ಬ್ರೇಕ್ ಫಾಸ್ಟ್‌ಗೆ ದೋಸೆ ತಿಂದ್ರೆ ಏನಾಗುತ್ತೆ..?

  • by

ದಕ್ಷಿಣ ಭಾರತದ ಉಪಹಾರಗಳಲ್ಲಿ ಇಡ್ಲಿ, ದೋಸೆ ಮೊದಲ ಸ್ಥಾನ ಪಡೆದುಕೊಂಡಿದೆ. ಬೆಳಿಗ್ಗೆ ಆರೋಗ್ಯಕರವಾದ ಉಪಹಾರವು ಇಡೀ ದಿನ ನಿಮ್ಮನ್ನು ಚುರುಕುಗೊಳಿಸುತ್ತದೆ. ಬೆಳಗಿನ ಉಪಹಾರಗಳಲ್ಲಿ ದೋಸೆ ಕೂಡಾ ಒಂದು. ದೋಸೆಯಲ್ಲಿ ಹಲವಾರು ವೈವಿಧ್ಯಗಳಿದ್ದು. ಕಾಯಿ ದೋಸೆ, ನೀರು ದೋಸೆ, ಉದ್ದಿನ ದೋಸೆ, ಮೆಂತ್ಯಾ ದೋಸೆ ಮೊದಲಾದ ದೋಸೆಗಳನ್ನು ಕಾಣಬಹುದು. ನೀವು ಆರೋಗ್ಯಕರವಾಗಿರಬೇಕಾದರೆ ಬೆಳಗಿನ ಉಪಹಾರಕ್ಕೆ ದೋಸೆ ಆಯ್ಕೆಯಾಗಿರಲಿ.


healthy dosa, weight loss, benefits of dosa, ದೋಸೆ, ಆರೋಗ್ಯ ಪ್ರಯೋಜನಗಳು, ಟಿಪ್ಸ್ ,

ದೋಸೆಯಲ್ಲಿದೆ ಆರೋಗ್ಯದ ಗುಟ್ಟು..!

ದೋಸೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ದೋಸೆಹಿಟ್ಟು ನೆನೆಸಿಟ್ಟ ಬಳಿಕ ಬುರುಗು ಬರಲು ಇದರಲ್ಲಿರುವ ಪ್ರೋಬಯೋಟಿಕ್ಸ್ ಎಂಬ ಕಣಗಳು ಕಾರಣ. ಹೀಗಾಗಿ ಇವು ದೋಸೆಯನ್ನು ಹೆಚ್ಚು ಗರಿ ಗರಿಯಾಗಿಸಲು ನೆರವಾಗುತ್ತದೆ. ಅಲ್ಲದೇ ಇದು ಬೇಗನೆ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ. ಬೆಳಗಿನ ಉಪಹಾರದಲ್ಲಿ ದೋಸೆ ಸೇವಿಸಿದರೆ ಸಾಕು, ಮಧ್ಯಾಹ್ನದ ವರೆಗೂ ಬೇರೆನೂ ತಿನ್ನುವ ಅಗತ್ಯವಿರುವುದಿಲ್ಲ.

ಗರಿ ಗರಿ ದೋಸೆಯಲ್ಲಿದೆ ಪ್ರೋಟೀನ್..!

ದೋಸೆಯಲ್ಲಿ ಕಡಿಮೆ ಪ್ರಮಾಣದ ಕಬ್ಬಿಣ, ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಇದ್ದು, ಸಾಂಬಾರ ಜತೆಗೆ ದೋಸೆ ಸೇವಿಸುವುದರಿಂ ಹೆಚ್ಚಿನ ಪ್ರೋಟೀನ್ ಹಾಗೂ ಖನಿಜಗಳು ದೊರೆಯುತ್ತವೆ. ಅಲ್ಲದೇ ದೋಸೆಯಲ್ಲಿ ಎಣ್ಣೆಯು ಹೆಚ್ಚಾಗಿರುವುದಿಲ್ಲ, ಸಾಮಾನ್ಯವಾಗಿ ದೈಹಿಕ ಕೆಲಸ ಮಾಡುವವರಿಗೆ ಹೆಚ್ಚಿನ ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ದೋಸೆಯಲ್ಲಿ ಉತ್ತಮ ಪೋಷಕಾಂಶಗಳಿವೆ. ದೋಸೆ ಹಿಟ್ಟಿನಲ್ಲಿ ಕೆಲವು ಹಸಿ ತರಕಾರಿಗಳಾದ ಕ್ಯಾರೆಟ್ , ಬೀನ್ಸ್ ಮೊದಲಾದವುಗಳನ್ನು
ಹಾಕಿ ಸವಿಯಬಹುದು.


healthy dosa, weight loss, benefits of dosa, ದೋಸೆ, ಆರೋಗ್ಯ ಪ್ರಯೋಜನಗಳು, ಟಿಪ್ಸ್ ,

ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಗಳ ಅಗತ್ಯವಿರುತ್ತದೆ. ಆದ್ರೆ ಒಂದೇ ಸಾರಿ ಹೆಚ್ಚಿನ ಪ್ರೋಟೀನ್ ಗಳೂ ಆರೋಗ್ಯಕ್ಕೂ ದೊರೆತರೂ ಹಾ
ಹಾನಿಕಾರಕ ಎಂದು ಹೇಳಬಹುದು. ಆದ್ದರಿಂದ ದೋಸೆಯಲ್ಲಿ ದೇಹಕ್ಕೆ ದಿನಕ್ಕೆ ಎಷ್ಟು ಬೇಕೋ ಅಷ್ಟು ಪ್ರೋಟೀನ್ ಗಳು ಇರುವ ಕಾರಣ ಇದು
ಸ್ನಾಯುಗಳ ಆರೋಗ್ಯಕ್ಕೆ ಉತ್ತಮವಾದದ್ದು ಎಂದು ಹೇಳಲಾಗುತ್ತದೆ. ದಿನವೀಡೀ ನಿಮ್ಮ ಶಕ್ತಿಯನ್ನು ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ. ಇದರಲ್ಲಿರುವ ಕಡಿಮೆ ಕ್ಯಾಲೋರಿ ಅಂಶ ಹಾಗೂ ಪಿಷ್ಟ ತೂಕವನ್ನು ಏರಿಸದಿರಲು ನೆರವಾಗುತ್ತವೆ. ಇದೇ ಕಾರಣಕ್ಕೆ ತೂಕ ಇಳಿಸಿಕೊಳ್ಳುವವರಿಗೆ ದೋಸೆ ಉತ್ತಮವಾದ ಆಹಾರ ಎಂದು ಹೇಳಬಹುದು. ಮಧುಮೇಹಿಗಳು ದೋಸೆಯನ್ನು ಸವಿಯಬಹುದು. ನೀವು ಸಹ ಆರೋಗ್ಯಕರ ಉಪಹಾರವನ್ನು ಹೊಂದಲು ಬಯಸಿದರೆ ತಕ್ಷಣ ಆರೋಗ್ಯ ಸ್ನೇಹಿ ದೋಸೆಯನ್ನು ಪ್ರಯತ್ನಿಸಿ.


healthy dosa, weight loss, benefits of dosa, ದೋಸೆ, ಆರೋಗ್ಯ ಪ್ರಯೋಜನಗಳು, ಟಿಪ್ಸ್ ,

ದೋಸೆ ಮಾಡುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ..!

ದೋಸೆ ಮಾಡುವಾಗ ಯಾವಾಗಲೂ ನಾನ್ ಸ್ಟಿಕ್ ಪ್ಯಾನ್ ಬಳಸಿ. ದೋಸೆ ತಯಾರಿಸುವಾಗ ಉದ್ದಿನ ಬೇಳೆಗೆ ಸ್ವಲ್ಪ ಮೆಂತ್ಯಾ ಬೀಜಗಳನ್ನು ಸೇರಿಸಿ, ಇದರಿಂದ ದೋಸೆ ಗರಿಗರಿಯಾಗುವುದಲ್ಲದೇ, ಹೆಚ್ಚು ಮೃದುವಾಗಿರುತ್ತದೆ. ಪ್ಯಾನ್ ಬಿಸಿಯಾದ ನಂತರ , ಅದರ ಮೇಲೆ ಸ್ವಲ್ಪ ನೀರು ಅಥವಾ ಒಂದು ಚಮಚ ಎಣ್ಣೆಯನ್ನು ಹಾಕಿ, ಬಟ್ಟೆಯಿಂದ ಚೆನ್ನಾಗಿ ತವಾ ಮೇಲೆ ಕೈಯಾಡಿಸಿ.ದೋಸೆ ಮಾಡುವ ಮೊದಲು ಪ್ರತಿ ಬಾರಿ ಹೀಗೆ ಮಾಡುವುದರಿಂದ ದೋಸೆ ಪ್ಯಾನ್ ಗೆ ಅಂಟಿಕೊಳ್ಳುವುದಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ