ತ್ವಚೆ ಬೆಳ್ಳಗಾಗಿಸುತ್ತೆ ಗ್ಲಿಸರಿನ್..! – (Glycerin For face whitening)

  • by

ನಮಗೆಲ್ಲರಿಗೂ ಗೊತ್ತಿದೆ. ಗ್ಲಿಸರಿನ್ ಅಂದಾಕ್ಷಣ ನೆನಪಿಗೆ ಬರೋದು ಕಣ್ಣೀರು. ಆದ್ರೆ ಗ್ಲಿಸರಿನ್ ಬಳಕೆ ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತದೆ. ಗ್ಲಿಸರಿನ್ ತ್ವಚೆ ಹಾಗೂ ಕೂದಲಿನ ಆರೈಕೆಗೆ ಹೆಚ್ಚು ಬಳಸಲಾಗುತ್ತದೆ. ನಿಮ್ಮ ಚರ್ಮ ನೈಸರ್ಗಿಕವಾಗಿ ಹೊಳೆಯಬೇಕೆಂದು ನೀವು ಬಯಸಿದರೆ, ಪ್ರತಿದಿನ ಗ್ಲಿಸರಿನ್ ಬಳಸುವುದರಿಂದ ಇದಕ್ಕಿಂತ ಉತ್ತಮವಾದ ಮಾಯಿಶ್ಚರೈಸರ್ ಬೇರೊಂದಿಲ್ಲ ಎಂದು ಹೇಳಬಹುದು.
ಚರ್ಮದ ನೈಸರ್ಗಿಕ ಹೊಳಪನ್ನು ಗ್ಲಿಸರಿನ್ ಹೆಚ್ಚಿಸುತ್ತದೆ. ನಿಮ್ಮ ಚರ್ಮ ಶುಷ್ಕ ಮತ್ತು ನೀರ್ಜಿವವಾಗಿ ಕಾಣುತ್ತದೆ ಎಂದು ನೀವು ಭಾವಿಸಿದಾಗಲೆಲ್ಲಾ, ಹತ್ತಿಯನ್ನು ಗ್ಲಿಸರಿನ್ ನಲ್ಲಿ ಅದ್ದಿ, ನಿಮ್ಮ ಚರ್ಮದ ಮೇಲೆ ಹಚ್ಚಿ. ಕೆಲವೇ ಸೆಕೆಂಡ್ ಗಳಲ್ಲಿ ನಿಮ್ಮ ಹೊಳೆಯಲು ಪ್ರಾರಂಭಿಸುತ್ತದೆ.


Glycerine Benefits , Skin Care.  beauty tips , 
ತ್ವಚೆಯ ಕಾಂತಿ , ಗ್ಲಿಸರಿನ್, ,ಬ್ಯೂಟಿ ಟಿಪ್ಸ್


ಗ್ಲಿಸರಿನ್ ಅಥವಾ ಗ್ಲಿಸರಾಲ್ ಎಂಬುದು ಸಸ್ಯ ಆಧಾರಿತ ದ್ರವ್ಯವೆಂದು ಹೇಳಬಹುದು. ಸೌಂದರ್ಯ ವರ್ಧಕ ಗ್ಲಿಸರಿನ್ ನ್ನು ಅನೇಕ ಚರ್ಮದ ಸಮಸ್ಯೆಗಳಿಗೆ ಬಳಸಬಹುದಾಗಿದೆ. ಶುದ್ಧ ಗ್ಲಿಸರಿನ್ ಚರ್ಮದ ತೇವಾಂಶವನ್ನು ಕಾಪಾಡುತ್ತದೆ.

ಗ್ಲಿಸರಿನ್ ಮತ್ತು ರೋಸ್ ವಾಟರ್…!

ಗ್ಲಿಸರಿನ್ ಹಾಗೂ ರೋಸ್ ವಾಟರ್ ಎರಡೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಎರಡನ್ನೂ ಮಿಶ್ರಣ ಮಾಡಿ ಹಚ್ಚಿಕೊಂಡಾಗ, ಚರ್ಮದ ಶುಷ್ಕತೆ, ಡೆಡ್ ಕೋಶ, ಮೊಡವೆ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಮಿಶ್ರಣವು ಚರ್ಮವನ್ನು ಮೃದುವಾಗಿಸುವುದಲ್ಲದೇ, ನಯವಾಗಿಸುತ್ತದೆ. ಚರ್ಮವನ್ನು ಹೈಡ್ರೀಕರಿಸುತ್ತದೆ ಗ್ಲಿಸರಿನ್ ನ್ನು ನೇರವಾಗಿ ಬಳಸುವುದಕ್ಕಿಂತ ರೋಸ್ ವಾಟರ್ ಜತೆಗೆ ಬೆರೆಸಿ ಬಳಸುತ್ತಾರೆ.


Glycerine Benefits , Skin Care.  beauty tips , 
ತ್ವಚೆಯ ಕಾಂತಿ , ಗ್ಲಿಸರಿನ್, ,ಬ್ಯೂಟಿ ಟಿಪ್ಸ್

ಗ್ಲಿಸರಿನ್ ಹೇಗೆ ಉಪಯೋಗಿಸಬೇಕು..!

ಗ್ಲಿಸರಿನ್ ಅನ್ನು ನೀವು ನೇರವಾಗಿ ಬಳಸಬಹುದು. ಅಥವಾ ಫೇಸ್ ಮಾಸ್ಕ್, ಫೇಸ್ ಪ್ಯಾಕ್ ರೂಪದಲ್ಲೂ ಬೆರೆಸಿ ಬಳಸಬಹುದು. ಗ್ಲಿಸರಿನ್ ನ ಜತೆಗೆ ಇತರ ಪದಾರ್ಥಗಳನ್ನು ಬೆರೆಸಿ ಬಳಸುವುದರಿಂದ ಶೀರ್ಘದಲ್ಲೇ ಫಲಿತಾಂಶ ಕಂಡುಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯ. ಮುಖವನ್ನು ಶುದ್ಧೀಕರಿಸದೇ ಗ್ಲಿಸರಿನ್ ಹಚ್ಚಬಾರದು. ಕ್ಲೆನ್ಸರ್ ಆಗಿ ಇದನ್ನು ಬಳಸಬಹುದಾಗಿದೆ. ನೈಸರ್ಗಿಕವಾಗಿ ತಯಾರಿಸದ ಕ್ಲೆನ್ಸರ್ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಮುಖದಲ್ಲಿರುವ ಮಾಲಿನ್ಯ, ಮುಂತಾದ ಕಲ್ಮಶಗಳನ್ನು ತೆಗೆದು ಹಾಕಬೇಕಾದರೆ, ಗ್ಲಿಸರಿನ್ ಸಹಾಯ ಮಾಡಬಲ್ಲದ್ದು.

ಹೇಗೆ ಬಳಸುವುದು..?

ಅರ್ಧ ಟೀ ಚಮಚಾ ಜೇನುತುಪ್ಪ, 1 ಟೀ ಚಮಚಾ ಗ್ಲಿಸರಿನ್ ಹಾಗೂ ಅರ್ಧ ಟೀ ಚಮಚಾ ಕ್ಯಾಸ್ಟ್ರೈಲ್ ಸೋಪ್ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಒಂದು ಬಾಕ್ಸ್ ನಲ್ಲಿ ಹಾಕಿ, ಬೆಳಿಗ್ಗೆ ಅಥವಾ ಸಂಜೆ ಹೊತ್ತು ಈ ಪೇಸ್ಟ್ ಹಚ್ಚಿ, ನಂತರ ನಿಮ್ಮ ಮುಖವನ್ನು ತೊಳೆದುಕೊಳ್ಳಿ.
ಮುಖವನ್ನು ಚೆನ್ನಾಗಿ ಶುದ್ಧೀಕರಿಸಿದ ಮೇಲೆ ನೀವು ಗ್ಲಿಸರಿನ್ ಹಾಗೂ ರೋಸ್ ವಾಟರ್ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ ದಿನಕ್ಕೆ 2 ಬಾರಿ ಇದನ್ನು ಟೋನರ್ ಆಗಿ ಬಳಸಬಹುದು.

ಮಾಯಿಶ್ಚರೈಸರ್ ಆಗಿ ಗ್ಲಿಸರಿನ್

ಗ್ಲಿಸರಿನ್ ನಲ್ಲಿ ಉತ್ತಮವಾದ ವಾಯಿಶ್ಚರೈಸರ್ ಇದ್ದು, ಇದು ಚರ್ಮದ ಶುಷ್ಕತೆ ಹಾಗೂ ಒರಟನ್ನು ಹೋಗಲಾಡಿಸುತ್ತದೆ. ಸ್ವಚ್ಛ ಹಾಗೂ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಇದು ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ.

ಎಣ್ಣೆಯುಕ್ತ ಚರ್ಮಕ್ಕೆ ಗ್ಲಿಸರಿನ್ ಬಳಸಬಹುದೇ…!

ಯೆಸ್, ಹಲವು ಜನರು ಶುಷ್ಕ ಚರ್ಮಕ್ಕೆ ಗ್ಲಿಸರಿನ್ ಒಳ್ಳೆಯದು ಎಂದು ಹೇಳಬಹುದು. ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ, ರೋಸ್ ವಾಟರ್ ಹಾಗೂ ಗ್ಲಿಸರಿನ್ ಮಿಶ್ರಣವನ್ನು ಹಚ್ಚಬಹುದು. ರೋಸ್ ವಾಟರ್ ಹಾಗೂ ಗ್ಲಿಸರಿನ್ ಎಣ್ಣೆಯುಕ್ತ ಚರ್ಮವನ್ನು ನಿವಾರಿಸುತ್ತದೆ.

ಗ್ಲಿಸರಿನ್ ಪ್ರಯೋಜನಗಳು…!

ನಿಮ್ಮ ಚರ್ಮದ ಆರೈಕೆಗಾಗಿ ಪ್ರತಿ ದಿನ ಗ್ಲಿಸರಿನ್ ಮತ್ತು ರೋಸ್ ವಾಟರ್ ಬಳಸಿದರೆ, ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಚರ್ಮದ ಟೋನ್ ಸುಧಾರಿಸುತ್ತದೆ
ಕಪ್ಪು ಕಲೆಗಳನ್ನು ನಿವಾರಿಸುತ್ತದೆ
ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ
ತಲೆಹೊಟ್ಟು ನಿವಾರಣೆ ಮಾಡುತ್ತದೆ

ಮುಖದ ಕಪ್ಪು ಕಲೆಗಳಿದ್ದರೆ, ಮುಲ್ತಾನಿ ಮಿಟ್ಟಿ, ಗ್ಲಿಸರಿನ್ ಹಾಗೂ ಬಾದಾಮಿ ಪುಡಿಯನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ, ಮುಖಕ್ಕೆ ಹಚ್ಚಿ, 30 ನಿಮಿಷಗಳ ಕಾಲ ಒಣಗಲು ಬೀಡಬೇಕು. ನಂತರ ನಿಧಾನವಾಗಿ ಕೈಗಳಿಂದ ಸ್ಕ್ರಬ್ ಮಾಡಿ , ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಚರ್ಮದ ಗುಳ್ಳೆಗಳನ್ನು ಗ್ಲಿಸರಿನ್ ನಿವಾರಿಸುತ್ತದೆ. ಚರ್ಮದ ಕಲೆ ಹಾಗೂ ಮೊಡವೆಗಳನ್ನು ನಿವಾರಿಸಲು ಪ್ರತಿ ದಿನ ಬಳಸಬೇಕು. ನಿಮ್ಮ ಮುಖಕ್ಕೆ ನಿಂಬೆ ಸಿಪ್ಪೆಯ ಮೇಲೆ ಗ್ಲಿಸರಿನ್ ಅನ್ನು ಉಜ್ಜಿದರೆ, ಚರ್ಮ ಕ್ರಮೇಣ ಮೃದುವಾಗುತ್ತದೆ.

ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ..!

ಪ್ರತಿ ದಿನ ಗ್ಲಿಸರಿನ್ ಹಾಗೂ ರೋಸ್ ವಾಟರ್ ಬಳಸಿದರೆ, ಮುಖದಲ್ಲಿರುವ ನೆರಿಗೆಗಳು ಹಾಗೂ ಅಕಾಲಿಕ ವಯಸ್ಸಾಗುವಿಕೆಯನ್ನು ಇದು ತಡೆಗಟ್ಟುತ್ತದೆ. ದೀರ್ಘಕಾಲ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

Glycerine Benefits , Skin Care.  beauty tips , 
ತ್ವಚೆಯ ಕಾಂತಿ , ಗ್ಲಿಸರಿನ್, ,ಬ್ಯೂಟಿ ಟಿಪ್ಸ್

ತಲೆಹೊಟ್ಟು ನಿವಾರಣೆಗೆ

ಗ್ಲಿಸರಿನ್ ನಲ್ಲಿರುವ ಶಿಲೀಂದ್ರ ವಿರೋಧಿ ಗುಣಗಳು ಇರುವುದರಿಂದ ಇದು ತಲೆ ಹೊಟ್ಟುನಿವಾರಿಸಲು ನೆರವಾಗುತ್ತದೆ. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಕೆಲವು ಹನಿ ಗ್ಲಿಸರಿನ್ ನಲ್ಲಿ ಬೆರೆಸಿ ಕೂದಲಿಗೆ ಹಚ್ಚಿ 2 ಗಂಟೆಗಳ ನಂತರ ತೊಳೆಯಿರಿ. ಇದನ್ನು ವಾರಕ್ಕೆ 2 ಬಾರಿ ಮಾಡುವುದರಿಂದ ಪರಿಹಾರ ದೊರೆಯುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ