ಕೈಯಲ್ಲಿ ತಾಮ್ರದ ಖಡ್ಗ, ಬಳೆ ಧರಿಸುವುದರಿಂದ ಆರೋಗ್ಯ ಪ್ರಯೋಜನಗಳು..!

  • by

ಪ್ರಪಂಚದ ಇತರ ಪ್ರದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ತಾಮ್ರ ಹೇರಳವಾಗಿ ದೊರೆಯುತ್ತದೆ.  ಕರ್ನಾಟಕದಲ್ಲಿ ತಾಮ್ರದ ಕೆಲ ನಿಕ್ಷೇಪಗಳನ್ನು ಕಾಣಬಹುದು. ಇವುಗಳ ಪೈಕಿ , ಚಿತ್ರದುರ್ಗದ ಇಂಗಳಧಾಳು, ದಾವಣಗೆರೆ , ಮದ್ದೂರು, ಕಲ್ಯಾಡಿ, ಹಾಸನ, ಬಳ್ಳಾರಿ. ನಂಜನಗೂಡು, ತಿಂತಿಣಿ, ರಾಯಚೂರು ಈ ವಲಯಗಳಲ್ಲಿ ತಾಮ್ರದ ಅದಿರುಗಳು ಇವೆ. 

ತಾಮ್ರದಲ್ಲಿ ನೀರು ಕುಡಿದಿರೆ ಒಳ್ಳೆಯದು ಹಾಗಾಗಿ ತಾಮ್ರದ ಲೋಟದಲ್ಲಿ ನೀರು ಕುಡಿಯುವಂತೆ ಅನೇಕ ಜನರು ಸಲಹೆ ಮಾಡುತ್ತಾರೆ. ಏಕೆಂದರೆ ತಾಮ್ರ ಅನೇಕ ರೀತಿಯ ರೋಗಗಳನ್ನು ನಿವಾರಣೆ ಮಾಡುತ್ತದೆ. ತಾಮ್ರ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ನೀವು ತಾಮ್ರದಿಂದ ಮಾಡಿದ ಬಳೆ, ಖಡ್ಗ ಧರಿಸಬಹುದು. ಅಥವಾ ಉಂಗುರವನ್ನು ಧರಿಸಬಹುದು, ತಾಮ್ರದಲ್ಲಿರುವ ಬ್ಯಾಕ್ಟೋರಿಯಾ ವಿರೋಧಿ ಗುಣಗಳು ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. 

Copper Bracelets, benefits,  ತಾಮ್ರದ, ಆರೋಗ್ಯ ಪ್ರಯೋಜನಗಳು

ತಾಮ್ರದ ಬಳೆ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ. ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಅನೇಕ ರೀತಿಯ ಚಿಕಿತ್ಸಕ ಗುಣಗಳಿದ್ದು, ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು, ತಾಮ್ರದ ಉಂಗುರು, ಬಳೆ ಇತರ ಲೋಹಗಳಿಂದ ತಾಮ್ರ ಭಿನ್ನವಾಗಿದೆ. ಇದು ದೇಹದ ಎಲ್ಲಾ ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಹಾಗಾಗಿ ಜನರು ತಾಮ್ರದ ಖಡ್ಗಗಳನ್ನು ಕೈಯಲ್ಲಿ ಧರಿಸುವುದುಂಟು. ಕೈಯಲ್ಲಿ ತಾಮ್ರದ ಖಡ್ಗ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. 

ಇಮ್ಯೂನ್ ಸಿಸ್ಟಮ್ ಹೆಚ್ಚಿಸಲು!

ತಾಮ್ರದ ದೈಹಿಕ ಅಸಮತೋಲನವನ್ನು ಸುಧಾರಿಸುತ್ತದೆ. ಕೈಯಲ್ಲಿ ತಾಮ್ರದ ಬಳೆ ಅಥಟಾ ಖಡ್ಗ ಧರಿಸುವುದರಿಂದ ದೇಹ ಬಲಗೊಳ್ಳುತ್ತದೆ. ರಕ್ತವನ್ನು ಶುದ್ಧೀಕರಿಸುವುದಲ್ಲದೇ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತ ಪರಿಚಲನೆ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ. ಇದು ದೇಹದ ವಿಷಕಾರಿ ಅಂಶಗಳಿಂದ ರಕ್ಷಿಸುತ್ತದೆ. 

Copper Bracelets, benefits,  ತಾಮ್ರದ, ಆರೋಗ್ಯ ಪ್ರಯೋಜನಗಳು

ಹೃದಯವನ್ನು ಸಧೃಡಗೊಳಿಸುತ್ತದೆ!

ತಾಮ್ರದ ಬಳೆ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದು ಹೃದಯಘಾತ ಮತ್ತು ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯುತ್ತದೆ. 

ತಾಮ್ರದ ಉಂಗುರವನ್ನು ಅಥವಾ ಬಳೆಯನ್ನು ಧರಿಸುವುದರಿಂದ ರಕ್ತದೋತ್ತಡ ನಿಯಂತ್ರಿಸಬಹುದು. ರಕ್ತದೋತ್ತಡ ಇರುವವರು ತಾಮ್ರದ ಬಳೆಯನ್ನು ಧರಿಸಬೇಕು. ದೇಹದಲ್ಲಿ ಕಾಲಜನ್ , ಫೈಬರ್ ಹೆಚ್ಚಲು ತಾಮ್ರ ಸಹಾಯ ಮಾಡುತ್ತದೆ. ದೇಹದ ಅಸಮತೋಲನವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಗೊಳಿಸಲು ಸಹಾಯಕಾರಿಯಾಗಿದೆ. 

ತಾಮ್ರವು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ, ಕೈಯಲ್ಲಿ ಖಡ್ಗ ಧರಿಸುವುದರಿಂದ ಸಾಮಾನ್ಯ ಚರ್ಮ ರೋಗಗಳನ್ನು ನಿವಾರಿಸಬಹುದು. 

Copper Bracelets, benefits,  ತಾಮ್ರದ, ಆರೋಗ್ಯ ಪ್ರಯೋಜನಗಳು

ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. 

ತಾಮ್ರದಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಇರುವುದರಿಂದ ಇದು, ಅಕಾಲಿಕ ಮುಪ್ಪನ್ನು ತಡೆಗಟ್ಟುತ್ತದೆ. ವಯಸ್ಸಾಗುವಿಕೆಯನ್ನು ಇದು ತಡೆಗಟ್ಟುತ್ತದೆ. 

ಕೀಲು ನೋವು ನಿವಾರಣೆ..!

ತಾಮ್ರವನ್ನು ಧರಿಸುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ. ಸಂಧಿವಾತ ಸಮಸ್ಯೆಗೆ ಇದು ಪರಿಹಾರ ಒದಗಿಸುತ್ತದೆ. ಬಳೆ, ಖಡ್ಗ,  ಅಥವಾ ಉಂಗುರು ರೂಪದಲ್ಲಿ ಧರಿಸಿದರೆ, ಉತ್ತಮ ರಿಸಲ್ಟ್ ದೊರೆಯುತ್ತದೆ. ಜ್ಯೋತಿಷ್ಯ ಪ್ರಕಾರ, ತಾಮ್ರವನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ತಾಮ್ರವು ಉರಿಯೂತ ನಿವಾರಿಸುತ್ತದೆ. 

ಬೆವರು ದೇಹವನ್ನು ಪ್ರವೇಶಿಸಿದಾಗ ನೇರವಾಗಿ ದೇಹದ ಮೇಲೆ ಪರಿಣಾಮ ಬೀರುವ ಸಂಭವ ಹೆಚ್ಚು. ಮಾನಸಿಕ ಶಾಂತಿ, ನೆಮ್ಮದಿಗಾಗಿ ತಾಮ್ರವನ್ನು ಬಳಕೆ ಮಾಡುತ್ತದೆ. 

ಮೂಳೆಗಳು ಬಲಗೊಳ್ಳಲು..!

ತಾಮ್ರವು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ, ಕೈಯಲ್ಲಿ ಖಡ್ಗ ಧರಿಸುವುದರಿಂದ ಸಾಮಾನ್ಯ ಚರ್ಮ ರೋಗಗಳನ್ನು ನಿವಾರಿಸಬಹುದು. 

ಚರ್ಮದ ಉಬ್ಬಿದರೆ ಇದನ್ನ ನಿವಾರಿಸುವಲ್ಲಿ ತಾಮ್ರದ ಬಳೆ, ಉಂಗುರ ನೆರವಾಗುತ್ತದೆ.  ದೇಹದ ಊತವನ್ನು ಇದು ಕಡಿಮೆ ಮಾಡುತ್ತದೆ. ಹೊಟ್ಟೆಗೆ ಸಂಬಂಧಿತ ಅನೇಕ ಸಮಸ್ಯೆಗಳನ್ನು  ಇದು ತಡೆಗಟ್ಟುತ್ತದೆ. ಆಸಿಡಿಟಿಯನ್ನು ನಿವಾರಿಸುತ್ತದೆ. 

ನಾಲಿಗೆ ಸಂಬಂಧಿತ ಅನೇಕ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಕಫ ನಿವಾರಣೆಗೆ ಇದು ಸಹಾಯ ಮಾಡಬಲ್ಲದ್ದು. ಬೆರಳಿನ ಉಗುರುಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನೇಲ್ಸ್ ಹೆಲ್ದಿಯಾಗಿರಲು, ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ. 

ತಾಮ್ರವು ನಿಮ್ಮ ಇಂದ್ರಿಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕೋಪ , ಆತಂಕದಂತಹ ಸಮಸ್ಯೆಗಳಿಂದ ದೂರವಿರಿಸುತ್ತದೆ. 

ತಾಮ್ರದ ಅಡ್ಡ ಪರಿಣಾಮಗಳು…!

ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಬಳಸುವುದರಿಂದ ಸೈಡ್ ಎಫೆಕ್ಸ್ ಉಂಟು ಮಾಡಬಲ್ಲದ್ದು. ಕೆಲವೊಮ್ಮೆ ತಾಮ್ರ ವಿಷವನ್ನುಂಟು ಮಾಡಬಲ್ಲದ್ದು. ವಾಕರಿಕೆ, ವಾಂತಿ, ಅಜೀರ್ಣ , ಅಸ್ವಸ್ಥತೆ. ಬಣ್ಣ ಹಳದಿ ಬಣ್ಣಕ್ಕೆ ತಿರುಗುವುದು, ಖಿನ್ನತೆ, ಸ್ನಾಯು ದೌರ್ಬಲ್ಯ ಸಾಧ್ಯತೆ ಹೆಚ್ಚಿರುತ್ತದೆ. 

ಕೆಲಮೊಮ್ಮೆ ಇದು ಚರ್ಮದ ಕಿರಿ ಕಿರಿಯನ್ನುಂಟು ಮಾಡಬಲ್ಲದ್ದು. ಚರ್ಮದ ಕಿರಿಕಿರಿಯ ಜತೆಗೆ ಚರ್ಮದ ಲ್ಲಿ ತುರಿಕೆ, ಕೆಂಪಗಾುವುದು, ಉಂಟಾಗಬಹುದು. ಕೆಲಮೊಮ್ಮೆ ತಾಮ್ರ ಅಲರ್ಜಿಯನ್ನುಂಟು ಮಾಡಬಲ್ಲದ್ದು. ಇನ್ನು ತಾಮ್ರದ ಖಡ್ಗಗಳು ದೀರ್ಘಕಾಲದವರೆಗೆ ಧರಿಸಿದಾಗ ಚರ್ಮದ ಮೇಲೆ ನೀಲಿ ಹಾಗೂ ಹಸಿರು ಕಲೆಗಳು ಆಗಬಹುದು. ಇನ್ನು ಇದನ್ನು ಹೆಚ್ಚಾಗಿ ಬಳಸುವುದರಿಂದ ಹೈಪರ್ ಆ್ಯಕ್ಟಿವಿಟಿ, ಚರ್ಮದ ತೊಂದರೆಗಳು ಮತ್ತು ಖಿನ್ನತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ