ಫುಡ್ ಪಾಯಿಸನ್’ಗೆ ಇಲ್ಲಿದೆ ಸುಲಭ ಪರಿಹಾರ..! – (Food Poisoning Symptoms and Home Remedies )

  • by

ಫುಡ್ ಪಾಯಿಸನ್ ಕಾರಣವೆಂದರೆ ಅನಿಯಮಿತ ದಿನಚರಿ, ಸರಿಯಾದ ಕ್ರಮದಲ್ಲಿ ತಿನ್ನದೇ ಇರುವುದು ಕಾರಣವಾಗಿರಬಹುದು. ನೀವು ಕಚ್ಚಾ ತರಕಾರಿ, ಬೇಯಿಸಿದ ಮೌಂಸ, ಕಚ್ಚಾ ಹಾಲು ಅಥವಾ ಅದರಿಂದ ತಯಾರಿಸಿದ ವಸ್ತುಗಳು , ಮೊಳಕೆಯೊಡದ ಕಾಳುಗಳು ಧಾನ್ಯಗಳು , ಸಮುದ್ರ ಆಹಾರ ಇತ್ಯಾದಿಗಳನ್ನು ಸೇವಿಸಿದಾಗ, ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚು, ಹಾಗಾಗಿ ಆಹಾರ ಕ್ರಮದ ಬಗ್ಗೆ
ಕಾಳಜಿ ವಹಿಸಬೇಕಾಗುತ್ತದೆ.ತುಂಬಾ ಜನರು ಫಡ್ ಪಾಯಿಸನ್ ಬಗ್ಗೆ ದೂರು ನೀಡುತ್ತಿರುತ್ತಾರೆ. ವಿಷವು ಆಹಾರದ ಮೂಲಕ ದೇಹ ಸೇರಿದಾಗ, ನಿಮಗೆ ಸಮಸ್ಯೆಯ್ನುಂಟು ಮಾಡಬಹುದು.


food-poisoning-symptoms-home-remedies- ಮನೆ ಮದ್ದುಗಳು, ಫುಡ್ ಪಾಯಿಸನ್

ತಲೆ ನೋವು , ತಲೆ ತಿರುಗುವಿಕೆ, ಹೊಟ್ಟೆಯ ಸೆಳೆತ, ಅತಿಸಾರ ಮೊದಲಾದ ಸಮಸ್ಯೆಗಳನ್ನು ಎದುರಿಸಬಹುದು. ಆಹಾರ ವಿಷವನ್ನು ನಿರ್ಲಕ್ಷಿಸಬಾರದು. ಫುಡ್ ಪಾಯಿಸನ್ ಆದ ವ್ಯಕ್ತಿ ಸಾಮಾನ್ಯವಾಗಿ ಮೂರು ದಿನದಲ್ಲಿ ಗುಣಮುಖನಾಗುತ್ತಾನೆ. ಪರಿಸ್ಥಿತಿ ತೀವ್ರವಾದರೆ, ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಬೇಯಿಸಿದ ಮೌಂಸವನ್ನು ಸೇವಿಸಿದರೆ, ಅಥವಾ ಕಚ್ಚಾ ಹಾಲು ಅಥವಾ ಮೊಳಕೆಯೊಡೆದ ಧಾನ್ಯಗಳನ್ನು ಸೇವಿಸಿದರೆ, ಆಹಾರ ವಿಷವನ್ನಾಗಿ ಪರಿವರ್ತಿತವಾಗುತ್ತದೆ.

ಫುಡ್ ಪಾಯಿಸನ್ ಗೆ ಕಾರಣಗಳು

ಸಾಮಾನ್ಯವಾಗಿ ಬ್ಯಾಕ್ಟೇರಿಯಾ ಅಥವಾ ವೈರಸ್ ಗಳು ಆಹಾರವನ್ನು ಸೇವಿಸುವ ಮೂಲಕ ಅಥವಾ ಕೊಳಕು ಪಾತ್ರೆಗಳ ಮೂಲಕ ನಿಮ್ಮ ದೇಹವನ್ನು ಪ್ರವೇಶಿಸಬಹುದು. ಫ್ರೀಡ್ಜ್ ನಲ್ಲಿ ಇಡದ ಹಾಗೂ ಫ್ರೀಡ್ಜ್ ನಲ್ಲಿ ದೀರ್ಘಕಾಲ ಡೈರಿ ಉತ್ಪನ್ನಗಳು ಸಹ ಫುಡ್ ಪಾಯಿಸನ್ ಗೆ ಕಾರಣವಾಗಬಹುದು. ಫ್ರೀಡ್ಜ್ ನಲ್ಲಿ 2-3 ದಿನಗಳವರೆಗೆ ಇಡದ ಆಹಾರವು ಯಾವುದೇ ಖುತುವಿನಲ್ಲಿ ಹಾನಿಯನ್ನುಂಟು ಮಾಡುತ್ತದೆ. ವಿಶೇಷವಾಗಿ ಹಣ್ಣು ಗಳನ್ನು ಹಾಗೂ ತರಕಾರಿಗಳನ್ನು ಕೊಳೆಯದೇ ತಿನ್ನಬೇಡಿ.

ಫುಡ್ ಪಾಯಿಸನ್ ಲಕ್ಷಣಗಳು

ಫುಡ್ ಪಾಯಿಸನ್ ಉಂಟಾಗಲು ಬ್ಯಾಕ್ಟೇರಿಯಾ ಅಥವಾ ವೈರಸ್ ಗಳು ಕಾರಣವಾಗಬಹುದು. ಹೊಟ್ಟೆ ನೋವು, ವಾಕರಿಕೆ, ಅತಿಸಾರ, ಜ್ವರ. ದೇಹ ನೋವು ಹೀಗೆ ಅನೇಕ ಲಕ್ಷಣಗಳು ಕಂಡು ಬರುತ್ತವೆ. ನಿಮ್ಮ ಆಹಾರ ದೀರ್ಘಕಾಲದವರೆಗೆ ಜೀರ್ಣಿಸಿಕೊಳ್ಳದಿದ್ದರೆ, ಹೊಟ್ಟೆ ಉಬ್ಬುವಿಕೆ ಸೇರಿದಂತೆ ಹೊಟ್ಟೆಯ ಅನೇಕ ಸೋಂಕಿನ ಲಕ್ಷಣಗಳು ಕಾಣಬಹುದು.ವಿಶೇಷವಾಗಿ ಗರ್ಭಿಣಿಯರು, ವಯಸ್ಸಾದವರು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಇದನ್ನು ನಿರ್ಲಕ್ಷಿಸಬಾರದು.


food-poisoning-symptoms-home-remedies- ಮನೆ ಮದ್ದುಗಳು, ಫುಡ್ ಪಾಯಿಸನ್

ಫುಡ್ ಪಾಯಿಸನ್ ಹೇಗೆ ತಡೆಗಟ್ಟುವುದು?

ಕಚ್ಚಾ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಉಪ್ಪು ನೀರಿನಿಂದ ಚೆನ್ನಾಗಿ ತೊಳೆಯಿರಿ
ಅಡಿಗೆ ಸ್ವಚ್ಛವಾಗಿಡಬೇಕು. ಚಾಕುಗಳು, ಕತ್ತರಿಸುವ ಬೋರ್ಡ್ ಗಳು ಪ್ರತಿ ದಿನ ಸೋಪಿನಿಂದ ತೊಳೆಯಬೇಕು.
ಫ್ರಿಡ್ಜ್ ಅನ್ನು ಒಳಗಿನಿಂದ ಸಾಬೂನು ನೀರಿನಿಂದ ಸ್ವಚ್ಛಗೊಳಿಸಬೇಕು. ಯಾವುದೇ ರಸ ಅಥವಾ ಆಹಾರ ಪದಾರ್ಥ ಫ್ರೀಡ್ಜ್ ನಲ್ಲಿ ಇದ್ದರೆ, ತಕ್ಷಣ ಸ್ವಚ್ಛಗೊಳಿಸಬೇಕು.ಹೊರಗಿನ ಆಹಾರವನ್ನು ಸೇವಿಸಬೇಡಿ. ವಿಶೇಷವಾಗಿ ಖುತುವಿನಲ್ಲಿ ಸಮುದ್ರದ ಆಹಾರ ಸೇವಿಸುವುದನ್ನು ಅವೈಡ್ ಮಾಡಿ.
ಹಾಳಾದ ಆಹಾರ, ಅಥವಾ ತಡವಾಗಿ ಇಟ್ಟ ಆಹಾರವನ್ನು ಸೇವಿಸಬೇಡಿ

ಶುದ್ಧ ನೀರು ಕುಡಿಯಿರಿ.

ಯಾವುದೇ ಸೋಂಕಿತ ಅಥವಾ ಕೊಳಕು ವಸ್ತುಗಳನ್ನು ಸ್ಪರ್ಶಿಸಿದಾಗ , ಸೋಪ್ ನಿಂದ ಕೈಗಳನ್ನು ತೊಳೆಯಿರಿ.
ಸೋಂಕು ಸಂಭವಿಸಿದಾಗ ಏನು ಮಾಡಬೇಕು ನಮ್ಮ ದೇಹವು ಫುಡ್ ಪಾಯಿಸನ್ ನಿಂದ ಬಳಲುತ್ತಿರುವಾಗ, ವಿಷವನ್ನು ಹೊರಹಾಕಲು ನೀರನ್ನು ಬಳಸುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚು ನೀರನ್ನು ಸೇವಿಸುವ ಮೂಲಕ ದೇಹವನ್ನು ಕಾಪಾಡಬಹುದು.
ವಾಂತಿ, ಮತ್ತು ಅತಿಸಾರ ಹೊಂದಿದ್ದರೆ, ನಂತರ ದ್ರವಗಳನ್ನು ಮಾತ್ರ ಸೇವಿಸಿ, ಅಗಿಯುವಂತಹ ಆಹಾರವನ್ನು ಸೇವಿಸಬೇಡಿ.
ಬೆಚ್ಚಿಗಿನ ನೀರನ್ನು ಕುಡಿಯಿರಿ. ಸಾಧ್ಯವಾದಷ್ಟು ಕಡಿಮೆ ಮಸಾಲೆ ಸೇವಿಸಿರಿ. ಅತಿಸಾರ, ವಾಂತಿ , ಪೊಟ್ಯಾಶಿಯಂ ಮತ್ತು ಇತರ ಖನಿಜಗಳು ದೇಹದಿಂದ ನೀರಿನೊಂದಿಗೆ ಕಡಿಮೆಯಾಗುತ್ತವೆ. ಆದ್ದರಿಂದ ನೀರಿನಿಂದ ಎಲೆಕ್ರ್ಟಿಕಲ್ ಪೌಡರ್ ತೆಗೆದುಕೊಳ್ಳಿ.
ಅಲ್ಲದೇ ಉಪ್ಪು ಹಾಗೂ ಸಕ್ಕರೆ ದ್ರಾವಣ ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ