ತಲೆ ಹೊಟ್ಟು, ತಲೆ ತುರಿಕೆಗೆ ಮನೆ ಮದ್ದುಗಳು..!

  • by

ಡ್ಯಾಂಡ್ರಫ್ ನಿಂದ ಉಂಟಾಗುವ ತಲೆ ತುರಿಕೆಯ ಸಮಸ್ಯೆಯಿಂದ ತುಂಬಾ ಜನರು ಮುಜುಗರಕ್ಕೆ ಒಳಗಾಗುತ್ತಾರೆ, ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆಯಿಂದ ನೀವು ತೊಂದರೆ ಪಡುತ್ತಿದ್ದರೆ. ಮನೆಯಲ್ಲೇ ತಯಾರಿಸಿದ ಕೆಲವು ಹೇರ್ ಪ್ಯಾಕ್ ಗಳನ್ನು ಬಳಸಬಹುದು. ಹೆಚ್ಚಿನ ಜನರು ಮಳೆಗಾಲದಲ್ಲಿ ಕೂದಲು ತಲೆಹೊಟ್ಟು ತೊಂದರೆ ಒಳಗಾಗುತ್ತಾರೆ. ಈ ಕಾರಣದಿಂದಾಗಿ ಕೂದಲು ಉದುರುವುದು ಮಾತ್ರವಲ್ಲದೇ, ತಲೆ ತುರಿಕೆಗೆ ಕಾರಣವಾಗುತ್ತದೆ. ಆದರೆ ಇದಕ್ಕಾಗಿ ಯೋಚಿಸಬೇಕಿಲ್ಲ. ಈ ಪರಿಹಾರಗಳನ್ನು ಉಪಯೋಗಿಸಿ ಡ್ಯಾಂಡ್ರಫ್ ಸಮಸ್ಯೆ ಹಾಗೂ ತಲೆ ತುರಿಕೆ ಸಮಸ್ಯೆ ನಿವಾರಿಸಬಹುದು.

hair pack remedies, dandruffಡ್ಯಾಂಡ್ರಫ್ ಸಮಸ್ಯೆ, ಹೇರ್ ಪ್ಯಾಕ್, ಮನೆ ಮದ್ದು

ತಲೆ ಹೊಟ್ಟು ಸಮಸ್ಯೆಗೆ ಇಲ್ಲಿದೆ ಟಿಪ್ಸ್..!

ತುಂಬಾ ಜನರು ತಲೆ ಹೊಟ್ಟಿನ ಸಮಸ್ಯೆಯಿಂದ ಅವಮಾನ ಎದುರಿಸುತ್ತಿರುತ್ತಾರೆ. ಹಲವು ಜನರು ಮುಜುಗರಕ್ಕೆ ಒಳಗಾಗುತ್ತಾರೆ. ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಲು ಮೊದಲು ಎರಡು ಕರಿಬೇವಿನ ಎಲೆಗಳನ್ನು 4ರಿಂದ 5 ಕಪ್ ಬೆಚ್ಚಗಿನ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಈ ನೀರನ್ನು ಫಿಲ್ಟರ್ ಮಾಡಿ, ಮತ್ತು ಕೂದಲಿನ ಬೇರುಗಳಲ್ಲಿ ಚೆನ್ನಾಗಿ ಮಸಾಜ್ ಮಾಡಿ. 1 ಗಂಟೆ ಬಿಟ್ಟು, ಸ್ವಲ್ಪ ಸಮಯದ ನಂತರ ತಲೆಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ..! ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಕಂಡು ಬರುವ ಮೆಂತ್ಯವು ನಿಮ್ಮ ಕೂದಲಿಗೆ ವರದಾನವಾಗಿದೆ. ಮೆಂತ್ಯವು ಕೂದಲು ಬೆಳವಣಿಗೆಗೆ ಹಾಗೂ ತಲೆಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ. ಪ್ರೋಟೀನ್ ಹಾಗೂ ಅಮೈನೋ ಆಮ್ಲಗಳು ಮೆಂತ್ಯಾದಲ್ಲಿ ಕಂಡು ಬರುವುದರಿಂದ, ಮೆಂತ್ಯಾ ಬಳಸುವುದರಿಂದ ನಿಮ್ಮ ಕೂದಲು ರೇಷ್ಮೆಯಾಗುತ್ತದೆ.

ಮೆಂತ್ಯ ಬೀಜಗಳನ್ನು ರಾತ್ರಿಯಿಡೀ 1 ಕಪ್ ನೀರಿನಲ್ಲಿ ನೆನೆಸಿ. ನಂತರ ಬೆಳಿಗ್ಗೆ ನೆನೆಸಿದ ಮೆಂತ್ಯಾ ಬೀಜಗಳನ್ನು ಜರಡಿ ಮಾಡಿ, ಪುಡಿ ತಯಾರಿಸಿ, ಮೆಂತ್ಯದ ಪೇಸ್ಟ್ ನ್ನು ನಿಮ್ಮ ತಲೆಗೆ ಹಚ್ಚಿ, 1 ಗಂಟೆ ಬಿಟ್ಟು ಸ್ವಲ್ಪ ಸಮಯದ ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ.
ತಲೆಹೊಟ್ಟು ನಿವಾರಣೆಗೆ ಈರುಳ್ಳಿ ರಸವನ್ನು ಸಹ ಬಳಸಬಹುದು. ಈರುಳ್ಳಿ ರಸವನ್ನು ತಲೆಗೆ ಹಚ್ಚಿ 2 ಗಂಟೆಗಳ ನಂತರ ಶಾಂಪು ಬಳಸಿ ಕೂದಲನ್ನು ತೊಳೆದುಕೊಳ್ಳಬಹುದು. ಇನ್ನು ಕೂದಲಿಗೆ ನಿಂಬೆ ರಸವನ್ನು ಸಹ ಬಳಸಬಹುದು.

ಮೊಟ್ಟೆಯ ಹೇರ್ ಪ್ಯಾಕ್

ಒಣ ಕೂದಲು ಸಮಸ್ಯೆ ಮತ್ತು ತಲೆಹೊಟ್ಟಿನ ಸಮಸ್ಯೆ ಎದುರಿಸುತ್ತಿರುವವರು ನಿಮಗೆ ಸುಲಭವಾದ ಹಾಗೂ ಪರಿಣಾಮಕಾರಿಯಾದ ಮಾರ್ಗವೆಂದರೆ, ಮೊಟ್ಟೆ ಹಾಗೂ ನಿಂಬೆಯಿಂದ ಮಾಡಿದ ವಿಶೇಷ ಹೇರ್ ಮಾಸ್ಕ್. ಹೇರ್ ಪ್ಯಾಕ್ ಹೆಚ್ಚಿನ ಪ್ರಮಾಣದ ಪ್ರೋಟೀನ್ ಒಳಗೊಂಡಿರುತ್ತದೆ. ಅದೇ ರೀತಿ ನಿಂಬೆ ರಸ ಪಿಹೆಚ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುತ್ತದೆ. ಮೊಟ್ಟಯೆ ಸಹಾಯದಿಂದ ಕೂದಲು ಮೃದುವಾಗುತ್ತದೆ.

hair pack remedies, dandruffಡ್ಯಾಂಡ್ರಫ್ ಸಮಸ್ಯೆ, ಹೇರ್ ಪ್ಯಾಕ್, ಮನೆ ಮದ್ದು

ಹೇಗೆ ಬಳಸುವುದು

ಬಟ್ಟಲಿನಲ್ಲಿ 1 ಮೊಟ್ಟೆಯನ್ನು ತೆಗೆದುಕೊಂಡು ಅದನ್ನು ಮೊಟ್ಟೆ ಒಡೆದು, ಇದಕ್ಕೆ ನಿಂಬೆ ರಸ ಸೇರಿಸಿ, ಈ ಮಿಶ್ರಣ ತೆಗೆದುಕೊಂಡು ಕೂದಲಿನ ಬುಡಕ್ಕೆ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಡ್ಯಾಂಡ್ರಫ್ ನಿವಾರಿಸುವ ಶಾಂಪು ಬಳಸಿ ಕೂದಲನ್ನು ತೊಳೆಯಿರಿ.

ಮೊಸರು ಬಳಕೆ

ನೀವು ತಲೆ ಹೊಟ್ಟು ಸಮಸ್ಯೆ ಹೊಂದಿದ್ದರೆ, ಕೂದಲು ಉದರುತ್ತಿದ್ದರೆ, ಮೊಸರು ಬಳಕೆ ಮಾಡುವುದರಿಂದ ತಡೆಗಟ್ಟಬಹುದು. ನಿಂಬೆ ರಸದ ಜತೆ ಮೊಸರು ಬಳಸಿ ಹೇರ್ ಪ್ಯಾಕ್ ತಯಾರಿಸಬಹುದು. ಮೊಸರು ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ. ಕೂದಲು ಉದರುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಬಹುದು.

ಹೇಗೆ ಬಳಸುವುದು..

2 ಟೀ ಚಮಚ ಮೊಸರು ತೆಗೆದುಕೊಂಡು 1 ಟೀ ಚಮಚ ನಿಂಬೆ ರಸ ಸೇರಿಸಿ. ಇದನ್ನು ಪೂರ್ಣವಾಗಿ ತಲೆ ಭಾಗಕ್ಕೆ ಹಚ್ಚಿಕೊಳ್ಳಿ. ಇದನ್ನು 30 ನಿಮಿಷಗಳ ಕಾಲ ಬಿಡಿ. ನಂತರ ಶಾಂಪು ಬಳಸಿ ಕೂದಲನ್ನು ವಾಶ್ ಮಾಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ