ಕೀಲುನೋವಿಗೆ ರಾಮಬಾಣ ಮೀನಿನ ಎಣ್ಣೆ..!

  • by

ಕೀಲುನೋವು ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಹಲವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೀನು ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತು. ಅದೇ ರೀತಿ ಮೀನಿನ ಎಣ್ಣೆ ದೇಹಕ್ಕೆ ವರದಾನವಾಗಬಹುದು. ಯೆಸ್, ಮೀನಿನ ಎಣ್ಣೆ ಚರ್ಮವನ್ನು ಹಾಗೂ ವಿವಿಧ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ. ಮೀನಿನ ಎಣ್ಣೆಯನ್ನು ಪ್ರತಿಯೊಬ್ಬರು ಕೀಲು ನೋವು ನಿವಾರಣೆಗೆ ಬಳಸಲಾಗುತ್ತದೆ. ಸಂಶೋಧನೆ ಪ್ರಕಾರ, ಮೀನಿನ ಎಣ್ಣೆ ಕೀಲು ನೋವು ನಿವಾರಣೆಗೆ ರಾಮಬಾಣ ಎಂದು ತಿಳಿದು ಬಂದಿದೆ. ಹೇಗೆ..? ಎಂದು ಮಾಹಿತಿ ಇಲ್ಲಿದೆ.
ಮೀನಿನ ಎಣ್ಣೆ ವಾಸನೆಯಿಂದಾಗಿ, ತುಂಬಾ ಜನರು ಇದನ್ನು ಬಳಸುವುದಿಲ್ಲ.


fish-oil, remedy,disease, arthritis, joint pain ,  ಮೀನು ಎಣ್ಣೆ, ಆರೋಗ್ಯ ಪ್ರಯೋಜನಗಳು, ಸಂಧಿವಾತ, ಕೀಲುನೋವು,

ಒಮೆಗಾ -3 ಫ್ಯಾಟಿ ಆಸಿಡ್!

ಮೀನಿನ ಎಣ್ಣೆಯಲ್ಲಿ ಎಲಬುಗಳನ್ನು ಬಲಪಡಿಸುವ ಎಲ್ಲಾ ಅಗತ್ಯ ಅಂಶಗಳಿವೆ. ವಿಶೇಷವಾಗಿ ಒಮೆಗಾ – 3 ಕೊಬ್ಬಿನಾಮ್ಲಗಳು, ಮೂಳೆಗಳು ಜತೆಗೆ ಹೃದಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಮೀನು ಎಷ್ಟು ಸೇವಿಸಬೇಕು..?

ಮಹಿಳೆಯರು ವಾರಕ್ಕೆ 2-3 ಬಾರಿ 150 ಗ್ರಾಂ ಎಣ್ಣೆಯುಕ್ತ ಮೀನುಗಳನ್ನು ಸೇವಿಸಬೇಕು. ಅದೇ ರೀತಿ ಪುರುಷರು ದಿನಕ್ಕೆ ಸುಮಾರು 610 ಮಿ.ಗ್ರಾಂ ಎಣ್ಣೆ ಅಥವಾ ಮೀನು ಗಳನ್ನು ಸೇವಿಸಬೇಕು. ವಿವಿಧ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಾಕಷ್ಟು ಕಂಡು ಬರುತ್ತವೆ. ನೀವು ಮೀನು ತಿನ್ನಲು ಇಷ್ಟಪಡದಿದ್ದರೆ, ಅದರ ಕ್ಯಾಫ್ಸುಲ್ ಗಳನ್ನು ಸಹ ಸೇವಿಸಬಹುದು. ಎರಡೇ ಒಂದೇ ಪ್ರಯೋಜನಗಳನ್ನು ಹೊಂದಿದೆ.

ಸಸ್ಯಹಾರಿಗೆ ಒಮೆಗಾ -3 ಆಹಾರಗಳು!

ಒಣ ಹಣ್ಣುಗಳು, ಸೂರ್ಯಕಾಂತಿ ಬೀಜಗಳು, ಸೋಯಾಬೀನ್ , ಕೋಸುಗಡ್ಡೆ , ತೋಪು, ಹಸಿರು ಬೀನ್ಸ್ , ಎಲೆಕೋಸು, ಮತ್ತು ಸ್ಟ್ರಾಬರಿಗಳಲ್ಲಿ ಬಹಳಷ್ಟು ಒಮೆಗಾ -3 ಕೊಬ್ಬಿನಾಮ್ಲಗಳಿವೆ. ಹಾಲು , ಚೀಸ್, ಸೋಯಾ ಹಾಲು ಸಸ್ಯಹಾರ ಸೇವನೆ ಮಾಡುವವರಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಈ ಕಾಯಿಲೆಗಳನ್ನು ನಿವಾರಿಸುತ್ತೆ…!

ಒಮೆಗಾ -3 ಫ್ಯಾಟಿ ಆ್ಯಸಿಡ್ ಆಹಾರಗಳು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಶರೀರದಲ್ಲಾಂಗುವ ನೋವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ಟ್ರೋಕ್ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖವಾಗಿದೆ. ಸಂಧಿವಾತವನ್ನು ನಿವಾರಿಸುವಲ್ಲಿ ಮೀನು ನೆರವಾಗುತ್ತದೆ. ಇನ್ನು ಮೀನಿನ ಎಣ್ಣೆ ಬುದ್ಧಿಶಕ್ತಿ ಹಾಗೂ ಚರ್ಮಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ,

ಮೀನಿನ ಎಣ್ಣೆಯ ಆರೋಗ್ಯ ಪ್ರಯೋಜನಗಳು!

ಹೃದಯದ ಆರೋಗ್ಯಕ್ಕೆ!

ಮೀನಿನ ಎಣ್ಣೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ ರಕ್ತನಾಳದಕಾರ್ಯನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಇದರಲ್ಲಿರುವ ಒಮೆಗಾ – 3 ಕೊಬ್ಬಿನಾಮ್ಲಗಳು ರಕ್ತದ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯಘಾತದ ಅಪಾಯವನ್ನು ತಡೆಗಟ್ಟುತ್ತದೆ.


fish-oil, remedy,disease, arthritis, joint pain ,  ಮೀನು ಎಣ್ಣೆ, ಆರೋಗ್ಯ ಪ್ರಯೋಜನಗಳು, ಸಂಧಿವಾತ, ಕೀಲುನೋವು,

ಮೂಳೆ ಆರೋಗ್ಯ!

ಮೀನಿನ ಎಣ್ಣೆ ಸೇವಿಸುವುದರಿಂದ ಮೂಳೆಗಳು ಆರೋಗ್ಯವಾಗಿರುತ್ತದೆ. ಇದರ ಸೇವನೆಯಿಂದ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಮೀನಿನ ಎಣ್ಣೆಯನ್ನು ಸೇವಿಸುವುದರಿಂದ ಸಂಧಿವಾತದ ನೋವು ಕೂಡಾ ಕಡಿಮೆ ಯಾಗುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆ , ಚಯಾಪಚಯ ಹೆಚ್ಚಳ!

ಬ್ಯಾಕ್ಟೇರಿಯಾ ವೈರಸ್ ನಿಂದಾಗಿ ರೋಗ ನಿರೋಧಕ ಶಕ್ತಿ ಬಲಪಡಿಸಲು ಮೀನಿನ ಎಣ್ಣೆ ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದಲ್ಲದೇ, ನಿಮ್ಮ ದೇಹವನ್ನು ಆರೋಗ್ಯಕರವಾಗಿಸುತ್ತದೆ.

ಖಿನ್ನತೆ ಮತ್ತು ಆತಂಕ ನಿವಾರಣೆ

ಮೀನಿನ ಎಣ್ಣೆ ಖಿನ್ನತೆ ಹಾಗೂ ಆತಂಕವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣಿನ ದೃಷ್ಟಿಗೂ ಮೀನು ಹೆಚ್ಚು ಪ್ರಯೋಜನ ಎಂದು ಹೇಳಲಾಗುತ್ತದೆ. ವಯಸ್ಸಾದಂತೆ ದೃಷ್ಟಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಗರ್ಭಧಾರಣೆಯ ತೊಂದರೆ ನಿವಾರಣೆ

ಗರ್ಭಧಾರಣೆಗೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಮೀನಿನ ಎಣ್ಣೆ ಮಹತ್ವದ ಪಾತ್ರ ವಹಿಸುತ್ತದೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.


fish-oil, remedy,disease, arthritis, joint pain ,  ಮೀನು ಎಣ್ಣೆ, ಆರೋಗ್ಯ ಪ್ರಯೋಜನಗಳು, ಸಂಧಿವಾತ, ಕೀಲುನೋವು,

ತೂಕ ಇಳಿಕೆಗೆ ಸಹಾಯಕಾರಿ

ತೂಕ ನಷ್ಟಕ್ಕೂ ಮೀನಿನ ಎಣ್ಣೆ ಪ್ರಯೋಜನವಾಗಬಲ್ಲದ್ದು. ಮಹಿಳೆಯರು ತಮ್ಮ ದೇಹದ ಆಕಾರವನ್ನು ಕಾಪಾಡಿಕೊಳ್ಳಲು ಹಾಗೂ ಪುರುಷರು ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿ ದಿನ 6 ಗ್ರಾಂ ಮೀನಿನ ಎಣ್ಣೆ ದೇಹದ ಹೆಚ್ಚುವರಿ ಕೊಬ್ಬನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೂತ್ರ ಪಿಂಡದ ಸಮಸ್ಯೆ ನಿವಾರಣೆ

ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಚಾಗಿರುವುದರಿಂದ ಮೂತ್ರ ಪಿಂಡದ ಅಪಾಯವನ್ನು ತಡೆಗಟ್ಟುತ್ತದೆ.

ಮೀನಿನ ಎಣ್ಣೆಯ ಸೈಡ್ ಎಫೆಕ್ಟ್

ಮೀನಿನ ಎಣ್ಣೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಂಡಿದ್ದರೂ ಸಹ , ಸೈಡ್ ಎಫೆಕ್ಟ್ ಗಳನ್ನು ಕಾಣಬಹುದು.
ಬೇವರು, ತಲೆನೋವು, ಹಾಗೂ ಎದೆಯುರಿ, ವಾಕರಿಕೆ , ಅತಿಸಾರ ಮೊದಲಾದ ಸೈಡ್ ಎಫೆಕ್ಟ್ ಗಳನ್ನು ನೀವು ಕಾಣಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ