ವಿಟಮಿನ್ ಇ -ನಿಮಗೆಷ್ಟು ಗೊತ್ತು..?

 • by

ವಿಟಮಿನ್ ಇ ಬಹು ಗುಣಗಳ ಗಣಿ

ಇನ್ನು ಬಸುರಿಯರಿಗೂ ಬಾಣಂತಿಯರಿಗೂ ವಿಟಮಿನ್ ಈ ಬೇಕೇ ಬೇಕು..! ಆದರೆ ಅವರೂ ಅತಿ ಹೆಚ್ಚಾಗಿ ವಿಟಮಿನ್ ಈ ಸೇವಿಸೋದು ಒಳ್ಳೆಯದಲ್ಲ..

ವಿಟಮಿನ್ ಇ ಕ್ಯಾಪ್ಸೂಲ್ ಗಳ ಬಗ್ಗೆ ನೀವೆಲ್ಲಾ ಕೇಳಿಯೇ ಇರುತ್ತೀರಿ. ಹಲವಾರು ಔಷದೀಯ ಗುಣಗಳನ್ನು ಹೊಂದಿರುವ ಇದು, ತ್ವಚೆಯ , ಕೂದಲಿನ ಹಾಗೂ ಸಂಪೂರ್ಣ ಆರೋಗ್ಯಕ್ಕೂ ಮಿತ ವ್ಯಯದ ಮದ್ದು..
ಇದರಲ್ಲಿ ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಗುಣವಿದೆ.
ಇದು ದೇಹವನ್ನು ರೋಗಗಳಿಂದ ಕಾಪಾಡುತ್ತದೆ ಮತ್ತು, ದೇಹದ ಜೀವಕೋಶಗಳನ್ನು ರಕ್ಷಿಸಲು ಕಾರಣವಾಗುತ್ತದೆ.

ಕೂದಲಿನ ಕಾಳಜಿಗೆ ವಿಟಮಿನ್ ಇ

ಇತ್ತೀಚಿಗಿನ ದಿನಗಳಲ್ಲಿ ವಿಟಮಿನ್ ಇ ಯನ್ನು ಹಲವಾರು ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತಿದೆ.
ಕೂದಲಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ವಿಟಮಿನ್ ಇ ಯುಕ್ತ ಶಾಂಪೂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮಿಟಮಿನ್ ಇ ಯನ್ನು ನಿಮ್ಮ ಹೇರ್ ಆಯಿಲ್ ನಲ್ಲಿ ಮಿಕ್ಸ್ ಮಾಡಿಕೊಂಡು ಬಳಸೋದ್ರಿಂದ ನಿಮ್ಮ ಕೂದಲು ಬಲಗೊಳ್ಳುತ್ತದೆ. ಇದು ಕೂದಲ ಬುಡದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇನ್ನು ನೀವು ವಿಟಮಿನ್ ಇ ಮಾತ್ರೆಗಳನ್ನು ಹೊಟ್ಟೆಗೆ ತೆಗೆದುಕೊಂಡರೂ ಇದೇ ರೀತಿಯ ರಿಸಲ್ಟ್ ಪಡೆಯ ಬಹುದು.

ವಿಟಮಿನ್ ಇ ಚರ್ಮಕ್ಕೆ

ವಿಟಮಿನ್ ಇ ಚರ್ಮಕ್ಕೆ

ಹೆಚ್ಚು ಕಡಿಮೆ ಎಲ್ಲಾ ರೀತಿಯ ಸೌಂದರ್ಯ ವರ್ಧಕ ಕ್ರೀಮ್ ಲೋಷನ್ ಗಳಲ್ಲಿ ವಿಟಮಿನ್ ಇ ಇದ್ದೇ ಇದೆ.
ವಿಟಮಿನ್ ಇ ಚರ್ಮದ ಮೇಲೆ ಒಂದು ರಕ್ಷಣಾ ಕವಚವನ್ನು ಏರ್ಪಡಿಸುತ್ತದೆ. ಇದು ಚರ್ಮದ ತೇವಾಂಶವನ್ನು ಲಾಕ್ ಮಾಡುತ್ತದೆ.
ನಿಮ್ಮ ತ್ವಚೆಯು ಹೆಚ್ಚು ಡ್ರೈ ಆಗಿದ್ದು, ನಿಮಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಲ್ಲಿ ನೀವು ವಿಟಮಿನ್ ಇ ಯ ಕೊರತೆ ಹೊಂದಿದ್ದೀರಿ ಅಂತ ಅರ್ಥ.
ನೀವು ಮಿಟಮಿನ್ ಇ ಯ ಫೇಸ್ ಪ್ಯಾಕ್ ಗಳನ್ನು ಅಥವಾ ಬಾಡೀ ಪ್ಯಾಕ್ ಗಳನ್ನು ಹಾಕಿಕೊಂಡರೆ ನಿಮ್ಮ ತ್ವಚೆ ರಿಪೇರ್ ಆಗುತ್ತದೆ.

ವಿಟಮಿನ್ ಇ ಯುಕ್ತ ಆಹಾರಗಳು

ವಿಟಮಿನ್ ಇ ಯನ್ನು ನೀವು ಕೇವಲ ಕ್ಯಾಪ್ಸೂಲ್ ಮೂಲಕ ಮಾತ್ರವಲ್ಲ ಆಹಾರ ವಸ್ತುಗಳ ಮೂಲಕವೂ ದೇಹಕ್ಕೆ ಸೇರಿಸಿಕೊಳ್ಳಬಹುದು. ಧಾನ್ಯಗಳು, ಸೊಪ್ಪು ತರಕಾರಿಗಳು, ಮಾಂಸಾಹಾರಗಳಲ್ಲಿ ವಿಟಮಿನ್ ಇ ಹೆಚ್ಚಾಗಿದೆ.

ಸೌಂದರ್ಯಕ್ಕೆ ವಿಟಮಿನ್ ಇ

ಸೌಂದರ್ಯಕ್ಕೆ ವಿಟಮಿನ್ ಇ

 1. ನಿಮ್ಮ ಮುಖದಲ್ಲಿ ಮೊಡವೆಯ ಸಮಸ್ಯೆ ಇದ್ದರೆ ನೀವು ಒಂದು ಚಮಚ ಜೇನು ತುಪ್ಪ ಹಾಗೂ ಒಂದು ಚಮಚ ವಿಟಮಿನ್ ಇ ಎಣ್ಣೆಯನ್ನು ಚನ್ನಾಗಿ ಬೆರೆಸಿ ಮುಖದಲ್ಲಿ ಮೊಡವೆಗಳಿರುವ ಕಡೆ ಹಚ್ಚಿಕೊಳ್ಳಿ. ಇದರಿಂದ ಮುಖದ ಮೊಡವೆಗಳು ಕ್ರಮೇಣ ಕಡಿಮೆಯಾಗುತ್ತದೆ.
 2. ಒಡೆದ ತುಟಿಗಳ ಸಮಸ್ಯೆ ಇದ್ದರೆ , ನೀವು ಒಂದು ಚಮಚ ವಿಟಮಿನ್ ಇ ಎಣ್ಣೆಗೆ ಒಂದೆರಡು ಹನಿ ಗ್ಲಿಸರಿನ್ ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಒಡೆದ ತುಟಿಗಳ ಸಮಸ್ಯೆ ಪರಿಹಾರವಾಗುತ್ತದೆ.
  3 ಬೆಳ್ಳನೆ ಮುಖ ಪಡೆಯಲು ಬಯಸುವವರು, ಒಂದೆರಡು ಚಮಚ ಆಲೋವೆರಾ ಜೆಲ್ ಗೆ , ಸ್ವಲ್ಪ ವಿಟಮಿನ್ ಇ ಎಣ್ಣೆ ಸೇರಿಸಿ ಫೇಸ್ ಪ್ಯಾಕ್ ಹಾಕಿಕೊಳ್ಳಬಹುದು . ಇದರಿಂದ ನಿಮ್ಮ ಮುಖಕಾಂತಿ ಬೆಳ್ಳಗಾಗುತ್ತದೆ.
 3. ಡಾರ್ಕ್ ಸರ್ಕಲ್ ನಿವಾರಣೆಗೆ ನೀವು ಒಂದೆರಡು ಹನಿ ವಿಟಮಿನ್ ಈ ಎಣ್ಣೆಗೆ ಸ್ವಲ್ಪ ತೆಂಗಿನ ಎಣ್ಣೆ ಬೆರೆಸಿ ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ. ಇದರಿಂದ ಕ್ರಮೇಣ ನಿಮ್ಮ ಕಣ್ಣಿನ ಕೆಳಗಿನ ಕಪ್ಪು ವರ್ತುಲ ದೂರವಾಗುತ್ತದೆ.

ಇನ್ನು ವಿಟಮಿನ್ ಇ ದೇಹಕ್ಕೆ ಒಳ್ಳೆಯದು ಅಂತ ನೀವು ಮಿತಿ ಮೀರಿ ಅದನ್ನು ತೆಗೆದುಕೊಳ್ಳುವಂತಿಲ್ಲ. ದಿನಕ್ಕೆ ಕೇವಲ 15 ಎಮ್ ಜಿ ಮಾತ್ರಾ ನೀವು ತೆಗೆದುಕೊಳ್ಳಬೇಕು . ಇನ್ನು ವಿಟಮಿನ್ ಇ ದೇಹದಲ್ಲಿ ಹೆಚ್ಚಾದರೆ ಇನ್ನಷ್ಟು ಸೈಡ್ ಎಫೆಕ್ಟ್ ಗಳಿವೆ. ಅವು ಯಾವುದು ಗೊತ್ತಾ..?

 1. ನಿಮಗೆ ಡಯರಿಯಾ ಉಂಟಾಗಬಹುದು.
 2. ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಬಹುದು..
 3. ನಿಮ್ಮ ದೃಷ್ಟಿ ಮಂಜಾಗ ಬಹುದು.
  4.ನಿಮಗೆ ತಲೆನೋವು ಕಾಣಿಸಿಕೊಳ್ಳಬುದು.

ಹಾಗಾಗಿ ನೀವು ಮಿತಿ ಮೀರಿ ವಿಟಮಿನ್ ಈ ಯನ್ನು ಸೇವಿಸ ಬೇಡಿ.

ಇನ್ನು ಬಸುರಿಯರಿಗೂ ಬಾಣಂತಿಯರಿಗೂ ವಿಟಮಿನ್ ಈ ಬೇಕೇ ಬೇಕು..!
ಆದರೆ ಅವರೂ ಅತಿ ಹೆಚ್ಚಾಗಿ ವಿಟಮಿನ್ ಈ ಸೇವಿಸೋದು ಒಳ್ಳೆಯದಲ್ಲ..!

ವಿಟಮಿನ್ ಇ ಹೊಂದಿರುವ ಇನ್ನಿತರ ಆಹಾರಗಳು.

ಗೋಧಿ ಸೂಕ್ಷ್ಮಾಣು ತೈಲ
ಬಾದಾಮಿ
ಆವಕಾಡೊ
ಸೂರ್ಯಕಾಂತಿ ಬೀಜಗಳು
ಪಾಲಕ್ ಸೊಪ್ಪು
ಕಡಲೆ ಕಾಯಿ
ಒಣಗಿದ ಏಪ್ರಿಕಾಟ್
ಕಿವಿ ಫ್ರೂಟ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ