ಆರೋಗ್ಯದ ರಹಸ್ಯ ಗ್ರೀನ್ ಕಾಫಿಯಲ್ಲಿದೆ..! -(Health benefits of Green coffee)

  • by

ಚಹಾ ಅಥವಾ ಕಾಫಿ ಎಲ್ಲರ ದಿನಚರಿಯ ಒಂದು ಪ್ರಮುಖ ಭಾಗವಾಗಿದೆ ಎಂದರೆ ತಪ್ಪಾಗಲ್ಲ. ಜನರು ಮೊದಲು ಕಾಫಿಯನ್ನು ರುಚಿಗಾಗಿ ಸೇವಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಸೇವಿಸಲಾಗುತ್ತದೆ. ಇಂದು ಗಿಡಮೂಲಿಕೆ ಮತ್ತು ಹಸಿರು ಚಹಾ ರೂಪದಲ್ಲಿ ಮಾರುಕಟ್ಟೆಯಲ್ಲಿ ಹಲವು ಬಗೆಗಳು ದೊರೆಯುತ್ತವೆ. ನೀವು ಗ್ರೀನ್ ಕಾಫಿ ಹೆಸರನ್ನು ಕೇಳಿರಬಹುದು. ಇದು ತೂಕ ನಷ್ಟ ಹಾಗೂ ಇತರ ಅನೇಕ ಸಮಸ್ಯೆಗಳಿಗೆ ಗ್ರೀನ್ ಕಾಪಿ ಉತ್ತಮ ಆಯ್ಕೆ ಎಂದು ಹೇಳಬಹುದು. ಗ್ರೀನ್ ಕಾಫಿ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಗ್ರೀನ್ ಕಾಫಿಯ ಉಪಯೋಗಗಳ ಬಗ್ಗೆ ಇಲ್ಲಿದೆ ಡೀಟೆಲ್ಸ್.

health-benefits-green-coffee, ಗ್ರೀನ್ ಕಾಫಿ, ಆರೋಗ್ಯ ಪ್ರಯೋಜನ

ಗ್ರೀನ್ ಕಾಫಿಯ ಬೀಜಗಳನ್ನು ತೆಗೆದುಕೊಂಡು ಮೊದಲು ಹುರಿದು ನಂತರ ಸಾಮಾನ್ಯ ಕಾಫಿ ಪುಡಿಯನ್ನಾಗಿ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಹಸಿರು ಅಥವಾ ತಿಳಿ ಡಾರ್ಕ್ ಬಣ್ಣಕ್ಕೆ ಬದಲಾಯಿಸಲಾಗುತ್ತದೆ. ಹಸಿರು ಕಾಫಿಯನ್ನು ದಿನಕ್ಕೆ 200 ರಿಂದ 480 ಮಿ.ಗ್ರಾಂ ಸೇವಿಸಬಹುದು.

ಗ್ರೀನ್ ಕಾಫಿ ಪ್ರಯೋಜನಗಳು ಯಾವುವು..?

ತೂಕ ಇಳಿಸಿಕೊಳ್ಳಲು ಗ್ರೀನ್ ಕಾಫಿ…!

ತೂಕವನ್ನು ಹೆಚ್ಚಿಸಿಕೊಳ್ಳುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು. ಗ್ರೀನ್ ಟೀಯಲ್ಲಿ ಆಂಟಿಬೋಸೆಸಿಟಿ ಗುಣಲಕ್ಷಣಗಳಿವೆ. ಹಸಿರು ಕಾಫಿಯು ಬೊಜ್ಜನ್ನು ನಿವಾರಿಸುವುದಲ್ಲದೇ, ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಮಧುಮೇಹ ಸಮಸ್ಯೆ ನಿವಾರಣೆ

ಗ್ರೀನ್ ಕಾಫಿಯಲ್ಲಿ ಕ್ಲೋರೊಜೆನಿಕ್ ಆಮ್ಲ ಹೆಚ್ಚಾಗಿ ಕಂಡು ಬರುವುದರಿಂದ. ಪ್ರತಿ ದಿನ 3 ರಿಂದ 4 ಕಪ್ ಕಾಫಿ ಸೇವಿಸುವುದರಿಂದ ಟೈಪ್ 2 ಮಧುಮೇಹವನ್ನು ನಿಯಂತ್ರಣ ಮಾಡುತ್ತದೆ.

ತಲೆನೋವು ಸಮಸ್ಯೆ ನಿವಾರಣೆ

ತಲೆನೋವಿನ ಸಮಸ್ಯೆಯನ್ನು ನಿವಾರಿಸಲು ಗ್ರೀನ್ ಕಾಫಿ ಹೆಚ್ಚು ಪ್ರಯೋಜನ ಎಂದು ತಿಳಿದು ಬಂದಿದೆ. ವಾಸ್ತವವಾಗಿ ಎನ್ ಸಿಬಿಐ ವೆಬ್ ಸೈಟ್ ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಗ್ರೀನ್ ಕಾಫಿಯಲ್ಲಿ ಶೇ 1.2 ರಷ್ಟು ಕೆಫೀನ್ ಅಂಶ ಕಂಡು ಬರುತ್ತದೆ. ತಲೆನೋವು ಸ್ವಲ್ಪ ಮಟ್ಟಿಗೆ ನಿವಾರಿಸುತ್ತದೆ. ಕೆಫೀನ್ ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


health-benefits-green-coffee, ಗ್ರೀನ್ ಕಾಫಿ, ಆರೋಗ್ಯ ಪ್ರಯೋಜನ

ಹೃದಯಕ್ಕೆ ಹಸಿರು ಕಾಫಿ ಪ್ರಯೋಜನಗಳು

ಹಸಿರು ಕಾಫಿ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಸಿರು ಕಾಫಿಯಲ್ಲಿ ಅನೇಕ ಆಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ಇವು ಹೃದಯದ ಆರೋಗ್ಯಕ್ಕೆ ಉತ್ತಮವಾದದ್ದು. ಆದ್ಯಾಗ್ಯೂ ಯಾವುದೇ ಗಂಭೀರ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಮೇರೆಗೆ ಕಾಫಿ ಸೇವನೆ ಮಾಡುವುದು ಒಳ್ಳೆಯದು.

ಕೊಲೆಸ್ಟ್ರಾಲ್ ನಿಯಂತ್ರಣ

ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಸಾಮಾನ್ಯ ಸಮಸ್ಯೆಯಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಗ್ರೀನ್ ಕಾಫಿ ನೆರವಾಗುತ್ತದೆ. ಅಲ್ಲದೇ ಗ್ರೀನ್ ಕಾಫಿ ಮೆಮೊರಿ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಕಾಫಿಯಲ್ಲಿ ಕೆಫೀನ್ ಇರುವುದರಿಂದ ಇದು ಏಕಾಗ್ರತೆ, ಮೆಮೂರಿ ಮತ್ತು ಜಾಗರೂಕತೆಯನ್ನು ಹೆಚ್ಚಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.ಗ್ರೀನ್ ಕಾಫಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿರುವುದರಿಂದ ಒತ್ತಡದಿಂದ ರಕ್ಷಿಸುತ್ತದೆ. ಮಧುಮೇಹ ಸೇರಿದಂತೆ ನರಮಂಡಲಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ಹಸಿವು ನಿಯಂತ್ರಣ

ಹಸಿವಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಹಸಿರು ಕಾಫಿ ಅನೇಕ ಪ್ರಯೋಜನಗಳನ್ನು ಪಡೆದುಕೊಂಡಿದೆ. ಹಸಿವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ರಕ್ತದೋತ್ತಡ ನಿವಾರಣೆ

ಅನೇಕ ಸಮಸ್ಯೆಗಳ ನಿವಾರಣೆ ಜತೆಗೆ ಗ್ರೀನ್ ಟೀ ರಕ್ತದೋತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಮೂಳೆಗಳನ್ನು ಬಲಪಡಿಸಲು ಹಸಿರು ಚಹಾವನ್ನು ಬಳಸಲಾಗುತ್ತದೆ. 100 ಗ್ರಾಂ ಹಸಿರು ಕಾಫಿಯಲ್ಲಿ 108 ಮಿ.ಗ್ರಾಂ ಕ್ಯಾಲ್ಸಿಯಂ ಕಂಡು ಬರುತ್ತದೆ. ಹೀಗಾಗಿ ಮೂಳೆಗಳ ಶಕ್ತಿ ಹಾಗೂ ಬೆಳವಣಿಗೆಗೆ ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ನಷ್ಟವಾಗುವುದನ್ನು ನಿವಾರಿಸಲು ಗ್ರೀನ್ ಕಾಫಿ ಸೇವನೆ ಮಾಡುವುದು ಉತ್ತಮ.

ಕೂದಲು ಆರೈಕೆಗೆ ಗ್ರೀನ್ ಕಾಫಿ…!

ಉದ್ದ ಕೂದಲು ಯಾರಿಗೆ ಇಷ್ಟವಿಲ್ಲ.. ಪ್ರತಿಯೊಬ್ಬರು ಉದ್ದ ಕೂಗಲನ್ನು ಬಯಸುತ್ತಾರೆ. ಕೂದಲು ಆರೋಗ್ಯವಾಗಿಡಲು ಗ್ರೀನ್ ಕಾಫಿ ಉತ್ತಮ ಆಯ್ಕೆ ಎಂದು ಹೇಳಬಹುದು. ಕಬ್ಬಿಣ ಹಾಗೂ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಹಸಿರು ಕಾಫಿಯು ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.

ಗ್ರೀನ್ ಕಾಫಿ ಕುಡಿಯುವ ಸರಿಯಾದ ಸಮಯ ಯಾವುದು..?

ಅನೇಕ ಜನರು ಗ್ರೀನ್ ಕಾಫಿಯನ್ನು ಯಾವಾಗ ಬೇಕಾದರೂ ಸೇವಿಸುತ್ತಾರೆ. ಆದರೆ ಗ್ರೀನ್ ಟೀಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಅಥವಾ ಮಧ್ಯಾಹ್ನ ಕುಡಿಯಬಹುದು. ಊಟ ಮಾಡುವ ಅರ್ಧ ಗಂಟೆ ಮೊದಲು ಸೇವಿಸಬಹುದು.

ಗ್ರೀನ್ ಟೀ ಸೈಡ್ ಎಫೆಕ್ಟ್..!

ಗ್ರೀನ್ ಟೀಯಲ್ಲಿ ಕೆಫೀನ್ ಕಂಡು ಬರುತ್ತದೆ. ಹೀಗಾಗಿ ಇದನ್ನು ಹೆಚ್ಚಾಗಿ ಸೇವಿಸುವುದರಿಂದ ನಿದ್ರಾಹೀನತೆ, ಚಡಪಡಿಕೆ ಹಾಗೂ ಹೊಟ್ಟೆ ಉಬ್ಬರ, ವಾಕರಿಕೆ, ಹೃದಯ ಹಾಗೂ ಉಸಿರಾಟದಲ್ಲಿ ಏರುಪೇರು ಹೀಗೆ ನಾನಾ ಸಮಸ್ಯೆಗಳು ಕಾಡಬಹುದು.
ಹಸಿರು ಕಾಫಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಒತ್ತಡ, ರಕ್ತಸ್ರಾವದ ಕಾಯಿಲೆಗಳು ಹಾಗೂ ಅತಿಸಾರ ಮೊದಲಾದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ