ರನ್ನಿಂಗ್, ಜಾಗಿಂಗ್ ಮಾಡುತ್ತಿದ್ದೀರಾ.. ಮಾನಸಿಕ ಆರೋಗ್ಯಕ್ಕೆ ಯಾವುದು ಬೆಸ್ಟ್!

  • by

ನಿಮ್ಮ ಸುತ್ತ ಮುತ್ತಲಿನ ಜನರು ಏನು ಮಾಡುತ್ತಿದ್ದಾರೆ ಎಂದು ನೋಡಬೇಡಿ. ಬದಲಾಗಿ ನಿಮ್ಮ ಮೇಲೆ ಗಮನವಿರಲಿ. ನಿಮಗೆ ಉತ್ತಮವೆನಿಸದ್ದನ್ನೇ ಮಾಡಿ. ಹಾಗೇ ವ್ಯಾಯಾಮ ದಿನಚರಿಯನ್ನು ಕಾಪಾಡಿಕೊಳ್ಳಲು ಗಮನಹರಿಸುವುದು ಅವಶ್ಯಕ.

ದೇಹಕ್ಕೆ ವ್ಯಾಯಾಮ ಎಷ್ಟು ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಮಾನಸಿಕ ಆರೋಗ್ಯವೂ ಉತ್ತಮ ವಾಗಿರಲು ಎಕ್ಸ್ ಸೈಜ್ ದೇಹಕ್ಕೆ ಅಷ್ಟೇ ಮುಖ್ಯ! ಪ್ರತಿ ದಿನ ಎಕ್ಸ್ ಸೈಜ್ ನಲ್ಲಿ ತೊಡಗಿಸಿಕೊಳ್ಳುವವರು ಹೆಚ್ಚು ಶಕ್ತಿಯುತವಾಗಿ ಭಾವಿಸುತ್ತಾರೆ. ನಿದ್ರೆ ಹಾಗೂ ಹಸಿವನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ. ಸಕಾರಾತ್ಮಕ ಭಾವನೆ ಹೊಂದಿರುತ್ತಾರೆ.

ನೀವು ಮಾನಸಿಕ ಖಿನ್ನತೆ ಹಾಗೂ ಕಾಯಿಲೆಯಿಂದ ಬಳಲುತ್ತಿದ್ದರೆ. ವ್ಯಾಯಾಮ ಮಾಡುವುದರಿಂದ ಸಮಸ್ಯೆಯನ್ನು ನಿವಾರಿಸಬಹುದು. ಇದು ನಿಮ್ಮ ಯೋಗಕ್ಷೇಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಾಸ್ತವವಾಗಿ ವ್ಯಾಯಾಮ ಅನಾರೋಗ್ಯದಿಂದ ಕಾಪಾಡುತ್ತದೆ. ಎಕ್ಸ್ ಸೈಜ್ ಮಾಡುವುದರಿಂದ ಆಗುವ ಲಾಭಗಳೆಂದರೆ.

ಮಾನಸಿಕ ಆರೋಗ್ಯ , ಹೆಲ್ತ್, ಯೋಗಾ, yoga, mental health,

೧. ಎಕ್ಸ್ ಸೈಜ್ ಎನರ್ಜಿ ಹೆಚ್ಚಿಸುತ್ತದೆ

ನಿಮಗೆ ಕಡಿಮೆ ಎನರ್ಜಿ ಇದ್ದರೆ, ಆಯಾಸ, ಸುಸ್ತು ಮುಂತಾದ ಸಮಸ್ಯೆ ಕಾಡುತ್ತಿದ್ದರೆ ರನ್ನಿಂಗ್, ಜಾಕಿಂಗ್, ಕೆಲ ವ್ಯಾಯಾಮಗಳನ್ನು ಮಾಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿ ದಿನ ನೀವು 1 ಗಂಟೆಗಳ ಕಾಲ ವರ್ಕೌಟ್ ನಲ್ಲಿ ಕಳೆಯುತ್ತಿದ್ದರೆ, ಯೋಚಿಸಬೇಡಿ. ಯಾಕಂದ್ರೆ ಕಡಿಮೆ ಸಮಯದಲ್ಲಿ ಮಾಡುವ ವ್ಯಾಯಾಮ ಕೂಡ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

2. ನಿದ್ರೆಯ ಪ್ರಮಾಣ ಹೆಚ್ಚಿಸುತ್ತದೆ.

ವ್ಯಾಯಾಮ ಮಾಡುವುದರಿಂದ ನಿದ್ರಾ ಹೀನತೆಯ ಸಮಸ್ಯೆಗಳನ್ನು ದೂರ ವಿಡಬಹುದು. ಪ್ರತಿ ನಿತ್ಯ ತಪ್ಪದೇ ವ್ಯಾಯಾಮ ಮಾಡುವುದರಿಂದ ಉತ್ತಮವಾಗಿ ನಿದ್ರೆ ಬರುವುದಲ್ಲದೇ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ನೀವು ದಿನದಲ್ಲಿ ಅಥವಾ ಸಂಜೆ ವ್ಯಾಯಾಮ ಮಾಡಲು ಬಯಸುತ್ತೀರಾ..? ಅದು ಉತ್ತಮ ನಿದ್ರೆಗೆ ಸಹಕಾರಿಯಾಗಬಲ್ಲದ್ದು.

ಮಾನಸಿಕ ಆರೋಗ್ಯ , ಹೆಲ್ತ್, ಯೋಗಾ, yoga, mental health,

3. ವಾಕಿಂಗ್, ಜಿಮ್,ಜಾಗಿಂಗ್, ಡ್ಯಾನ್ಸ್, ಸ್ವಿಮಿಂಗ್ ಮಾಡಿ

ವಾಕಿಂಗ್, ಸ್ವಿಮಿಂಗ್, ಡ್ಯಾನ್ಸ್, ಜಿಮ್ ಯೋಗ ಮಾಡಬಹುದು. ಯೋಗ ಮಾಡುವುದರಿಂದ ನಿಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಮುಂಜಾನೆ ವೇಳೆ ವ್ಯಾಯಾಮ ಮಾಡುವ ಕಾರಣ ನಿಮ್ಮನ್ನು ಜಾಗರೂಕ ಮತ್ತು ಉಲ್ಲಾಸಿತವಾಗಿಡುತ್ತದೆ.

4. ತ್ವಚೆ ಹಾಗೂ ಮುಖದ ತಾಜಾತನ ಹೆಚ್ಚಳ

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದ ಚಟುವಟಿಕೆ ನಿಯಂತ್ರಿತವಾಗಿರುತ್ತದೆ. ಮುಂಜಾನೆ ವ್ಯಾಯಾಮದಿಂದ ನಿಮ್ಮ ದೇಹವು ಅದಕ್ಕೆ ಹೊಂದಿಕೊಂಡು ಹೋಗುತ್ತದೆ. ನೀವು ಪ್ರತಿ ದಿನ ಅದೇ ಸಮಯಕ್ಕೆ ಏಳಲು ಸಾಧ್ಯವಾಗುತ್ತದೆ. ಈ ಹವ್ಯಾಸ ನಿಮ್ಮ ಮೆದಳಿಗೆ ಸರಿಯಾಗಿ ಹೊಂದಿಕೊಂಡಿರುತ್ತದೆ.

5. ಒತ್ತಡ ನಿವಾರಣೆ

ಒತ್ತಡ ನಿವಾರಣೆಗೆ ವ್ಯಾಯಾಮ ಆರೋಗ್ಯಕರ ಮಾರ್ಗವಾಗಿದೆ. ಧೂಮಪಾನ, ಅಲ್ಕೋಹಾಲ್ ಸೇವನೆ ಹೀಗೆ ಅನಾರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಒತ್ತಡ ಹೆಚ್ಚುವುದಲ್ಲದೇ, ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದರೆ ಹಲವು ಕಾಯಿಲೆಗಳಿಂದ ದೂರವಿರಿಸುತ್ತದೆ. ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ನಿಮ್ಮ ಸುತ್ತ ಮುತ್ತಲಿನ ಜನರು ಏನು ಮಾಡುತ್ತಿದ್ದಾರೆ ಎಂದು ನೋಡಬೇಡಿ. ಬದಲಾಗಿ ನಿಮ್ಮ ಮೇಲೆ ಗಮನವಿರಲಿ. ನಿಮಗೆ ಉತ್ತಮವೆನಿಸದ್ದನ್ನು ಮಾಡಿ, ನಿಮ್ಮ ವ್ಯಾಯಾಮ ದಿನಚರಿಯನ್ನು ಕಾಪಾಡಿಕೊಳ್ಳಲು ಗಮನಹರಿಸುವುದು ಅವಶ್ಯಕ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ