ಬಾಣಂತಿಯರಿಗೆ ಹೇಳಿ ಮಾಡಿಸಿದ್ದು ಪಾಲಕ್ ಸೊಪ್ಪು!

  • by

ಅಡುಗೆಯಲ್ಲಿ ಉಪಯೋಗಿಸಲ್ಪಡುವ ಅಡುಗೆಗಳಲ್ಲಿ ಪಾಲಕ್ ತರಕಾರಿ ಕೂಡಾ ಒಂದು.. ಪಾಲಕ್ ಸೊಪ್ಪಿನಲ್ಲಿ ನಾರಿನಾಂಶ,  ಪ್ರೋಟೀನ್ ಗಳು ಹೆಚ್ಚಿವೆ. ಈ ಸೊಪ್ಪನ್ನು ವಾರಕ್ಕೆ ೩ ಬಾರಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.. ಅಡುಗೆ ಮನೆಯಲ್ಲಿ ಉಪಯೋಗಿಸುವ ಪಾಲಕ್ ಸೊಪ್ಪು ಅನೇಕ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸಬಲ್ಲ ಗುಣಗಳನ್ನು ಹೊಂದಿದೆ. ಈ ಸೊಪ್ಪಿನ ಮಹತ್ವದ ಬಗ್ಗೆ ಇಲ್ಲಿ ವಿವಿರಿಸಲಾಗಿದೆ. 

ಪಾಲಕ್ ಸೊಪ್ಪು, ಆರೋಗ್ಯ ಲಾಭಗಳು, 
health Benefits, Spinach,

1.ಕೂದಲು ಸಮಸ್ಯೆಗೆ ಹಾಗೂ ಬೆಳವಣಿಗೆಗೆ ಪಾಲಕ್ ನೆರವಾಗುತ್ತದೆ. ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅಂಶ  ಕೆಂಪು ರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿ ಕೂದಲ ಬುಡಕ್ಕೆ ತಲುಪಿಸಲು ಸಹಾಯಕಾರಿಯಾಗಿದೆ. 

2. ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲು ಉದರುವಿಕೆಯ ಸಮಸ್ಯೆ ತಡೆಗಟ್ಟಬಹುದು. ಅದರಲ್ಲೂ ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ, ಸಿ, ಇ ಹಾಗೂ ಪೊಟ್ಯಾಶಿಯಂ, ಕಬ್ಬಿಣ, ಹಾಗೂ ಒಮೆಗಾ ಅಂಶಗಳು ಹೆಚ್ಚಾಗಿರುವುದರಿಂದ ಕೂದಲು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.  ಅಲ್ಲದೇ ಕಲೆಗಳಿಂದ . ಮೂಡವೆಗಳಿಂದ ಕೂಡಿದ ತ್ವಚೆಯ ಭಾಗವನ್ನು ತಿಳಿಯಾಗಿಸುತ್ತದೆ. ಪಾಲಕ್ ಸೊಪ್ಪು ಸೂರ್ಯ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿಗಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ. 

ಪಾಲಕ್ ಸೊಪ್ಪು, ಆರೋಗ್ಯ ಲಾಭಗಳು, 
health Benefits, Spinach,

3. ಪಾಲಕ್ ಸೊಪ್ಪಿನ ಜ್ಯೂಸ್ ಸೇವನೆಯಿಂದ ನರಗಳಿಗೆ ಒಳ್ಳೆಯದು. ಮೆಗ್ನೇಶಿಯಂ ಇದರಲ್ಲಿ ಹೆಚ್ಚಾಗಿರುವುದರಿಂದ ಮಾಂಸಖಂಡಗಳ ಕಾರ್ಯ ನಿರ್ವಹಣೆಯ ಮಟ್ಟವನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ನಿಮ್ಮ ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. 

4. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿ ಸತುವಿನ ಅಂಶವಿದ್ದು, ನಿಮ್ಮ ಶರೀರದಲ್ಲಿ ಇನ್ಸುಲಿನ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸತುವೆಂಬ ಖನಿಜಾಂಶವು ತ್ಯಾಜ್ಯ ವಿಷ ವಸ್ತುಗಳನ್ನು ದೇಹದಿಂದ ಹೊರಹಾಕುವಲ್ಲಿಯೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. 

5.ಕ್ಯಾಲ್ಸಿಯಂ ಹಿರಿಕೊಳ್ಳಲು ಪಾಲಕ್ ಸೊಪ್ಪು ನೆರವಾಗುತ್ತದೆ. ರಂಜಕದ ಅಂಶವು ಕ್ಯಾಲ್ಸಿಯಂ ಅನ್ನು ದೇಹವು ಹೀರಿಕೊಳ್ಳುವಂತಾಗಲು ಸಹಕರಿಸುತ್ತದೆ. ಕ್ಯಾಲ್ಸಿಯಂನ ಅಂಶವು ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಬಲವಾಗಿರಿಸಲು ಸಹಾಯ ಮಾಡುತ್ತದೆ. 

ಪಾಲಕ್ ಸೊಪ್ಪು, ಆರೋಗ್ಯ ಲಾಭಗಳು, 
health Benefits, Spinach,

6. ಪಾಲಕ್ ಸೊಪ್ಪಿನ ಜ್ಯೂಸ್ ಸೇವನೆಯಿಂದ ಕಬ್ಬಿಣಾಂಶ ಆರೋಗ್ಯಯುತ ರಕ್ತದಲ್ಲಿ ನೆರವಾಗುತ್ತದೆ. ಕೆಂಪು ರಕ್ತಕಣಗಳು ಪುನರುತ್ಪತ್ತಿಯಾಗುತ್ತದೆ.  ಕ್ಯಾನ್ಸರ್ ರೋಗವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.  ಕೆಲವೊಂದು ಕ್ಯಾನ್ಸರ್ ಪ್ರತಿ ಬಂಧಕ ವಸ್ತುಗಳನ್ನು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಇದು ನೆರವಾಗುತ್ತದೆ ಎಂದು ಹೇಳಬಹುದು.

7. ಪಾಲಕ್ ಸೊಪ್ಪು ಸ್ವಚ್ಛಕಾರಕದಂತೆ ಕಾರ್ಯ ನಿರ್ವಹಿಸುತ್ತವೆ. ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಕ್ಷಾರೀಯಾ ಖನಿಜಾಂಶಗಳು ವಿವಿಧ ಅಂಗಾಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಜತೆಗೆ ಕ್ಷಾರೀಯ ಖನಿಜಾಂಶಗಳು ರಕ್ತದ ಕ್ಷಾರೀಯಾ ಮಟ್ಟವನ್ನು ಕಾಪಾಡಿಕೊಳ್ಳುಲು ನೆರವಾಗುತ್ತದೆ. 

ಪಾಲಕ್ ಸೊಪ್ಪು, ಆರೋಗ್ಯ ಲಾಭಗಳು, 
health Benefits, Spinach,

8. ಹೃದಯದ ಆರೋಗ್ಯಕ್ಕೂ ಪಾಲಕ್ ಸೊಪ್ಪು ಪ್ರಯೋಜನಕಾರಿ..ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ.

9. ಗರ್ಭಿಣಿಯರು ಪಾಲಕ್ ಸೊಪ್ಪನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂಗ ಮಗುವಿಗೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಹಾಲು ಕುಡಿಸುವ ತಾಯಿ ಪಾಲಕ್ ಸೊಪ್ಪನ್ನು ಹೆಚ್ಚಾಗಿ ತಿನ್ನಬೇಕು. ಇದರಿಂದ ಹಾಲು ಚೆನ್ನಾಗಿ ವೃದ್ಧಿಯಾಗುತ್ತದೆ. ಮಗುವಿಗೆ ಯಾವುದೇ ರೀತಿಯ ಮೇಲಿನ ಆಹಾರದ ಅವಶ್ಯಕತೆ ಬೇಕೆನಿಸುವುದಿಲ್ಲ.

ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ದಿನದಲ್ಲಿ ಪಾಲಕ್ ಸೊಪ್ಪಿನ ರಸವನ್ನು ಕುಡಿತಾ ಬಂದರೆ ಈ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ಮಕ್ಕಳಲ್ಲಿ ಅಥವಾ ದೊಡ್ಡವರಿಗೆ ನೆನಪಿನ ಶಕ್ತಿ ಹೆಚ್ಚಾಗಬೇಕು. ಅಂದರೆ ಹೆಚ್ಚಾಗಿ ಪಾಲಕ್ ಸೊಪ್ಪು ನೀಡುವುದು ಉತ್ತಮ. ಇದರಿಂದ ಮೆದುಳಿನ ನರಕೋಶಗಳು ವೃದ್ಧಿಯಾಗಿ ನೆನೆಪಿನ ಶಕ್ತಿ ಹೆಚ್ಚಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ