ಮೊಳಕೆ ಕಾಳು ತಿಂದಿದ್ದೀರಾ? ಹಾಗಾದ್ರೆ ಇಲ್ಲಿ ಕೇಳಿ

  • by

ಮೊಳಕೆ ಕಾಳುಗಳನ್ನು ಪೌಷ್ಟಿಕಾಂಶಯುಕ್ತ ಕಾಳುಗಳೆಂದು ಕರೆಯಲಾಗುತ್ತದೆ. ಪ್ರಕೃತಿ ಚಿಕಿತ್ಸೆಯಲ್ಲಿ ಅಂದರೆ ನೈಸರ್ಗಿಕ ಚಿಕಿತ್ಸೆಯಲ್ಲಿ ಮೊಳಕೆ ಕಾಳುಗಳನ್ನು ಔಷಧಿಗಳೆಂದೇ ಪರಿಗಣಿಸಲಾಗುತ್ತದೆ. ಬೆಳಿಗ್ಗೆ ಮೊಳಕೆಕಾಳು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್ ಕೊರತೆ ಉಂಟಾಗುವುದಿಲ್ಲ. ಮತ್ತು ಅಗತ್ಯ ಪೋಷಕಾಂಶಗಳಿಂದ  ಇದು ಸಮೃದ್ಧವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಗಳಲ್ಲಿ ಕಂಡು ಬರುತ್ತದೆ. ಮೊಳಕೆ ಧಾನ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ. ನಿಮ್ಮ ಆಹಾರದಲ್ಲಿ ಮೊಳಕೆ ಕಾಳುಗಳನ್ನು ಸೇರಿಸುವ ಮೂಲಕ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. 

ಮೊಳಕೆ ಕಾಳುಗಳ ,ಆರೋಗ್ಯ ಪ್ರಯೋಜನಗಳು., Health Benefits, Sprouting

ಯಾವ ಧಾನ್ಯಗಳನ್ನು ಮೊಳಕೆ ತರಿಸಬಹುದು?

ಹುರುಳಿ, ಹೆಸರುಕಾಳು, ಬೀನ್ಸ್, ಅವರೆ ಧಾನ್ಯ, ಕಡ್ಲೆ ಕಾಳು, ಸೋಯಾ, ರಾಗಿ, ಕ್ವಿನೋವಾ, ಕಪ್ಪು ಬೀನ್ಸ್, ಶೇಂಗಾ, ಹೆಸರುಕಾಳಗಳನ್ನು ಮೊಳಕೆ ತರಿಸಬಹುದು. ಎಲ್ಲಾ ಧಾನ್ಯಗಳನ್ನು ನೀರಿನಲ್ಲಿ ಅಥವಾ ಮೊಸರಿನಲ್ಲಿ ನೆನೆಸಿ ಮೊಳಕೆ ತರಿಸಲು ಸಾಧ್ಯವಿಲ್ಲ.

ಒಣಧಾನ್ಯಗಳು ಬೇಯುವುದಕ್ಕೆ ಸಮಯ ಬೇಕಾಗುತ್ತದೆ. ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಮೊಸರು ಇಲ್ಲವೇ,  ನೀರಿನಲ್ಲಿ 24 ಗಂಟೆ ಮೊಳಕೆ ಕಾಳುಗಳನ್ನು ನೆನೆಸಿಟ್ಟುಕೊಳ್ಳಬೇಕು. 

ಇಂತಹ ನೆನೆಸಿಟ್ಟ ಅಥವಾ ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. 

ಮೊಳಕೆ ಕಾಳುಗಳಿಂದ ಪ್ರಯೋಜನಗಳು.

1 ತೂಕ ಇಳಿಕೆಗೆ 

ಮೊಳಕೆ ಬಂದ ಕಾಳುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುವುದಲ್ಲದೇ ಇವು ಕ್ಯಾಲೋರಿರಹಿತವಾಗಿರುತ್ತದೆ. ಈ ಧಾನ್ಯಗಳ ಸೇವನೆಯಿಂದ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಅದಲ್ಲದೇ ಈ ಮೊಳಕೆಯೊಡೆದ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ನಾರು ಇರುವುದರಿಂದ ಇದು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. 

ಮೊಳಕೆ ಕಾಳುಗಳ ,ಆರೋಗ್ಯ ಪ್ರಯೋಜನಗಳು., Health Benefits, Sprouting

2. ರಕ್ತ ಪರಿಚಲನೆ

ಕಾಳುಗಳು ರಕ್ತ ಪರಿಚಲನೆಯ್ನು ಸರಾಗವಾಗಿ ಮಾಡಲು ನೆರವಾಗುತ್ತದೆ. ಕಾಳುಗಳಲ್ಲಿ ಮತ್ತು ಧಾನ್ಯಗಳಲ್ಲಿ ಹೇರಳವಾಗಿರುವ ಕಬ್ಬಿಣ ಮತ್ತು ತಾಮ್ರಗಳು ರಕ್ತದಲ್ಲಿರುವ ಕೆಂಪು ರಕ್ತಕಣಗಳ ಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. 

3. ಕಣ್ಣಿನ ದೃಷ್ಟಿ ಆರೋಗ್ಯಕರವಾಗಿಡುತ್ತೆ

ಮೊಳಕೆಯೊಡೆದ ಧಾನ್ಯಗಳಲ್ಲಿ ವಿಟಾಮಿನ್ ಎ ಸಮೃದ್ಧವಾಗಿರುತ್ತದೆ ಇದು ಕಣ್ಣಿನ ಅರೋಗ್ಯಕ್ಕೆ, ದೃಷ್ಟಿ ಸುಧಾರಿಸಲು ನೆರವಾಗುತ್ತದೆ. ಅಲ್ಲದೇ ಈ ಮೊಳಕೆಯೊಡೆದ ಧಾನ್ಯಗಳ ಸೇವನೆಯಿಂದ ಕಣ್ಣುಗಳ ಜೀವಕೋಶಗಳಿಗೆ ಫ್ರೀ ರಾಡಿಕಲ್ ಎಂಬ ಕಣಗಳಿಂದ ಎದುರಾಗುವ ಅಪಾಯವನ್ನೂ ಸಹ ತಪ್ಪಿಸಬಹುದಾಗಿದೆ.

4.ಕೂದಲ ಬೆಳವಣಿಗೆ 

ಮೊಳಕೆಯೊಡೆದ ಕಾಳುಗಳ ಮತ್ತು ಧಾನ್ಯಗಳ ಸೇವನೆಯಿಂದ ಹೊಸ ನರಗಳು ಬೇಗನೆ ಬೆಳವಣಿಗೆಯನ್ನು ಪಡೆಯುತ್ತವೆ ಮತ್ತು ಕೂದಲಿನ ಬೆಳವಣಿಗೆಯಲ್ಲಿಯೂ ಇವುಗಳು ಸಹಕರಿಸುತ್ತವೆ. ಅಷ್ಟೇ ಅಲ್ಲದೇ ಇವು ಹೆಚ್ಚು ಹೆಚ್ಚು ಆಮ್ಲಜನಕವನ್ನು ರಕ್ತದ ಮೂಲಕ ದೇಹದ ವಿವಿಧ ಅಂಗಗಳಿಗೆ ಮತ್ತು ಜೀವಕೋಶಗಳಿಗೆ ತಲುಪಿಸಲು ನೆರವಾಗುತ್ತದೆ.

5.ಹೃದಯದ ಆರೋಗ್ಯಕ್ಕೆ

ಮೊಳಕೆಯೊಡೆದ ಧಾನ್ಯಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು ಇವು ರಕ್ತದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕೊಬ್ಬಿನ ಆಮ್ಲಗಳು ನಿರೋಧಕ ಗುಣವನ್ನು ಪಡೆದಿದ್ದು ಹೃದಯಕ್ಕೆ ಹೆಚ್ಚುವರಿ ಒತ್ತಡ ಬೀಳದಂತೆ ತಡೆಯುವುದಲ್ಲದೇ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇರಿಸುತ್ತದೆ.

6. ರೋಗ ನಿರೋಧಕ ಶಕ್ತಿ ಹೆಚ್ಚಳ

ಮೆಳಕೆಯೊಡೆದ ಧಾನ್ಯಗಳಲ್ಲಿ ಅಧಿಕ ಪ್ರಮಾಣದ ವಿಟಾಮಿನ್ ಸಿ ಇರುವುದರಿಂದ ಇವು ದೇಹದಲ್ಲಿ ಬಿಳಿ ರಕ್ತಕಣಗಳನ್ನು ಪ್ರಚೋದಿಸುತ್ತವೆ. ಅಲ್ಲದೇ ಮೊಳಕೆಯೊಡೆದ ಧಾನ್ಯಗಳಲ್ಲಿರುವ ವಿಟಾಮಿನ್ ಎ ಸಹ ಉತ್ತಮ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದ್ದು ಇವು ದೇಹದಲ್ಲಿ ಇನ್ನಷ್ಟು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

7. ವಿಟಾಮಿನ್‌ಗಳ ಪ್ರಮಾಣ ಹೆಚ್ಚಳ

ಕಾಳುಗಳನ್ನು ಅಥವಾ ಧಾನ್ಯಗಳನ್ನು ನೀರಿನಲ್ಲಿ ನೆನೆಸಿಡುವುದರಿಂದ ಧಾನ್ಯದಲ್ಲಿರುವ ವಿಟಾಮಿನ್‌ಗಳು ನೀರಿನಲ್ಲಿ ಸಂಗ್ರಹವಾಗುತ್ತದೆ. ಈ ಧಾನ್ಯಗಳೊಂದಿಗೆ ಅಧವಾ ಕಾಳುಗಳೊಂದಿಗೆ ನೆನೆಸಿಟ್ಟ ನೀರನ್ನೇ ಬಳಸುವುದರಿಂದ ಆಹಾರ ಪದಾರ್ಥದಲ್ಲಿ ವಿಟಾಮಿನ್‌ಗಳ ಪ್ರಮಾಣವು ಹೆಚ್ಚಳವಾಗುತ್ತದೆ. 

ಜೀರ್ಣಕ್ರಿಯೆಗೆ ಸಹಕಾರಿ : ಮೊಳಕೆ ಒಡೆದ ಧಾನ್ಯಗಳು ಮತ್ತು ರಾತ್ರಿ ನೆನೆಸಿಟ್ಟ ಕಾಳುಗಳು ಸುಲಭವಾಗಿ ಬೇಯುವುದರೊಂದಿಗೆ ಸುಲಭವಾಗಿ ಜೀರ್ಣವಾಗುತ್ತವೆ. ಈ ಧಾನ್ಯಗಳನ್ನು ನೆನೆಸಿಟ್ಟು ಬೇಯಿಸಿ ಸೇವಿಸುವ ಮೂಲಕ ಕಿಣ್ವ ಪ್ರತಿರೋಧಕಗಳ ಚಟುವಟಿಕೆಯನ್ನು ನಿಯಂತ್ರಿಸಿದಂತಾಗುತ್ತದೆ. 

ಧಾನ್ಯಗಳ ಹೊರಕವಚದಲ್ಲಿರುವ ಈ ಆಮ್ಲವು ಧಾನ್ಯಗಳಲ್ಲಿರುವ ಕ್ಯಾಲ್ಸಿಯಂ, ಮೆಗ್ನೆಶಿಯಂಗಳನ್ನು ದೇಹ ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದರೆ ಧಾನ್ಯಗಳು ಮೊಳಕೆಯೊಡೆದಾಗ ಈ ಫೈಟಿಕ್ ಆಮ್ಲವು ವಿಭಜನೆಗೊಳ್ಳುವುದಕ್ಕೆ ನೆರವಾಗುತ್ತದೆ.

8. ಮುಪ್ಪಾಗುವುದನ್ನು ತಡೆಗಟ್ಟುತ್ತದೆ

ಮೊಳಕೆಯೊಡೆದ ಕಾಳುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಿಗಿದ್ದು, ಇವು ಅವಧಿಗೂ ಮುನ್ನ ವೃದ್ಧಾಪ್ಯ ಆವರಿಸುವುದನ್ನು ತಡೆಯುತ್ತದೆ. ಮೊಳಕೆಯೊಡೆದ ಧಾನ್ಯಗಳನ್ನು ನಾವು ದೈನಂದಿನ ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ದೇಹವು ಉಲ್ಲಾಸದಿಂದ ಇರುವುದಲ್ಲದೇ ಚಿರಯೌವ್ವನವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಅಲ್ಲದೇ ಫ್ರೀ ರಾಡಿಕಲ್ ಎಂಬ ಕ್ಯಾನ್ಸರ್‌ಕಾರಕ ಕಣಗಳು ಜೀವಕೋಶಗಳಿಗೆ ಹಾನಿ ಎಸಗುವುದರಿಂದಲೂ ತಡೆಗೊಡ್ಡಿ ವೃದ್ಧಾಪ್ಯವನ್ನು ದೂರವಿರಿಸುತ್ತದೆ.

9. ಪಿ. ಎಚ್. ಮಟ್ಟವನ್ನು ಸುಧಾರಿಸುತ್ತದೆ 

ಮೊಳಕೆಯೊಡೆದ ಧಾನ್ಯಗಳ ಸೇವನೆಯಿಂದ ದೇಹದಲ್ಲಿ ಆಮ್ಲೀಯತೆ ಕಡಿಮೆಯಾಗುತ್ತದೆ. ಧಾನ್ಯಗಳನ್ನು ನೆನೆಸಿ ಸೇವಿಸುವುದರಿಂದ ಈ ಧಾನ್ಯಗಳಲ್ಲಿರುವ ಕ್ಷಾರೀಯ ಗುಣಗಳು ಕಡಿಮೆಯಾಗಿ ತಟಸ್ಠಗೊಳಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ