ತಲೆಹೊಟ್ಟಿಗೆ ಇಂದೇ ಹೇಳಿ ಗುಡ್ ಬೈ.. ಇಲ್ಲಿದೆ ಪರಿಹಾರ!

  • by

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆಯ ಜತೆಗೆ ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾಗಿದೆ. ಎಷ್ಟೆಲ್ಲಾ ಪ್ರಯತ್ನಿಸಿದರೂ ತಲೆ ಹೊಟ್ಟು ಮಾತ್ರ ಹೆಚ್ಚಾಗಿ ಕಾಡುತ್ತಿರುತ್ತದೆ. ಆದರೆ ತಲೆಹೊಟ್ಟು ನಿವಾರಣೆಗೆ ಅಡುಗೆ ಸೋಡಾವನ್ನು ಬಳಸಲಾಗುತ್ತದೆ. ಅಡುಗೆ ಸೋಡಾ ಕೇವಲ ಅಡುಗೆ ಮಾಡುವುದಕ್ಕೆ ಅಷ್ಟೇ ಉಪಯೋಗಿಸುವುದಿಲ್ಲ. ಕೂದಲಿನ ತಲೆಹೊಟ್ಟನ್ನು ನಿವಾರಣೆಗೆ ಬಳಸಲಾಗುತ್ತದೆ. ತಲೆ ಹೊಟ್ಟು ನಿವಾರಣೆಗೆ ಅಡುಗೆ ಸೋಡಾ ಹೇಗೆ ಬಳಸಬಹುದು.. ಇಲ್ಲಿದೆ ಮಾಹಿತಿ.

ಕೂದಲನ್ನು ತೇವ ಮಾಡಿ ಅಡುಗೆ ಸೋಡಾವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿದ ಬಳಿಕ ಕೂದಲನ್ನು ಚೆನ್ನಾಗಿ ತೊಳೆದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ.ಶಾಂಪು ಬದಲಿಗೆ ಅಡುಗೆ ಸೋಡಾವನ್ನು ಉಪಯೋಗಿಸಬಹುದು. ತಲೆ ಸ್ನಾನ ಮಾಡುವ ಮೊದಲು ಚಿಟಿಕೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಡುಗೆ ಸೋಡಾ ಆಂಟಿ ಫಂಗಲ್ ಗುಣಗಳನ್ನು ಹೊಂದಿರುವುದರಿಂದ ಇದು ತಲೆಹೊಟ್ಟು ಉಂಟು ಮಾಡುವ ಶಿಲೀಂದ್ರಗಳ ಸೋಂಕಿಗೆ ಚಿಕಿತ್ಸೆ ನೀಡುತ್ತದೆ. ಅಡುಗೆ ಸೋಡಾವನ್ನು ಬಳಸುವುದರಿಂದ ತಲೆಹೊಟ್ಟು ನಿವಾರಣೆಯಾಗುವುದಲ್ಲದೇ,ಕಡಿಮೆ ಎಣ್ಣೆಯನ್ನು ಉತ್ಪಾದಿಸಲು ನೆರವಾಗುತ್ತದೆ. ನೀವು ಎಣ್ಣೆಯುಕ್ತ ಕೂದಲನ್ನು ಹೊಂದಿದ್ದರೆ, ಒಣ ಶಾಂಪು ಆಗಿ ಅಡುಗೆ ಸೋಡಾವನ್ನು ಬಳಸಬಹುದು.

ಬೇಕಿಂಗ್ ಸೋಡಾ ಹೇಗೆ ಉಪಯೋಗಿಸುವುದು..?

ಒಂದು ಕಪ್ ಬೆಚ್ಚಗಿನ ನೀರಿಗೆ 2-3 ಚಮಚ ಸೇರಿಸಿ ನೀವು ಅಡಿಗೆ ಸೋಡಾವನ್ನು ಬಳಸಬಹುದು. ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ, 1 ಅಥವಾ 2 ನಿಮಿಷಗಳ ಕಾಲ ಬಿಟ್ಟುಸ ನಿಮ್ಮ ಕೂದಲನ್ನು ಶಾಂಪುಯಿಂದ ತಲೆ ತೊಳೆದುಕೊಳ್ಳಬಹುದು. ತಲೆ ಹೊಟ್ಟು ನಿವಾರಣೆಗೆ ಅಡುಗೆ ಸೋಡಾಗೆ ಅನೇಕ ಪದಾರ್ಥಗಳನ್ನು ಸೇರಿಸಿ ಪರಿಹಾರವನ್ನು ಕಂಡು ಕೊಳ್ಳಬಹುದು. ತಲೆಹೊಟ್ಟು ಸಮಸ್ಯೆಗೆ ಬೇಕಿಂಗ್ ಸೋಡಾ ಈ ಪದಾರ್ಥಗಳ ಜತೆ ಹೇಗೆ ಬಳಸಬೇಕು ಇಲ್ಲಿದೆ ಮಾಹಿತಿ.

ಆಪಲ್ ವಿನೆಗರ್ ಮತ್ತು ಬೇಕಿಂಗ್ ಸೋಡಾ
ನಿಂಬೆ ಮತ್ತು ಬೇಕಿಂಗ್ ಸೋಡಾ
ಆಲಿವ್ ಎಣ್ಣೆ ಮತ್ತು ಬೇಕಿಂಗ್ ಸೋಡಾ
ತೆಂಗಿನ ಎಣ್ಣೆ ಮತ್ತು ಸೋಡಾ
ಬೇಕಿಂಗ್ ಸೋಡಾ ಮತ್ತು ಟ್ರೀ ಎಣ್ಣೆ

ತಲೆಹೊಟ್ಟು ಸಮಸ್ಯೆಗೆ ಆಪಲ್ ವಿನೆಗರ್ ಮತ್ತು ಸೋಡಾ

ಆಪಲ್ ವಿನೆಗರ್ ಹಾಗೂ ಬೇಕಿಂಗ್ ಸೋಡಾ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಅಡುಗೆ ಸೋಡಾ ಆಂಟಿ ಫಂಗಲ್ ಗುಣಗಳನ್ನು ಹೊಂದಿರುವುದರಿಂದ ತಲೆಹೊಟ್ಟು ನಿವಾರಿಸಲು ಸಹಾಯ ಮಾಡುತ್ತದೆ.2 ಟೀ ಚಮಚಾ ಅಡುಗೆ ಸೋಡಾ ಹಾಗೂ 2 ರಿಂದ 3 ಚಮಚ ಆಪಲ್ ವಿನೆಗರ್ ತೆಗೆದುಕೊಂಡು ಈ ಎರಡು ಚೆನ್ನಾಗಿ ಬೆರೆಸಿ ಮಿಶ್ರಣವನ್ನು ಕೂದಲಿಗೆ ಹಚ್ಚಬೇಕು. 1 ಅಥವಾ 2 ನಿಮಿಷಗಳ ಕಾಲ ಮಸಾಜ್ ಮಾಡಿ. ನಿಮ್ಮ ಕೂದಲನ್ನು ಸ್ವಲ್ಪ ತಣ್ಣನೆಯ ನೀರನೊಂದಿಗೆ ತೊಳೆಯಿರಿ. ಇದನ್ನು ವಾರಕ್ಕೆ 2 ಬಾರಿ ಹಚ್ಚಬಹುದು.

ನಿಂಬೆ ರಸ ಮತ್ತು ಬೇಕಿಂಗ್ ಸೋಡಾ
ನಿಂಬೆ ರಸವು ನೈಸರ್ಗಿಕವಾಗಿ ತಲೆಹೊಟ್ಟು ನಿವಾರಿಸಲು ಸಹಾಯ ಮಾಡಬಲ್ಲದ್ದು. 2 ಚಮಚ ನಿಂಬೆ ರಸ 1, ಚಮಚಾ ಅಡುಗೆ ಸೋಡಾ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ, ತೆಳುವಾದ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ. ಇದನ್ನು ಮಸಾಜ್ ಮಾಡಿ ಮತ್ತು 2-3 ನಿಮಿಷಗಳ ಕಾಲ ಬಿಟ್ಟು. ನಿಮ್ಮ ಕೂದಲನ್ನು ಸ್ವಲ್ಪ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ 2 ಬಾರಿ ಮಾಡಬಹುದು.

ಆಲಿವ್ ಎಣ್ಣೆ ಮತ್ತು ಬೇಕಿಂಗ್ ಸೋಡಾ

1 ಟೀ ಸ್ಪೂನ್ ಅಡುಗೆ ಸೋಡಾ ಹಾಗೂ 1 ಮೊಟ್ಟೆಯ ಹಳದಿ ಲೋಳೆ , 1 ಚಮಚ ಆಲಿವ್ ಎಣ್ಣೆ ತೆಗೆದುಕೊಂಡು, ಇದಕ್ಕೂ ಮೊದಲು ಆಲಿವ್ ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ ಇದಕ್ಕೆ ಮೊಟ್ಟೆ ಹಳದಿ ಭಾಗವನ್ನು ಸೇರಿಸಿ, ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಹೇರ್ ಪ್ಯಾಕ್ ನ್ನು ಕೂದಲಿಗೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು, ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಮಾಡಿ ಈ ಹೇರ್ ಪ್ಯಾಕ್ ನ್ನು ಹಚ್ಚಬಹುದು.

ತೆಂಗಿನ ಎಣ್ಣೆ ಮತ್ತು ಬೇಕಿಂಗ್ ಸೋಡಾ

ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು. ಇದು ಹಾನಿಗೊಳಗಾದ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ತೆಂಗಿನ ಎಣ್ಣೆ ಕೂದಲಿನ ಶುಷ್ಕತೆ ಹಾಗೂ ತುರಿಕೆ ಸಮಸ್ಯಗಳನ್ನು ನಿವಾರಿಸುವುದಲ್ಲದೇ, ತಲೆ ಹೊಟ್ಟು ಸಮಸ್ಯೆಗೆ ಪರಿಹಾರವಾಗಬಲ್ಲದ್ದು. 1, 1/2 ಟೀ ಸ್ಪೂನ್ ಅಡುಗೆ ಸೋಡಾ ಹಾಗೂ 1 ಚಮಚಾ ತೆಂಗಿನ ಎಣ್ಣೆ , 1 ಚಮಚ ಜೇನುತುಪ್ಪ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ತೊಳೆಯಬಹುದು. ಈ ಹೇರ್ ಮಾಸ್ಕ್ ನ್ನು ವಾರಕ್ಕೆ 2 ಬಾರಿ ಬಳಸಬಹುದು.

ಅಡುಗೆ ಸೋಡಾ ಮತ್ತು ಟ್ರೀ ಟ್ರೀ ಆಯಿಲ್

2 ಟೀ ಸ್ಪೂನ್ ಅಡುಗೆ ಸೋಡಾ ಹಾಗೂ ಟ್ರೀ ಎಣ್ಣೆಯ ಕೆಲವು ಹನಿಗಳು, 1/2 ನೀರು ತೆಗೆದುಕೊಂಡು, ಎಲ್ಲಾ ಪದಾರ್ಥಗಳನ್ನು ಬೆರೆಸಿ, ಚೆನ್ನಾಗಿ ಮಿಶ್ರಣವನ್ನು ಮಾಡಿ ಕೂದಲಿಗೆ ಹಚ್ಚಬೇಕು. ನಂತರ ನಿಮ್ಮ ಕೂದಲನ್ನು 15 ನಿಮಿಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ 2 ಬಾರಿ ಇದನ್ನು ಬಳಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ