕಿಂತ ಹೆಚ್ಚು ಬಟ್ಟೆಗಳನ್ನು ಧರಿಸಬೇಡಿ. ಅದು ನಿಮ್ಮ ಜೀನ್ಸ್ ಆಗಿರಲಿ ಅಥವಾ ಶರ್ಟ್ ಆಗಿರಲಿ, ಏಕೆಂದರೆ ಪ್ರತಿ ಬಾರಿಯೂ ಬಟ್ಟೆಯ ಸ್ವಚ್ಛವಾಗಿಟ್ಟುವ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇದಲ್ಲದೇ, ನಿಮ್ಮ ಕೋಣೆಯ ಸ್ವಚ್ಛತೆ ಕಾಪಾಡಿ, ಬಟ್ಟೆ ಇಡುವ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.ಇದಲ್ಲದೇ, ತಲೆ ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಡೆ ಗಮನ ಹರಿಸಬೇಕಾಗುತ್ತದೆ. ಆರೋಗ್ಯಕರ ಕೂದಲಿಗೆ ಅಗತ್ಯವಿರುವಂತೆ ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳನ್ನು ಸೇವಿಸಿ. ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

ಸಲೂನ್ , ಪಾರ್ಲರ್ ಹೊರೆತುಪಡಿಸಿ ಮನೆಯಲ್ಲೇ ಮಾಡಿ

ಕೈ ಹಾಗೂ ಕಾಲುಗಳ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕಾಗುತ್ತದೆ. ತುಂಬಾ ಜನರು ಕೈಗಳಲ್ಲಿನ ಉಗುರುಗಳನ್ನು ತೆಗೆದಿರುವುದಿಲ್ಲ. ಉಗುರುಗಳಲ್ಲಿ ಬ್ಯಾಕ್ಟೇರಿಯಾ ಸೋರಿಕೊಂಡು ಅನಾರೋಗ್ಯ ಉಂಟು ಮಾಡಬಹುದು. ಹಾಗಾಗಿ ಉಗುರು ಬೆಳೆದಿದ್ದರೆ ಕತ್ತರಿಸುವುದು ಸೂಕ್ತ.
ಸಲೂನ್ ಅಥವಾ ಪಾರ್ಲರ್ ಹೊರತುಪಡಿಸಿ ಮನೆಯಲ್ಲಿ ಈ ಕೆಲಸಗಳನ್ನು ಮಾಡಬಹುದು. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಪಾದಗಳ ದುರ್ವಾಸನೆಯಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಆದ್ದರಿಂದ ನಿಮ್ಮ ಪಾದಗಳು ಸ್ವಚ್ಛವಾಗಿದೆಯೇ ಎಂಬುದರ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಬೂಟ್, ಚಪ್ಪಲಿ ಹಾಗೂ ಸಾಕ್ಸ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನೀವು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ, ಅನಾರೋಗ್ಯ ಸಮಸ್ಯೆ ಎದುರಿಸುವ ಪರಿಸ್ಥಿತಿ ಬರಬಹುದು. ಆದ್ದರಿಂದ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.


 Healthy Lifestyle, kannada tips.,ಹೆಲ್ತಿ , ಜೀವನಶೈಲಿ

ಆರೋಗ್ಯಕರ ಆಹಾರ ಮುಖ್ಯ

ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಆಹಾರಗಳನ್ನು ಸೇವಿಸುವುದನ್ನು ಅವೈಡ್ ಮಾಡಿ. ಅನೇಕ ಬಾರಿ ಕೈಗಳನ್ನು ಸ್ವಚ್ಛಗೊಳಿಸದೇ ಆಹಾರ ಸೇವಿಸುವವರು ಇದ್ದಾರೆ. ಈ ಅಭ್ಯಾಸ ಬಿಡಬೇಕು. ಆರೋಗ್ಯಕರ ಜೀವನಶೈಲಿಗಾಗಿ ಸಮತೋಲಿತ ಆಹಾರವನ್ನು ಸೇವಿಸಿ,
ಇಂಥ ಚಿಕ್ಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಈ ವಿಷಯಗಳನ್ನು ಫಾಲೋ ಮಾಡದಿದ್ದರೆ ಎಷ್ಟೇ ಟ್ರೆಂಡಿ, ಸ್ಟೈಲಿಶ್ ಬಟ್ಟೆ ಧರಿಸಿದರೂ ಪ್ರಯೋಜನವಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ