ರೋಗನಿರೋಧಕ ಶಕ್ತಿ ಹೆಚ್ಚಿಸುವ ಜಾಮ್ ಗಳು..!

  • by

ನಮ್ಮ ದೈನಂದಿನ ಆಹಾರಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳು ಮತ್ತು ತರಕಾರಿಗಳನ್ನು ನಾವು ಸೇವಿಸುತ್ತಿದ್ದರೂ, ಕೆಲವೊಮ್ಮೆ ಅನಾರೋಗ್ಯ ಸಮಸ್ಯೆ ಕಾಡಬಹುದು. ಬ್ಯಾಕ್ಟೇರಿಯಾ , ಸೋಂಕು , ಸಾಂಕ್ರಾಮಿಕ ರೋಗಗಳು ಕಾಡಬಹುದು. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ. ಹಣ್ಣು ಹಾಗೂ ತರಕಾರಿಗಳನ್ನು ವಿವಿಧ ರೂಪದಲ್ಲಿ ಆಸ್ವಾಧಿಸಬಹುದು. ಬೇಸಿಗೆಯ ಶಾಖದಿಂದ ರಕ್ಷಿಸುವಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತು ಪಡಿಸುತ್ತದೆ. ವಿವಿಧ ತರಕಾರಿಗಳಿಂದ ಮುರಬ್ಬಾ ತಯಾರಿಸಿ ಸವಿಯಬಹುದು.


health benefits, immunity, booster, murabba, jam, ಆರೋಗ್ಯ ಪ್ರಯೋಜನಗಳು. ರೋಗ ನಿರೋಧಕ ಶಕ್ತಿ, ಮುರಬ್ಬ, ಜಾಮ್ ಗಳು

ಮುರಬ್ಬಾ ಎಂದರೆ ಜಾಮ್ ಅಥವಾ ಸಿಹಿ ಉಪ್ಪಿನಕಾಯಿಯಂತಿರುವ ತಿನಿಸು. ಆಮ್ ಕಾ ಮುರಬ್ಬಾ, ಕ್ಯಾರೆಟ್ ಮುರಬ್ಬಾ, ಆಮ್ಲಾ ಮುರಬ್ಬಾ. ಹೀಗೆ ಅನೇಕ ರೀತಿಯ ಮುರಬ್ಬಾಗಳು ನಾಲಿಕೆಯ ರುಚಿ ಹೆಚ್ಚಿಸುವುದಷ್ಟೇ ಅಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಇವು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯ ವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಬೇಸಿಗೆಯಲ್ಲಿ ಮುರಬ್ಬಾಗಳನ್ನು ಬಳಸುವುದರಿಂದ ಅನೇಕ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ ಜಾಮ್

ಹಳದಿ, ಹಸಿರು ನಿಂಬೆ ಆಕಾರದ ಆಮ್ಲಾ , ವಿಟಮಿನ್ ಸಿ ಅಮೈನೋ ಆಮ್ಲಗಳು, ತಾಮ್ರ, ಸತು, ಖನಿಜಗಳ ಭಂಡಾರವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೃದಯ, ಪಿತ್ತಜನಕಾಂಗದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಇದು ಪ್ರಯೋಜನಕಾರಿಯಾಗಿದೆ.

health benefits, immunity, booster, murabba, jam, ಆರೋಗ್ಯ ಪ್ರಯೋಜನಗಳು. ರೋಗ ನಿರೋಧಕ ಶಕ್ತಿ, ಮುರಬ್ಬ, ಜಾಮ್ ಗಳು

ಆಮ್ಲಾ ಮುರಬ್ಬಾ

ಆಮ್ಲಾ ವಿಟಮಿನ್ ಸಿ ಹೆಚ್ಚಾಗಿದ್ದು, ದೇಹದಲ್ಲಿನ ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಹೀರಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಇದು ಶೀತ ಮತ್ತು ಕಫದಲ್ಲಿ ಪರಿಹಾರ ನೀಡುತ್ತದೆ. ಮತ್ತು ಮೂಳೆಗಳು, ಹಲ್ಲುಗಳು. ಉಗುರುಗಳ ಮತ್ತು ಕೂದಲನ್ನು ಬಲವಾಗಿರಿಸುವುದಲ್ಲದೇ, ಆರೋಗ್ಯವಾಗಿರಿಸುತ್ತದೆ. ಇದರ ಬಳಕೆಯಿಂದ ಕಾಲಜನ್ ಫೈಬರ್ ರಚನೆಗೆ ಸಹಾಯ ಮಾಡುತ್ತದೆ. ಇದು ಕೀಲು ನೋವನ್ನು ನಿವಾರಿಸುತ್ತದೆ. ಜೀರ್ಣಕಾರಿ ಪ್ರಕ್ರಿಯೆಯನ್ನು ಸರಾಗವಾಗಿ ಮಾಡಲು ನೆರವಾಗುತ್ತದೆ. ಹೊಟ್ಟೆ, ನೋವು , ಮಲಬದ್ಧತೆ, ಹೊಟ್ಟೆಯ ಗ್ಯಾಸ್ , ವಾಂತಿ, ತಲೆನೋವು ಮುಂತಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ.

ಮಕ್ಕಳ ಸ್ಮರಣೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ರಕ್ತದ ಕೊರತೆ ಉಂಟಾದಾಗ, ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸುತ್ತದೆ. ಕೂದಲು ಅಕಾಲಿಕ ಬಿಳಿಯಾಗುವುದನ್ನು ತಡೆಗಟ್ಟುತ್ತದೆ. ಕಫ ಹಾಗೂ ಪಿತ್ತ ರಸಕ್ಕೆ ಪರಿಹಾರ ನೀಡುತ್ತದೆ.

ಕ್ಯಾರೆಟ್ ಉಪ್ಪಿನಕಾಯಿ ಅಥವಾ ಜಾಮ್

ಕ್ಯಾರೆಟ್ ನಿಯಮಿತವಾಗಿ ಬಳಸುವುದರಿಂದ ಅಧಿಕ ರಕ್ತದೋತ್ತಡ ನಿವಾರಣೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೀರ್ಘಕಾಲದ ಅನಾರೋಗ್ಯ ಕಾಯಿಲೆಗಳನ್ನು ತಡೆಗಟ್ಟುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆ ಹಾಗೂ ರಕ್ತದ ಕೊರತೆ ಯನ್ನು ನಿವಾರಿಸುತ್ತದೆ. ಹೊಟ್ಟೆಯ ತೊಂದರೆ, ರಾತ್ರಿ ಕುರುಡುತನ ತಡೆಯಲು ಸಹಾಯ ಮಾಡುತ್ತದೆ. ಹಸುವಿನ ಕೊರತೆಯನ್ನು ನೀಗಿಸಲು ನೆರವಾಗುತ್ತದೆ.

health benefits, immunity, booster, murabba, jam, ಆರೋಗ್ಯ ಪ್ರಯೋಜನಗಳು. ರೋಗ ನಿರೋಧಕ ಶಕ್ತಿ, ಮುರಬ್ಬ, ಜಾಮ್ ಗಳು

ಕಚ್ಚಾ ಮಾವು

ಫೀನಾಲಿಕ್ ಎಂಬ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಮಾವಿನ ಜಾಮ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬ್ಯಾಕ್ಟೇರಿಯಾ ಸೋಂಕು , ಮಲಬದ್ಧತೆ , ಅತಿಸಾರ, ಭೇದಿ, ಉಂಟಾದಾಗ ಕಚ್ಚಾ ಮಾವು ಅಥವಾ ಜಾಮ್ ಬಳಕೆ ಮಾಡಬಹುದು.

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಬೀಟಾ ಕ್ಯಾರೋಟಿನ್ , ವಿಟಮಿನ್ ಇ, ಮತ್ತು ಸೆಲೆನಿಯಮ್ ಹೃದ್ರೋಗದಿಂದ ರಕ್ಷಣೆ ನೀಡುತ್ತದೆ. ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹ ಸಹಾಯ ಮಾಡುತ್ತದೆ. ಇದು ಕಬ್ಬಿಣ ಅಂಶವನ್ನು ಒಳಗೊಂಡಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಹೆಚ್ಚಿನ ಕ್ಯಾಲೋರಿ ಹಾಗೂ ಕಾರ್ಬೋಹೈಡ್ರೇಟ್ ಹೊಂದಿರುವ ಮಾವಿನ ಜಾಮ್ ತೂಕ ಹೆಚ್ಚಿಸಲು ಮತ್ತು ದೇಹದಲ್ಲಿ ಆರೋಗ್ಯ ವಾಗಿಡಲು ಬಯಸುವವರಿಗೆ ಪ್ರಯೋಜನಕಾರಿಯಾಗಿದೆ. ಇದು ಶಕ್ತಿ ವರ್ಧಕ ವಾಗಿ ಕಾರ್ಯನಿರ್ವಹಿಸುತ್ತದೆ.


health benefits, immunity, booster, murabba, jam, ಆರೋಗ್ಯ ಪ್ರಯೋಜನಗಳು. ರೋಗ ನಿರೋಧಕ ಶಕ್ತಿ, ಮುರಬ್ಬ, ಜಾಮ್ ಗಳು

ಅಣಿಲೆಕಾಯಿ

ಅಣಿಲೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಗಾಯದ ನಂತರ ಪರಿಹಾರ ಸೀಗುತ್ತೆ. ಇದು ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಹಸಿವು, ಹೊಟ್ಟೆಯಲ್ಲಿ ಹುಳು, ಮತ್ತು ಜೀರ್ಣಕಾರಿ ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಬೆಲ್ಲದೊಂದಿಗೆ ಅಣಿಲೆಕಾಯಿನ್ನು ಸೇವಿಸುವುದರಿಂದ ಸಂಧಿವಾತ ನಿವಾರಿಸಬಹುದಾಗಿದೆ.

ಆ್ಯಪಲ್ ಜಾಮ್

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಪಲ್ ಜಾಮ್ ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಇದು ದೇಹದ ಅಪಸಾಮಾನ್ಯ ಕ್ರಿಯೆ ಹಾಗೂ ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ. ಇದು ತಲೆನೋವು, ಕಿರಿಕಿರಿ, ನಿದ್ರಾ ಹೀನತೆ, ಮರೆವಿನ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ರೋಗಗಳ ಚಿಕಿತ್ಸೆಯಲ್ಲಿ ಪರಿಣಾಮ ಕಾರಿಯಾಗಿದೆ. ಕೂದಲು ಉದರುವುದು, ದೌರ್ಬಲ್ಯ, ಕೂದಲು ಅಕಾಲಿಕ ಬಿಳಿಯಾಗುವುದನ್ನು ತಡೆಗಟ್ಟಲು ಹೆಚ್ಚು ಪರಿಣಾಮಕಾರಿಯಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಇದನ್ನು ಸೋವಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ