ಮಸಲ್ಸ್ ಬಿಲ್ಡ್ ಮಾಡಬೇಕಾ? ಮನೆಯಲ್ಲೇ ಇದೆ ಮನೆಮದ್ದು!

  • by

ಇಂದಿನ ದಿನಗಳಲ್ಲಿ ಯೂಥ್ಸ್ ಬಾಡಿ ಮಸಲ್ಸ್ ಹೊಂದಲು ಬಯಸು್ತತಾರೆ. ಇದಕ್ಕಾಗಿ ಸಾಕಷ್ಟು ಪ್ರಯತ್ನಿಸ್ತಾರೆ. ಜಿಮ್ ನಲ್ಲಿ ಹೋಗಿ ವರ್ಕೌಟ್ ಮಾಡೋದನ್ನ ತಪ್ಪದೇ ಪಾಲಿಸು್ತತಾರೆ. ಆದ್ರೆ ಸ್ನಾಯುಗಳು ಆರೋಗ್ಯಕರವಾಗಿರಬೇಕು ಹಾಗೂ ಬಲಪಡಿಸುವುದೆಂದರೆ ಸುಲಭದ ಮಾತಲ್ಲ. ಕುಸ್ತಿಪಟುವಿನಂತೆ ದೇಹವನ್ನು ಬಿಲ್ಡ್ ಮಾಡಲು ಜಿಮ್ ಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಸುಲಭವಾಗಿ ಸೀಗುವ ನೈಸರ್ಗಿಕ ವಸ್ತುಗಳನ್ನು ಬಾಡಿ ಮಸಲ್ಸ್ ಹೆಚ್ಚಿಸಿಕೊಳ್ಳಬಹುದು. ಯಾವೆಲ್ಲಾ ನೈಸರ್ಗಿಕ ಆಹಾರ ಸೇವಿಸಿದ್ರೆ ಬಾಡಿ ಮಸಲ್ಸ್ ಪಡೆಯಬಹುದು. ಇಲ್ಲಿದೆ ಟಿಪ್ಸ್.

ಸೋಯಾಬೀನ್
ಸೋಯಾಬೀನ್ ನಲ್ಲಿ ಮೆಗ್ನೇಶಿಯಂ, ಪ್ರೋಟೀನ್ ಹಾಗೂ ವಿಟಮಿನ್ ಕೆ ಹೆಚ್ಚಾಗಿ ಇರುತ್ತದೆ. ಇದು ಮಸಲ್ಸ್ ಬೆಳವಣಿಗೆಗೆ ಹೆಚ್ಚು ಸಹಕಾರಿ. ಸೋಯಾದಲ್ಲಿರುವ ಐರನ್ ಆಮ್ಲಜನಕವನ್ನು ಸ್ಟೋರ್ ಮಾಡುವ ಜತೆ ಜತೆಗೆ ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತದೆ. 1 ಬಟ್ಟಲು ಸೋಯಾಬಿನ್ ನಲ್ಲಿ 28 ಗ್ರಾಂ ಗಳಷ್ಟು ಪ್ರೋಟೀನ್ ಹೆಚ್ಚಿರುತ್ತದೆ.

ಸಸ್ಯಜನ್ಯ ಆಹಾರವಾದ ನವಣೆಯಲ್ಲಿ ೯ ಪ್ರಮುಖ ಅಮೈನೋ ಆ್ಯಸಿಡ್ ಗಲಿದ್ದು, ಇದೊಂದು ಸಂಪೂರ್ಣ ಪ್ರೋಟೀನ್ ಆಕರ ಎನಿಸಿಕೊಂಡಿದೆ. ಬಾಡಿ ಮಸಲ್ಸ್ ಹೆಚ್ಚಾಗಬೇಕಾದರೆ ನವಣೆಯಿಂದ ತಯಾರಿಸಿದ ಆಹಾರಗಳು ಹೆಚ್ಚು ಸೂಕ್ತ. 1 ಕಪ್ ನವಣೆಯಲ್ಲಿ 8 ಗ್ರಾಂ ಪ್ರೋಟೀನ್ ಇರುತ್ತದೆ.

ಸೀಬೆಹಣ್ಣು ಉತ್ತಮ ಪ್ರೋಟೀನ್ ಆಗರವಾಗಿದೆ. ಇದರಲ್ಲಿ ವಿಟಮಿನ್ ಸಿ ಹಾಗೂ ಮೆಗ್ನೇಶಿಯಂ ಹೇರಳವಾಗಿರುವುದರಿಂದ ಅವು ವರ್ಕೌಟ್ ಬಳಿಕ ನರಗಳನ್ನು ಹಾಗೂ ಮಸಲ್ಸ್ ನ್ನು ರಿಲ್ಯಾಕ್ಸ್ ಮಾಡುತ್ತದೆ. ಪೇರಳೆ ಹಣ್ಣು ದೇಹದಲ್ಲಿ ಕೊಲ್ಯಾಜನ್ ಹೆಚ್ಚಿಸುತ್ತದೆ. ಚರ್ಮ ಹೆಚ್ಚು ಮೃದುವಾಗಿ ಕಾಣುವಂತೆ ಮಾಡುತ್ತದೆ.

ಮೊಟ್ಟೆ ಸೇವನೆಯಿಂದಲೂ ಬಾಡಿ ಮಸಲ್ಸ್ ಹೆಚ್ಚಿಸಿಕೊಳ್ಳಬಹುದು. ಮಸಲ್ಸ್ ಬೆಳೆಯಲು ಆರೋಗ್ಯಕರ ಫ್ಯಾಟ್ ಮತ್ತು ನ್ಯೂಟ್ರಿಯೆಂಟ್ಸ್ ಗಳಿವೆ. ವಿಟಮಿನ್ ಬಿ ಹಾಗೂ ಕೋಲಿನ್ ಹೆಚ್ಚಾಗಿದೆ. ಸ್ನಾಯುಗಳನ್ನು ಇದು ಬಲಗೊಳಿಸಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ , ಸತು, ಕಬ್ಬಿಣ ಇದರಲ್ಲಿ ಹೇರಳವಾಗಿದೆ. ಚಿಕನ್ ಸೇವಿಸುವುದರಿಂದಲೂ ಮಸಲ್ಸ್ ಹೆಚ್ಚಿಸಿಕೊಳ್ಳಬಹುದು. ಉತ್ತಮ ರುಚಿಯಲ್ಲಿ ಚಿಕನ್ ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು.

ಇನ್ನು ಸಾಕಷ್ಟು ನೀರು ಕುಡಿಯಬೇಕು. ದೇಹದ ಸ್ನಾಯುಗಳಿಗೆ ನೀರಿನ ಅಗತ್ಯವಾಗಿ ಬೇಕು. ನಮ್ಮ ದೇಹ ಪ್ರತಿಶತ 20 ರಷ್ಟು ನೀರಿನಿಂದ ಕೂಡಿದೆ. ಸಾಕಷ್ಟು ನೀರು ಕುಡಿಯಿರಿ. ಅಲ್ಲದೇ ಮೀನು ಸಹ ಮಸಲ್ಸ್ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಮೀನಿನಲ್ಲಿ ಒಮೆಗಾ 3 ಮತ್ತು ಕೊಬ್ಬಿನಾಮ್ಲಗಳು ಹೆಚ್ಚಾಗಿರುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಸ್ನಾಯುಗಳಿಗೆ ಪ್ರಯೋಜನ ನೀಡುವುದಲ್ಲದೇ, ಕೊಬ್ಬನ್ನು ಕಡಿಮೆ ಮಾಡುತ್ತದೆ.

ಓಟ್ಸ್ ಮೀಲ್ ಸಹ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಪೈಬರ್, ಪ್ರೋಟೀನ್ , ಕಾರ್ಬೋಹೈಡ್ರೈಟ್ ಗಳ ಉತ್ತಮ ಸಮತೋಲನವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ. ಅನಾನಸ್ ನ್ನು ಸಹ ಸೇವಿಸಬಹುದು. ಇದು ಸ್ನಾಯುಗಳ ಬಿಗಿತವನ್ನು ತಡೆಗಟ್ಟುತ್ತದೆ. ಬಾಡಿ ಬಿಲ್ಡ್ ಮಾಡಿಕೊಳ್ಳಲು ಪಾಲಕ್ ಸೊಪ್ಪನ್ನು ಸೇವಿಸಬಹದು. ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ಇದು ಸ್ನಾಯುಗಳನ್ನು ಬಲಪಡಿಸಲು ಸಹಾಯಕಾರಿಯಾಗಿದೆ.

ಸಿಹಿ ಆಲುಗಡ್ಡೆಯನ್ನು ಸೇವಿಸಬಹುದು. ಸಿಹಿ ಆಲುಗಡ್ಡೆ 26 ಗ್ರಾಂ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಎ, ಬಿ 2 ಕೂಡಾ ಹೇರಳವಾಗಿದೆ. ಇದು ಉತ್ತಮ ಶಕ್ತಿಯ ಮೂಲವಾಗಿದೆ.

ಬ್ರೌನ್ ರೈಸ್ ಸಹ ಉತ್ತಮ ಪೋಶಕಾಂಶಗಳನ್ನು ಒದಗಿಸುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ತರಕಾರಿಗಳೊಂದಿಗೆ ತಿನ್ನುವುದರಿಂದ ಸಾಕಷ್ಟು ಶಕ್ತಿ ಪಡೆಯಬಹುದು. ಮೊಳಕೆಯೊಡದ ಧಾನ್ಯಗಳನ್ನು ಹಾಗೂ ಕಾಳುಗಳು ಬಾಡಿ ಬಿಲ್ಡ್ ಮಾಡಲು ಸಹಾಯ ಮಾಡುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಕೂಡಾ ಇದೆ. ಇದು ನಿಮ್ಮ ಸ್ನಾಯುಗಳ ಆರೋಗ್ಯಕ್ಕೆ ಅತ್ಯವಶ್ಯಕ. ಇದರಲ್ಲಿ ಪೊಟ್ಯಾಶಿಯಂ ಇರುತ್ತದೆ. ಇದಲ್ಲದೇ, ಸ್ನಾಯುಗಳನ್ನು ಪಡೆಯುವಲ್ಲಿ ಇದು ಸಹಕಾರಿಯಾಗಿದೆ. ಸೌತೆಕಾಯಿ ತಿನ್ನುವುದರಿಂದ ಸ್ನಾಯುಗಳಿಗೆ ಒಳ್ಳೆಯದು. ಸೌತೆಕಾಯಿ ಸ್ಲೈಸ್ ನ್ನು ಪ್ರತಿನಿತ್ಯ ಸೇವಿಸುವುದರಿಂದ ಸ್ನಾಯುಗಳು ಬಲಗೊಳ್ಳಲು ಹಾಗೂ ಆರೋಗ್ಯಕ್ಕೆ ಉತ್ತಮವಾದದ್ದು.

ಬಾಡಿ ಮಸಲ್ಸ್ ಪಡೆಯಬೇಕಾದರೆ, ಪಪ್ಪಾಯ ಹಣ್ಣನ್ನು ಸೇವಿಸಬಹುದು. ಪಪ್ಪಾಯ ಹಣ್ಣಿನಲ್ಲಿ ಪ್ರೋಟೀನ್ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಪ್ರಿ- ವರ್ಕೌಟ್ ಫ್ರೂಟ್ ಅಂತಲೂ ಪಪ್ಪಾಯ ಹಣ್ಣನ್ನು ಕರೆಯಲಾಗುತ್ತದೆ.

ಅರಶಿಣವನ್ನು ಸೂಪರ್ ಫುಡ್ ಅಂತಲೂ ಕರೆಯಲಾಗುತ್ತದೆ. ಸ್ನಾಯುಗಳ ಬೆಳವಣಿಗೆಗೆ ಹಾಗೂ ಬಲಗೊಳಿಸಲು ಅರಶಿಣವನ್ನು ಹೆಚ್ಚು ಸೇವಿಸಬೇಕು. ನಿಮ್ಮ ಆಹಾರದಲ್ಲಿ ಅಥವಾ ಹಾಲಿನ ಜತೆಗೆ ಅರಶಿಣ ಸೇರಿಸಿ, ಸೇವಿಸಬಹುದು.

ಆಲಿವ್ ಎಣ್ಣೆ ಯಲ್ಲಿ ಮೊನೊಸಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಈ ಕೊಬ್ಬು ಸ್ನಾಯು ಸೆಳೆತವನ್ನು ತಡೆಗಟ್ಟುತ್ತದೆ. ಆಲಿವ್ ಎಣ್ಣೆಯಲ್ಲಿ ಒಮೆಗಾ – 3 ಕೊಬ್ಬಿನಾಮ್ಲಗಳು ಇರುತ್ತವೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆಲಿವೆ ಎಣ್ಣೆ ಉರಿಯೂತಕ್ಕೆ ಸಹಾಯ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ