ಕಬ್ಬಿನ ಜ್ಯೂಸ್ ಕುಡಿದ್ರೆ ಏನೆಲ್ಲಾ ಲಾಭ..!

  • by

ಕಬ್ಬಿನಿಂದ ಸಿಹಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸಿಹಿ ಪದಾರ್ಥಗಳಲ್ಲಿ ಬೆಲ್ಲ ಹಾಗೂ ಸಕ್ಕರೆಯೇ ಮುಖ್ಯ. ಪ್ರಪಂಚದ ಒಟ್ಟು ಸಕ್ಕರೆ ಉತ್ಪತ್ತಿ ಶೇ 67-68 ಭಾಗ ಕಬ್ಬಿನಿಂದಲೇ ಆಗುತ್ತದೆ. ಕಬ್ಬು ಅತ್ಯಂತ ಪ್ರಾಚೀನ ಬೆಳೆ. ಅರ್ಥವಣ ವೇದದಲ್ಲಿ ಕಬ್ಬಿನ ಬಗ್ಗೆ ಉಲ್ಲೇಖವಿದೆ. ಆದ್ದರಿಂದ ವೇದಗಳ ಕಾಲದಿಂದಲೂ ಹೆಚ್ಚಾಗಿ ಭಾರತದಲ್ಲಿ ಬಳಕೆಯಾಗುತ್ತಿದೆ ಎಂಬ ಉಲ್ಲೇಖವಿದೆ. ಕಬ್ಬಿನ ರಸ ಹಲವು ಪೌಷ್ಟಿಕಾಂಶಗಳಿಂದ ಭರಿತವಾಗಿದೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ , ಗಂಧಕ , ಕ್ಯಾಲ್ಸಿಯಂ, ಕಬ್ಬಿಣ , ಸತು ಮತ್ತು ಪೊಟ್ಯಾಶಿಯಂ ನಂತಹ ಖನಿಜಗಳು ಹೇರಳವಾಗಿ ದೊರೆಯುತ್ತವೆ. ಕಬ್ಬಿನ ಹಾಲಿಗೆ ಸಕ್ಕರೆ ಬೆರೆಸಲಾಗುವುದಿಲ್ಲ. ಇದು ನೈಸರ್ಗಿಕ ಸಕ್ಕರೆಯೇ ಸಿಹಿಯಾಗಿದೆ. ಹೀಗಾಗಿ ಇದನ್ನು ಎಲ್ಲರೂ ಮೆಚ್ಚಲು ಕಾರಣವಾಗಿದೆ. 

[gd_post_badge id=” key=” condition=’is_equal’ search=” icon_class=” badge=” link=” new_window=’false’ bg_color=’#0073aa’ txt_color=’#ffffff’ size=” alignment=” list_hide=” list_hide_secondary=” css_class=” ]
 health benefits, sugarcane juice, 
ಕಬ್ಬಿನ ಜ್ಯೂಸ್, ಆರೋಗ್ಯ ಪ್ರಯೋಜನಗಳು

ಕಬ್ಬಿನ ಹಾಲು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ ಡಿ ಎಲ್ ಪ್ರಮಾಣ ಕಡಿಮೆ ಇರುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. 

ಹಲ್ಲು ಹಾಗೂ ಮೂಳೆಗಳಿಗೂ ಕಬ್ಬಿನ ರಸ ಉತ್ತಮ ಎಂದು ಹೇಳಲಾಗುತ್ತದೆ. ಕಬ್ಬಿನ ಜಲ್ಲೆಯನ್ನು ಜಗಿದು ರಸ ಹೀರುವ ಮೂಲಕ ಹಲ್ಲು ಮತ್ತು ಒಸಡುಗಳು ಧೃಡಗೊಳ್ಳುತ್ತವೆ. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುವುದರಿಂದ ಮೂಳೆ ಮತ್ತು ಹಲ್ಲುಗಳು ಧೃಡಗೊಳ್ಳಲು ನೆರವಾಗುತ್ತವೆ.

ಕಬ್ಬಿನ ಹಾಲಿನ ಅತ್ಯಂತ ಪ್ರಯೋಜನಕಾರಿ ಎಂದರೆ ಇದು ಕಿಡ್ನಿಯಲ್ಲಿರುವ ಕಲ್ಲನ್ನು  ಹೋಗಲಾಡಿಸುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದವರು ಇದನ್ನು ಪ್ರತಿ ದಿನ ಕುಡಿದರೆ ಆ ಸಮಸ್ಯೆಗಳಿಂದ ಗುಣಮುಖರಾಗಲು ಸಹಾಯ ಮಾಡುತ್ತದೆ. 

ಜೀರ್ಣಕ್ರಿಯೆ ಸಮಸ್ಯೆಯನ್ನು ಹೊಗಲಾಡಿಸುತ್ತದೆ. ಅರ್ಜೀಣ ತೊಂದರೆ ಇರುವವರು ಕಬ್ಬಿನ ಹಾಲಿನ ರಸವನ್ನು ಸೇವಿಸಿ. ಹೊಟ್ಟೆಉಬ್ಬರಿಕೆಯಿಂದ ರಕ್ಷಣೆ ಒದಗಿಸುತ್ತದೆ. 

ಬಾಯಿಯ ದುರ್ವಾಸನೆ ಇರುವವರು ಕಬ್ಬಿನ ಹಾಲು ಕುಡಿಯಲು ಪ್ರಾರಂಭಿಸಿ. ಇದರಲ್ಲಿರುವ ಖನಿಜಗಳು ಒಸಡು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಈ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ದೇಹದ ಹಲವಾರು ಸೋಂಕುಗಳ ವಿರುದ್ಧ ಹೋರಾಡುತ್ತದೆ. 

ಮುಖ್ಯವಾಗಿ ಇದರ ರಸ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಕಬ್ಬಿನ ರಸ ಮೂತ್ರಪಿಂಡದಲ್ಲಿರುವ ಕೊಳೆಯನ್ನು ನಿವಾರಿಸುತ್ತದೆ. ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಕಬ್ಬಿನ ಹಾಲು ಸೇವನೆ ಉತ್ತಮ. ಅಲ್ಲದೆ ಕಬ್ಬಿನ ಹಾಲು ಮಲಬದ್ಧತೆಗೂ ಒಳ್ಳೆಯದು. ಇದು ಮಧುಮೇಹಿಗಳಿಗೂ ಒಳ್ಳೆಯ ಪೇಯ. ಇದು ಸಿಹಿಯಾಗಿದ್ದರೂ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸುವುದಿಲ್ಲವಾದ್ದರಿಂದ ಮಧುಮೇಹಿಗಳನ್ನು ಇದನ್ನು ಕುಡಿಯಲು ಯಾವುದೇ ತೊಂದರೆಯಿಲ್ಲ. ಹಾಗಿದ್ದರ ಮತ್ತೇಕೆ ತಡ? ಬೇಡದ ಬಣ್ಣ ಬಣ್ಣದ ಜ್ಯೂಸ್ ಕುಡಿಯುವುದರ ಬದಲು ಕಬ್ಬಿನ ಹಾಲು ಕುಡಿಯಿರಿ.

ದೇಹದ ತೂಕವನ್ನು ಇದು ಕಡಿಮೆ ಮಾಡುತ್ತದೆ. ಕಬ್ಬಿನ ರಸವು ದೇಹದಲ್ಲಿನ ಕೆಟ್ಟ ಕೊಲೆಸ್ರ್ಟಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.  ಇದು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ಒಂದು ಉತ್ತಮ ಪಾನೀಯ ಅಂತಲೇ ಹೇಳಬಹುದು. ಇದರಲ್ಲಿ ಫೈಬರ್ ಅಧಿಕವಾಗಿದ್ದು, ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. 

ಕಬ್ಬಿನ ರಸ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಆರೋಗ್ಯಕರ ಚರ್ಮವನ್ನು ಹೊಂದಲು ಇದು ಸಹಕಾರಿಯಾಗುತ್ತದೆ. ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ. ಕಲೆಗಳನ್ನು ನಿವಾರಿಸುತ್ತದೆ. ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಮತ್ತು ಚರ್ಮವನ್ನು ಹೈಡ್ರೀಕರಿಸುವುದಕ್ಕೆ ಸಹಾಯ ಮಾಡುತ್ತದೆ.  ಕಬ್ಬಿನ ರಸವನ್ನು ನಿಮ್ಮ ಫೇಸ್ ಪ್ಯಾಕ್ ಗೆ ಸೇರಿಸಬಹುದು. ಕಬ್ಬಿನ ರಸದಿಂದ ಕಾಂತಿಯುಕ್ತ ಚರ್ಮ ನಿಮ್ಮದಾಗಿಸಿಕೊಳ್ಳಬಹುದು. 

ಉಸಿರಾಟಕ್ಕೂ ಕಬ್ಬಿನ ರಸ ಉತ್ತಮ ಅಂತಲೇ ಹೇಳಬಹುದು. ಕಬ್ಬಿನ ರಸದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇರುವುದರಿಂದ ಉಸಿರಾಟದ ಸಮಸ್ಯೆಗಳ ವಿರುದ್ಧ ಇದು ಹೋರಾಡುತ್ತದೆ. 

ಜ್ವರ ಹಾಗೂ ಕಾಯಿಲೆಗಳಿಂದ ಬಳಲುತ್ತಿರುವವರು ಅಸ್ವಸ್ಥತೆ ಉಂಟು ಮಾಡಬಹುದು. ಶಿಶುಗಳಲ್ಲಿ ಹಾಗೂ ಮಕ್ಕಳಲ್ಲಿ ಪ್ರೋಟೀನ್ ನಷ್ಟಕ್ಕೆ ಕಾರಣವಾಗಬಹುದು. ಆದ್ರೆ  ಕಬ್ಬಿನ ರಸವು ಕಳೆದು ಹೋದ ಪ್ರೋಟೀನ್ ನ್ನು ಒದಗಿಸುವುದಲ್ಲದೇ, ಚೇತರಿಕೆಯನ್ನುಂಟು ಮಾಡಲು ಸಹಾಯ ಮಾಡುತ್ತದೆ. 

ಶೀತ , ಗಂಟಲು ನೋವು , ಗಂಟಲು ಕೆರೆತ, ಮುಂತಾದ ಸಮಸ್ಯೆಗಳಿದ್ದರೆ, ಬೇರೆ ಔಷಧಿಗಳಿಗೆ ಮೊರೆ ಹೋಗುವ ಬದಲು ಕಬ್ಬಿನ ಹಾಲು ಕುಡಿದರೆ ಬೇಗನೆ ಶಮನವಾಗುತ್ತದೆ. ಅಷ್ಟೇ ಅಲ್ಲದೇ, ಇದು ಮೂತ್ರಕೋಶದ ಸೋಂಕುಗಳು ಹಾಗೂ ಕಿಡ್ನಿ ಹರಳುಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

 health benefits, sugarcane juice, Kannada Tips 
ಕಬ್ಬಿನ ಜ್ಯೂಸ್, ಆರೋಗ್ಯ ಪ್ರಯೋಜನಗಳು

ಕಬ್ಬಿನ ಹಾಲನ್ನು ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಅತಿ ಹೆಚ್ಚಾಗಿ ಸೇವನೆ ಮಾಡಬೇಕು. ಇದನ್ನು ಕೇವಲ ಬಾಯಾರಿಕೆ ದಾಹವನ್ನು ನಿವಾರಿಸಿಕೊಳ್ಳಲು ಇದರ ಸೇವನೆ ಮಾಡುತ್ತಾರೆ. ಆದ್ರೆ ಇದರಲ್ಲಿರುವ. ಆರೋಗ್ಯಕಾರಿ ಪ್ರಯೋಜನಗಳು ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ.

ಕಬ್ಬಿನ ಜ್ಯೂಸ್ ಯಾವಾಗ ಕುಡಿಯಬೇಕು

1 ಲೋಟ ಕಬ್ಬಿನ ಹಾಲು ಕುಡಿಯುವುದರಿಂದ ಹಲವು ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಅನೇಕ ಸಮಸ್ಯೆಗಳಿಗೆ ಇದನ್ನು ಮನೆ ಮದ್ದಾಗಿ ಬಳಸಬಹುದು. ಕಾಮಾಲೆ ಕಾಯಿಲೆ ಇರುವವರು ಇದನ್ನು ಕುಡಿದರೆ ಬೇಗನೆ ಚೇತರಿಸಿಕೊಳ್ಳಬಹುದು. 

ಪ್ರತಿ ದಿನ ಕಬ್ಬಿನ ಹಾಲು ಕುಡಿದರೆ ಹೆಚ್ಚು ಒಳ್ಳೆಯದು. ವರ್ಕೌಟ್ ಮಾಡಿ ೫ ನಿಮಿಷ ಬಿಟ್ಟು ಕಬ್ಬಿನ ಹಾಲು ಕುಡಿದರೆ ಒಳ್ಳೆಯದು. ಕಬ್ಬಿನ ಹಾಲಿಗೆ ನಿಂಬೆ ರಸ ಹಾಗೂ ಬ್ಲ್ಯಾಕ್ ಸಾಲ್ಟ್ ಸೇರಿಸಿ ಕೂಡಾ ಸೇವಿಸಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ