ಯಾವ ಬ್ಲಡ್ ಗ್ರೂಪ್ ನವರು, ಯಾವ ಆಹಾರ ಸೇವಿಸಬೇಕು? – (Which Foods To Eat Based On Your Blood Type?)

  • by


ಕೆಲಮೊಮ್ಮೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದ ನಂತರವು, ನಾವು ಅಜೀರ್ಣ ಸಮಸ್ಯೆ, ಆಲಸ್ಯ ಹಾಗೂ ತೂಕ ಹೆಚ್ಚಳ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತೇವೆ. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ರಕ್ತದ ಗ್ರೂಪ್ ಪ್ರಕಾರ ಆಧರಿಸಿ ನಿಮ್ಮ ಆಹಾರವನ್ನು ಸೇವಿಸಬೇಕಾಗುತ್ತದೆ.


Foods, Your Blood Type?, ಬ್ಲಡ್ ಟೈಪ್, ಆಹಾರಗಳು,

ನಿಮ್ಮ ರಕ್ತದ ಗುಂಪಿಗೆ ಹೊಂದಿಕೆಯಾಗುವ ಆಹಾರ ಕೆಲಮೊಮ್ಮೆ ಅಗತ್ಯವಿರುತ್ತದೆ. ತಜ್ಞರ ಪ್ರಕಾರ, ನಿಮ್ಮ ರಕ್ತದ ಗ್ರೂಪ್ ನಿಮ್ಮ ದೇಹದ ಅವಶ್ಯಕತೆ ಹಾಗೂ ವ್ಯಕ್ತಿತ್ವಕ್ಕೆ ತಕ್ಕಂತೆ ವಿವರವನ್ನು ಬಹಿರಂಗಪಡಿಸುತ್ತದೆ. ಬ್ಲಡ್ ಗ್ರೂಪ್ ಆಧಾರದ ಮೇಲೆ ಆಹಾರ ಪದ್ಧತಿಯನ್ನು ಕಸ್ಟಮೈಸ್ ಮಾಡಲು ಸೂಚಿಸುತ್ತಾರೆ ಎಂದು ತಿಳಿದರೆ ನಿಮ್ಗೆ ಆಶ್ಚರ್ಯವಾಗಬಹುದು.ಆದ್ದಿರಂದ ಬ್ಲಡ್ ಗ್ರೂಪ್ ಎ, ಬಿ, ಎಬಿ ಅಥವಾ ಒ ರಕ್ತ ಗುಂಪಿಗೆ ಸೇರಿದವರೇ ಎಂಬುದನ್ನು ಅವಲಂಬಿಸಿ, ಆಹಾರದ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಯಾವ ಬ್ಲಡ್ ಗ್ರೂಪ್ ನವರು ಯಾವ ಯಾವ ಆಹಾರ ಸೇವಿಸಬೇಕು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಟೈಪ್ – ಒ

‘ಒ’ ಬ್ಲಡ್ ಗ್ರೂಪ್ ನವರು ಸಾಮಾನ್ಯವಾಗಿ ಇದು ಅತ್ಯಂತ ಹಳೆಯ ಹಾಗೂ ಸಾಮಾನ್ಯ ಪ್ರಕಾರದ ರಕ್ತದ ಪ್ರಕಾರವೆಂದು ಗುರುತಿಸಲಾಗಿದೆ. ಈ ರಕ್ತದ ಗುಂಪಿಗೆ ಸೇರಿದವರು. ಹೆಚ್ಚು ಗಮನಹರಿಸಬೇಕಾದ ಆಹಾರಗಳೆಂದರೆ ಬೀನ್ಸ್ , ಬೀಜ ಪದಾರ್ಥ, ಮಾಂಸ ಹಾಗೂ ಮೀನಿನಂತಹ ಆಹಾರಗಳನ್ನು ಸೇವಿಸಿದರೆ ಉತ್ತಮ. ಅಲ್ಲದೇ ಕಡಿಮೆ ಸಂಸ್ಕರಿಸಿದ ಆಹಾರ, ಕಡಿಮೆ ಉಪ್ಪಿರುವ ಆಹಾರ ಸೇವಿಸಬೇಕು. ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿಗೆ ಇದು ಸಹಾಯ ಮಾಡುತ್ತದೆ.

ತೂಕವನ್ನು ಹೆಚ್ಚಿಸಿಕೊಳ್ಳುವುದಾದರೆ ಆಹಾರಗಳು
ಮಸೂರ್ ದಾಲ್, ಬೀನ್ಸ್, ಕಿಡ್ನಿ ಬೀನ್ಸ್ , ಸಂಸ್ಕರಿಸಿದ ಧಾನ್ಯಗಳು, ಸಕ್ಕರೆ , ಗೋಧಿ ಹಿಟ್ಟು, ಸಿಹಿ ಆಲುಗಡ್ಡೆ, ಜೋಳ, ಹೂಕೋಸು, ಮೊಳಕೆ ಕಾಳುಗಳು ಒಂದು ವೇಳೆ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಗ್ರೀನ್ ಟೀ, ಫಿಶ್, ಕೋಸುಗಡ್ಡೆ ಸೇವಿಸಿ.


Foods, Your Blood Type?, ಬ್ಲಡ್ ಟೈಪ್, ಆಹಾರಗಳು,

ಟೈಪ್ – ಎ

ಈ ರಕ್ತ ಗುಂಪಿನವರು ಪ್ರಕೃತಿಯ ಜತೆ ಬಾಂಧವ್ಯ ಹೊಂದಿರುತ್ತಾರೆ. ಕಿಕ್ಕಿರಿದ ಜನಸಮುದಾಯದಲ್ಲಿ ಆರಾಮದಾಯಕ ಜೀವನ ನಡೆಸುವವರು. ಈ ರಕ್ತದ ಗುಂಪಿಗೆ ಸೇರಿದವರು ಕಠಿಣ ಪರಿಶ್ರಮ, ಶಾಂತ ಮತ್ತು ಜವಾಬ್ದಾರಿಯುತ ವ್ಯಕ್ತಿತ್ವದವರು ಎಂದು ಹೇಳಲಾಗುತ್ತದೆ. ಎ ಗ್ರೂಪ್ ನವರು ಆರೋಗ್ಯವಾಗಿರಲು ಧಾನ್ಯಗಳು, ಹಣ್ಣುಗಳು, ಮತ್ತು ತರಕಾರಿ ಸಮೃದ್ದವಾಗಿರುವ ಫೈಬರ್ ಆಹಾರವನ್ನು ಸೇವಿಸಬೇಕು. ಕಬ್ಬಿಣ , ಬಿ 12 ಕಾಂಪ್ಲೆಕ್ಸ್, ಎ, ಇ, ಸಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವು ಟೈಪ್ ಎ ರಕ್ತ ಗುಂಪು ಹೊಂದಿರುವ ಜನರ ಆರೋಗ್ಯವನ್ನು ಹೆಚ್ಚಿಸುತ್ತದೆ. ಎಳ್ಳು, ಕೋಸುಗಡ್ಡೆ, ಪಾಲಕ್ ಸೊಪ್ಪು ಸೇವಿಸಬಹುದು. ಇದರಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಅನೇಕ ಆರೋಗ್ಯ ತಜ್ಞರ ಪ್ರಕಾರ, ಈ ಗುಂಪಿನವರು ಸಸ್ಯಹಾರ ಆಹಾರದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಮತ್ತು ಮಾಂಸ, ಗೋಧಿ, ಮತ್ತು ಡೈರಿ ಆಹಾರದಿಂದ ದೂರವಿರಬೇಕಾಗುತ್ತದೆ.

ಈ ಬ್ಲಡ್ ಗ್ರೂಪ್ ನವರು ತೂಕವನ್ನು ಹೆಚ್ಚಿಸುವುದಾದರೆ ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಉದಾಹರಣೆಗೆ ಡೈರಿ ಆಹಾರಗಳು, ಗೋಧಿ, ಕಿಡ್ನಿ ಬೀನ್ಸ್..ಸೋಯಾ ಆಧಾರಿತ ಆಹಾರಗಳು ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ಸುಧಾರಿಸಲು ನೆರವಾಗುತ್ತದೆ.

ಟೈಪ್ – ಬಿ

ಈ ಗುಂಪಿನವರು ಸುಲಭವಾಗಿ ಹವಾಮಾನಕ್ಕೆ ಹೊಂದಿಕೊಳ್ಳುತ್ತಾರೆ ಎಂದು ಹೇಳಬಹುದು. ಬಿ ಗ್ರೂಪ್ ನವರು ಹೆಚ್ಚು ಡೈರಿ ಉತ್ಪನ್ನಗಳನ್ನು ಇಷ್ಟಪಡುತ್ತಾರೆ. ರೋಗಗಳ ವಿರುದ್ಧ ಹೋರಾಡಲು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಈ ಗ್ರೂಪ್ ನವರು ತಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಗಳನ್ನು ಸೇವಿಸಬೇಕಾಗುತ್ತದೆ. ಬೀನ್ಸ್ , ಬೀಜಗಳು, ಮೊಟ್ಟೆಗಳು , ಮೀನು , ಮಟನ್ ಸೇವಿಸಬೇಕು. ಬಾಯಾರಿಕೆಯನ್ನು ನೀಗಿಸಲು ಸಕ್ಕರೆ ಪಾನೀಯಗಳನ್ನು ಅವೈಡ್ ಮಾಡಿ, ನೀರನ್ನು ಮಾತ್ರ ಕುಡಿಯುವುದು ಒಳ್ಳೆಯದು. ತೂಕ ಹೆಚ್ಚಿಸಿಕೊಳ್ಳುವ ಬಯಕೆ ನಿಮಗಿದ್ದರೆ, ನಿಮ್ಮ ಆಹಾರದಲ್ಲಿ ಗೋಧಿ, ಜೋಳ, ಕಡಲೆಕಾಯಿ, ಹಾಗೂ ಎಳ್ಳು, ಮಸೂರ್ ದಾಲ್ ಸೇವಿಸಿ.

ಟೈಪ್ -ಎಬಿ

ಎಬಿ ಬ್ಲಡ್ ಗ್ರೂಪ್ ನವರು ಮೀನು, ಸಮುದ್ರಾಹಾರ, ಮೊಸರು ಹಾಬ ಡೈರಿ, ಹಸಿರು ತರಕಾರಿಗಳಾದ ಕೋಸುಗಡ್ಡೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಚಿಕನ್ , ಕಾರ್ನ್, ಹುರುಳಿ ಮತ್ತು ಬೀನ್ಸ್ ಅನ್ನು ಅವೈಡ್ ಮಾಡಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ