ಒತ್ತಡ ನಿವಾರಣೆಗೆ ಈ ಆಹಾರಗಳು ಸೇವಿಸಿ..-(Foods for Stress Relief..!)

  • by
youth issues

ಇಂದಿನ ಜೀವನಶೈಲಿಯಿಂದಾಗಿ ಜನರು ಬೇಗನೆ ದಣಿವು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒತ್ತಡವನ್ನು ನಿವಾರಿಸಲು ಔಷಧಿಗಳ ಮೇಲೆ ಅವಲಂಬನೆ ಆಗುವವರು ಹೆಚ್ಚು. ಕೆಲವು ಔಷಧಿಗಳನ್ನು ಸೇವಿಸುವುದರಿಂದ ನಿಮ್ಮ ಒತ್ತಡವನ್ನು ನಿವಾರಿಸಬಹುದು.

ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಒಂದು ತಿಂಗಳಿಂದ ಮನೆಯಲ್ಲಿರುವುದರಿಂದ ಒತ್ತಡ ಸಮಸ್ಯೆಯೇ ಎದುರಿಸುವುದು ಸಹಜವಾಗಿಬಿಟ್ಟಿದೆ. ಇದು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವುದಲ್ಲದೇ. ಆತಂಕ, ಖಿನ್ನತೆಗೆ ಕಾರಣವಾಗುತ್ತದೆ. ಆದ್ದರಿಂದ ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಟಿಪ್ಸ್ ಇಲ್ಲಿದೆ.

Foods ,Stress Relief,ಆಹಾರಗಉ, ಒತ್ತಡಮನಸ್ಥಿತಿಯನ್ನು ಸುಧಾರಿಸಲು ಡಾರ್ಕ್ ಚಾಕಲೇಟ್ ಅತ್ಯುತ್ತಮ ಆಯ್ಕೆಯಾಗಿದೆ. ವಾಸ್ತವಾಗಿ ಡಾರ್ಕ್ ಚಾಕಲೇಟ್ ಸೇವಿಸುವುದರಿಂದ ದೇಹದಲ್ಲಿ ಎಂಡಾರ್ಫಿನ್ ಗಳನ್ನು ಸೃಷ್ಟಿಸುತ್ತದೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ.

ಬಾಳೆಹಣ್ಣಿನಲ್ಲಿರುವ ಪೋಟ್ಯಾಶಿಯಂ ರಕ್ತದೋತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ವಿರುವುದರಿಂದ ಇದು ಶಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಬೆಳಿಗ್ಗೆ ಉಪಹಾರದಲ್ಲಿ ಬಾಳೆಹಣ್ಣು ಸೇವಿಸಬೇಕಂತೆ. ಇದರಿಂದ ದೇಹದ ಗ್ಲೂಕೋಸ್ ಪೂರೈಸಲು ನೆರವಾಗುತ್ತದೆ. ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಮ್ಮ ಚಯಾಪಚ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಪೊಟ್ಯಾಶಿಯಂ ದೇಹದಲ್ಲಿನ ಅದರ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಮತ್ತು ಒತ್ತಡವನ್ನು ನಿವಾರಿಸುತ್ತದೆ.

ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೊಸಂಬಿ , ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತವೆ. ಇವು ಒತ್ತಡವನ್ನು ನಿವಾರಿಸಲು ನೆರವಾಗುತ್ತದೆ.ದೇಹಕ್ಕೆ ವಿಶ್ರಾಂತಿ ದೊರೆಯುವುದಲ್ಲದೇ, ಉತ್ತಮ ನಿದ್ರೆಗೆ ಇದು ಸಹಾಯಕಾರಿಯಾಗಬಲ್ಲದ್ದು. ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Foods ,Stress Relief,ಆಹಾರಗಉ, ಒತ್ತಡ


ಪಿಸ್ತಾದಲ್ಲಿ ಸತು ಹಾಗೂ ಮೆಗ್ನೇಶಿಯಂ ಹೇರಳವಾಗಿರುವುದರಿಂದ ಒತ್ತಡವನ್ನು ನಿವಾರಿಸಬಹುದಾಗಿದೆ. ಕೆಲವರು ಕೆಲಸ ಮಾಡುವ ಸ್ಥಳದಲ್ಲಿ ಪಿಸ್ತಾವನ್ನು ಇಟ್ಟುಕೊಂಡು, ಸೇವಿಸುತ್ತಾರೆ. ಇದ್ರಿಂದ ಸ್ರ್ಟೆಸ್ ಕಡಿಮೆಯಾಗುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅವಕಾಡೊದಲ್ಲಿಯೂ ವಿಟಮಿನ್ ಇ, ಬಿ ಹಾಗೂ ಪೊಟ್ಯಾಶಿಯಂ ಜತೆಗೆ ಅನೇಕ ಪೋಷಕಾಂಶಗಳಿವೆ. ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದಲ್ಲದೇ, ಒತ್ತಡವನ್ನು ನಿವಾರಿಸುತ್ತದೆ.

ಹೊಟ್ಟೆಯಲ್ಲಿರುವ ಬ್ಯಾಕ್ಟೇರಿಯಾ ಗಳಿಂದ ಒತ್ತಡವು ಉಂಟಾಗಬಹುದು. ಮೊಸರಿನಲ್ಲಿರುವ ಪ್ರೋಬಯಾಟಿಕ್ ಅಂಶ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ. ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಭರಿತ ಮೊಸರನ್ನು ದೈನಂದಿನ ಆಹಾರದಲ್ಲಿ ಸೇವಿಸಿದರೆ ಒತ್ತಡದ ಮಟ್ಟವನ್ನು ಕಡಿಮೆ ಮಾಡಬಹುದಾಗಿದೆ

ಕಾರ್ಬೋಹೈಡ್ರೇಟ್ ಓಟ್ ಮೀಲ್ ಮೆದುಳಿನಲ್ಲಿ ಸಿರೊಟೋನಿನ್ ಅನ್ನು ಬಿಡುಗಡೆ ಮಾಡಲು ನೆರವಾಗುತ್ತದೆ. ಸಿರೊಟೋನಿನ್ ಒಳ್ಳೆಯ ರಾಸಾಯನಿಕವಾಗಿದ್ದು, ಇದರಿಂದ ಪ್ರಯೋಜನ ಪಡೆಯಬಹುದಾಗಿದೆ. ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇನ್ನು ಗ್ರೀನ್ ಟೀಯಲ್ಲಿ ಅಮೈನೊ ಆಮ್ಲ ವಿರುವುದರಿಂದ ಮೆದುಳಿನ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವಲ್ಲಿ ಗ್ರೀನ್ ಟೀ ಸಹಾಯ ಮಾಡುತ್ತದೆ.

ಗೋಡಂಬಿ ಬಹಳಷ್ಟು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವುದರಿಂದ ಆತಂಕ ಹಾಗೂ ಖಿನ್ನತೆಯದಂತಹ ಅನೇಕ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.

ಕ್ಯಾರೆಟ್ ಒತ್ತಡವನ್ನು ನಿವಾರಿಸಲು ಸಹಯಾ ಮಾಡುತ್ತದೆ. ಪೌಷ್ಠಿಕ ಸಮೃದ್ಧವಾಗಿರುವ ಕ್ಯಾರೆಟ್ , ತಾಜಾ ತರಾಕಾರಿಗಳಲ್ಲಿ ಒಂದು. ಪ್ರತಿದಿನ ಕ್ಯಾರೆಟ್ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಇನ್ನು ಹಾಲಿನಲ್ಲಿ ವಿಟಮಿನ್ ಬಿ, ಪ್ರೋಟೀನ್ ಹೆಚ್ಚಾಗಿರುವುದರಿಂದ ಕ್ಯಾಲ್ಸಿಯಂ ಪಡೆಯಲು ನೆರವಾಗುತ್ತದೆ. ಪ್ರತಿ ದಿನ ಹಾಲು ಸೇವಿಸುವುದರಿಂದ ಉತ್ತಮ ನಿದ್ರೆ ನಿಮ್ಮದಾಗಬಹುದಾಗಿದೆ. ದೇಹದಲ್ಲಿ ತುರಿಕೆ ಸಮಸ್ಯೆ ಕಂಡು ಬಂದಾಗ ಉಪ್ಪು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ