ಗಾಜಿನ ಬಳೆಗಳು ಕೈಗಳ ಅಂದವಷ್ಟೇ ಹೆಚ್ಚಿಸಲ್ಲ, ಆರೋಗ್ಯಕ್ಕೂ ಹೆಚ್ಚು ಲಾಭ!

  • by

ಬಳೆಗಳು ಭಾರತೀಯ ಸಂಸ್ಕೃತಿಯ ಭಾಗವಾಗಿವೆ ಎಂದರೆ ತಪ್ಪಾಗಲ್ಲ. ಹಿಂದಿನ ಕಾಲದಲ್ಲಿ ಅಮ್ಮ , ಅಜ್ಜಿ ಹಾಕುತ್ತಿದ್ದ ಬಳೆಗಳು ಗಾಜಿನ ಬಳೆಗಳು.. ಆದ್ರೆ ಇವತ್ತೀನ ದಿನಗಳಲ್ಲಿ ಕಾಲೇಜಿಗೆ ಹೋಗುವ ಹುಡುಗಿಯರು, ಕಚೇರಿಗೆ ಹೋಗುವ ಯುವತಿಯರು ಭಾರವಾದ ಗಾಜಿನ ಬಳೆಗಳನ್ನು ಹಾಕಿಕೊಳ್ಳುವುದು ಅಪರೂಪವೇ ಸರಿ.. ಆದ್ರೆ ಯುವತಿಯರಿಗೆ ಭಾರವಾದ ಬಳೆಗಳು ಕಿರಿ ಕಿರಿ ಎನಿಸಿದರು, ಇಂದು ಹಸಿರು ಗಾಜಿನ ಬಳೆಗಳು ವಿವಿಧ ವಿನ್ಯಾಸ ಪಡೆದುಕೊಂಡಿವೆ.  ಕಾಲೇಜು ಹುಡುಗಿಯರು ಅಚ್ಚು ಮೆಚ್ಚಿನ ಬಳೆಗಳಾಗಿವೆ. 

green glass bangles, Importance,  ಗಾಜಿನ ಬಳೆಗಳ ಮಹತ್ವ,

ಗಾಜಿನ ಬಳೆಗಳಿಗೆ ರೇಷ್ಮೆಯ ದಾರ ಸುತ್ತಿ ವಿವಿಧ ಶೈಲಿಯ ಉಡುಪುಗಳಿಗೆ ಮ್ಯಾಜಿಂಗ್ ಬಣ್ಣ ಬಣ್ಣದ ಬಳೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. 

ಬಣ್ಣ, ಆಕಾರದಲ್ಲಿ ಒಂದಕ್ಕಿಂತ ಒಂದು ವಿಭಿನ್ನ

ಗಾಜಿನ ಬಳೆಗಳು ಇಂದು ಅನೇಕ ವಿಧಗಳಲ್ಲಿ ಲಭ್ಯವಿವೆ. ಕರ್ವ್ಡ್ ವುಡನ್ ಬಳೆಗಳು, ಸಿಲಿಂಡ್ರಿಕಲ್ ಬಳೆಗಳು, ಪಾಲಿಶ್ ಆದ ವುಡನ್ ಬಳೆಗಳು, ಹರಳುಗಳು ಇರುವ ಬಳೆಗಳು ಅಂಗಡಿಯಲ್ಲಿ ವಿಶೇಷ ಸ್ಥಾನ ಪಡೆದಿವೆ. ಬಳೆಗಳ ವಿನ್ಯಾ,ಸ, ಬಣ್ಣ ಎಲ್ಲಂದರಲ್ಲೂ ಬದಲಾವಣೆಯಾಗಿದೆ.  ಬಿಳಿ ಬಣ್ಣ- ಶುಭ್ರತೆಯ ಪ್ರತೀಕವಾದ್ರೆ, ನೇರಳೆ ಬಣ್ಣಸ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣ – ಸಮೃದ್ಧಿ ಹಾಗೂ ಅದೃಷ್ಟದ ಸಂಕೇತವಾದರೆ, ಕಿತ್ತಳೆ ಬಣ್ಣ-ಯಶಸ್ಸು, ಕಪ್ಪು ಬಣ್ಣ – ಶಕ್ತಿ ಹಾಗೂ ಅಧಿಕಾರ, ಚಿನ್ನದ ಬಣ್ಣ – ಭಾಗ್ಯವನ್ನು ನೀಡುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. 

green glass bangles, Importance,  ಗಾಜಿನ ಬಳೆಗಳ ಮಹತ್ವ,

ಪ್ರತಿಯೊಬ್ಬ ವಧುವಿನ ಗುರುತು ಬಳೆ..!

ಬಳೆಗಳು ಸಾಂಪ್ರದಾಯಿಕವಾಗಿ ಭಾರತೀಯ ಮದುಮಗಳ ಶೃಂಗಾರ ಹೆಚ್ಚಿಸುತ್ತವೆ. ಹೊಸದಾಗಿ ಮದುವೆಯಾದ ವಧುಗಳು ಗಾಜಿನ ಬಳೆಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಏಕೆಂದರೆ ಮದುವೆಯಾದ ಹೆಣ್ಣುಮಕ್ಕಳು ಕೈಯಲ್ಲಿ ಗಾಜಿನ ಬಳೆಗಳನ್ನು ಧರಿಸುತ್ತಾಳೆ. ಇದು ಆಕೆ ಪತಿಯ ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಹಾಗೂ ಅದೃಷ್ಟವನ್ನು ಸೂಚಿಸುತ್ತದೆ.

ಬಳೆಗಳ ಸಾಂಪ್ರದಾಯಿಕ ಮಹತ್ವ

ಪ್ರತಿಯೊಂದು ಪ್ರದೇಶ, ರಾಜ್ಯ ಪ್ರತ್ಯೇಕ ಆಚರಣೆಗಳಲ್ಲಿ ವಿಭಿನ್ನವಾಗಿರುತ್ತದೆ. ವಧು ಎಣ್ಣೆಯ ಸಹಾಯದಿಂದ ಎಷ್ಟು ಸಾಧ್ಯವೋ ಅಷ್ಟು ಬಳೆಗಳನ್ನು ಧರಿಸುತ್ತಾರೆ. ಮಹಿಳೆಯರು ಬಳೆಗಳನ್ನು ಧರಿಸುವುದರಿಂದ ಅವರ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ. ಕೆಲವು ಸಮುದಾಯಗಳಲ್ಲಿ ವಧು ಚಿನ್ನದ ಬಳೆಗಳ ಜತೆಗೆ ಹಸಿರು ಬಣ್ಣದ ಬಳೆಗಳನ್ನು ಧರಿಸುತ್ತಾರೆ. ಏಕೆಂದರೆ ಹಸಿರು ಬಣ್ಣ ಸಮೃದ್ಧಿ ಹಾಗೂ ಅದೃಷ್ಟವನ್ನು ಸೂಚಿಸುತ್ತದೆ. 

ಪಶ್ಚಿಮ ಬಂಗಾಳದಲ್ಲಿ ವಧು ಮದುವೆಯಾದ ಹೊಸತರಲ್ಲಿ ಶಂಖ ಶೆಲ್ ಬಳೆ ಮತ್ತು ಕೆಂಪು ಹವಳದ ಬಳೆಯನ್ನು ಧರಿಸುತ್ತಾಳೆ. ಅಲ್ಲದೇ, ಮದುವೆಯಾದ ಬಳಿಕ ಸೊಸೆ ಮೊದಲ ಬಾರಿಗೆ ಅತ್ತೆ ಮನೆಗೆ ಪ್ರವೇಶಿಸುತ್ತಾಳೆ. ಆಗ ಅತ್ತೆ ಆಕೆಗೆ ಚಿನ್ನ ಲೇಪಿತ ಬಳೆಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿಯಿದೆ. 

ಇನ್ನು ಗುಜುರಾತ್ ಹಾಗೂ ರಾಜಸ್ಥಾನದಲ್ಲಿ ವಧು ಚೂಡಾ ಧರಿಸುತ್ತಾರೆ. ಗುಜುರಾತ್ ನಲ್ಲಿ ವಧುವಿನ ತಾಯಿಯ ಚಿಕ್ಕಪ್ಪ ಚೂಡಾ ನೀಡುತ್ತಾರೆ. 

ಗಾಜಿನ ಬಳೆಗಳಿಗೆ ಸ್ತ್ರೀಯರಿಗೆ ಯಾಕೆ ಶ್ರೇಷ್ಠ?

ಗಾಜಿನ ಬಳೆಗಳು ಮಹಿಳೆಯರಿಗೆ ಶ್ರೇಷ್ಟ ಎನ್ನುವ ನಂಬಿಕೆ ಇದೆ. ಹಲವು ಜನರು ಚಿನ್ನದ ಬಳೆಗಳನ್ನು ಧರಿಸುತ್ತಾರೆ. ಇಂದಿನ ದಿನಗಳಲ್ಲಿ ಗಾಜಿನ ಬಳೆ ಧರಿಸುವುದು ಕಡಿಮೆಯಾಗಿದೆ. ಚಿನ್ನದ ಬಳೆಗಳನ್ನು ಧರಿಸಿ, ಮದುವೆ, ಸಭೆ ಸಮಾರಂಭದಲ್ಲಿ ಮಹಿಳೆಯರು ಬಳೆ ತೊಟ್ಟು ಸಂಭ್ರಮಿಸುತ್ತಾರೆ. ಹಸಿರು ಮತ್ತು ಕೆಂಪು ಬಣ್ಣದ ಬಳೆ ಮುತೈದೆಯರ ಲಕ್ಷಣವಾಗಿದೆ. 

green glass bangles, Importance,  ಗಾಜಿನ ಬಳೆಗಳ ಮಹತ್ವ,

ಸ್ತ್ರೀಯರು ಕೈಗಳಿಗೆ ಧರಿಸುವ ಬಳೆಗಳು ಶೃಂಗಾರದ ಪ್ರತೀಕ ಅಷ್ಟೇ ಅಲ್ಲ. ಹಲವು ಆರೋಗ್ಯ ಪ್ರಯೋಜನಗಳಿವೆ. ಕೈಗಳಿಗೆ ಬಳೆ ಧರಿಸುವುದರಿಂದ ಕೈಗಳಿಗೆ ಬಲ ಬಂದಂಥಾಗುತ್ತದೆ. ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ನಾಡಿ ಮಿಡಿತ ನಿಯಮಿತಗೊಳ್ಳುತ್ತದೆ. ಶರೀರದ ಚರ್ಮದಿಂದ ಬಿಡುಗಡೆಯಾಗುವ ಶಾಖವನ್ನು ಈ ಲೋಹದ ಬಳೆಗಳು ಹೀರಿಕೊಂಡು ದೇಹದ ಉಷ್ಣಾಂಶವನ್ನು ಕಾಪಾಡುತ್ತದೆ. ಕೆಟ್ಟ ದೃಷ್ಟಿಯನ್ನು ನಿವಾರಣೆ ಮಾಡುತ್ತದೆ. ಖುಣಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತವೆ. 

ಸ್ರ್ತೀಯರ ಕೈಯಲ್ಲಿ ಬಳೆಗಳು ತುಂಬಾ ಬಿಗಿಯಾಗಿಯೂ, ಸಡಿಲವಾಗಿಯೂ ಇರಬಾರದು. ರಕ್ತನಾಳ ಹಾಗೂ ನರಗಳಿಗೆ ಮೃದು ಸ್ಪರ್ಶ ನೀಡುವಂತಿರಬೇಕು.ಮುಂಗೈ ನರಗಳಿಗೆ ಅಕ್ಯು ಪ್ರೌಶರ್ ಬೀಳುವುದರಿಂದ ಮೆದುಳಿಗೆ ಪ್ರಚೋದನೆ ಸೀಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ