ಬಾಳೆಕಾಯಿ ಚಿಪ್ಸ್ ಆರೋಗ್ಯ ಪ್ರಯೋಜನಗಳು..!

  • by

ಬಾಳೆಹಣ್ಣು ಅತ್ಯಂತ ಪೌಷ್ಟಿಕ ಪದಾರ್ಥಗಳಲ್ಲಿ ಒಂದಾಗಿದೆ. ಅನೇಕ ಜನರು ಇದನ್ನು ವಿಭಿನ್ನ ರೀತಿಯಲ್ಲಿ ಸೇವಿಸುತ್ತಾರೆ. ಬಾಳೆಹಣ್ಣಿನಲ್ಲಿ ಸಾಕ್ಟು ಪೊಟ್ಯಾಶಿಯಂ ಮತ್ತು ಫೈಬರ್ ಇದ್ದು, ಇದು ದೇಹಕ್ಕೆ ಸಾಕ್ಟು ಪ್ರಯೋಜನಕಾರಿಯಾಗಿದೆ. ದೇಶದ ಅನೇಕ ಭಾಗಗಳಲ್ಲಿ ಜನರು ಬಾಳೆಯನ್ನೇ  ತರಕಾರಿಯಾಗಿ ಬಳಸಲು, ಹಾಗೂ ತಿನ್ನಲು ಇಷ್ಟಪಡುತ್ತಾರೆ. ಬಾಳೆ ಹಣ್ಣು ಚಿಪ್ಸ್ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸೀಗುತ್ತದೆ. ಇದನ್ನು  ಪೌಷ್ಟಿಕಾಂಶವುಳ್ಳ ಉತ್ತಮ ತಿಂಡಿ ಎಂದು ಪರಿಗಣಿಸಲಾಗಿದೆ. ಇದರ ಪ್ರಯೋಜನಗಳೇನು.. ಬಾಳೆಯಣ್ಣನ್ನು ಯಾವ ರೀತಿ ಖಾದ್ಯಗಳನ್ನಾಗಿ ತಯಾರಿಸಲಾಗುತ್ತದೆ . ಮಾಹಿತಿ ಇಲ್ಲಿದೆ. 


health Benefits ,Banana Chips, 
ಬಾಳೆಕಾಯಿ ಚಿಪ್ಸ್, ಆರೋಗ್ಯ ಪ್ರಯೋಜನಗಳು,

ಪೊಟ್ಯಾಶಿಯಂ 

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಸಾಕಷ್ಟು ಇರುತ್ತದೆ. ೫೦ ಗ್ರಾಂ ಬಾಳೆಹಣ್ಣಿನ ಚಿಪ್ಸ್ ತಿನ್ನುವುದರಿಂದ ನಿಮ್ಮ ದೇಹಕ್ಕೆ ೨೨೫ ಮಿಲಿ ಪ್ಯೊಟ್ಯಾಶಿಯಂ ಸೀಗುತ್ತದೆ. ಪೊಟ್ಯಾಶಿಯಂ ನಮ್ಮ ದೇಹದಲ್ಲಿ ಹೃದಯ ಬಡಿತವನ್ನು ಸಾಮಾನ್ಯವಾಗಿಸುತ್ತದೆ. ಮತ್ತು ದೇಹದ ಎಲ್ಲಾ ಭಾಗಗಳಲ್ಲಿ ನೀರಿನಾಂಶ ಹೆಚ್ಚಿಸುತ್ತದೆ. ಪೊಟ್ಯಾಶಿಯಂ ಕೊರತೆ ಉಂಟಾದರೆ ದೇಹದಲ್ಲಿ ದೌರ್ಬಲ್ಯ, ಆಯಾಸ ಮತ್ತು ನೋವು ಮತ್ತು ಹೆದರಿಕೆ ಉಂಟಾಗುತ್ತದೆ. 

ಫೈಬರ್

ಬಾಳೆಹಣ್ಣು ಫೈಬರ್  ಹೊಂದಿರುತ್ತದೆ. ಫೈಬರ್ ಚಿಪ್ಸ್ ನಲ್ಲಿ ಉತ್ತಮ ಪ್ರಮಾಣದಲ್ಲಿರುತ್ತದೆ. ೫೦ ಗ್ರಾಂ ಬಾಳೆಹಣ್ಣು ಚಿಪ್ಸ್ ನಲ್ಲಿ ನೀವು 3 ಗ್ರಾಂ ಫೈಬರ್ ಪಡೆಯುತ್ತೀರಿ. ಇದು ನಿಮ್ಮ ದೇಹದ ದೈನಂದಿನ ಫೈಬರ್ ನ್ನು  12 ಪ್ರತಿಶತದಷ್ಟು ಫೈಬರ್ ಪೊರೈಸುತ್ತದೆ.  ಫೈಬರ್ ಕರುಳಿನ ತೊಂದರೆಯನ್ನು ಕಡಿಮೆಗೊಳಿಸುತ್ತದೆ. ಬಾಳೆಹಣ್ಣಿನಲ್ಲಿರುವ ಫೈಬರ್ ಅಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಮತ್ತು ಬಾಳೆ ಹಣ್ಣು ಚಿಪ್ಸ್ ತಿನ್ನುವುದು ಪ್ರಯೋಜನಕಾರಿಯಾಗಿದೆ. 


health Benefits ,Banana Chips, 
ಬಾಳೆಕಾಯಿ ಚಿಪ್ಸ್, ಆರೋಗ್ಯ ಪ್ರಯೋಜನಗಳು,

ಕಬ್ಬಿಣ

ಬಾಳೆಹಣ್ಣಿನ ಚಿಪ್ಸ್ ಉತ್ತಮ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ. ಇದು ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ನಿಮ್ಮ ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕವನ್ನು ಒಯ್ಯುತ್ತದೆ. ರಕ್ತಹೀನತೆಯನ್ನು ಹೆಚ್ಚಿಸುವ ಗುಣ ಇದರಲ್ಲಿದೆ. ಕಬ್ಬಿಣ ಅಂಶ ಇದರಲ್ಲಿ ಹೆಚ್ಚಿರುವುದರಿಂದ ಚಯಾಪಚಯಕ್ರಿಯೆಯನ್ನು ಹೆಚ್ಚಿಸುತ್ತದೆ. 120 ಗ್ರಾಂ ಬಾಳೆ ಹಣ್ಣು ಚಿಪ್ಸ್ ತಿನ್ನುವುದರಿಂದ 1.4 ಮಿ. ಗ್ರಾಂ ಕಬ್ಬಿಣ ಸೀಗುತ್ತದೆ. 

ಗಮನಿಸಿ 

ಬಾಳೆಹಣ್ಣಿನ ಚಿಪ್ಸ್ ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಎಣ್ಣೆಯಲ್ಲಿ ಇದನ್ನು ಕರಿಯುವುದರಿಂದ ಕೊಬ್ಬು ಹೆಚ್ಚಾಗಿರುತ್ತದೆ. 30 ಗ್ರಾಂ ಬಾಳೆಹಣ್ಣಿನ ಚಿಪ್ಸ್ 9.53 ಗ್ರಾಂ ಕೊಬ್ಬನ್ನು ಹೊಂದಿದೆ. ಹಾಗಾಗಿ ಸ್ಯಾಚುರೇಟೆಡ್ ಕೊಬ್ಬು ನಿಮ್ಮ ದೇಹಕ್ಕೆ ಹಾನಿಯನುಂಟು ಮಾಡಬಹುದು. ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರು , ಬೊಜ್ಜು ಹಾಗೂ ಹೃದಯದ ತೊಂದರೆಗಳನ್ನು ಹೆಚ್ಚಾಗಿರುವವರು ಇದನ್ನು ಹೆಚ್ಚಾಗಿ ಸೇವಿಸಬಾರದು. 

ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ

ಬಾಳೆಹಣ್ಣು ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿದೆ. ಈ ಚಿಪ್ಸ್ ತಯಾರಿಸಿದ ನಂತರ ಅದು ನಿಮ್ಮನ್ನು ಸುಸ್ಥಿತಿಯಲ್ಲಿಡುತ್ತದೆ. ನೈಸರ್ಗಿಕ ಸಕ್ಕರೆ ಉತ್ತಮ ಶಕ್ತಿಯ ಮೂಲವಾಗಿದೆ. ಸುಮಾರು 50 ಗ್ರಾಂ ಚಿಪ್ಸ್ ತಿನ್ನುವುದರಿಂದ, ನಿಮ್ಮ ದೇಹವು 12 ಗ್ರಾಂ ಸಕ್ಕರೆಯನ್ನು ಪಡೆಯುತ್ತದೆ. 

ಚಿಪ್ಸ್ ರುಚಿಯನ್ನು ಹೆಚ್ಚಿಸಲು ಕೆಲಮೊಮ್ಮೆ ಚಿಪ್ಸ್ ನಲ್ಲಿ ಸಕ್ಕರೆಯನ್ನು ಬೆರೆಸಲಾಗುತ್ತದೆ. ಇದು ಕ್ಯಾಲೋರಿ ಹೆಚ್ಚಳವಾಗಬಹುದು. ನೀವು ಇದನ್ನು ಅಧಿಕವಾಗಿ ಪ್ರತಿ ದಿನ ಸೇವಿಸಿದರೆ ಮಧುಮೇಹ, ಬೊಜ್ಜು ಹೆಚ್ಚಾಗಬಹುದು. 

ತೂಕ ಇಳಿಸಲು

ತೂಕ ಇಳಿಸಲು ಬಾಳೆಹಣ್ಣನ್ನು ಬಳಕೆ ಮಾಡಲಾಗುತ್ತದೆ.  ಸ್ಥೂಲ ಕಾಯದವರು ದೇಹದ ತೂಕ ಇಳಿಸಬೇಕೆಂದಿದ್ದರೆ ಕೆಂಪು ಬಾಳೆ ಹಣ್ಣು ಸಾಕಷ್ಟು ಸೇವಿಸಿ. ಇದರಲ್ಲಿರುವ ಕಾರ್ಬೋ ಹೈಡ್ರೇಟ್ ಅಂಶ ನಮ್ಮ ನಾಲಿಗೆ ಚಪಲಕ್ಕೂ ಕಡಿವಾಣ ಹಾಕುತ್ತದೆ.


health Benefits ,Banana Chips, 
ಬಾಳೆಕಾಯಿ ಚಿಪ್ಸ್, ಆರೋಗ್ಯ ಪ್ರಯೋಜನಗಳು,

ಮೂತ್ರಪಿಂಡದ ಸಮಸ್ಯೆಗೆ

ಮೂತ್ರಪಿಂಡದ ಕಲ್ಲು ಸಮಸ್ಯೆ ಬಾರದಂತೆ ತಡೆಯಲು ಪೊಟೇಷಿಯಂ ಅಂಶವಿರುವ ಆಹಾರ ಸೇವನೆ ಮಾಡಬೇಕು.   ಇದರಲ್ಲಿ ಪೊಟೇಷಿಯಂ ಜತೆಗೆ ಸಾಕಷ್ಟು ಕ್ಯಾಲ್ಶಿಯಂ ಅಂಶವಿದ್ದು, ಎಲುಬುಗಳ ಬೆಳವಣಿಗೆಗೂ ಸಹಕಾರಿ.

ಧೂಮಪಾನ ಬಿಡಿಸಲು

ಪೊಟೇಷಿಯಂ ಅಂಶ ಧೂಮಪಾನಿಗಳ ಮನಸ್ಸು ಹೆಚ್ಚು ಆ ಕಡೆಗೆ ಸೆಳೆಯದಂತೆ ತಡೆಯುತ್ತದೆ. ಮಾನಸಿಕವಾಗಿ ಶಕ್ತಿ ನೀಡುವುದರಿಂದ ಧೂಮಪಾನ ಮಾಡಬೇಕೆಂದು ನಿಮಗನಿಸದು.

ಚರ್ಮ

ಕೆಂಪು ಬಾಳೆಹಣ್ಣು ಸೇವನೆ ಅಥವಾ ಚರ್ಮಕ್ಕೆ ಬಾಳೆ ಹಣ್ಣು ಲೇಪಿಸಿಕೊಳ್ಳುವುದು ಉತ್ತಮ. ಸ್ವಲ್ಪ ಓಟ್ಸ್ ಪುಡಿ ಮತ್ತು ಜೇನು ತುಪ್ಪದ ಜತೆಗೆ ಕೆಂಪು ಬಾಳೆ ಹಣ್ಣನ್ನು ಕಿವುಚಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು.

ರಕ್ತ ಶುದ್ದೀಕರಿಸಲು

ಈ ಬಾಳೆಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುವುದರಿಂದ ರಕ್ತ ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವುದು.

ಬಾಳೆಹಣ್ಣಿನಿಂದ ಮಾಡಬಹುದಾದ ವಿವಿಧ ಖಾದ್ಯಗಳು 

ಬಾಳೆಕಾಯಿ ಕಟ್ಲೆಟ್..!

ಆಲೂಗಡ್ಡೆ ಮತ್ತು ಬಾಳೆಕಾಯಿಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿ ಇಡಬೇಕು. ನಂತರ ಹಸಿ ಬಟಾಣೆಯನ್ನು ಬೇಯಿಸಿ ಒರಳಿನಲ್ಲಿ ಜಜ್ಜಿ ಇಡಿ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿರಿ. 

ಈ ಎಲ್ಲಾ ವಸ್ತುಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಮಿಶ್ರಮಾಡಿ, ಖಾರದ ಪುಡಿ, ರುಚಿಗೆ ಬೇಕಾಗುವಷ್ಟು ಉಪ್ಪಿನ ಪುಡಿ ,ನಿಂಬೆ ರಸ,ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹೂರಣಕ್ಕೆ ಸೇರಿಸಿ, ಚೆನ್ನಾಗಿ ಕಲೆಸಿರಿ,ಕಟ್ಲೆಟ್ ಆಕಾರಕ್ಕೆ ತಟ್ಟಿಕೊಂಡು ಎಣ್ಣೆಯಲ್ಲ್ ಹಾಕಿ ಕರಿಯಿರಿ.

ಬಾಳೆಹಣ್ಣಿನ ಚಿತ್ರಾನ್ನ..!

ಬಾಳೆಹಣ್ಣಿನ ಚಿತ್ರಾನ್ನ ಸಹ ತಯಾರಿಸಬಹುದು. ತಯಾರಿಸುವ ವಿಧಾನ ಇಲ್ಲಿದೆ. 

ದೊಡ್ಡ ಬಾಳೆಕಾಯಿಯನ್ನು ಸಿಪ್ಪೆ ತೆಗೆಯದೆ ಹಾಗೇ ಬೇಯಿಸಿ. ಇದು ಬೆಂದ ನಂತರ ಸುಲಭವಾಗಿ ಸಿಪ್ಪೆ ತೆಗೆಯಬಹುದು. ಸಿಪ್ಪೆ ತೆಗೆದು ಇದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಇಟ್ಟು, ಅರಸಿನ ಉಪ್ಪು ಹಾಕಿ. ಇದಕ್ಕೆ ಪುಡಿ ಮಾಡಿದ ಬಾಳೆಕಾಯಿಯನ್ನು ಹಾಕಿ ತಿರುವಿಕೊಂಡರೆ ಬಾಳೆಕಾಯಿಯ ಚಿತ್ರಾನ್ನ ಸವಿಯಲು ಸಿದ್ಧ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ