ಪ್ರತಿದಿನ ಮೊಸರನ್ನ ಸೇವಿಸಿದ್ರೆ ,ಏನೆಲ್ಲಾ ಆರೋಗ್ಯ ಪ್ರಯೋಜನಗಳು ಗೊತ್ತಾ!

  • by

ದಕ್ಷಿಣ ಭಾರತದಲ್ಲಿ ಮೊಸರನ್ನ ಸೇವಿಸುವವರ ಸಂಖ್ಯೆ ಜಾಸ್ತಿ ಇದೆ. ಪ್ರತಿ ನಿತ್ಯ ಮೊಸರನ್ನ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಆಗುತ್ತದೆ. ಡಯೆಟ್ ನಲ್ಲಿ ಮೊಸರನ್ನಕ್ಕೆ ವಿಶೇಷ ಸ್ಥಾನ ಪಡೆದುಕೊಂಡಿದೆ. ಮೊಸರನ್ನ ಅಂದರೆ ಕೆಲವರಿಗೆ ಇಷ್ಟಇರಲ್ಲ. ಆದ್ರೆ ಮೊಸರನ್ನ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿವೆ ನಿಮಗೆಷ್ಟು ಗೊತ್ತು? ಇಲ್ಲಿದೆ ಉಪಯೋಗ..!

health benefits ,curd rice, 
ಮೊಸರನ್ನ, ಸೇವನೆ ಆರೋಗ್ಯಕ್ಕೆ ಉತ್ತಮ,

1 ಮೊಸರಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಪ್ರೋಬಯಾಟಿಕ್ ಗಳು ಮತ್ತು ಒಳ್ಳೆಯ ಗುಣಮಟ್ಟದ ಕೊಬ್ಬು ಇದರಲ್ಲಿ ಹೆಚ್ಚಾಗಿದ್ದು, ಮೊಸರನ್ನು ಸೇವನೆ  ಮಾಡಿದರೆ ಅದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬಹುದು. ಮೊಸರನ್ನ  ಒತ್ತಡ ನಿವಾಕರಕ ಎಂದು ಕರೆಯಲಾಗುತ್ತದೆ. ಗಾಯವಾದಾಗ ಅಥವಾ ನೋವಾದಾಗ ಮೆದಳು ಅದನ್ನು ಬೇಗನೆ ಅರಿಯಲು ನೆರವಾಗುತ್ತದೆ. 

ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಪ್ರಮಾಣವು ಅತ್ಯಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಅನಾರೋಗ್ಯದ ವೇಳೆ ಇದು ತುಂಬಾ ಪರಿಣಾಮಕಾರಿ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುತ್ತದೆ. ಅನಾರೋಗ್ಯಕ್ಕೆ ಒಳಗಾದಾಗ ದೇಹಕ್ಕೆ ಬೇಕಾಗುವಂತಹ ಶಕ್ತಿ ನೀಡುವುದು. ಇದನ್ನು ಹೊರತು ಪಡಿಸಿ ಮೊಸರನ್ನ ತಿನ್ನಲು ಹಲವು ರೀತಿಯ ಕಾರಣಗಳು ಇವೆ. ಈ ಆಹಾರವು ನಿಮಗೆ ಗರ್ಭಧರಿಸಲು ಸಹಾಯ ಮಾಡುತ್ತದೆ,. ಮೊಸರನ್ನ ತಿನ್ನಲ ಇನ್ನು ಹಲವಾರು ರೀತಿಯ ಕಾರಣಗಳಿವೆ. ಈ ಆಹಾರವು ನಿಮಗೆ ಗರ್ಭಧರಿಸಲು ನೆರವಾಗುತ್ತದೆ. ಮೊಸರನ್ನಾದಲ್ಲಿ ಉನ್ನತ ಮಟ್ಟದ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟೀನ್ ಇದ್ದು, ನಿಮ್ಮ ಪೋಷಕಾಂಶ ಸೇವನೆ ಹೆಚ್ಚಿಸುತ್ತದೆ. ಖಾರದ ಪದಾರ್ಥ ತಿಂದ ಬಳಿಕ ಮೊಸರನ್ನು ತಿನ್ನುವುದು.

health benefits ,curd rice, 
ಮೊಸರನ್ನ, ಸೇವನೆ ಆರೋಗ್ಯಕ್ಕೆ ಉತ್ತಮ,

ಖಾರದ ಪದಾರ್ಥ ತಿಂದ ಬಳಿಕ ಮೊಸರನ್ನ ತಿನ್ನುವುದು ತುಂಬಾ ಉತ್ತಮ. ಖಾರದ ಆಹಾರ ತಿಂದಾಗ ಉಂಟಾಗುವಂತಹ ಉರಿ ಮತ್ತು ಕಿರಿಕಿರಿಯನ್ನು ಕೇವಲ ಒಂದು ಚಮಚ ಮೊಸರಿನಿಂದ ಕಡಿಮೆ ಮಾಡಬಹುದು. ಮೊಸರು ಮುಖಕ್ಕೆ ಕಾಂತಿ ನೀಡುವ  ಕಾರಣದಿಂದ ಇದನ್ನು ಹಲವು ರೀತಿಯ ಫೇಸ್ ಪ್ಯಾಕ್ ಗಳಲ್ಲಿ ಬಳಸಲಾಗುತ್ತದೆ. ಹೊಟ್ಟೆಯುಬ್ಬರಿಕೆ ಆದರೆ ತಕ್ಷಣಕ್ಕೆ ಮೊಸರನ್ನ ಸೇವಿಸಿ. ಹೊಟ್ಟೆಯುಬ್ಬರಿಕೆ  ಸಮಸ್ಯೆ ತಕ್ಷಣದ ಪರಿಹಾರವೆಂದರೆ ಮೊಸರ್ನನದ ಸೇವನೆ , ಅಜೀರ್ಣತೆ  ಅಥವಾ ಹೊಟ್ಟೆ ಕಟ್ಟಿರುವ ಯಾವುದೇ ಸೂಚನೆ ಕಂಡು ಬಂದರೆ ಮೊದಲು ಮೊಸರನ್ನವನ್ನು ಸೇವಿಸಿ ಬೀಡಬೇಕು.

ಮೊಸರನ್ನ ಆರೋಗ್ಯ ಪ್ರಯೋಜನಗಳು..!

ತೂಕ ಕಳೆದುಕೊಳ್ಳಲು ಮೊಸರನ್ನ ಸಹಾಯಕಾರಿಯಾಗಿದೆ. ಒಂದು ಕಪ್ ನಷ್ಟು ಮೊಸರನ್ನ ಸೇವಿಸಿದರೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಅನಗತ್ಯವಾದ ಹೆಚ್ಚಿನ ಕ್ಯಾಲೋರಿ ಇರುವ ಅನಾರೋಗ್ಯಕರ ಆಹಾರ ಸೇವನೆಯನ್ನು ತಡೆಯುತ್ತದೆ. ಮೊಸರನ್ನ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಹಾಗೂ ಹಲವಾರು ಸೋಂಕುಗಳ ವಿರುದ್ಧ ರಕ್ಷಣೆ ಒದಿಗಿಸುತ್ತದೆ. ಅಲ್ಲದೇ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. 

health benefits ,curd rice, 
ಮೊಸರನ್ನ, ಸೇವನೆ ಆರೋಗ್ಯಕ್ಕೆ ಉತ್ತಮ,

ಸೋಂಕುಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಅಲ್ಲದೇ ದೇಹಕ್ಕೆ ಅಗತ್ಯವಾದ ಹೆಚ್ಚಿನ ಕ್ಯಾಲೋರಿ ಇರುವ ಅನಾರೋಗ್ಯಕರ ಆಹಾರ ಸೇವನೆಯನ್ನು ತಡೆಯುತ್ತದೆ. ಅನ್ನದಿಂದ ತಯಾರಿಸಿದ ಇತರ ಖಾದ್ಯಗಳಾದ ಪಲಾವ್, ಫೀ ರೈಸ್, ಮೊದಲಾದವುಗಳಿಗೆ ಹೋಲಿಸಿದರೆ, ಮೊಸರನ್ನ ದಲ್ಲಿ ಕ್ಯಾಲೋರಿ ಕಡಿಮೆ ಇದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಇದರಲ್ಲಿರುವ ನಗಣ್ಯ ಪ್ರಮಾಣದ ಕ್ಯಾಲೋರಿಗಳಿವೆ. 

ಖುತುಬಂಧದ ಹತ್ತಿರುವಿರುವಂತಹ ಮಹಿಳೆಯರಿಗೆ ಮೊಸರನ್ನ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿರುವ ಉತ್ತಮ ಮಟ್ಟದ ಕ್ಯಾಲ್ಸಿಯಂ ದೇಹಕ್ಕೆ ಸಹಕಾರಿಯಾಗಿದೆ. ಹಾಲಿಗೆ ಹೋಲಿಸಿದರೆ ಮೊಸರು ತುಂಬಾ ಉತ್ತಮ ಆಯ್ಕೆ. ಮೊಸರನ್ನದ ರೂಪದಲ್ಲಿ ಇದನ್ನು ಸೇವಿಸಬಹುದು. 

ಮೊಸರನ್ನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.  ಮೊಸರನ್ನವನ್ನು ಹಾಲು ಹಲ್ಲಿನ ಪುಟ್ಟ ಮಕ್ಕಳಿಗೂ ಸೇವಿಸಲು ನೀಡಬಹುದು. ಮೊಸರನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರ್ಬೋಹೈಡ್ರೇಟ್ ಗಳು ಹಾಗೂ ಪ್ರೋಟೀನ್ ಗಳು ದೇಹದ ಅಗತ್ಯತೆಯನ್ನು ಪೂರೈಸುತ್ತದೆ. ಹಾಗೂ ವಿಶೇಷವಾಗಿ ಖಾರವಾಗಿರುವ ಆಹಾರ ಸೇವನೆ ಬಳಿಕ ಮೊಸರನ್ನು ಸೇವಿಸಿದರೆ ಜೀರ್ಣಕ್ರಿಯೆ ನೆರವಾಗುತ್ತದೆ. ಹಾಗೂ ಮರುದಿನದ ಬಹಿರ್ದೆಸೆಯ ವೇಳೆಯಲ್ಲಿ  ಉರಿಯಾಗದಂತೆ ರಕ್ಷಿಸುತ್ತದೆ. ವಿಶೇಷವಾಗಿ ಮೊಸರಿನ ಸೇವನೆಯಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಇದೇ ಕಾರಣಕ್ಕೆ ಮುಖಕ್ಕೆ ಲೇಪಿಸುವ ಕೆಲವು ಮುಖಲೇಪಗಳಲ್ಲಿ ಮೊಸರನ್ನು ಬಳಸಲಾಗುತ್ತದೆ. 

ಹಾಲಿಗೆ ಹೋಲಿಕೆ ಮಾಡಿದಾಗ ಮೊಸರನ್ನ ಉತ್ತಮವಾದ ಆಯ್ಕೆ. ಮೊಸರನ್ನದ ರೂಪದಲ್ಲಿ ಸೇವಿಸುವುದು ಅತ್ಯುತ್ತಮವಾಗಿದೆ. ಹಾಲು ಕುಡಿದಾಗ ಬಳಿಕ ಎದುರಾಗುವ ಹೊಟ್ಟೆಯ ಭಾರವಾಗುವ ಭಾವನೆ ಅದೇ ಪ್ರಮಾಣದ ಮೊಸರನ್ನ ಸೇವಿಸಿದ ಬಳಿಕ ಎದುರಾಗುವುದಿಲ್ಲ. ಮೊಸರು ಅತಿ ಸುಲಭವಾಗಿ ಹಾಗೂ ಹಾಲಿಗಿಂತಲೂ ಸುಲಭವಾಗಿ ಜೀರ್ಣಿಸಲ್ಪಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ