ಮೆಟ್ಟಿಲು ಹತ್ತುವುದರಿಂದ ಪ್ರಯೋಜನಗಳು..! -(Health Benefits Of Climbing Stairs)

ಮೆಟ್ಟಿಲು ಹತ್ತುವುದರಿಂದ ಆರೋಗ್ಯ ಪ್ರಯೋಜನಗಳೇನು ಎಂಬ ಬಗ್ಗೆ ನಿಮಗೆ ತಿಳಿದಿದೆಯೇ.. ವ್ಯಾಯಾಮ ಮಾಡುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಎಲ್ಲರಿಗೂ ಗೊತ್ತು. ಆದ್ರೆ ಮೆಟ್ಟಿಲು ಅಥವಾ ಸ್ಟೆಪ್ಸ್ ಹತ್ತುವುದರಿಂದ ಸಾಕಷ್ಟು ಲಾಭಗಳಿವೆ ಎಂದು ತುಂಬಾ ಜನರಿಗೆ ಗೊತ್ತಿರುವುದಿಲ್ಲ. ಆದ್ರೆ ಸಾಕಷ್ಟು ಜನರು ಲಿಫ್ಟ್ ಬಳಸುವುದಿಲ್ಲ. ಮೆಟ್ಟಿಲು ಗಳನ್ನು ಹತ್ತಿಯೇ ಆಫೀಸ್ ಗೆ ಹೋಗುತ್ತಾರೆ. ಇದು ನಮ್ಮನ್ನು ಆರೋಗ್ಯವಾಗಿಡಲು ಅತ್ಯುತ್ತಮ ವ್ಯಾಯಾಮವೆಂದು ಪರಿಗಣಿಸಲಾಗಿದೆ. ಮೆಟ್ಟಿಲು ಹತ್ತುವುದರಿಂದ ಎಷ್ಟೆಲ್ಲಾ ಬೆನಿಫಿಟ್ಸ್ ಇದೆ ಎಂಬ ಬಗ್ಗೆ ಡಿಟೇಲ್ಸ್ ಇಲ್ಲಿದೆ.

Health Benefits ,Climbing Stairs,ಆರೋಗ್ಯ ಪ್ರಯೋಜನಗಳು, ಮೆಟ್ಟಿಲು ಹತ್ತುವುದರಿಂದ

1.ಸ್ನಾಯು ಬಲಪಡಿಸುವಲ್ಲಿ ನೆರವಾಗುತ್ತದೆ.
2.ರಕ್ತದೋತ್ತಡ ನಿವಾರಣೆಗೆ ಮೆಟ್ಟಿಲು ಹತ್ತುವುದರಿಂದ ಲಾಭ
3.ದೇಹಕ್ಕೆ ಹೆಚ್ಚಿನ ಆಮ್ಲಜನಕ ಪಡೆಯಲು ನೆರವಾಗುತ್ತದೆ
4.ಮಧುಮೇಹ ರೋಗಿಗಳು ಮೆಟ್ಟಿಲು ಹತ್ತುವುದರಿಂದ ಅನೇಕಪ ಪ್ರಯೋಜನಗಳಿವೆ.
5.ತಲೆನೋವನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ
6.ತೂಕ ನಷ್ಟಕ್ಕೆ ಸಹಕಾರಿಯಾಗಬಲ್ಲದ್ದು
7.ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

Health Benefits ,Climbing Stairs,ಆರೋಗ್ಯ ಪ್ರಯೋಜನಗಳು, ಮೆಟ್ಟಿಲು ಹತ್ತುವುದರಿಂದ

ಇತರ ಪ್ರಯೋಜನಗಳು

ಇನ್ನು ಮೆಟ್ಟಿಲು ಹತ್ತುವುದರಿಂದ ಅನೇಕ ಪ್ರಯೋಜನಗಳಿವೆ. ಪ್ರಪಂಚದಾಂದ್ಯತ ಅನೇಕ ಅಧ್ಯಯನಗಳು ನಡೆದಿದ್ದು , ಸ್ಟೆಪ್ಸ್ ಹತ್ತುವುದರಿಂದ ಇತರೆ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ದಿನಕ್ಕೆ ಎಂಟು ಬಾರಿ ಮೆಟ್ಟಿಲುಗಳನ್ನು ಹತ್ತುವುದರಿಂದ ಸರಾಸರಿ ಮರಣ ಪ್ರಮಾಣ ಶೇ 33 ರಷ್ಟು ಕಡಿಮೆಯಾಗುತ್ತದೆ. ದಿನಕ್ಕೆ ಏಳು ನಿಮಿಷಗಳ ಕಾಲ ಸ್ಟೆಪ್ಸ್ ಹತ್ತುವುದರಿಂದ ಹೃದಯಾಘಾತ ಅಪಾಯವನ್ನು ತಡೆಗಟ್ಟಬಹುದಾಗಿದೆ.ಸರಾಸರಿ ಮಧ್ಯವಯಸ್ಸಿನವರು ತೂಕ ಹೆಚ್ಚಾಗುವುದನ್ನು ತಡೆಯಲು ದಿನಕ್ಕೆ ಕೇವಲ 2 ನಿಮಿಷಗಳ ಕಾಲ ಮೆಟ್ಟಿಲು ಹತ್ತಿದರೆ ಸಾಕು.ತೂಕವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ಮೆಟ್ಟಿಲು ಹತ್ತುವುದನ್ನು ದೈನಂದಿನ ಜೀವನದಲ್ಲಿ ಸುಲಭವಾಗಿ ರೂಢಿಸಿಕೊಳ್ಳಬಹುದು. ಇದನ್ನು ಸಮರ್ಥ ವ್ಯಯಾಮವಾಗಿ ಬಳಸಬಹುದು. ನೀವು ಸಹ ಮೆಟ್ಟಿಲು ಹತ್ತಲು ಇಷ್ಟಪಡುತ್ತಿದ್ದರೆ, ಇದನ್ನು ಅನುಸರಿಸಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಮೆಟ್ಟಿಲು ಹತ್ತುವುದರಿಂದ ಆರೋಗ್ಯ ಸುಧಾರಿಸುತ್ತದೆ ಅಲ್ಲದೇ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಗೂ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೆಟ್ಟಿಲು ಹತ್ತುವುದರಿಂದ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಜನರು ಸಾಮಾನ್ಯವಾಗಿ ಎಷ್ಟು ಸ್ಟೆಪ್ ಹತ್ತಬೇಕು ಎಂದು ಪ್ರಶ್ನಿಸುತ್ತಾರೆ. ಮೆಟ್ಟಿಲು ಹತ್ತುವುದು ಒಂದು ವ್ಯಾಯಾಮ ಎಂದು ಪರಿಗಣಿಸಬೇಕು. ಬೇಗನೇ ತೂಕ ಸಹ ಕಡಿಮೆ ಮಾಡಿಕೊಳ್ಳಬಹುದು. ಉತ್ತಮ ವ್ಯಾಯಾಮಕ್ಕಾಗಿ ಪ್ರತಿ ದಿನ ಕನಿಷ್ಠ ಐದು ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತಿ, ಇಳಿಯುವುದರಿಂದ ನಿಮಗೆ ಚೈತನ್ಯ ಉಂಟು ಮಾಡುತ್ತದೆ. ಎಸ್ಕಲೇಟರ್ ಅಥವಾ ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಹತ್ತುವುದರಿಂದ ಹೆಚ್ಚು ಕೊಬ್ಬನ್ನು ಕಳೆದುಕೊಳ್ಳಬಹುದಾಗಿದೆ. ಮೆಟ್ಟಿಲು ಹತ್ತುವುದರಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಎಂದು ಹೇಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ