ಚರ್ಮಕ್ಕೆ ಹಾಗೂ ಆರೋಗ್ಯಕ್ಕೆ ಆಲುಗಡ್ಡೆಯ ಪ್ರಯೋಜನಗಳು (health and skin benefits of potatoes )

  • by

ಸಾಮಾನ್ಯವಾಗಿ ಆಲುಗಡ್ಡೆಯನ್ನು ತಿಂಡಿ ಅಥವಾ ಆಹಾರವಾಗಿ ಬಳಸಲಾಗುತ್ತದೆ. ಆಲುಗಡ್ಡೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಲುಗಡ್ಡೆಯಲ್ಲಿ ಸಾಕಷ್ಟು ಜೀವಸತ್ವಗಳು , ಪಿಷ್ಠ, ಕ್ಯಾಲ್ಸಿಯಂ ಹಾಗೂ ಪೊಟ್ಯಾಶಿಯಂ ಮತ್ತು ರಂಜಕವಿದೆ. ಕರುಳಿಗೆ ಸಂಬಂಧಿಸಿದ ಕಾಯಿಲೆ, ಮಲಬದ್ಧತೆ, ಯೂರಿಕ್ ಆಸಿಡ್ ಕಾಯಿಲೆಗಳಿಗೆ ಆಲುಗಡ್ಡೆ ಪ್ರಯೋಜನಕಾರಿ ಎಂದು ಹೇಳಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಹಾಗೂ ವಿಟಮಿನ್ ಬಿ 3 ಇರುವುದರಿಂದ ಆಲುಗಡ್ಡೆಯನ್ನು ಸಿಪ್ಪೆಯ ಜತೆಗೆ ಬೇಯಿಸಬೇಕು. ಏಕೆಂದರೆ ಸಿಪ್ಪೆಯಲ್ಲಿ ಹೇರಳವಾಗಿ ಪ್ರೋಟೀನ್ ಹಾಗೂ ಖನಿಜಗಳಿವೆ.

health,skin benefits , potatoes , ಆರೋಗ್ಯ ಪ್ರಯೋಜನಗಳು. ಆಲುಗಡ್ಡೆ

ಆಲುಗಡ್ಡೆಯ ಬೆನಿಫಿಟ್ಸ್

ಸಸ್ಯಹಾರ ಹಾಗೂ ಮಾಂಸಹಾರ ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಬಳಸಬಹುದಾದ ಏಕೈಕ ಆಹಾರ ವೆಂದರೆ ಅದು ಆಲುಗಡ್ಡೆ. ವಿಶೇಷವಾಗಿ ಆಲುಗಡ್ಡೆಯನ್ನು ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಸಾಮಾನ್ಯವಾಗಿ ಎಲ್ಲಾ ರತಕಾರಿಗಳಲ್ಲೂ ಬಳಸಲಾಗುತ್ತದೆ. ನಿಮ್ಮನ್ನು ಆರೋಗ್ಯಕರವಾಗಿಡಲು ಆಲುಗಡ್ಡೆ ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯೋಣ

ಆಲುಗಡ್ಡೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಬಹುದು. ಇದು ಕೊಲೆಸ್ಟ್ರಾಲ್ ನಿಂದ ಮುಕ್ತವಾಗಿದ್ದು, ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜತೆಯಲ್ಲಿ ಆಲುಗಡ್ಡೆ ಫೈಬರ್ ನಿಂದ ಸಮೃದ್ದಾಗಿದ್ದು, ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಲುಗಡ್ಡೆಯಲ್ಲಿ ಪೊಟ್ಯಾಶಿಯಂ ಹಾಗೂ ಹೃದಯದ ಆರೋಗ್ಯ ಕಾಪಾಡಲು ಹಲವು ಅಂಶಗಳು ನೆರವಾಗುತ್ತವೆ. ವರದಿ ಪ್ರಕಾರ, ಪೊಟ್ಯಾಶಿಯಂ ಭರಿತ ಆಹಾರವನ್ನು ಸೇವಿಸುವುದರಿಂದ ರಕ್ತದೋತ್ತಡವನ್ನು ನಿಯಂತ್ರಿಸಬಹುದಾಗಿದೆ. ರಕ್ತದೋತ್ತಡ ನಿಯಂತ್ರಿಸುವಲ್ಲಿ ಆಲುಗಡ್ಡೆ ಪ್ರಮುಖ ಪಾತ್ರ ವಹಿಸುತ್ತದೆ.
ಕೊಲೆಸ್ಟ್ರಾಲ್ ರಕ್ತದೋತ್ತಡಕ್ಕೆ ಕಾರಣ ಎನ್ನಬಹುದು. ಹಾಗಾಗಿ ಆಲುಗಡ್ಡೆ ಕೊಲೆಸ್ಟ್ರಾಲ್ ಮುಕ್ತವಾಗಿದೆ. ರಕ್ತದೋತ್ತಡವನ್ನು ನಿಯಂತ್ರಿಸುವಲ್ಲಿ ಆಲುಗಡ್ಡೆ ಮಹತ್ವದ ಪಾತ್ರ ವಹಿಸುತ್ತದೆ.

ಮೂಳೆಗಳ ಆರೋಗ್ಯವಾಗಿಡಲು ಆಲುಗಡ್ಡೆ ಪ್ರಯೋಜನಕಾರಿ ಎಂದು ಹೇಳಬಹುದು. ಮೂಳೆಗಳಿಗೆ ಅಗತ್ಯವಾದ ಪೋಷಕಾಂಶಗಳು ಇದರಲ್ಲಿ ಇರುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯು ಆಸ್ಟಿಯೊಪೊರೋಸಿಸ್ ಗೆ ಕಾರಣವಾಗಬಹುದು.

ಜೀರ್ಣಕಾರಿ ಸಮಸ್ಯೆಗಳಿದ್ದರೆ, ಒಂದು ಚಮಚ ಆಲುಗಡ್ಡೆ ರಸವನ್ನು ಊಚಕ್ಕೂ ಮುನ್ನ 2 ಅಥವಾ 3 ಮೂರು ಬಾರಿ ಅರ್ಧ ಗಂಟೆಯ ಮೊದಲು ಸೇವಿಸಬಹುದು. ಅಲ್ಲದೇ, ಬಾಯಿಯಲ್ಲಿ ಗುಳ್ಳೆಗಳು ಇದ್ದರೆ, ಬೇಯಿಸಿದ ಆಲುಗಡ್ಡೆಯನ್ನು ಸೇವಿಸಿ. ಗುಳ್ಳೆಗಳು ಗುಣವಾಗುತ್ತವೆ.

ಸಂಧಿವಾತ ಇದ್ದರೆ ನಾಲ್ಕು ಆಲುಗಡ್ಡೆಯನ್ನು ಪ್ರೈ ಮಾಡಿ, ಸಿಪ್ಪೆ ತೆಗೆಯಿರಿ. ಅದರ ಮೇಲೆ ಉಪ್ಪು ಮತ್ತು ಕೆಂಪುಮೆಣಸಿ ಪುಡಿಯನ್ನು ಸಿಂಪಡಿಸಿ, ನಂತರ ಪ್ರತಿದಿನ ಸೇವಿಸಿ. ಹೀಗೆ ಮಾಡುವುದರಿಂದ ಸಂಧಿವಾತವನ್ನು ಗುಣಪಡಿಸಬಹುದಾಗಿದೆ. ಇದಲ್ಲದೇ ಊಟಕ್ಕೂ ಮೊದಲು 1 ಚಮಚ ಆಲುಗಡ್ಡೆ ರಸವನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನ ಕಾಣಬಹುದು

health,skin benefits , potatoes , ಆರೋಗ್ಯ ಪ್ರಯೋಜನಗಳು. ಆಲುಗಡ್ಡೆ

ಮೂತ್ರ ಪಿಂಡಡ ಕಲ್ಲುಗಳಿಗೆ ಆಲುಗಡ್ಡೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗಲಿದೆ.
ತಲೆನೋವಿನ ಸಂದರ್ಭದಲ್ಲಿ ಆಲುಗಡ್ಡೆಯನ್ನು ಮೂರು ರೀತಿಯಲ್ಲಿ ಬಳಸಬಹುದಾಗಿದೆ. ಆಲುಗಡ್ಡೆಯ ಸಿಪ್ಪೆ ತೆಳುವಾಗಿ ಕತ್ತರಿಸಿ, ತಲೆಯ ಮೇಲೆ ಇರಿಸಿ ಬಟ್ಟೆಯಿಂದ ಕಟ್ಟಿ ತಂಪಾದ ಸ್ಥಳದಲ್ಲಿ ಮಲಗಿಕೊಳ್ಳಿ. ಸ್ವಲ್ಪ ಸಮಯದಲ್ಲೇ ತಲೆ ನೋವು ಸಡಿಲಗೊಳ್ಳುತ್ತದೆ.

ಆಲುಗಡ್ಡೆಯ ದಪ್ಪ ಪಟ್ಟಿಯನ್ನು ತಲೆಗೆ ಹಾಕಿ ಕಟ್ಟಿ. ತಲೆ ನೋವಿನಿಂದ ಪರಿಹಾರ ದೊರೆಯುತ್ತದೆ.ಕಬ್ಬಿಣದ ಕೊರತೆಯಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಲುಗಡ್ಡೆಯ ಸಿಪ್ಪೆ ತುಂಬಾ ಪ್ರಯೋಜನಕಾರಿಯಾಗಿದೆ. ಇತರ ತರಕಾರಿಗಳೊಂದಿಗೆ ಆಲುಗಡ್ಡೆ ಸಿಪ್ಪೆಯನ್ನು ಸೇವಿಸಿ.

ದೇಹದಲ್ಲಿ ಸುಟ್ಟ ಗಾಯಗಳಿಂದ ನೋವು ಇದ್ದರೆ, ಆಲುಗಡ್ಡೆಯ ರಸವನ್ನು ಹೊರ ತೆಗೆದು ಸುಟ್ಟ ಸ್ಥಳಕ್ಕೆ ಹಚ್ಚುವುದರಿಂದ ರಿಲೀಫ್ ದೊರೆಯುತ್ತದೆ.
ಚಿಕ್ಕ ಮಕ್ಕಳ ಹಾಗೂ ವೃದ್ಧರು ಆಲುಗಡ್ಡೆ ರಸದಲ್ಲಿ ಜೇನುತುಪ್ಪವನ್ನು ಬೆರೆಸಿ ಅವರಿಗೆ ನೀಡಿದರೆ ಶಕ್ತಿ ಹೆಚ್ಚುತ್ತದೆ.
ಕಣ್ಣುಗಳ ಕಿರಿ ಕಿರಿ ಹಾಗೂ ಊತ ಸಮಸ್ಯೆ ಎದುರಿಸುತ್ತಿದ್ದರೆ, ಹಸಿ ಆಲುಗಡ್ಡೆಯನ್ನು ತುರಿದು, ಅದರ ರಸವನ್ನು ಹೊರತೆಗೆದು ಕಣ್ಣಗಳ ಕೆಳಗೆ ಹಚ್ಚಬಹುದು.

ಆಲುಗಡ್ಡೆ ನೈಸರ್ಗಿಕ ಕ್ಲೆನ್ಸರ್ ನಂತೆ ಕಾರ್ಯನಿರ್ವಹಿಸುತ್ತದೆ. ಸೌತೆಕಾಯಿಯನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ