ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳು,.!

  • by

ತಣ್ಣೀರಿನ ಸ್ನಾನದಿಂದ ಆರೋಗ್ಯದ ಮೇಲಾಗುವ ಪ್ರಯೋಜನ ಒಂದೆರಡಲ್ಲ. ತಣ್ಣೀರು ಸ್ನಾನ ಅಂದ್ರೆ ಅನೇಕರು ದೂರ ಇರುತ್ತಾರೆ. ಬೇಸಿಗೆಗಾಲ, ಚಳಿಗಾಲ ಹಾಗೂ ಮಳೆಗಾಲ ಯಾವುದೇ ಇರಲಿ, ಬಿಸಿ ನೀರಿನ ಸ್ನಾನಕ್ಕೆ ಮೊರೆ ಹೋಗುವರಿದ್ದಾರೆ.  ಆದ್ರೆ ತಣ್ಣೀರಿನ ಸ್ನಾನದಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಅನೇಕ ಅಧ್ಯಯನಗಳು ತಣ್ಣೀರನ್ನು ಬಳಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಿವೆ. 

Health Benefits ,Cold Shower, 
ತಣ್ಣೀರು ಸ್ನಾನ , ಆರೋಗ್ಯ ಪ್ರಯೋಜನಗಳು,
Young woman enjoy shower on white background

ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ವ್ಯಕ್ತಿ ಹೆಚ್ಚು ಜಾಗರೂಕನಾಗುತ್ತಾನೆ. ತಣ್ಣೀರಿನಿಂದ ಸ್ನಾನ ಮಾಡುವುದು ದೇಹದ ಮೇಲೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. 

ತಣ್ಣೀರಿನ ಸ್ನಾನ ಮಾಡುವುದರಿಂದ ಹಸಿವು ಹೆಚ್ಚುತ್ತದೆ. ನಿತ್ಯ ತಣ್ಣೀರು ಸ್ನಾನದಿಂದ ಆರೋಗ್ಯಕ್ಕೆ ಹಲವು ಆರೋಗ್ಯ ಪ್ರಯೋಜನಗಳಿವೆ. ಆಯಾಸ ಕಡಿಮೆಯಾಗುತ್ತದೆಯ ಚರ್ಮದ ರೋಗಗಳು ದೂರವಾಗುತ್ತವೆ. ಪ್ರತಿ ನಿತ್ಯ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ರೋಗಗಳು ದೂರವಾಗುತ್ತವೆ. ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೋಯದು. 

ಸುಸ್ತಾದಾಗ ತಣ್ಣೀರು ಸ್ನಾನ ಮಾಡಿದರೆ, ಸುಸ್ತು ಕಡಿಮೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ಬಿಸಿ ನೀರಿಗಿಂತ ತಣ್ಣೀರು ಸ್ನಾನ ಮಾಡಿದಾಗ ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಒಳ್ಳೆಯದು. ರಕ್ತ ಪರಿಚಲನೆಯ ತೊಂದರೆ ಇರುವವರು, ನಿತ್ಯವು ತಣ್ಣೀರು ಸ್ನಾನ ಮಾಡುವುದು ಉತ್ತಮ. ಇದು ತ್ವಚೆಯ ನಡುವೆ ಇರುವ ರಕ್ತಪರಿಚಲನೆಯ ಸಮಸ್ಯೆಯನ್ನು ನಿವಾರಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಹೆಚ್ಚುತ್ತದೆ. 

ತಣ್ಣೀರು ಸ್ನಾನ ಮಾಡುವುದರಿಂದ ಬಿಳಿ ರಕ್ತ ಕಣಗಳು ಕಾರ್ಯತತ್ಪರಾಗಿ ವೈರಸ್ ವಿರುದ್ಧ ಹೋರಾಡುತ್ತದೆ. ತಣ್ಣೀರು ದೇಹದ ಅಧಿಕ ಕೊಬ್ಬನ್ನು ನಿವಾರಿಸಿ ನಿಮಗೆ ಸುಂದರ ಕಾಯವನ್ನು ನೀಡುತ್ತದೆ. ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ತಣ್ಣೀರು ಸ್ನಾನ ಮಾಡುವುದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಇದ್ರಿಂದ ಒತ್ತಡ ನಿವಾರಣೆಯಾಗುತ್ತದೆ. ಈ ಎಲ್ಲಾ ಕಾರಣಗಳಿಗೆ ತಣ್ಣೀರು ಸ್ನಾನ ಮಾಡಬೇಕು. 

Health Benefits ,Cold Shower, 
ತಣ್ಣೀರು ಸ್ನಾನ , ಆರೋಗ್ಯ ಪ್ರಯೋಜನಗಳು,

ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಇಮ್ಯೂನ್ ಸಿಸ್ಟಮ್ ಹೆಚ್ಚುತ್ತದೆ. ದೇಹದ ಟೆಂಪರೇಚರ್ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನೀವು ವಿಪರೀತ ಬೆವರುತ್ತೀದ್ದೀರಿ ಎಂದರೆ ಬೆವರುವಿಕೆಯನ್ನು ಕಡಿಮೆ ಮಾಡಲು ತಣ್ಣೀರು ಉತ್ತಮ ಮಾರ್ಗವಾಗಿದೆ. 

ಶ್ವಾಸಕೋಶಗಳಿಗೆ ತಣ್ಣೀರು ಉತ್ತಮ ಎಂದು ಹೇಳಬಹುದು. ನಿಮ್ಮ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪಾತ್ರ ವಹಿಸುತ್ತದೆ.  ರಕ್ತ ಪರಿಚಲನೆಯ ತೊಂದರೆ ಇರುವವರು ನಿತ್ಯವು ತಣ್ಣೀರಿನ ಸ್ನಾನ ಮಾಡಬೇಕು. ಇದು ತ್ವಚೆಯ ರಕ್ತ ಪರಿಚಲನೆಯ ಸಮಸ್ಯೆಯನ್ನು ದೂರ ಮಾಡುತ್ತವೆ. 

ಶೀತದಿಂದ ಮುಕ್ತಿ

ತಣ್ಣೀರು ಸ್ನಾನದಿಂದ ದೇಹದ ಒಳಗೆ ತಂಪು ಉಂಟಾಗಿ ಸಾಮಾನ್ಯ ಶೀತದಿಂದ ನಿಮಗೆ ತ್ವರಿತ ಉಪಶಮನ ದೊರೆಯುತ್ತದೆ.

ಇನ್ನು ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಅಲರ್ಜಿ ಸಮಸ್ಯೆ ನಿವಾರಣೆಯಾಗುತ್ತದೆ. ವಿಪರೀತ ಬೆವರುತ್ತಿದ್ದರೆ, ಬೆವರನ್ನು ತಡೆಗಟ್ಟಲು ಕ್ರೀಮ್ ಹಚ್ಚುವ ಮೊದಲು, ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಇದ್ರಿಂದ ಮುಖದ ಕಾಂತಿ ಹೆಚ್ಚುತ್ತದೆ. ತ್ವಚೆಯ ನಡುವೆ ಇರುವ ರಕ್ತ ಪರಿಚಲನೆ ಸಮಸ್ಯೆಯನ್ನು ತಣ್ಣೀರು ಸ್ನಾನ ಮಾಡುವುದರಿಂದ ದೂರವಾಗುತ್ತದೆ.

ಕೂದಲು ಉದರುವ ಹಾಗೂ ಚರ್ಮಕ್ಕೆ ಒಳ್ಳೆಯದು!

ಕೂದಲು, ಮತ್ತು ಚರ್ಮದ ವಿಷಯಕ್ಕೆ ಬಂದರೆ, ನಿಮ್ಮ ತ್ವಚೆಯ ಸೌಂದರ್ಯವನ್ನು ಅತ್ಯಂತ ನೈಸರ್ಗಿಕವಾಗಿ ಮಾಡುತ್ತದೆ. ಕೂದಲನ್ನು ಕಾಪಾಡಿಕೊಳ್ಳುವ ಮತ್ತೊಂದು ನೈಸರ್ಗಿಕ ವಿಧಾನವೆಂದರೆ, ಬಿಸಿ ನೀರು ನಮ್ಮ ಚರ್ಮವನ್ನು ಒಣಗಿಸುವ ಗುಣ ಹೊಂದಿದೆ. ತಣ್ಣೀರನ್ನು ಬಳಸುವುದು ಉತ್ತಮ. ತಣ್ಣೀರು ಚರ್ಮದ ರಕ್ಷಣೆ ಮಾಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ