ಪೋಷಕಾಂಶಗಳ ಆಗರ ಹೂಕೋಸು..!

  • by

ಹೂಕೋಸು ಬ್ರಾಸೀಕಾ ಜಾತಿಯ ತರಕಾರಿಗಳಲ್ಲಿ ಒಂದು. ಪ್ರಪಂಚದಾದ್ಯಂತ ರುಚಿಗೆ ಹೆಸರುವಾಸಿಯಾದ ಫೂಲ್ ಗೋಬಿ, ಹಲವು ಖಾದ್ಯಗಳಲ್ಲಿ ಬಳಸಲಾಗುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸುವ ಹೂಕೋಸು, ಹಲವು ವಿಶೇಷ ಗುಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದದ್ದು, ರುಚಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೂಕೋಸುಗಳ ಪ್ರಯೋಜನಗಳು ತುಂಬಾ ವಿಶೇಷತೆ ಪಡೆದುಕೊಂಡಿದೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹೂಕೋಸುಗಳ ಉಪಯೋಗಗಳು ಇಲ್ಲಿದೆ ಮಾಹಿತಿ. 

ಆರೋಗ್ಯಕ್ಕೆ ಏಕೆ ಒಳ್ಳೆಯದು ಹೂಕೋಸು..? 

ಹೂಕೋಸಿನಲ್ಲಿ ಕಂಡು ಬರುವ ಪೋಷಕಾಂಶಗಳು ಅತ್ಯಂತ ಪ್ರಯೋಜನಕಾರಿಯಾಗಿವೆ. ಇದು ಎಲ್ಲಾ ರೀತಿಯ ಜೀವಸತ್ವಗಳು , ಮೆಗ್ನೇಶಿಯಂ, ಹಾಗೂ ಪೊಟ್ಯಾಶಿಯಂ ಇದ್ದು, ಹೃದಯದ ಹಾಗೂ ಮನಸ್ಸನ್ನು ಆರೋಗ್ಯವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಅಲದ್ದೇ, ಕೂದಲಿನ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ ಎನ್ನಬಹುದು. 

health benefits , cauliflower, 
ಪೋಷಕಾಂಶ, ಹೂಕೋಸು, ಪ್ರಯೋಜನಗಳು,

ಹೃದಯ ಆರೋಗ್ಯಕ್ಕೆ ಹೂಕೋಸು..!

ಹೂಕೋಸು ಅಧಿಕ ರಕ್ತದೋತ್ತಡವನ್ನು ನಿವಾರಿಸುತ್ತದೆ. ಇದು ಹೃದ್ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ಹೃದಯವನ್ನು ಆರೋಗ್ಯವಾಗಿಡಲು ಪರಿಣಾಮಕಾರಿಯಾಗಿದೆ.  ಅಲ್ಲದೇ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಮೂಳೆಗಳನ್ನು ಬಲಗೊಳಿಸಲು..!

ಹೂಕೋಸುನಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದ್ದು, ಇದು ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ. ಇದು ಹಲ್ಲು ಹಾಗೂ ಮೂಳೆಗಳನ್ನು  ಬಲಗೊಳಿಸುವಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಕೆ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೊಳೆ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ತೂಕವನ್ನು ಕಡಿಮೆ ಮಾಡಲು!

ಹೂಕೋಸು ತೂಕ ಇಳಿಸಿಕೊಳ್ಳಲು ಪ್ರಮುಖ ಪಾತ್ರವಹಿಸುತ್ತದೆ. ಇದು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದ್ಾದು, ತೂಕ ಹೆಚ್ಚಾಗುವ ಬಗ್ಗೆ ಚಿಂತಿಸದೇ ನೀವು ಇದನ್ನು ಸೇವಿಸಬಹುದು. ಇದು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ. ಆದ್ದರಿಂದ ಹೂಕೋಸಿನಲ್ಲಿ ಕೆಲವು ಪ್ರಮಾಣದ ಫೈಬರ್ ಹೆಚ್ಚಾಗಿದ್ದು, ಇದ್ರಿಂದ ಹಸಿವು ಕಡಿಮೆಯಾಗುತ್ತದೆ. ಇದು ತೂಕ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 


health benefits , cauliflower, 
ಪೋಷಕಾಂಶ, ಹೂಕೋಸು, ಪ್ರಯೋಜನಗಳು,

ಉರಿಯೂತ ಕಡಿಮೆ ಮಾಡಲು ಸಹಕಾರಿ!

ಹೂಕೋಸಿನಲ್ಲಿ ಉತ್ಕರ್ಷಣ ನಿರೋಧಗಳು ಹೆಚ್ಚಾಗಿದ್ದು, ಇವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅನೇಕ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಪ್ರಯೋಜನಕಾರಿಯಾಗಿದೆ. ಒತ್ತಡದಿಂದಾಗಿ ಉರಿಯೂತ ಸೇರಿದಂತೆ ಅನೇಕ ಸಮಸ್ಯೆಗಳು ಕಾಡಬಹುದು. ಆದರೆ ಹೂಕೋಸು ಸೇವನೆಯಿಂದ ಈ ಕಾಯಿಲೆಗಳನ್ನ ನಿಯಂತ್ರಿಸಬಹುದು. 

ಮೆದುಳಿಗೆ ಒಳ್ಳೆಯದು..! 

ಹೂಕೋಸು ಮೆದುಳಿಗೆ ಒಳ್ಳೆಯದು.ವಿಟಮಿನ್ ಬಿ ಹೆಚ್ಚಾಗಿರುವುದರಿಂದ  ಆರೋಗ್ಯಕರ ಮಿದುಳು ಹೊಂದಲು ಸಹಾಯ ಮಾಡುತ್ತದೆ. 

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕೋಲೀನ್ ಅಂಶ ಹೂ ಕೋಸಿನಲ್ಲಿ ಹೆಚ್ಚಾಗರುವುದರಿಂದ ಇದು ಪಿತ್ತಜನಕಾಂಗದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ನ್ನು ತಡೆಯಲು ಸಹಾಯ ಮಾಡುತ್ತದೆ.  ಹೂಕೋಸಿನಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಫೈಬರ್ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಒಂದು ದಿನದಲ್ಲಿ  5 ರಿಂದ ೧೦ ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಕರಗಬಲ್ಲ ಫೈಬರ್ 

ಜೀರ್ಣಾಂಗ ವ್ಯವಸ್ಥೆಗೆ 

ಹೂಕೋಸನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಸಂಶೋಧನೆಯೊಂದರ ಪ್ರಕಾರ ,ಮಲಬದ್ಧತೆ , ಮೂಲವ್ಯಾಧಿ , ಕರುಳಿನ ಕ್ಯಾನ್ಸರ್ , ಗ್ಯಾಸ್ಟ್ರಿಕ್ ಹುಣ್ಣು , ಬೊಜ್ಜು ಮುಂತಾದ ಅನೇಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.  Glucosinolate ನಿಂದ ರಚಿತವಾಗಿರುವ Sulforahane ಎಂಬ ವಸ್ತುವು ನಿಮ್ಮ ಹೊಟ್ಟೆಯ ಒಳಭಾಗದ ಮೇಲ್ಮೈಯನ್ನು ರಕ್ಷಿಸುವಲ್ಲಿ ನೆರವಾಗಬಲ್ಲದ್ದು. 

ಹೊಸ

ಮೆದುಳಿನ ಆರೋಗ್ಯ ಹೆಚ್ಚಿಸುವಲ್ಲಿ ಹೂಕೋಸು ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಬಿ ಇವರೆಡು ಇದರಲ್ಲಿ ಹೆಚ್ಚಾಗಿರುವುದರಿಂದ ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ. ಹೂಕೋಸು ಮೆದುಳಿನ ಗ್ರಹಿಕೆಯ ಸಾಮರ್ಥ್ಯವನ್ನು ವೃದ್ಧಿಗೊಳಿಸುತ್ತದೆ. ಸ್ಮರಣಶಕ್ತಿ ಹಾಗೂ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ