ಚರ್ಮದ ಹೊಳಪು ಹೆಚ್ಚಿಸುವ ಜ್ಯೂಸ್ ಗಳು..!

ಆರೋಗ್ಯಕರ ಹಾಗೂ ಹೊಳೆಯುವ ಚರ್ಮದ ಬಗ್ಗೆ ಪ್ರತಿಯೊಬ್ಬರು ಯೋಚಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ತಾನು ಸುಂದರವಾಗಿ ಕಾಣಲು ಬಯಸುತ್ತಾನೆ. ಆದರೆ ವಯಸ್ಸಾಗುವಿಕೆ ದೇಹ ಹಾಗೂ ಚರ್ಮದಲ್ಲಿ ಕಂಡು ಬರುತ್ತದೆ. ಏಕೆಂದರೆ ಆರೋಗ್ಯಕರ ಆಹಾರವು ತುಂಬಾ ಪ್ರಾಮುಖ್ಯತೆ ವಹಿಸುತ್ತದೆ.ಹೀಗಾಗಿ ಚರ್ಮದ ಹೊಳಪು ಹೆಚ್ಚಿಸುವ ಆರೋಗ್ಯಕರ ಜ್ಯೂಸ್ ಬಗ್ಗೆ ತಿಳಿಸಿದ್ದೇವೆ.

glowing skin,  juices,ಚರ್ಮದ ಹೊಳಪಿಗೆ, ಜ್ಯೂಸ್


ಕಲ್ಲಂಗಡಿ

ಕಲ್ಲಂಗಡಿ ಹಣ್ಣು ಶೇ 95 ರಷ್ಟು ನೀರಿನ ಅಂಶವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಚರ್ಮವನ್ನು ಹೈಡ್ರೀಕರಿಸುವುದು ಮುಖ್ಯ. ಪ್ರತಿ ದಿನ ಕಲ್ಲಂಗಡಿ ಹಣ್ಣು ಸೇವಿಸುತ್ತಿದ್ದರೆ, ನಿಮ್ಮ ಚರ್ಮ ತಾಜಾವಾಗಿರುತ್ತದೆ. ಅಲ್ಲದೇ ಕಲ್ಲಂಗಡಿ ಫೇಸ್ ಮಾಸ್ಕ್ ಸಹ ತಯಾರಿಸಬಹುದು.

ಕರ್ಬೂಜ್ ಹಣ್ಣು

ಕರ್ಬೂಜ್ ಹಣ್ಣು ಸಾಕಷ್ಚು ನೀರಿನಂಶದಿಂದ ಕೂಡಿರುತ್ತದೆ. ಈ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಇದು ವಿಟಮಿನ್ ಸಿ ಉತ್ತಮ ಮೂಲವೆಂದೇ ಹೇಳಬಹುದು. ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಸಮತೋಲನಗೊಳಿಸುತ್ತದೆ. ಅಷ್ಟೇ ಅಲ್ಲದೇ, ಬೆಳಿಗ್ಗೆ, ರಾತ್ರಿ ಅಥವಾ ಸಂಜೆ ಯಾವುದೇ ಸಮಯದಲ್ಲಾದರೂ ಈ ಹಣ್ಣನ್ನು ಸೇವಿಸಬಹುದು. ಕರ್ಬೂಜ್ ಹಣ್ಣು ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸ್ರ್ಟಾಬೆರಿ ಹಣ್ಣು

ಬೇಸಿಗೆಯಲ್ಲಿ ವಿವಿಧ ರೀತಿಯ ಹಣ್ಣುಗಳಿವೆ. ಅವುಗಳಲ್ಲಿ ಸ್ರ್ಟಾಬೆರಿ ಹಣ್ಣುಗಳು ಸೇರಿವೆ. ಸ್ಟ್ರಾಬೆರಿ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು. ನಿಮ್ಮ ಚರ್ಮದ ಹೊಳಪು ಹೆಚ್ಚಾಗಬೇಕಾದರೆ, ನೀವು ಪ್ರತಿ ದಿನ ಸ್ಟ್ರಾಬೆರಿ ಹಣ್ಣುಗಳನ್ನು ಸೇವಿಸಿ. ಅಕಾಲಿಕ ವಯಸ್ಸಾಗುವಿಕೆಯನ್ನು ಸ್ಟ್ರಾಬೆರಿ ತಡೆಗಟ್ಟುತ್ತದೆ. ನೀವು ಸ್ಟ್ರಾಬೆರಿಯನ್ನು ವಿವಿಧ ರೀತಿಯಲ್ಲಿ ಬಳಸಬಹುದು.


glowing skin,  juices,ಚರ್ಮದ ಹೊಳಪಿಗೆ, ಜ್ಯೂಸ್

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು ಎಷ್ಟು ಆರೋಗ್ಯಕ್ಕೆ ಉತ್ತಮವಾದದ್ದು ಎಂದು ಎಲ್ಲರಿಗೂ ಗೊತ್ತು. ಇದು ತ್ವಚೆಯ ಬ್ಯೂಟಿಯನ್ನು ಹೆಚ್ಚಿಸುತ್ತದೆ. ಪಪ್ಪಾಯಿ ಇಂದ ತಯಾರಿಸಿದ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಬದಲಾಗಿ ನೀವು ಪ್ರತಿ ದಿನ ಪಪ್ಪಾಯಿ ಹಣ್ಣು ಸೇವಿಸಿದರೆ ಚರ್ಮದ ಆರೋಗ್ಯ ಹೆಚ್ಚುತ್ತದೆ. ಅಲ್ಲದೇ ಪಪ್ಪಾಯಿಯಲ್ಲಿ ಮೆಗ್ನೇಶಿಯಂ, ಪೊಟ್ಯಾಶಿಯಂ , ಫೋಲಿಕ್ ಆಸಿಡ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಯಂತಹ ಅನೇಕ ಪೋಷಕಾಂಶಗಳಿವೆ.

ಪೈನಾಪಲ್

ಪೈನಾಪಲ್ ತಿನ್ನಲು ತುಂಬಾ ಟೇಸ್ಟಿಯಾಗಿರುವುದಷ್ಟೇ ಅಲ್ಲ, ಪೋಷಕಾಂಶಗಳಿಂದ ಕೂಡಿದೆ. ವಿಟಮಿನ್ ಸಿ ಜತೆಗೆ ವಿಟಮಿನ್ ಬಿ 6 ನಿಂದ ಸಮೃದ್ಧವಾಗಿದ್ದು, ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಪ್ರತಿ ನಿತ್ಯ ಜ್ಯೂಸ್ ಸೇವಿಸುವುದರಿಂದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ತರಕಾರಿಗಳಲ್ಲೊಂದು. ಕ್ಯಾರೆಟ್ ನ್ನು ಹೇಗೆ ಬೇಕಾದರೂ ಸೇವಿಸಬಹುದು. ಕ್ಯಾರೆಟ್ ಜ್ಯೂಸ್ ನ್ನು ನಿಮ್ಮ ಆಹಾರದಲ್ಲಿ ಸೇವಿಸಬೇಕು. ಸಾಕಷ್ಟು ಪ್ರಮಾಣದ ಕಬ್ಬಿಣ ಮತ್ತು ಪೊಟ್ಯಾಶಿಯಂ ಕಾರಣ. ಇದು ರಕ್ತ ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಬೀಟ್ರೂಟ್ ಜ್ಯೂಸ್

ಬೀಟ್ರೂಟ್ ಜ್ಯೂಸ್ ಕಬ್ಬಿಣ ಅತ್ಯುತ್ತಮ ಮೂಲವೆಂದು ಹೇಳಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಶಿಯಂ ಇದ್ದು, ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಬೀಟ್ರೂಟ್ ಹೊಳೆಯುವ ಹಾಗೂ ಆರೋಗ್ಯಕರ ಚರ್ಮಕ್ಕೆ ಒಳ್ಳೆಯದು ಎಂದು ಹೇಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ