ಪೈನಾಪಲ್ ಶುಂಠಿ ಜ್ಯೂಸ್ ಕುಡಿದ್ರೆ ಏನೆಲ್ಲಾ ಪ್ರಯೋಜನಗಳು..!

  • by

ಹುಳಿ ಸಿಹಿ ಮಿಶ್ರಣದ ಹಣ್ಣು ಪೈನಾಪಲ್ ಎಲ್ಲರಿಗೂ ಇಷ್ಟವಾಗುತ್ತದೆ, ನೀವು ಸಾಕಷ್ಟು ಬಾರಿ ಅನಾನಸ್ ಹಣ್ಣಿನ ಜ್ಯೂಸ್ ಕುಡಿದಿರಬಹುದು . ಆದ್ರೆ ಶುಂಠಿ ಅನಾನಸ್ ಜ್ಯೂಸ್ ಸೇವಿಸಿರಲಿಕ್ಕಿಲ್ಲ. ನಿಮ್ಮ ಆರೋಗ್ಯಕ್ಕಾಗಿ ಅನಾನಸ್ ಶುಂಠಿ ಜ್ಯೂಸ್ ಅತ್ಯುತ್ತಮ ಎಂದು ಹೇಳಲಾಗುತ್ತದೆ. ಬಾಯಿಗೆ ರುಚಿ ಹೆಚ್ಚಿಸುವುದಷ್ಟೇ ಅಲ್ಲ. ಮನಸ್ಸಿಗೆ ಆಹ್ಲಾದ ನೀಡುತ್ತದೆ. ಅನಾನಸ್ ಶುಂಠಿ ಜ್ಯೂಸ್ ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.


 Health Benefits , Pineapple Juice, ಪೈನಾಪಲ್ ಶುಂಠಿ ಜ್ಯೂಸ್, 
ಆರೋಗ್ಯ ಪ್ರಯೋಜನ

ಜ್ಯೂಸ್ ತಯಾರಿಸುವ ವಿಧಾನ

ಮೊದಲು 3 ಕಪ್ ಕತ್ತರಿಸಿದ ಅನಾನಸ್ , 2 ಇಂಚು ಸಿಪ್ಪೆ ಸುಲಿದ ಶುಂಠಿ ಮತ್ತು ನಿಂಬೆ ಸಣ್ಣ ತುಂಡು ತೆಗೆದುಕೊಂಡು , ನಂತರ ಈ ಎಲ್ಲಾ ವಸ್ತುವನ್ನು ಮಿಕ್ಸಿಗೆ ಹಾಕಿ ಜ್ಯೂಸ್ ತಯಾರಿಸಬಹುದು.

ದೇಹವನ್ನು ಡಿಟಾಕ್ಸ್ ಮಾಡಲು

ಅನಾನಸ್ ಆಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದ್ದು, ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದ ಜೀವಾಣುಗಳನ್ನು ತೆಗೆದು ಹಾಕುವಲ್ಲಿ ನೆರವಾಗುತ್ತದೆ.

ಪೌಷ್ಟಿಕಾಂಶದಿಂದ ಸಮೃದ್ಧ

ಅನಾನಸ್ ಶುಂಠಿ ಜ್ಯೂಸ್ ನಲ್ಲಿ ವಿಟಮಿನ್ ಸಿ, ಬಿ, ಬಿ -6 ಮೆಗ್ನೇಶಿಯಂ ನಂತಹ ಅನೇಕ ಪೋಷಕಾಂಶಗಳು ಹೇರಳವಾಗಿ ಕಂಡು ಬರುತ್ತದೆ. ಇದರಲ್ಲಿ ಬ್ರೊಮೆಲೇನ್ ಎಂಬ ಅಂಶ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಅನಾನಸ್ ನಲ್ಲಿ ಕಂಡು ಬರುವ ಬ್ರೊಮೆಲೈನ್ ಕ್ಯಾನ್ಸರ್ ವಿರುದ್ದ ಹೋರಾಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದದರೆ, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಕೀಮೋಥೆರಪಿಯೊಂದಿಗೆ ಕೆಲಸ ಮಾಡುತ್ತದೆ. ಶೀತವನ್ನು ಹೊಗಲಾಡಿಸಲು ನೆರವಾಗುತ್ತದೆ.


 Health Benefits , Pineapple Juice, ಪೈನಾಪಲ್ ಶುಂಠಿ ಜ್ಯೂಸ್, 
ಆರೋಗ್ಯ ಪ್ರಯೋಜನ

ಅನಾನಸ್ ಶುಂಠಿ ಜ್ಯೂಸ್ ದೇಹವನ್ನು ಬೆಚ್ಚಗಿಡುವಲ್ಲಿ ನೆರವಾಗುತ್ತದೆ. ದೇಹದ ವಿಷವನ್ನು ಹೊರಹಾಕುತ್ತದೆ. ಇನ್ನು ಶೀತ ಉಂಟಾಗಿದ್ದರೆ ಇದ್ರಿಂದ ಪರಿಹಾರ ದೊರೆಯುತ್ತದೆ.

ಅನಾನಸ್ ವಿಟಮಿನ್ ಬಿ 1 , ಬಿ2 , ಬಿ 3 ಹಾಗೂ ಬಿ 5 ಬಿ 6 ಮತ್ತು ಮ್ಯಾಂಗನೀಸ್ , ಪೊಟ್ಯಾಶಿಯಂ , ಬೀಟಾ ಕ್ಯಾರೋಟಿನ್. ಫೋಲಿಕ್ ಆಮ್ಲ ಮತ್ತು ನಾರುಗಳ ರೂಪದಲ್ಲಿ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಇಮ್ಯೂನಿಟಿ ಹೆಚ್ಚಿಸಲು ಸಹಾಯಕಾರಿ

ಪೈನಾಪಲ್ ಜ್ಯೂಸ್ ನಲ್ಲಿ ಅಗತ್ಯ ಪ್ರಮಾಣದ ಆಮೈನೋ ಆಮ್ಲ ಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ ಹೆಚ್ಚಾಗಿರುವುದರಿಂದ ಇದು ಉರಿಯೂತದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನಾನಸ್ ಹಣ್ಣಿನಲ್ಲಿರುವ ಬಿ ಜೀವಸತ್ವಗಳು ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತವೆ. ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಇದರ ಜತೆಯಲ್ಲಿ ಅನಾನಸ್ ನಲ್ಲಿ ಸಿರೋಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಅನಾನಸ್ ನಲ್ಲಿರುವ ಬಿ ಜೀವಸತ್ವಗಳು ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತವೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಅನಾನಸ್ ಜ್ಯೂಸ್ ಉತ್ತಮ ಡಿಟಾರ್ಸ್ ಅಂತಲೇ ಹೇಳಬಹುದು. ಅನಾನಸ್ ಹಣ್ಣು ದೃಷ್ಟಿಗೆ ಪ್ರಯೋಜನಕಾರಿಯಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಬೆಳವಣಿಗೆಯ ಅಪಾಯವನ್ನು ತಡೆಗಟ್ಟುತ್ತದೆ. ಅನನಾಸ್ ಹಣ್ಣಿನ ಜ್ಯೂಸ್ ಹೃದಯಕ್ಕೆ ಒಳ್ಳೆಯದು. ಅನಾನಸ್ ಹಣ್ಣು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ. ಹೃದಯಾಘಾತ ಹಾಗೂ ಪಾರ್ಶ್ವ ವಾಯುಗಳಿಂದ ರಕ್ಷಿಸುತ್ತದೆ.

ಚಿಕ್ಕ ಮಕ್ಕಳ ಗಂಟಲಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಮಾಲೆ, ಯಕೃತ , ಗನೋರಿಯಾ , ಮೂತ್ರ ಕೋಶ , ವ್ಯಾಧಿ, ಹೃದಯ ಸಮಸ್ಯೆಗಳಿಗೆ ಅನಾನಸ್ ಹಣ್ಣು ಹೆಚ್ಚು ಪ್ರಯೋಜನಕಾರಿ ಅಂತಲೇ ಹೇಳಬಹುದು. ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

ಅನಾನಸ್ ಹಣ್ಣಿನಲ್ಲಿ ಹೇರಳವಾಗಿ ಪೊಟ್ಯಾಶಿಯಂ ಮೂತ್ರ ಕಟ್ಟುವಿಕೆ, ಉರಿ ಊತ ಮುಂತಾದ ರೋಗಗಳಿಗೆ ಶಮನಕಾರಿ ಎಂದು ಹೇಳಬಹುದು. ಅಲ್ಲದೇ ಈ ಹಣ್ಣಿನ ರಸವನ್ನು ಕಡ್ಡಿ, ತುರಿಕೆ ಇದ್ದಲ್ಲಿ ಹಚ್ಚಿದರೆ ವಾಸಿಯಾಗುತ್ತದೆ. ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳು ಮೆಣಸಿನಿ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಪಿತ್ತ ದೂರವಾಗುತ್ತದೆ.

ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ. ಪ್ರತಿ ದಿನ ತಾಜಾ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ. ಊಟ ಆದ ಮೇಲೆ ಪೈನಾಪಲ್ ಗೆ ಸ್ವಲ್ಪ ಕರಿಮೆಣಸು ಪುಡಿ, ಉಪ್ಪು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.ಹಣ್ಣಿನ ನಿಯಮಿತ ಸೇವನೆಯು ಗಂಟಲು ಬೇನೆಯಿಂದ ದೂರವಿರಿಸುತ್ತದೆ. ನಿತ್ಯ ಅನಾನಸ್ ಹಣ್ಣು ಸೇವಿಸುವುದರಿಂದ ಪಿತ್ತಕೋಶಕ್ಕೆ ಉತ್ತಮವಾದದ್ದು.


.
ಪೋಷಕಾಂಶಗಳೆಷ್ಟು..?

ಖನಿಜಾಂಶ – 0.4 ಗ್ರಾಂ
ಸಸಾರ ಜನಕ – 0.4 ಗ್ರಾಂ
ತೇವಾಂಶ – 8. 78 ಗ್ರಾಂ
ಫಾಸ್ಪರಸ್ – 9 ಮಿಲಿ ಗ್ರಾಂ
ಕಬ್ಬಿಣ – 1.2 ಮಿಲಿ ಗ್ರಾಂ
ನಿಯಾಸಿಸ್ – 0.1 ಮಿಲಿ ಗ್ರಾಂ.
ಕಾರ್ಬೋಹೈಡ್ರೇಟ್ಸ್ – 19.8 ಗ್ರಾಂ

ಗಮನಿಸಿ :ಅನಾನಸ್ ಹಣ್ಣು ಪಿತ್ತವನ್ನು ಶಮನಗೊಳಿಸುತ್ತದೆ. ಬರಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಾರದು. ಗ್ರಭಿಣಿ ಸ್ತೀಯರು ಅನಾನಸ್ ಹಣ್ಣನ್ನು ಎಂದಿಗೂ ಸೇವಿಸಬೇಡಿ. ಇದು ಗರ್ಭಕ್ಕೆ ಒಳ್ಳೆಯದಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ