ಗಾಸಿಪ್ ಎಂಬ ನೋವಿಗೆ ಮುಲಾಮು ಹೀಗಿರಲಿ.. ಉಪಾಯಗಳು ಇಲ್ಲಿವೆ!

  • by

ಜೀವನದಲ್ಲಿ ಪ್ರತಿಯೊಬ್ಬರು ಗಾಸಿಪ್ ಗೆ ಒಳಗಾಗಿರುತ್ತಾರೆ. ಗಾಸಿಪ್ ಎಂಬ ಪದ ಕೇಳಿದ ತಕ್ಷಣ ಭಯ, ಆತಂಕ ಸಾಮಾನ್ಯವಾಗಿ ಹಲವರಲ್ಲಿ ಕಂಡು ಬರುತ್ತದೆ. ಗಾಸಿಪ್, ರೂಮರ್ಸ್ ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುವ ಸಂಭವ ಹೆಚ್ಚು. ಅಲ್ಲದೇ, ಪ್ರತಿಷ್ಠೆ ಮೇಲೆಯೂ ಇದು ಹೆಚ್ಚು ಹಾನಿ ಮಾಡುತ್ತದೆ. ಯಾರಾದರೂ ಗಾಸಿಪ್ ಮಾಡಿದಾಗ ಆತ್ಮವಿಶ್ವಾಸ ಕುಗ್ಗಿ, ಬೇಸರ, ನೋವು ಆವರಿಸುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೈಹಿಕ ಹಾಗೂ ಮಾನಸಿಕವಾಗಿ ನೀವು ಕುಗ್ಗಬಹುದು. ಆದ್ದರಿಂದ ಗಾಸಿಪ್ ಬಗ್ಗೆ ಟೆಕ್ಷನ್ ಮಾಡಿಕೊಳ್ಳುತ್ತಾ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.. ಇದರ ಬಗ್ಗೆ ಯೋಚಿಸಬೇಕಿಲ್ಲ..ಆತ್ಮವಿಶ್ವಾಸ ಬೆಳೆಸಿಕೊಂಡು ಗಾಸಿಪ್ ಎಂಬ ಗಾಯಕ್ಕೆ ಮುಲಾಮು ಹಚ್ಚಬೇಕು. ಗಾಸಿಪ್ ಹೇಗೆ ನಿಭಾಯಿಸಬೇಕು ಎಂದು ತಿಳಿದರೆ ಯಾವುದೂ ಅಸಾಧ್ಯವಲ್ಲ.!

Gossip , solution, ಗಾಸಿಪ್,   ಪರಿಹಾರ,

ಹಿಂಜರಿಯದೇ ಪ್ರತಿಕ್ರಿಯೆ ನೀಡಿ..!

ನೀವೇನೂ ತಪ್ಪೇ ಮಾಡಿದದ್ದಾಗ ಹೆದರಬೇಕಿಲ್ಲ. ನಿಮ್ಮ ಬಗ್ಗೆ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಾಕ್ಷಣ ಸುಮ್ಮನಿರುವುದು ತರವಲ್ಲ. ಗಾಸಿಪ್ ನಿಜವೆಂದು ಉಳಿದವರು ಭಾವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮ ಬಗ್ಗೆ ಆಡುವ ಗಾಸಿಪ್ ಗಳಿಗೆ ಬಾಯಿ ಮುಚ್ಚಿಕೊಳ್ಳುವುದಕ್ಕಿಂತ ಮಾತನಾಡಿ. ಉತ್ತರ ನೀಡಿ, ಹಿಂಜರಿಯಬೇಡಿ. ಇದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. 

ಮಾತಿಗಿಂತ ಕೃತಿಯೇ ಉತ್ತರವಾಗಲಿ

ಮಾತಿಗಿಂತ ಕೃತಿ ಮೇಲೂ ಎಂಬ ಮಾತು ಇದೆ. ಹಾಗಾಗಿ ಎಲ್ಲಾ ಗಾಸಿಪ್ ಗಳಿಗೂ ನಿಮ್ಮ ಕೆಲಸದ ಮೂಲಕವೇ ಉತ್ತರ ನೀಡಿ.. ನಿಮ್ಮ ಉತ್ತಮ ಕಾರ್ಯಗಳಿಂದ ಇತತರರು ಪ್ರೇರಣೆೇಗೊಳ್ಳುವಂತಾಗಬೇಕು, ಹೀಗಾಗಿ ಬೇರೆಯವರು ನಿಮ್ಮ ಬಗ್ಗೆ ಆಡುವ ಮಾತು, ಗಾಸಿಪ್ ಎಲ್ಲದಕ್ಕೂ ಕೃತಿಯ ಮೂಲಕ ಬ್ರೇಕ್ ಹಾಕಲು ಯತ್ನಿಸಿ. ಒಂದು ವೇಳೆ ಬೇರೆಯವರೂ ಅದೇ ಹಳೇ ಚಾಳಿ ಮುಂದುವರೆಸಿದರೂ, ಅವರನ್ನು ನಂಬಲು ಯಾರು ಮುಂದೆ ಬರುವುದಿಲ್ಲ.

Gossip , solution, ಗಾಸಿಪ್,   ಪರಿಹಾರ,

ನಿಮ್ಮ ಖುಷಿಗೆ ನೀವೇ ಜವಾಬ್ದಾರರು

ನಿಮ್ಮ ಮನಸ್ಸಿನ ನೆಮ್ಮದಿ ನಿಮ್ಮಲ್ಲೇ ಅಡಗಿದೆ. ಅದು ಬೇರೆಯವರಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಖುಷಿಯ ಹಿಂದೆ ಕುಟುಂಬದ ಪಾತ್ರ ಮುಖ್ಯವಾಗಿರುತ್ತದೆ. ಬೇರೆದೆಲ್ಲವು ಇದರ ಮುಂದೆ ನಗಣ್ಯ. ನಿಮಗಿಷ್ಟವಾಗುವ, ನಿಮ್ಮಗೆ ಸರಿ ಎನಿಸುವ ಕೆಲಸಗಳನ್ನೇ ಮಾಡಿ. ಇದು ನಿಮಗೆ ಖುಷಿ ನೀಡಿ, ಒತ್ತಡ , ಅತಂಕ ಕಡಿಮೆಗೊಳ್ಳಲು ಸಹಾಯ ಮಾಡುತ್ತದೆ. 

ಬೇರೆಯವರ ತಪ್ಪನ್ನು ಕ್ಷಮಿಸಿರಿ..

ಗಾಸಿಪ್ ಹಬ್ಬಿಸುತ್ತಿರುವ ವ್ಯಕ್ತಿಗಳು ನಿಮಗೆಷ್ಟೇ ಹಾನಿ ಮಾಡಿದರೂ ಕ್ಷಮಿಸಿ ದೊಡ್ಡವರಾಗಿ… ನಿಮ್ಮ ಮೇಲಿನ ದ್ವೇಷ ಹಾಗೂ ಅಸೂಯೆ ಕಾರಣಕ್ಕೆ ಅವರು ಹಾಗೇ ಮಾಡಿರುತ್ತಾರೆ. ಇದು ಆ ವ್ಯಕ್ತಿಯ ವಿಕನೇಸ್ ಹೊರೆತು, ನಿಮ್ಮದಲ್ಲ. ಸಣ್ಣತನ ತೋರಿ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತೋರಿದ ವ್ಯಕ್ತಿಯನ್ನು ನೀವು ಕ್ಷಮಿಸುವುದು ನಿಮ್ಮ ದೊಡ್ಡತನವಾಗುತ್ತದೆ. 

ಆಗೋದೆಲ್ಲಾ ಒಳ್ಳೆಯದಕ್ಕೆ ಎಂದೇ ಭಾವಿಸಿ.

ಗಾಸಿಪ್ ಮಾಡಿದ್ರೇನೇ ಕೆಲವರಿಗೆ ಸಂತೋಷ , ಮನಸ್ಸಿಗೆ ತೃಪ್ತಿ ಸೀಗುತ್ತದೆ. ಇದಕ್ಕಾಗಿ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.. ಒಬ್ಬ ವ್ಯಕ್ತಿಯನ್ನು ನೀವು ಒಳ್ಳೇಯವರೆಂದು ನಂಬಿರುತ್ತೀರಿ. ಆದ್ರೆ ಆ ವ್ಯಕ್ತಿಯ ಇನ್ನೊಂದು ಮುಖ ನಿಮಗೆ ಅರ್ಥವಾಗಲು ಪ್ರಾರಂಭವಾಗುತ್ತದೆ. ಆಗ ನೀವು ಮಾಡಬೇಕಾದದ್ದು ಇಷ್ಟೇ, ಆ ವ್ಯಕ್ತಿಯ ಜತೆ ಮತ್ತೊಮ್ಮೆ ವ್ಯವಹರಿಸುವಾಗ ಎಚ್ಚರವಾಗಿರಿ. ನಂಬಲು ಹೋಗಬೇಡಿ.ಇದರಿಂದ ಮುಂದೆ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು.

Gossip , solution, ಗಾಸಿಪ್,   ಪರಿಹಾರ,

ವಾಗ್ವಾದ ಮಾಡಲು ಹೋಗಬೇಡಿ

ಗಾಸಿಪ್ ಮಾಡಿದ ವ್ಯಕ್ತಿ ಜತೆ ನೀವು ವಾಗ್ವಾದ ಮಾಡಲು ಹೋಗಬೇಡಿ. ಅದರ ಬದಲು ಆತನ ಜತೆ ಮುಕ್ತವಾಗಿ ಮಾತನಾಡಿ. ನೀವು ಹಬ್ಬಿಸಿರುವ ಸುದ್ದಿಯಿಂದ ನೋವಾಗಿದೆ ಎಂಬ ಬಗ್ಗ ಅ ವ್ಯಕ್ತಿಗೆ ಮನದಟ್ಟು ಮಾಡಿ. ಅದರಿಂದ ಆತನಿಗೆ ಅರಿವಾಗಬಹುದು.

ವಿಶಾಲ ದೃಷ್ಟಿಕೋನ

ವಿಶಾಲ ದೃಷ್ಟಿಕೋನ ಬೆಳೆಸಿಕೊಂಡಾಗ ಅನೇಕ ಸಮಸ್ಯೆಗಳಿಗೆ ಪರಿಹಾರವು ದೊರೆಯುತ್ತದೆ ನೆಗೆಟಿವ್ ಯೋಚನೆಗಳಿಗೆ ಆಸ್ಪದ ನೀಡಬೇಡಿ.. ವಿಶಾಲ ದೃಷ್ಟಿಯಿಂದ ಯೋಚನೆ ಮಾಡಿ.. ಆಗ ಹೊಸ ಹಾದಿ ನಿಮಗೆ ಗೋಚರವಾಗುವ ಸಾಧ್ಯತೆ ಹೆಚ್ಚು.

ಏಕೆ ಜನರು ಗಾಸಿಪ್ ಮಾಡುತ್ತಾರೆ? 

ಇತರರ ಬಗ್ಗೆ ಗಾಸಿಪ್ ಮಾಡುವುದು ಎಲ್ಲರಿಗೂ ಖುಷಿ ಎನಿಸುತ್ತದೆ. ಗಾಸಿಪ್ ಯಾಕೆ ಮಾಡುತ್ತಿದ್ದೇವೆ ಎಂಬುದನ್ನು ಅಂಥವರು ಅರ್ಥ ಮಾಡುಕೊಳ್ಳುವುದು ಬಹಳ ಮುಖ್ಯ. ಗಾಸಿಪ್ ಮಾಡುವಾಗ ಒಳ್ಳೆಯ ಭಾವನೆ , ಪಾಸಿಟಿವ್ ಆಗಿದ್ದರೆ ಓಕೆ. ಆದ್ರೆ ನೆಗೆಟಿವ್ ಆಗಿದ್ದರೆ ಅದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಗಾಸಿಪ್ ಗೆ ಒಳಗಾಗದವರು ಅದರಿಂದ ಹೊರಬರಲು ಯತ್ನಿಸಬೇಕು. 

ಗಾಪಿಸ್ ಗೆ ಒಳಗಾದಾಗ ಮಾನಸಿಕ ಸ್ಥಿತಿ ಹೇಗಿರುತ್ತದೆ?

ದುಃಖಿಸುವುದು, ಸಮರ್ಥಮೆ ಕೊಡುವುದು. ಉದ್ವೇಗ, ಭಯ ಹೆಚ್ಚಳ. ಇನ್ನು ಕೆಲಸದ ಸ್ಥಳದಲ್ಲಿ ಗಾಸಿಪ್ ಒತ್ತಡಕ್ಕೆ ಕಾರಣವಾಗಬಹುದು. ಇದ್ರಿಂದ ಅನಾರೋಗ್ಯ ಹೆಚ್ಚಾಗುವ ಸಾಧ್ಯತೆ ಹೆಚ್ಚು. 

Gossip , solution, ಗಾಸಿಪ್,   ಪರಿಹಾರ,

ಗಾಸಿಪ್ ಮಾಡುವುದು ಎಷ್ಟು ಹಾನಿಕಾರಕ..!

ಗಾಸಿಪ್ ಮಾಡುವುದರಿಂದ ವ್ಯಕ್ತಿಯ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಗಾಸಿಪ್ ಮಾಡುವ ವ್ಯಕ್ತಿ ಹಾಗೂ ಇದರಲ್ಲಿ ಭಾಗಿಯಾಗುವ ವ್ಯಕ್ತಿಗಳು ಕೆಲವೊಂದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

1. ಸಮಯ ವ್ಯರ್ಥ

2. ಶಕ್ಯಿ ವ್ಯರ್ಥ

3. ತಪ್ಪನ್ನು ಪ್ರೇರೆಪಿಸುವುದು

4. ವಂದತಿ

5.ಸುಳ್ಳು ಸುದ್ದಿ

6. ಇನ್ನೊಬ್ಬರ ಪ್ರತಿಷ್ಠೆ ಹಾಳು ಮಾಡುವುದು. ಹಾಗೂ ಗಾಸಿಪ್ ಕೆಟ್ಟ ಪರಿಣಾಮವೆಂದರೆ ಭ್ರಮೆಗೆ ನೀವು ಒಳಗಾಗುವ ಸಾಧ್ಯತೆ ಹೆಚ್ಚು. ತಮ್ಮ ತಪ್ಪುಗಳನ್ನು ಇತತರರ ಮೇಲೆ ತೋರಿಸುವುದು, ಸ್ವಯಂ ಸಮರ್ಥನೆ ಮಾಡಿಕೊಳ್ಳುವುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ