ಮಣ್ಣಿನ ಮಡಿಕೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳು..!

  • by

ಬಡವರ ಫ್ರೀಡ್ಜ್ ಎಂದು ಕರೆಯಲ್ಪಡುವ ಮಣ್ಣಿನ ಮಡಿಕೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಎಲ್ಲರಿಗೂ ತಿಳಿದಿದೆ. ನೀರನಿ ಮಕರಂದ ಹೆಚ್ಚಿಸುವುದಲ್ಲದೇ, ಆರೋಗ್ಯಕ್ಕೂ ಬೆಸ್ಟ್ ಎಂದು ಹೇಳಲಾಗುತ್ತದೆ. ನೀವು ಸಹ ಮಣ್ಣಿನ ಮಡಿಕೆಯ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ, ಮಡಕೆಯ ನೀರನ್ನು ಕುಡಿಯಲು ಪ್ರಾರಂಭಿಸುತ್ತೀರಿ. ತಲೆ ಮಾರುಗಳಿಂದ, ಭಾರತೀಯರ ಮನೆಗಳಲ್ಲಿ ನೀರನ್ನು ಸಂಗ್ರಹಿಸಲು ಮಣ್ಣಿನ ಮಡಕೆಗಳನ್ನು ಬಳಸಲಾಗುತ್ತದೆ. ಇಂದಿಗೂ ಅದೇ ಮಣ್ಣಿನಿಂದ ತಯಾರಿಸಿದ ಮಡಿಕೆಯಲ್ಲೇ ನೀರನ್ನು ಕುಡಿಯುವರಿದ್ದಾರೆ. ಮಣ್ಣಿನ ಸುಗಂಧ ಹಾಗೂ ಇದರಲ್ಲಿರುವ ನೀರನ್ನು ಕುಡಿಯುವುದರಿಂದ ಆಗುವ ಸಂತೋಷವೇ ಬೇರೆ. ವಾಸ್ತವವಾಗಿ, ಮಣ್ಣಿನಿಂದ ತಯಾರಿಸಿದ ಮಡಿಕೆಯಲ್ಲಿ ಅನೇಕ ರೀತಿಯ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ. ತಜ್ಞರ ಪ್ರಕಾರ, ಮಡಕೆಯಲ್ಲಿರುವ ನೀರು ಅಮೃತದಂತೆ ಕೆಲಸ ಮಾಡುತ್ತದೆ. ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.

health benefits, drinking water, clay pot, ಮಣ್ಣಿನ ಮಡಿಕೆ, ಆರೋಗ್ಯ ಪ್ರಯೋಜನಗಳು, ನೀರು

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ

ನಿಯಮಿತವಾಗಿ ಮಡಿಕೆ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ. ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರನ್ನು ಸಂಗ್ರಹಿಸುವ ಮೂಲಕ, ಅದರಲ್ಲಿರುವ ಪ್ಲಾಸ್ಟಿಕ್ ನಲ್ಲಿರುವ ನೀರು ಕಲ್ಮಶವಾಗುತ್ತದೆ. ಇದು ನೀರನ್ನು ಅಶುದ್ಧಗೊಳಿಸುತ್ತದೆ.

ಪಿಹೆಚ್ ಸಮತೋಲನವನ್ನು ಕಾಪಾಡುತ್ತದೆ

ಮಣ್ಣಿನ ಮಡಿಕೆ ನೀರನ್ನು ಕುಡಿಯುವುದರಿಂದ ಮತ್ತೊಂದು ಪ್ರಯೋಜನವೆಂದರೆ ಇದು ಕ್ಷಾರೀಯಾ ಗುಣಗಳನ್ನು ಹೊಂದಿದೆ. ಸರಿಯಾದ ಪಿಹೆಚ್ ಸಮತೋಲನವನ್ನು ಒದಗಿಸುತ್ತದೆ. ಈ ನೀರನ್ನು ಕುಡಿಯುವುದರಿಂದ ಆಮ್ಲೀಯತೆಯನ್ನು ನಿಗ್ರಹಿಸಲು ಮತ್ತು ಹೊಟ್ಟೆ ನೋವಿನಿಂದ ಪರಿಹಾರ ನೀಡುತ್ತದೆ.

ಗರ್ಭಿಣಿ ಮಹಿಳೆಯರಿಗೆ ಪ್ರಯೋಜನಕಾರಿ

ಗರ್ಭಿಣಿಯನ್ನು ಫ್ರಿಡ್ಜ್ ನಲ್ಲಿಟ್ಟಿರುವ ಬಾಟಲ್ ನೀರನ್ನು ಕುಡಿಯಬಾರದು. ಏಕೆಂದರೆ ಫ್ರಿಡ್ಜ್ ನಲ್ಲಿ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಣ್ಣಿನ ಮಡಿಕೆಯಲ್ಲಿ ಗರ್ಣಿಣಿಯರು ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದಾಗಿದೆ.

ವಿಷ ಹೀರುವ ಸಾಮರ್ಥ್ಯ ಮಡಕೆಯಲ್ಲಿದೆ

ಮಣ್ಣು ಶುದ್ಧೀಕರಣದ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಎಲ್ಲಾ ವಿಷಕಾರಿ ವಸ್ತುಗಳನ್ನು ಹೀರಿಕೊಳ್ಳುತ್ತದೆ. ಮತ್ತು ಅಗತ್ಯವಿರುವ ಎಲ್ಲಾ ಸೂಕ್ಷ್ಮ ಪೋಷಕಾಂಶಗಳನ್ನ ನೀರಿಗೆ ಸೇರಿಸುತ್ತದೆ. ನೀರನ್ನು ಸರಿಯಾದ ತಾಪಮಾನದಲ್ಲಿ ಇಡುತ್ತದೆ. ತುಂಬಾ ಕೋಲ್ಡ್ ಆಗಿ ಇರುವುದಿಲ್ಲ.


health benefits, drinking water, clay pot, ಮಣ್ಣಿನ ಮಡಿಕೆ, ಆರೋಗ್ಯ ಪ್ರಯೋಜನಗಳು, ನೀರು

ಮಡಕೆಯಲ್ಲಿ ನೀರು ಹೇಗೆ ತಣ್ಣಗಾಗುತ್ತದೆ

ಮಣ್ಣಿವ ಮಡಿಕೆ ಸೂಕ್ಷ್ಮ ರಂಧ್ರಗಳನ್ನು ಹೊಂದಿದೆ. ಈ ರಂಧ್ರಗಳು ಎಷ್ಟು ಸೂಕ್ಷ್ಮವಾಗಿವೆ ಎಂದರೆ ಅವುಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ನೀರಿನ ತಂಪಾಗುಸುವಿಕೆ, ಹಾಗೂ ಆವಿಯಾಗುವಿಕೆಯ ಕ್ರಿಯೆಯನ್ನು ಅವಲಂಬಿಸಿರುತ್ತವೆ. ಮಡಿಕೆಯ ನೀರು ಈ ಸಣ್ಣ ರಂಧ್ರಗಳ ಮೂಲಕ ಸುರಿಯುತ್ತಲೇ ಇರುತ್ತದೆ. ಶಾಖದಿಂದ ನೀರು ಆವಿಯಾಗುತ್ತದೆ. ಆವಿ ಉತ್ಪಾದಿಸಲು ಮಡಕೆ ನೀರಿನಿಂದ ಶಾಖವನ್ನು ತೆಗೆದುಕೊಳ್ಳುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಮಡಿಕೆಯ ಉಷ್ಣತೆಯು ಕಡಿಮೆಯಾಗುತ್ತದೆ. ಮತ್ತು ನೀರು ತಂಪಾಗಿರುತ್ತದೆ. ತಜ್ಞರ ಪ್ರಕಾರ, ಮಣ್ಣಿನ ಮಡಿಕೆಯ ನೀರನ್ನು ಕುಡಿಯುವುದರಿಂದ ಮೆಗ್ನೇಶಿಯಂ ದೊರೆಯುತ್ತದೆ. ಇದು ಖಿನ್ನತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮತ್ತು ಮೂಳೆ ಹಾಗೂ ಕೀಲುಗಳಿಗೆ ಪ್ರಯೋಜನಕಾರಿಯಾದ ಕ್ಯಾಲ್ಸಿಯಂನ ಮೂಲವಾಗಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ದೇಹದ ಗ್ಲೂಕೋಸ್ ಮಟ್ಟವನ್ನು ಹಾಗೇ ಇರಿಸುತ್ತದೆ. ಹಾಗಾಗಿ ಮಣ್ಣಿನ ಮಡಿಕೆಯನ್ನು ಚೆನ್ನಾಗಿ ಸ್ವಚ್ಚಗೊಳಿಸುತ್ತಿರಬೇಕು. ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಸ್ವಚ್ಚಗೊಳಿಸಬೇಕು.

ಹೇಗೆ ನಿರ್ವಹಿಸುವುದು?

ಮಡಿಕೆಯಲ್ಲಿನ ನೀರನ್ನು ದೀರ್ಘಕಾಲ ತಣ್ಣಗಾಗಿಸಲು, ಅದನ್ನು ಒಂದು ಸ್ಥಳದಲ್ಲಿ ಇಡಬೇಕು. ಇದರ ಮುಚ್ಚಿಡಲು ಜೇಡಿಮಣ್ಣಿನ ಮುಚ್ಚಳವನ್ನು ಬಳಸಿ. ಮಡಕೆಯಲ್ಲಿ ಯಾವಾಗಲೂ ನೆರಳು ಇರುವ ಸ್ಥಳದಲ್ಲಿ ಇಡಬೇಕು. ಮತ್ತು ಗಾಳಿ ಕೂಡಾ ಬರುತ್ತದೆ. ಮಡಿಕೆಯನ್ನು ಯಾವಾಗಲೂ ನೆರಳು ಇರುವ ಪ್ರದೇಶದಲ್ಲಿ ಇಡಬೇಕು. ಗಾಳಿ ಚೆನ್ನಾಗಿರಬೇಕು. ಮಡಕೆ ಒಳಗೆ ಯಾವುದೇ ಹುಳ ಅಥವಾ ಇರುವೆ ಹೋಗದಂತೆ ಕಾಪಾಡಿ. ಮಡಿಕೆ ನೀರನ್ನು ಪ್ರತಿ ದಿನ ಬದಲಾಯಿಸಬೇಕು. ಅದು ಸಾಧ್ಯವಾಗದಿದ್ದರೆ ಅದರಲ್ಲಿ ತುಂಬಿದ ನೀರನ್ನು 1 ವಾರಕ್ಕಿಂತ ಹೆಚ್ಚು ಕಾಲ ಬಳಸಬೇಡಿ. ಒಂದು ವಾರದ ನಂತರ ನೀರನ್ನು ಬದಲಾಯಿಸಬೇಕು.ಮಡಕೆ ಸ್ವಚ್ಛಗೊಳಿಸುವಾಗ ಲಘು ಬಿಸಿ ನೀರನ್ನು ಬಳಸಿ. ಮಡಕೆ ಸ್ವಚ್ಛಗೊಳಿಸಿದ ನಂತರ ಬಿಸಿಲಿನಲ್ಲಿ ಒಣಗಿಸಿ, ನಂತರ ಮತ್ತೆ ನೀರು ತುಂಬಿಸಿ.

ಮಡಿಕೆ ಖರೀದಿಸುವಾಗ ಈ ಟಿಪ್ಸ್ ನೆನೆಪಿನಲ್ಲಿಡಿ.

ಮಡಿಕೆ ಖರೀದಿಸುವಾಗ ಒಂದು ನಾಣ್ಯ ತೆಗೆದುಕೊಂಡು ಅದರ ಮೇಲೆ ನಾಣ್ಯದಿಂದ ಗಟ್ಟಿಯಾಗಿ ಶಬ್ದ ಮಾಡಿ. ಹೆಚ್ಚು ಶಬ್ದವಿದ್ದರೆ ಮಡಿಕೆ ಒಡೆಯುವುದಿಲ್ಲ ಎಂದರ್ಥ. ಬಣ್ಣದಿಂದ ಕಲರ್ ಮಾಡಿರುವ ಮಡಿಕೆಗಳನ್ನು ಖರೀದಿಸಬೇಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ