ಕೊರೊನಾ ವೈರಸ್ ನಿಂದ ನಿಮ್ಮನ್ನು ರಕ್ಷಿಸುತ್ತೆ ‘ಕೊರೊನಾ ಕವಚ್’ ಆ್ಯಪ್..!

  • by

ಕೊರೊನಾ ವೈರಸ್ ತಡೆಗಟ್ಟಲು ಭಾರತ ಸರ್ಕಾರ ಕೊರೊನಾ ವೈರಸ್ ಪತ್ತೆ ಮಾಡುವ ಆ್ಯಪ್ ಬಿಡುಗಡೆ ಮಾಡಿದೆ. ಕೊರೊನಾ ಕವಚ್ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ. ಈ ಮೊಬೈಲ್ ಅಪ್ಲಿಕೇಶನ್ ನ ಸಹಾಯದಿಂದ ಜನರು ವೈರಸ್ ನ ಅಪಾಯ ಹೊಂದಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಮುನ್ನಚ್ಚರಿಕೆ ಕ್ರಮವಾಗಿ ವೈರಸ್ ತಡೆಗಟ್ಟಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಈ ಆ್ಯಪ್ ನಲ್ಲಿ ಮಾಹಿತಿ ಲಭ್ಯವಿರಲಿದೆ.


Government ,launches ,coronavirus tracking app, ಕೊರೊನಾ ವೈರಸ್, ಕೊರೊನಾ ಕವಚ್, ಆ್ಯಪ್ ಬಿಡುಗಡೆ, ಕೇಂದ್ರ ಸರ್ಕಾರ

ಕೊರೊನಾ ಕವಚ್ ಅಪ್ಲಿಕೇಶನ್ ಬಳಕೆದಾರರು ಈ ವೈರಸ್ ಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ಸಹ ಒದಗಿಸಲಿದ್ದಾರೆ.
ನಿಮ್ಮ ಪ್ರದೇಶದ ಬಳಿ ಯಾವುದೇ ಕೊರೊನಾ ವೈರಸ್ ರೋಗಿಯಿದ್ದರೆ, ಅವರಿಂದ ದೂರವಿರುವಂತೆ, ಜಾಗರೂಕರಾಗಿರುವಂತೆ ಮತ್ತು ಆ ಪ್ರದೇಶದಲ್ಲಿ ನೀವು ಸಂಚರಿಸುವುದನ್ನ ತಡೆಗಟ್ಟಲು ಈ ಆ್ಯಪ್ ಸಹಾಯ ಮಾಡುತ್ತದೆ. ಭಾರತದಲ್ಲಿ ಸಾಂಕ್ರಾಮಿಕ ರೋಗವು ಹೆಚ್ಚಾಗುತ್ತಿರುವುದರಿಂದ ವೈರಸ್ ಅಥವಾ ರೋಗವನ್ನು ತಡೆಗಟ್ಟಲು ಈ ಆ್ಯಪ್ ಸಹಾಯ ಮಾಡುತ್ತದೆ.

ಕೊರೊನಾ ಕವಚ್ ಹೇಗೆ ಕಾರ್ಯ ನಿರ್ವಹಿಸುತ್ತದೆ..?

COVIDE-19 ಪಾಸಿಟಿವ್ ರೋಗಿಗಳು ಇದ್ದಾರೆಯೇ ಎಂಬ ಬಗ್ಗೆ ಕಂಡು ಹಿಡಿಯಲು ಕಾರ್ಯ ನಿರ್ವಹಿಸುತ್ತದೆ. ಸೋಂಕಿತ ರೋಗಿ ನಿಮ್ಮ ಹತ್ತಿರ ಇದ್ದರೆ ಪತ್ತೆ ಮಾಡುತ್ತದೆ. ಅಲ್ಲದೇ, ಈ ಆ್ಯಪ್ ಪ್ರತಿ ಗಂಟೆಗೂ ನಿಮಗೆ ಎಚ್ಚರಿಕೆಯನ್ನು ನೀಡುತ್ತದೆ.


Government ,launches ,coronavirus tracking app, ಕೊರೊನಾ ವೈರಸ್, ಕೊರೊನಾ ಕವಚ್, ಆ್ಯಪ್ ಬಿಡುಗಡೆ, ಭಾರತ ಸರ್ಕಾರ

ಸೋಂಕಿತ ರೋಗಿಗಳ ಭೌಗೋಳಿಕ ದತ್ತಾಂಶವು ಈ ಅಪ್ಲಿಕೇಶನ್ ನಲ್ಲಿ ಇದ್ದು, ಈ ಆ್ಯಪ್ ಕೊರೊನಾ ವೈರಸ್ ಸೋಂಕಿತ ರೋಗಿಗಳನ್ನು ಕಂಡು ಹಿಡಿಯಲು, ಉತ್ತಮ ಆರೋಗ್ಯವುಳ್ಳ ವ್ಯಕ್ತಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ.

ಕೊರೊನಾ ಟ್ರ್ಯಾಕಿಂಗ್ ಅಪ್ಲಿಕೇಶನ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಕೇಂದ್ರ ಎಲೆಕ್ರ್ಟಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಉದ್ಯಮ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ನ್ನು ಆಂಡ್ರಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನಲೋಡ್ ಮಾಡಬಹುದು. ಐಫೋನ್ ಬಳಕೆದಾರರಿಗೆ ಸದ್ಯಕ್ಕೆ ಈ ಅಪ್ಲಿಕೇಶನ್ ಲಭ್ಯವಿರುವುದಿಲ್ಲ.

ನಿಮ್ಮ ಹತ್ತಿರವಿರುವ ಕೊರೊನಾ ಪಾಸಿಟಿವ್ ವ್ಯಕ್ತಿಗಳನ್ನು ಪತ್ತೆ ಮಾಡುತ್ತೆ ಈ ಆ್ಯಪ್ ..

ಕೊರೊನಾ ಕವಚ್ ಅಪ್ಲಿಕೇಶನ್ ಬಗ್ಗೆ ಹೇಳೋದಾದ್ರೆ, ಈ ಅಪ್ಲಿಕೇಶನ್ ಸಾರ್ವಜನಿಕ ಹಿತದೃಷ್ಟಿಯಿಂದ ಮಾಹಿತಿ ನೀಡಲು ಮತ್ತು ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಅಭಿವೃದ್ಧಿ ಪಡಿಸಲಾಗಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಬಗ್ಗೆ ವಿಶ್ಲೇಷಣೆ ನಡೆಸಲು ಮತ್ತು ಮಾಹಿತಿಯನ್ನು ಒದಗಿಸಲು ಡೇಟಾವನ್ನು ಬಳಸಲಾಗುತ್ತದೆ. ಇದೊಂದು ಸ್ವಯಂ ಪರಿಶೀಲನೆ ನಡೆಸುವ ಆ್ಯಪ್ ಅಂತಲೇ ಹೇಳಬಹುದು.

ನೀವು ಅಪ್ಲಿಕೇಶನ್ ಡೌನಲೋಡ್ ಮಾಡುವಾಗ , ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಈ ಆ್ಯಪ್ ನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಫೋನ್ ಜಿಪಿಎಸ್ ತಂತ್ರಜ್ಞಾನ ಮೂಲಕ ಈ ಆ್ಯಪ್ ತನ್ನ ಸೇವೆ ನೀಡುತ್ತದೆ. ಈ ಆ್ಯಪ್ ವ್ಯಕ್ತಿಯ ಚಲನವಲನಗಳನ್ನು ಪತ್ತೆ ಮಾಡಿ, ಆತ ಕೊರೊನಾ ವ್ಯಕ್ತಿಗಳ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ನೀಡುತ್ತದೆ. ನೀವು ಕೊರೊನಾ ವೈರಸ್ ಅಪಾಯದ ಸ್ಥಳದಲ್ಲಿದ್ದಾಗ, ಅಥವಾ ಕೊರೊನಾ ವೈರಸ್ ಪಾಸಿಟಿವ್ ವ್ಯಕ್ತಿಯ ಸಂಪರ್ಕದಲ್ಲಿದ್ದಾಗ ಈ ಆ್ಯಪ್ ನಿಮಗೆ ಎಚ್ಚರಿಕೆ ನೀಡುತ್ತದೆ.

ಕೆಲವರಿಗೆ ಮೊಬೈಲ್ ಗೌಪ್ಯತೆ ಬಗ್ಗೆ ಅಳುಕು ಕಾಡುವುದು ಸಹಜ. ಆದ್ರೆ ಈ ಅಪ್ಲಿಕೇಶನ್ ಸಂಪೂರ್ಣ ಸುರಕ್ಷಿತವಾಗಿದೆ. ನಿಮ್ಮ ಯಾವುದೇ ಮಾಹಿತಿ ಹಾಗೂ ವಿವರಗಳನ್ನು ಈ ಅಪ್ಲಿಕೇಶನ್ ಬಹಿರಂಗಪಡಿಸುವುದಿಲ್ಲ.

ಸದ್ಯ ಈ ಆ್ಯಪ್ ನ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಸದ್ಯಕ್ಕೆ ಇದು ಬಿಟಾ ವರ್ಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ