ರಸಂ ಕುಡಿಯಿರಿ, ಕಾಯಿಲೆಗಳಿಂದ ದೂರವಿರಿ..!

  • by

ಡೆಡ್ಲಿ ಕೊರೊನಾ ವೈರಸ್ ತಡೆಗಟ್ಟಲು ಭಾರತೀಯ ಪ್ರಾಚೀನ ಪದ್ಧತಿ, ಹಾಗೂ ಆಯುರ್ವೇದ ಮೂಲಕ ನಿಯಂತ್ರಣ ಸಾಧ್ಯ ಎಂದು ಹೇಳಲಾಗುತ್ತದೆ. ಕೊರೊನಾ ವೈರಸ್ ತಡೆಗಟ್ಟಲು ಗಿಡಮೂಲಿಕೆ ಹಾಗೂ ಮಸಾಲೆ ಪದಾರ್ಥಗಳು ಸಾಕಷ್ಟು ಪರಿಣಾಮ ಬೀರಲಿವೆ ಎಂದು ಶಿಫಾರಸು ಮಾಡಲಾಗಿದೆ. ಭಾರತೀಯ ಆಹಾರ ಪದ್ಧತಿ ಪ್ರಮುಖ ಪದಾರ್ಥಗಳಾದ ಬೆಳ್ಳುಳ್ಳಿ, ಜೀರಿಗೆ , ಮೆಣಸು ಹಾಗೂ ಶುಂಠಿ , ಅರಶಿಣ, ನಿಂಬೆ ಮತ್ತು ವೀಳ್ಯದೆಲೆ , ತುಳಶಿ, ಅಮೃತಬಳ್ಳಿ, ಕರಿಬೇವು, ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿವೆ. ಹಾಗಾಗಿ ಪ್ರತಿ ದಿನ ಇದನ್ನು ಸೇವಿಸುವುದರಿಂದ ವೈರಾಣು ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಂದು ತಿಳಿದು ಬಂದಿದೆ.

health tips, immunity booster,Rasam tea, ರಸಂ ಚಹಾ, ರೋಗನಿರೋಧಕ ಶಕ್ತಿ ಹೆಚ್ಚಳ, ಆರೋಗ್ಯ ಟಿಪ್ಸ್,

ಅದೇ ರೀತಿ ರಸಂ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ರಸಂನಲ್ಲಿ ಸಾಂಬಾರ ಮತ್ತು ಮಸಾಲೆ ಪದಾರ್ಥಗಳು ಸಮೃದ್ಧವಾಗಿರುವುದರಿಂದ ಇದು ದೇಹದಲ್ಲಿ ಸ್ವಾಭಾವಿಕ ಉಷ್ಣತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಿಸಿ ಅನ್ನದೊಂದಿಗೆ ರಸಂ ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಅದು ವೈರಾಣುಗಳ ವಿರುದ್ಧ ಹೋರಾಡುತ್ತದೆ ಎಂದು ಹೇಳಲಾಗುತ್ತದೆ.

ಭಾರತೀಯ ಅಡುಗೆ ಮನೆಯಲ್ಲಿ ಕಾಯಿಲೆಗಳ ವಿರುದ್ಧ ಹೋರಾಡಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಅನೇಕ ಔಷಧೀಯ ಗುಣಗಳಿವೆ. ಕೊರೊನಾ ವೈರಸ್ ಏಕಾಏಕಿ ದೇಶಾದ್ಯಂತ ವೇಗವಾಗಿ ಬೆಳೆಯುತ್ತಿರುವಾಗ, ನಿಮ್ಮ ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳಬೇಕಾದದ್ದು ಅಷ್ಟೇ ಮುಖ್ಯ, ಏನು ತಿನ್ನುತ್ತೇವೆ.. ಹೇಗೆ ತಿನ್ನುತ್ತೇವೆ ಎಂದು ಮುಖ್ಯವಾಗುತ್ತದೆ. ರಸಂ ಟೀ ರೋಗ ನಿರೋಧಕ ಹೆಚ್ಚಿಸುವ ಪರಿಣಾಮಕಾರಿಯಾದ ಟೀ ಎಂದು ತಿಳಿದು ಬಂದಿದೆ. ಇದು ಆರೋಗ್ಯಕರ ಪೌಷ್ಠಿಕತತ್ವದಿಂದ ಕೂಡಿದೆ.

ರಸಂ ಚಹಾದ ಪ್ರಯೋಜನಗಳು..!

ಜೀರಿಗೆ , ಬೆಳ್ಳುಳ್ಳಿ , ಕರಿಮೆಣಸು ಮತ್ತು ಕರಿಬೇವಿನ ಎಲೆಗಳನ್ನು ರಸಂ ಚಹಾದಲ್ಲಿ ಬಳಸಲಾಗುತ್ತದೆ. ಇದು ರೋಗ ನಿರೋಧಕ ವರ್ಧಕ ಪಾನೀಯ ಎಂದು ಕರೆಯಲಾಗುತ್ತದೆ. ಈ ರೋಗ ನಿರೋಧಕ ವರ್ಧಕ ರಸಂ ಟೀ ದೇಹದಲ್ಲಿ ಬ್ಯಾಕ್ಟೇರಿಯಾವವನ್ನು ಹಾಗೂ ರೋಗಗಳ ವಿರುದ್ದ ಹೋರಾಡಲು ನೆರವಾಗುತ್ತದೆ. ರಸಂ ನಲ್ಲಿ ಜೀವ ವಿರೋಧಿ ಗುಣಗಳಿದ್ದು. ಆಹಾರ ಸೋಂಕಿನ ಅಪಾಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಮೊಗಾಲೊಮೈಸಿನ್ ಎಂಬ ಪ್ರತಿ ಜೀವಕ ಗುಣಗಳನ್ನು ಹೊಂದಿದೆ.


health tips, immunity booster,Rasam tea, ರಸಂ ಚಹಾ, ರೋಗನಿರೋಧಕ ಶಕ್ತಿ ಹೆಚ್ಚಳ, ಆರೋಗ್ಯ ಟಿಪ್ಸ್,

ಕಬ್ಬಿಣ ಹಾಗೂ ಕ್ಯಾಲ್ಸಿಯಂ ನ ಉತ್ತಮ ಮೂಲ..!

ರಸಂ ಚಹಾ ಕಬ್ಬಿಣ ಹಾಗೂ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಏಕೆಂದರೆ ಇದು ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಬಿ-2 ಸಮೃದ್ದವಾಗಿದೆ. ಜತೆಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.,ಕರಿಬೇವಿನ ಎಲೆಗಳು ಇದು ಬ್ಯಾಕ್ಟೇರಿಯಾ ವಿರೋಧಿ ಗುಣಗಳಿವೆ.

ರಸಂ ನಲ್ಲಿ ಬೆಳ್ಳುಳ್ಳಿ ಬಳಕೆ..!

ರಸಂ ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಪದಾರ್ಥಗಳಿವೆ. ರಸಂನಲ್ಲಿರುವ ಬೆಳ್ಳುಳ್ಳಿ ಔಷಧೀಯ ಗುಣಗಳನ್ನು ಹೊಂದಿದೆ. ಬದಲಾಗುತ್ತಿರುವ ಖುತುವಿನಲ್ಲಿ ಅನೇಕ ರೋಗಗಳನ್ನು ಉಂಟು ಮಾಡುವ ಬ್ಯಾಕ್ಟೇರಿಯಾಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ರಸಂ ಚಹಾ ಮಾಡುವುದು ಹೇಗೆ..?

2 ಚಮಚ ತುಪ್ಪ
1 ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಅರಶಿಣ ಪುಡಿ.
1 ಟೊಮೊಟೊ
2 ಬೆಳ್ಳುಳ್ಳಿ ಹಾಗೂ ಲವಂಗ
5 ಕರಿಬೇವಿನ ಎಲೆಗಳು
2 ಟೀ ಸ್ಪೂನ್ ಕರಿಮೆಣಸು
ಕೊತ್ತಂಬರಿ ಸೊಪ್ಪು
ಹುಣಸೇ ಹಣ್ಣು
ರುಚಿಗೆ ತಕ್ಕಷ್ಟು ಉಪ್ಪು..

health tips, immunity booster,Rasam tea, ರಸಂ ಚಹಾ, ರೋಗನಿರೋಧಕ ಶಕ್ತಿ ಹೆಚ್ಚಳ, ಆರೋಗ್ಯ ಟಿಪ್ಸ್,

ರಸಂ ತಯಾರಿಸುವ ವಿಧಾನ

ಮೊದಲು ಟೊಮೊಟೋವನ್ನು ಉಪ್ಪು ಹಾಗೂ ಶುಂಠಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಗ್ರೈಂಡರ್ ಜಾರ್ ತೆಗೆದುಕೊಂಡು, ಜೀರಿಗೆ, ಬೆಳ್ಳುಳ್ಳಿ , ಕರಿಮೆಣಸು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ , ಮಿಶ್ರಣ ಮಾಡಿ. ಪುಡಿ ತಯಾರಿಸಿಕೊಳ್ಳಿ. ನಂತರ ನೀವು 2 ಕಪ್ ನೀರನ್ನು ಸಣ್ಣ ಬಾಣಲೆಯಲ್ಲಿ ಕುದಿಸಿ, ಮತ್ತು ಅದರಲ್ಲಿ ರುಬ್ಬಿಕೊಂಡ ಮಿಶ್ರಣದ ಪೇಸ್ಟ್ ಹಾಕಿ. ಈಗ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀವು ಇವೆಲ್ಲವನ್ನು 3ರಿಂದ 5 ನಿಮಿಷಗಳ ಕಾಲ ಕುದಿಸಿ. ನಂತರ ಪ್ಯಾನ್ ಅಥವಾ ಬಾಣಲೆ ತೆಗೆದುಕೊಂಡು ಒಲೆ ಮೇಲೆ ಇಡಿ. ಇದರಲ್ಲಿ ತುಪ್ಪ ಹಾಕಿ, ಸಾಸಿವೆ ಚೆನ್ನಾಗಿ ಹುರಿಯಿರಿ. ಇದನ್ನು ಹೆಚ್ಚು ರುಚಿಕರವಾಗಿಸಲು ಕರಿಬೇವಿನ ಎಲೆಗಳು ಹಾಗೂ ಖಾರದ ಪುಡಿ ಸೇರಿಸಿ.ಈ ಮಿಶ್ರಣವನ್ನು ಫ್ರೈ ಮಾಡಿ, ನಂತರ ರಸಂಗೆ ಸೇರಿಸಿ.

ನಿಫಾ ಮತ್ತು ಸಾರ್ಸ್ ವೈರಾಣು ಸೋಂಕುಗಳ ಪ್ರಕರಣದಲ್ಲಿ ರಸಂ ಮತ್ತು ಮಸಾಲೆ ಕಷಾಯ ಪ್ರಯೋಗಗಳು ಸಾಕಷ್ಟು ಬಲಫದ್ರವಾಗಿದ್ದವು. ಈಗ ಏಷ್ಯಾ ಖಂಡ ಸೇರಿದಂತೆ ವಿಶ್ವದಲ್ಲಿ ಆತಂಕ ಸೃಷ್ಟಿರುವ ಕೊರೊನಾ ವೈರಸ್ ನಿಗ್ರಹಕ್ಕೆ ಇದು ಅತ್ಯಂತ ಪರಿಣಾಮಕಾರಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ