ಒಣದ್ರಾಕ್ಷಿಯ ಆರೋಗ್ಯ ಲಾಭಗಳು

  • by

ಒಣ ದ್ರಾಕ್ಷಿಯ ರುಚಿ ಇಷಷ್ಟವಾಗದೇ ಇರದು. ಅಷ್ಟರ ಮಟ್ಟಿಗೆ ಒಣ ದ್ರಾಕ್ಷಿ ಪ್ರಸಿದ್ಧಿ ಪಡೆದಿದೆ. ಭಾರತೀಯರು ತಮ್ಮ ಆಹಾರದಲ್ಲಿ ಹೆಚ್ಚಾಗಿ ಒಣದ್ರಾಕ್ಷಿಯನ್ನು ಬಳಸುತ್ತಾರೆ. ಸ್ವೀಟ್ ತಯಾರಿಸಲು, ಸೌಂದರ್ಯಕ್ಕೆ ಹಾಗೂ ವಿವಿಧ ಖಾದ್ಯಗಳಿಗೆ ಒಣದ್ರಾಕ್ಷಿಯನ್ನು ಉಪಯೋಗಿಸಲಾಗುತ್ತದೆ. ಒಣದ್ರಾಕ್ಷಿ ಸಾಕಷ್ಟು ಜನಪ್ರಿಯತೆಗೆ ಕಾರಣ ಅಂದ್ರೆ ಇದು ಸಾಕಷ್ಟು ಅಗ್ಗವಾಗಿದೆ. ಎಲ್ಲರಿಗೂ ಕೈಗೆಟುಕುವಂಥದ್ದು. ಒಣದ್ರಾಕ್ಷಿ ತಿನ್ನುವುದರಿಂದ ಹಲವು ಪ್ರಯೋಜನಗಳನ್ನು ಕಾಣಬಹುದು. 

Health benefits , Raisins, 
ಆರೋಗ್ಯ ಪ್ರಯೋಜನಗಳು, ಒಣದ್ರಾಕ್ಷಿ,

ಒಣದ್ರಾಕ್ಷಿ ಎಂದರೇನು? 

ದ್ರಾಕ್ಷಿಯನ್ನು ಒಣಗಿಸುವ ಮೂಲಕ ಒಣದ್ರಾಕ್ಷಿಗಳನ್ನು ತಯಾರಿಸಲಾಗುತ್ತದೆ. ಒಣ ದ್ರಾಕ್ಷಿಯನ್ನು ಗೋಲ್ಡ್ ಕಲರ್, ಹಸಿರು ಮತ್ತು ಕಪ್ಪು ಒಣಗಿದ ದ್ರಾಕ್ಷಿಗಳನ್ನಾಗಿ ಪರಿವರ್ತಿಸಲಾಗುತ್ತದೆ. ಇದು ನೈಸರ್ಗಿಕವಾಗಿ ರುಚಿಯಲ್ಲಿ ಸಿಹಿಯಾಗಿರುತ್ತವೆ. ಮತ್ತು ಪ್ರಪಂಚಾದಾಂದ್ಯತ ಪಾಕ ಪದ್ಧತಿಗಳಲ್ಲಿ ವಿಶೇಷವಾಗಿ ಸಿಹಿ ತಿಂಡಿಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. 

Health benefits , Raisins, 
ಆರೋಗ್ಯ ಪ್ರಯೋಜನಗಳು, ಒಣದ್ರಾಕ್ಷಿ,

ಒಣದ್ರಾಕ್ಷಿಯ ಉಪಯೋಗಗಳು 

ಒಣದ್ರಾಕ್ಷಿ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ. ರಕ್ತದ ನಷ್ಟ, ದೌರ್ಬಲ್ಯ ಹಾಗೂ ಆಯಾಸದಂತಹ ಸಮಸ್ಯೆಗಳಿಗಳನ್ನು ಎದುರಿಸಬೇಕಾಗುತ್ತದೆ. ಅದರೆ ಪ್ರತಿದಿನ ಇದನ್ನು ನಿಯಮಿತವಾಗಿ ತಿನ್ನುವುದರಿಂದ ಕಫ, ಪಿತ್ತರಸ, ಸಮಸ್ಯೆಗಳಿಗೆ ಪರಿಹಾರ ಸೀಗುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. 

ಎನರ್ಜಿಗಾಗಿ ದ್ರಾಕ್ಷಿ ಸೇವನೆ 

ಒಣದ್ರಾಕ್ಷಿಯಲ್ಲಿರುವ ಸಕ್ಕರೆ ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದಾಗಿ, ದೇಹವು ತಕ್ಷಣವೇ ಶಕ್ತಿಯನ್ನು ಪಡೆಯುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಇರುವುದಿಲ್ಲ. ಇದು ಹೃದಯ ರೋಗಿಗಳಿಗೂ ಉತ್ತಮವಾದದ್ದು. 

ಜೀರ್ಣಕ್ರಿಯೆ ಹೆಚ್ಚಳ 

ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚಾಗಿ ಆಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಕೆಲಸ ಮಾಡುತ್ತದೆ. ಮಲಬದ್ಧತೆಯಿಂದ ನೀವು ಬಳಲುತ್ತಿದ್ದರೆ. ಒಣದ್ರಾಕ್ಷಿಗಳನ್ನು ತಿನ್ನಿರಿ. ರಾತ್ರಿ ವೇಳೆ ದ್ರಾಕ್ಷಿ ನೆನೆಸಿಟ್ಟು. ಬೆಳಿಗ್ಗೆ ತಿನ್ನಬೇಕು. 

ಮೂಳೆಗಳನ್ನು ಬಲಪಡಿಸುತ್ತದೆ

ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬೊಜ್ಜು ಹೆಚ್ಚಾಗುವುದಿಲ್ಲ. ಅಂತಹ ಪರಿಸ್ಛಿತಿಯಲ್ಲಿ ಸಕ್ಕರೆಯನ್ನು ತಿನ್ನುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ. 

ಒಣದ್ರಾಕ್ಷಿಯಲ್ಲಿ ಪೋಷಕಾಂಶಗಳೆಷ್ಟಿವೆ

ಒಣದ್ರಾಕ್ಷಿಯಲ್ಲಿ 3.0 ಗ್ರಾಂ ಪ್ರೋಟೀನ್. 79.2 ಗ್ರಾಂ ಕಾರ್ಬೋಹೈಡ್ರೇಟ್. 3.7 ಗ್ರಾಂ ನಾರಿನಾಂಶ, 59.2 ಗ್ರಾಂ ಸಕ್ಕರೆ, 2.3 ಗ್ರಾಂ ವಿಟಮಿನ್ ಸಿ.  0.8 ಮೀ.ಗ್ರಾಂ ನಿಯಾಸಿನ್ , 1.2 ಮಿ. ಗ್ರಾಂ ವಿಟಮಿನ್ ಬಿ-6,, 50.0 ಮಿ.ಗ್ರಾಂ ಕ್ಯಾಲ್ಸಿಯಂ. 1.9 ಮಿ.ಗ್ರಾಂ ಸೋಡಿಯಂ , 1.2 ಮಿ.ಗ್ರಾಂ ಸತು, 1.3 ಮಿ.ಗ್ರಾಂ ತಾಮ್ರ. 0.3 ಮಿ.ಗ್ರಾಂ ಮೆಗ್ನೇಶಿಯಂ ಅಂಶಗಳಿವೆ. 

ಅಲ್ಲದೇ ಒಣದ್ರಾಕ್ಷಿಯಲ್ಲಿ ಪಾಲಿಫೆನಾಲ್ ಇದ್ದು, ಕಣ್ಣಿನ ಪೊರೆ, ಕಣ್ಣಿನ ಕಾಯಿಲೆ, ಮತ್ತು ವಯಸ್ಸಾಗುವಿಕೆಯನ್ನು ಇದು ತಡೆಗಟ್ಟುತ್ತದೆ. ವಾಯು ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.  ಒಣದ್ರಾಕ್ಷಿಯಲ್ಲಿ ಉತ್ತಮ ಮಟ್ಟದ ಕಬ್ಬಿನಾಂಶ ಮತ್ತು. ತಾಮ್ರ , ಪೊಟ್ಯಾಶಿಯಂ, ಮತ್ತು ಮೆಗ್ನೇಶಿಯಂ ಇದ್ದು, ಇದು ಹೊಟ್ಟೆಯಲ್ಲಿ ಆ್ಯಸಿಡಿಟಿ ಸಮಸ್ಯೆಸನ್ನು ಕಾಪಾಡುತ್ತದೆ. 

ಚರ್ಮದ ಆರೋಗ್ಯವನ್ನು ಹೆಚ್ಚಿಸಿ, ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಸೂರ್ಯನ ಕಿರಣಗಳಿಂದಾಗುವ ಆಗುವಂತಹ ಹಾನಿಯನ್ನು ತಡೆಗಟ್ಟುತ್ತದೆ. 

ಮೂಳೆಗಳನ್ನು ಬಲಿಷ್ಟಗೊಳಿಸುತ್ತದೆ

ಮೂಳೆಗಳಿಗೆ ಬೇಕಾಗಿರುವ ಅಂಶ ಒಣದ್ರಾಕ್ಷಿಯಲ್ಲಿ ಹೆಚ್ಚಿದೆ. ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೊರೊನ್ ಎಂಬ ಅಂಶವಿದೆ. ಈ ಪೋಷಕಾಂಶಗಳನ್ನು ದೇಹವು ಬೇಗನೆ ಹೀರಿಕೊಳ್ಳುತ್ತದೆ. ಮತ್ತು ಮೂಳೆಗಳ ಖನಿಜಾಂಶ ಸಾಂದ್ರತೆಯನ್ನು ಸುಧಾರಣೆ ಮಾಡುತ್ತದೆ. 

ಒಣದ್ರಾಕ್ಷಿಯಲ್ಲಿ ಹೆಚ್ಚಾಗಿ ಆ್ಯಂಟಿ ಆಕ್ಯಿಡೆಂಟ್ ಅಂಶ ವಿರುವುದರಿಂದ ಇದು ದೇಹವನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಆ್ಯಂಟಿ ಆಕ್ಸಿಡೆಂಟ್ ಇದು ಯಕೃತ್ ಗೆ ತುಂಬಾ ಉತ್ತಮ. 

ರಕ್ತದ ಒತ್ತಡ ನಿವಾರಣೆ 

ಒಣದ್ರಾಕ್ಷಿ ಸೇವನೆಯಿಂದ ರಕ್ತದ ಒತ್ತಡ ಸಮತೋಲನದಲ್ಲಿಡಲು ಸಾಧ್ಯವಾಗುತ್ತದೆ. ಒಣದ್ರಾಕ್ಷಿಯಲ್ಲಿ ಉತ್ತಮ ಮಟ್ಟದ ನಾರಿನಾಂಶ , ಪೊಟ್ಯಾಶಿಯಂ , ಹಾಗೂ ಆಂಟಿ ಆಂಕ್ಸಿಡೆಂಟ್ ಗಳು ಇದ್ದು, ಇದು ರಕ್ತದೋತ್ತಡವನ್ನು ನಿಯಂತ್ರಣ ಮಾಡುವಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ. 

ಕೊಲೆಸ್ಟ್ರಾಲ್ ಕಡಿಮೆಯಾಗುವುದು

ನೆನೆಸಿದ ಒಣದ್ರಾಕ್ಷಿ ತಿಂದರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಂಟಿ ಆಕ್ಸಿಡೆಂಟ್ ಕಡಿಮೆ ಸಾಂದ್ರತೆಯ ಕೊಲೆಸ್ಟ್ರಾಲ್ ದೇಹದಲ್ಲಿದ್ದರೆ, ಅದು ಹೃದಯಕ್ಕೆ ಅಪಾಯ ತಂದೊಡ್ಡಬಹುದು. ಹಾಗಾಗಿ ಒಣದ್ರಾಕ್ಷಿ ಇವೆಲ್ಲದರಿಂದ ನಿಮ್ಮನ್ನು ಕಾಪಾಡುತ್ತದೆ. 

ಕಣ್ಣಿನ ದೃಷ್ಟಿಗೆ ಒಳ್ಳೆಯದು

ಒಣದ್ರಾಕ್ಷಿಯಲ್ಲಿ ವಿಟಮಿನ್ ಎ ಹೇರಳವಾಗಿ ಇರುವುದರಿಂದ , ಇದು ಕಣ್ಣಿನ ದೃಷ್ಠಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಣ್ಣುಗಳ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.  ಅಲ್ಲದೇ ಇದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ವಿಟಮಿನ್ ಎ ಹಾಗೂ  ಬಿ ಅಂಶಗಳಿವೆ. 

ಒಣದ್ರಾಕ್ಷಿ ಹೇಗೆ ತಿನ್ನಬೇಕು? 

ಒಣದ್ರಾಕ್ಷಿಯನ್ನು ಓಟ್ ಮೀಲ್ ಜತೆಗೆ ಸೇವಿಸಿ. ಪ್ಯಾನ್ ಕೇಕ್.ಗೆ ಇದನ್ನು ಸೇರಿಸಿಕೊಳ್ಳಿ. ಗ್ರೀನ್ ಸಲಾಡ್ ಗೂ ಇದನ್ನು ಬಳಸಬಹುದು. ಖಾರದ ಪದಾರ್ಥಗಳಿಗೆ ಇದನ್ನು ಬಳಸಬಹುದು. 

ಬಾಯಿಯ ದುರ್ವಾಸನೆಯನ್ನು ತಡೆಗಟ್ಟುತ್ತದೆ. ಒಣದ್ರಾಕ್ಷಿ ಬಾಯಿಯ ದುರ್ವಾಸನೆಯನ್ನು ತಡೆಗಟ್ಟುತ್ತದೆ. ಬಹಳಷ್ಟು ಜನರು ಬಾಯಿಯ ದುರ್ವಾಸನೆ ಸಮಸ್ಯೆನ್ನು ಎದುರಿಸುತ್ತಿರುತ್ತಾರೆ. ಒಣದ್ರಾಕ್ಷಿಯಲ್ಲಿರುವ ಬ್ಯಾಕ್ಟೇರಿಯಾ ವಿರೋಧಿ ಗುಣಗಳು ಬಾಯಿಯ ಸ್ವಚ್ಛತೆಯನ್ನು ಕಾಪಾಡುತ್ತವೆ. ಹಾಗೂ ರಾತ್ರಿ ವೇಳೆ ನೆನೆಸಿಟ್ಟ ದ್ರಾಕ್ಷಿ ನೀರನ್ನು ಕುಡಿಯಬಹುದು. ನೆನಸಿಟ್ಟರೆ ಇದರಲ್ಲಿ ಅಧಿಕ ಪೋಷಕಾಂಶ ದೊರೆಯುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ