ನಿಮ್ಮ ಶಕ್ತಿ ಹೆಚ್ಚಬೇಕಾ? ಸೀಬೆ ಹಣ್ಣಿನ ಜ್ಯೂಸ್ ಕುಡಿಯಿರಿ!

  • by

ಪೇರಳೆ ಅಥವಾ ಸೀಬೆ ಹಣ್ಣು ಚಳಿಗಾಲದ ವಿಶೇಷ ಹಣ್ಣುಗಳಲ್ಲಿ ಒಂದು. ಪ್ರತಿ ಖುತುವಿನಲ್ಲಿ ಈ ಹಣ್ಣು ಹೇರಳವಾಗಿ ದೊರೆಯುತ್ತದೆ. ತಿಳಿ ಹಸಿರು ಬಣ್ಣದ ಪೇರಳೆ ಹಣ್ಣು ಅನೇಕ ಪೋಷಕಾಂಶಗಳನ್ನು ಹಾಗೂ ಗುಣಗಳಿಂದ ಸಮೃದ್ಧವಾಗಿದೆ. ಇದು ವಿಟಮಿನ್ ಸಿ ಯ ಉತ್ತಮ ಮೂಲ ಎಂದೇ ಹೇಳಬಹುದು. ಈ ಹಣ್ಣು ಅಗ್ಗದ ಬೆಲೆಯಲಿಯೂ ದೊರೆಯುತ್ತದೆ. ಅಲ್ಲದೇ ಈ ಹಣ್ಣಿನ ಜ್ಯೂಸ್ ಹಾಗೂ ಎಲೆಗಳಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅಲ್ಲದೇ ಈ ಹಣ್ಣಿನಲ್ಲಿ ಅಗತ್ಯವಿರುವ ಪೋಷಕಾಂಶಗಳು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ ಹೇರಳವಾಗಿದೆ. ಮಲಬದ್ಧತೆ, ಸಕ್ಕರೆ ಕಾಯಿಲೆ, ರಕ್ತದೋತ್ತಡ, ಮತ್ತು ಕಣ್ಣಿನ ಆರೋಗ್ಯಕ್ಕೆ ಹಾಗೂ ಚರ್ಮಕ್ಕೆ ಈ ಹಣ್ಣು ಪ್ರಯೋಜನಕಾರಿಯಾಗಿದೆ. ನಿಮ್ಮ ಆರೋಗ್ಯವನ್ನು ನೈಸರ್ಗಿಕವಾಗಿ ಕಾಪಡಲು ನೀವು ಬಯಸುವೀರಾಯ… ಹಾಗಾದರೆ ಪೇರಳೆ ಹಣ್ಣನ್ನು ನಿಯಮಿತವಾಗಿ ನಿಮ್ಮ ಡಯೆಟ್ ನಲ್ಲಿ ಸೇರಿಸಬಹುದು.


Health Benefits , Guava Fruit juice  ಸೀಬೆ ಹಣ್ಣಿನ ಜ್ಯೂಸ್ , ಆರೋಗ್ಯ ಪ್ರಯೋಜನಗಳು

ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ, ಎ ಮತ್ತು ಇ ಸಮೃದ್ಧವಾಗಿದೆ. ಇದು ಫೈಬರ್ ಮತ್ತು ಖನಿಜಗಳಾದ ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್, ಮೆಗ್ನೇಶಿಯಂ ಮತ್ತು ರಂಜಕದ ಉತ್ತಮ ಮೂಲವಾಗಿದೆ. ಈ ಹಣ್ಣಿನಲ್ಲಿ ಕಿತ್ತಳೆಗಿಂತ 4 ಪಟ್ಟು ವಿಟಮಿನ್ ಸಿ, ಹಾಗೂ ಅನಾನಸ್ ಹಣ್ಣಿಗಿಂತ 4 ಪಟ್ಟು ಹೆಚ್ಚು ಫೈಬರ್ ಇದೆ. .ಭಾರತದಲ್ಲಿ ಪ್ರತಿ ವರ್ಷ 27000 ಸಾವಿರ ಟನ್ ಗಿಂತ ಹೆಚ್ಚು ಗುಲಾಬಿ ಬಣ್ಣದ ಪೇರಲೆ ಹಣ್ಣುಗಳನ್ನು ಉತ್ಪಾದಿಸಲಾಗು್ತದೆ.

ಪೇರಳೆ ಜ್ಯೂಸ್ ನ ಉಪಯೋಗಗಳು..!

ಪೇರಳೆ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹಾಗೂ ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಉಷ್ಣವಲಯದ ಹಣ್ಣು, ನಿಮಗೆ ಗೊತ್ತಿಲ್ಲದ ಪೇರಲೆ ಹಣ್ಣಿನ ಆರೋಗ್ಯ ಪ್ರಯೋಜನಗಳು ಇಲ್ಲಿವೆ.

Health Benefits , Guava Fruit juice  ಸೀಬೆ ಹಣ್ಣಿನ ಜ್ಯೂಸ್ , ಆರೋಗ್ಯ ಪ್ರಯೋಜನಗಳು

ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ.

ಸೀಬೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಇದು ರಕ್ತದೋತ್ತಡ ಕಡಿಮೆಯಾಗುತ್ತದೆ. ಪೋಟ್ಯಾಶಿಯಂ, ಕರಗಬಲ್ಲ ಫೈಬರ್ ಅಂಶ ಮತ್ತು ವಿಟಮಿನ್ ಸಿ ಇದರಲ್ಲಿ ಸಮೃದ್ಧವಾಗಿದೆ. ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶವು ಹೃದಯದ ಬಡಿತ ಹಾಗೂ ಅಧಿಕ ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. ಮತ್ತು ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದು ರಕ್ತನಾಳಗಳ ಆರೋಗ್ಯ ಸುಧಾರಿಸುತ್ತದೆ. ಅಲ್ಲದೇ , ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೇಗೆ ಬಳಸಬೇಕು..?

ಈ ಹಣ್ಣಿನ ರಸ ಅಥವಾ ಜ್ಯೂಸ್ ನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಪೇರಳೆ ಹಣ್ಣಿನ ಸಣ್ಣ ತುಂಡುಗಳಾಗಿ ಕತ್ತರಿಸಿ, ಮೃದು ಹಾಗೂ ನಯವಾದ ತನಕ ಮಿಕ್ಸಿಯಲ್ಲಿ ಹಾಕಿ , ಇದಕ್ಕೆ ಸ್ವಲ್ಪ ಹಾಲು, ಸಕ್ಕರೆ ಹಾಗೂ ಏಲಕ್ಕಿ ಪುಡಿ ಸೇರಿಸಿ. ನಂತರ ಇದನ್ನು 3 ರಿಂದ 4 ನಿಮಿಷಗಳ ಕಾಲ ಮಿಕ್ಸಿಯಲ್ಲಿ ಜ್ಯೂಸ್ ತಯಾರಿಸಿ. ಹೊಟ್ಟೆ, ಶ್ವಾಸಕೋಶ, ಚರ್ಮ, ಸ್ತನ ಮುಂತಾದ ಕ್ಯಾನ್ಸರ್ ತಡೆಗಟ್ಟಲು ಸೀಬೆ ಹಣ್ಣು ಸಹಾಯ ಮಾಡುತ್ತದೆ.


ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ..!

ಜೀರ್ಣಾಂಗ ವ್ಯವಸ್ಥೆಯು ಇಡೀ ದೇಹದ ಕಾರ್ಯವನ್ನು ನಿರ್ಧರಿಸುತ್ತದೆ. ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು , ಪೋಷಕಾಂಶಗಳ ಸಮರ್ಪಕ ಸೇವನೆ, ವಿಶ, ಹಾಗೂ ತ್ಯಾಜ್ಯವನ್ನು ಹೊರಹಾಕುವುದು ಮುಖ್ಯ. ಈ ಹಣ್ಣು ಅತಿಸಾರವನ್ನು ಗುಣಪಡಿಸುತ್ತದೆ. ಅಲ್ಲದೇ ಕರುಳಿನ ಒಳಪದರವನ್ನು ಆರೋಗ್ಯಕರವಾಗಿರಿಸುತ್ತದೆ.

ರಕ್ತದೋತ್ತಡ ನಿಯಂತ್ರಣ

ಈ ಹಣ್ಣಿನಲ್ಲಿ ಫೈಬರ್ ಹೆಚ್ಚಾಗಿರುವ ಕಾರಣ, ಪೇರಲೆ ಹಣ್ಣಿನಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಸಾಮಾನ್ಯ ಸೋಂಕುಗಳನ್ನು ಹಾಗೂ ರೋಗಕಾರಕಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ರೋಗ ನಿರೋಧಕಶಕ್ತಿ ಹೆಚ್ಚುತ್ತದೆ..!

ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಮತ್ತು ಕಿತ್ತಳೆ ಹಣ್ಣಿಗಿಂತ ವಿಟಮಿನ್ ಸಿ ಪ್ರಮಾಣ 4 ಪಟ್ಟು ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದೃಷ್ಟಿಗೆ ಒಳ್ಳೆಯದು

ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಎ ಹೆಚ್ಚಾಗಿರುವುದರಿಂದ ನು ಕಣ್ಣುಗಳಿಗೆ ಒಳ್ಳೆಯದು. ಕಣ್ಣಿನ ಕ್ಷೀಣತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮತ್ತು ದೃಷ್ಟಿ ನಿವಾರಿಸುತ್ತದೆ. ಈ ಸೂಪರ್ ಫುಡ್ ಕಣ್ಣಿನ ಪೊರೆ ಹಾಗೂ ಮ್ಯಾಕ್ಯುಲಾರಿಟಿಗಳ ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಪೇರಲೆ ಹಣ್ಣಿನಲ್ಲಿ ಕ್ಯಾರೆಟ್ ನಷ್ಟು ವಿಟಮಿನ್ ಎ ಸಮೃದ್ಧವಾಗಿಲ್ಲದಿದ್ದರೂ, ಅವು ಇನ್ನು ಪೋಷಕಾಂಶಗಳ ಉತ್ತಮ ಮೂಲವೆಂದೇ ಹೇಳಬಹುದು.

ಒತ್ತಡವನ್ನು ಕಡಿಮೆ ಮಾಡುತ್ತದೆ..!

ಈ ಹಣ್ಣಿನಲ್ಲಿ ಮೇಗ್ನೇಸಿಯಂ ದೇಹದ ಸ್ನಾಯುಗಳು ಮತ್ತು ನರಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತವೆ. ಆದ್ದರಿಂದ ಸೀಬೆ ಹಣ್ಣಿನ ಜ್ಯೂಸ್ ಒತ್ತಡವನ್ನು ನಿವಾರಿಸಲು ಹಾಗೂ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ.

ಬಳಸುವ ವಿಧಾನ ಹೇಗೆ…?

ಉಪ್ಪು, ಸಕ್ಕರೆ ಹಾಗೂ ಕರಿಮೆಣಸು ಮಿಕ್ಸರ್ ಗ್ರೈಂಡ್ ನಲ್ಲಿ ಪೇರಲ ಮತ್ತು ಟೊಮೊಟೋ ತುಂಡುಗಳನ್ನು ಸೇರಿಸಿ, ನೀರು ಸೇರಿಸಿ ಮತ್ತೊಮ್ಮೆ ಸಣ್ಣದಾಗಿ ರುಬ್ಬಿಕೊಳ್ಳಿ. ದೊಡ್ಡ ಬಟ್ಟಲಿನಲ್ಲಿ ಅಥವಾ ಜಗ್ ನಲ್ಲಿ ಜ್ಯೂಸ್ ತೆಗೆದು , ಜರಡಿ ಮಾಡಿ ರಸವನ್ನು ಹೊರತೆಗೆಯಬಹುದು. ಕೊನೆಯಲ್ಲಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಜ್ಯೂಸ್ ನ್ನು ಫ್ರೀಡ್ಜ್ ನಲ್ಲಿ ಕನಿಷ್ಠ 2 ಗಂಟೆಗಳ ಕಾಲ ಇಡಿ. ನಂತರ ಸವಿಯಬಹುದು.

ತೂಕ ನಷ್ಟಕ್ಕೆ ಜ್ಯೂಸ್ ಸಹಕಾರಿ

ಚಯಾಪಚಯ ಕ್ರಿಯೆ ಮತ್ತು ಪ್ರೋಟೀನ್ , ಜೀವಸತ್ವಗಳು ಮತ್ತು ನಾರಿನಂಶ ಹೊಂದಿರುವ ಈ ಹಣ್ಣು ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ. ಪೇರಳೆ ಹಸಿವನ್ನು ಬಹಳ ಸುಲಭವಾಗಿ ಪೂರೈಸುವಲ್ಲಿ ನೆರವಾಗುತ್ತದೆ. ಇದು ದ್ರಾಕ್ಷಿ, ಸೇಬು ಹಾಗೂ ಬಾಳೆಹಣ್ಣು ಮತ್ತು ಇತರ ಹಣ್ಣುಗಳಿಗಿಂತ ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ