ಮೊದಲ ಬಾರಿಗೆ ಸ್ಪಾ, ಬಾಡಿ ಮಸಾಜ್ ಗೆ ಹೋಗುವಾಗ ಈ ವಿಷಯ ತಿಳಿದುಕೊಳ್ಳಿ!

  • by

ಬಾಡಿ ಮಸಾಜ್ ಅಥವಾ ಬಾಡಿ ಸ್ಪಾ ಬಗ್ಗೆ ಎಲ್ಲರೂ ಸಾಮಾನ್ಯವಾಗಿ ಹೋಗುತ್ತಾರೆ. ಬಹಳಷ್ಟು ಸಲ ಬಾಡಿ ಮಸಾಜ್ ಹಾಗೂ ಸ್ಪಾ ದೇಹಕ್ಕೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸುತ್ತದೆ. ಹೆಚ್ಚು ಒತ್ತಡವಿದ್ದರೆ ಅಥವಾ ದೇಹದಲ್ಲಿ ನೋವು ಇದೆ ಎಂದು ಭಾವಿಸಿದರೆ, ಬಾಡಿ ಮಸಾಜ್ ತುಂಬಾ ಪ್ರಯೋಜನಕಾರಿಯಾಗಲಿದೆ. ನೀವು ಮೊದಲ ಬಾರಿಗೆ ಸ್ಪಾ ಅಥವಾ ಬಾಡಿ ಮಸಾಜ್ ಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದೀರಾ..ಹಾಗಾದ್ರೆ ಈ ವಿಷಯಗಳನ್ನು ಒಮ್ಮೆ ತಿಳಿದುಕೊಳ್ಳಿ. ಇದು ನಿಮಗೆ ಉಪಯುಕ್ತವಾಗಬಹುದು..!

ಮಸಾಜ್, ಸ್ಪಾ ಥೆರಪಿ,  First time spa, Before you know,

ಇನ್ನು ಸ್ಪಾ ಚಿಕಿತ್ಸೆ ಕೂಡಾ ದೇಹದ ಅಂಗಾಂಶಗಳಲ್ಲಿ ತುಂಬಾ ವ್ಯತ್ಯಾಸವನ್ನುಂಟು ಮಾಡುತ್ತದೆ. ನಿಮಗೆ ವಿಶ್ರಾಂತಿ ನೀಡುತ್ತದೆ. ಸ್ಪಾ ಜತೆಗೆ ಸ್ಟೀಮ್ ಬಾತ್, ಥರ್ಮಲ್ ಸ್ಪಾ ಇತ್ಯಾದಿಗಳನ್ನು ಪಡೆದುಕೊಳ್ಳಬಹುದು. ನೀವು ಮೊದಲ ಬಾರಿಗೆ ಬಾಡಿ ಮಸಾಜ್, ಸ್ಪಾಗೆ ಹೋಗುತ್ತಿದ್ದರೆ. ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ,

ನಿಮ್ಮ ಬಟ್ಟೆಗಳ ಬಗ್ಗೆ ಗಮನವಿರಲಿ..!

ದೇಹಕ್ಕೆ ಮಸಾಜ್ ಗೆ ಒಳಗಾಗುವ ಮೊದಲು ನಿಮ್ಮ ಬಟ್ಟೆಗಳ ಬಗ್ಗೆ ನಿಗಾ ವಹಿಸಿ. ಸ್ಪಾ ಸಮಯದಲ್ಲಿ ಬಟ್ಟೆಗಳಿಗೆ ಎಣ್ಣೆ ಕಲೆಗಳಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ವೈಟ್  ಬಟ್ಟೆಗಳನ್ನು ಧರಿಸಬೇಡಿ. ಏಕೆಂದರೆ, ಮಸಾಜ್ ನಂತರ ನಿಮ್ಮ ದೇಹ ಸಾಕಷ್ಟು ಎಣ್ಣೆಯಿಂದ ಕೂಡಿರುತ್ತದೆ. ಇದು ಕಲೆಯಾಗುವ ಸಂಭವ ಹೆಚ್ಚು. ಇನ್ನು ಬಟ್ಟೆಗಳು ಬಿಗಿಯಾಗಿರದಂತೆ ನೋಡಿಕೊಳ್ಳಿ. ಬಿಗಿಯಾದ ಉಡುಪುಗಳನ್ನು ಧರಿಸಬೇಡಿ. ಮಸಾಜ್ ನಂತರ ಅನೇಕ ಜನರು ದಣಿದಿರುತ್ತಾರೆ. ಏಕೆಂದರೆ ಚರ್ಮದ ಮೇಲೆ ಒತ್ತಡವಿರುತ್ತದೆ. ಆದ್ದರಿಂದ ಬಟ್ಟೆಗಳು ಬಿಗಿಯಾಗಿರಬಾರದು.

ಮಸಾಜ್, ಸ್ಪಾ ಥೆರಪಿ,  First time spa, Before you know,

2. ಮಸಾಜ್ ಗೂ ಮುನ್ನ ಊಟ ಮಾಡಬೇಡಿ..!

ಇದು ಬಹಳ ಮುಖ್ಯವಾದ ಟಿಪ್ಸ್ ಗಳಲ್ಲಿ ಒಂದು. ಆದ್ರೆ ಹೆಚ್ಚಿನ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಮಸಾಜ್ ಇಡೀ ದೇಹದ ಮೇಲೆ ಒ್ತಡವನ್ನುಂಟು ಮಾಡುತ್ತದೆ. ಮತ್ತು 1 ಗಂಟೆಗೂ ಮುನ್ನ ಆಹಾರ ಸೇವಿಸಿದರೆ.ಸಮಸ್ಯೆಯಾಗಬಹುದು. ತುಂಬಾ ಫ್ರೆಶರ್ ಜಾಸ್ತಿ ಇರುವ ಥೆರಪಿ ನೀವು ಆಯ್ಕೆ ಮಾಡಿಕೊಂಡಿದ್ದರೆ ಮಸಾಜ್ ಮಾಡುವ ಸಮಯದಲ್ಲಿ ವಾಂತಿ ಸಂಭವಿಸಬಹುದು. ಅಜೀರ್ಣ ಸಮಸ್ಯೆ ಉಂಟಾಗಬಹುದು. ಮಸಾಜ್ ಮಾಡುವ ಮೊದಲು ಕನಿಷ್ಠ ಎರಡೂವರೆ ಗಂಟೆಗಳ ಮೊದಲು ಹೆಚ್ಚು ಭಾರವಾದ ಆಹಾರಗಳನ್ನು ಸೇವಿಸಬೇಡಿ. ಇದಲ್ಲದೇ, ಮಸಾಜ್ ಮಾಡುವ ಮೊದಲು ನೀರಿನ ಸೇವನೆಯನ್ನು ಕಡಿಮೆ ಮಾಡಬೇಕು. ಆದ್ದರಿಂದ ನಿಮ್ಮ ಹೊಟ್ಟೆ ಸ್ವಲ್ಪ ಖಾಲಿಯಾಗಿರುವಂತೆ ನೋಡಿಕೊಳ್ಳಿ.

3. ಮಸಾಜ್ ಮೊದಲು ಸ್ನಾನ ಮಾಡಿ..!

ಜನರು ಹೆಚ್ಚಾಗಿ ಸ್ಪಾ ಅಥವಾ ಮಸಾಜ್ ಮಾಡಿದ ನಂತರ ಸ್ನಾನ ಮಾಡುತ್ತಾರೆ. ಆದರೆ ಮಸಾಜ್ ಗೆ ತೆರಳುವ ಮುನ್ನ ಮೊದಲು ಸ್ನಾನ ಮಾಡಬೇಕು. ನಿಮಗೆ ಸ್ನಾನ ಮಾಡಲು ಸಮಯವಿಲ್ಲದಿದ್ದರೆ, ನಿಮ್ಮ ವಾಯಿಪ್ಸ್ ನಿಂದ ಕ್ಲಿನ್ ಮಾಡಿಕೊಳ್ಳಬಹುದು. ಬೆವರು ಹಾಗೂ ಧೂಳಿನಿಂದಾಗಿ ನಿಮ್ಮ ದೇಹದಲ್ಲಿ ಎಣ್ಣೆಯ ಪರಿಣಾಮ ಕಡಿಮೆಯಾಗುತ್ತದೆ. ಮತ್ತು ಸ್ಪಾ ಚಿಕಿತ್ಸೆ ಅಥವಾ ಬಾಡಿ ಮಸಾಜ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮಸಾಜ್ ಮಾಡಿದ ಕೆಲ ಗಂಟೆಗಳವರೆಗೂ ಸ್ನಾನ ಮಾಡಬೇಡಿ. ಏಕೆಂದರೆ ಥೆರಪಿ ಎಣ್ಣೆ ನಿಮ್ಮ ದೇಹದಲ್ಲಿ ಹೀರಿಕೊಳ್ಳಲಿ.

ಮಸಾಜ್, ಸ್ಪಾ ಥೆರಪಿ,  First time spa, Before you know,

4. ನಿಮಗೆ ಯಾವ ರೀತಿಯ ಮಸಾಜ್ ಬೇಕು ಖಚಿತಪಡಿಸಿಕೊಳ್ಳಿ!

ಯಾವುದೇ ಸ್ಪಾ ಅಥವಾ ಬಾಡಿ ಮಸಾಜ್ ತೆಗೆದುಕೊಳ್ಳುವುದಕ್ಕೂ ಮುನ್ನ ನಿಮ್ಮ ದೇಹಕ್ಕೆ ಯಾವ ರೀತಿ ಮಸಾಜ್ ಬೇಕು ಎಂದು ತಿಳಿದುಕೊಳ್ಳುವುದು ಉತ್ತಮ. ನಿಮ್ಮ ದೇಹಕ್ಕೆ ಒಗ್ಗಲಾರದ ಮಸಾಜ್ , ಸ್ಪಾ ಮಾಡಿಸಿದರೆ ಸಮಸ್ಯೆಯಾಗಬಹುದು. ಅಸ್ವಸ್ಥತೆಗೆ ಕಾರಣವಾಗಬಹುದು. ಯಾವ ರೀತಿಯ ಮಸಾಜ್ ಮಾಡಿಸಿಕೊಳ್ಳಬೇಕು ಎಂದು ನಿಮಗೆ ಅರ್ಥವಾಗದಿದ್ದರೆ, ಸ್ಪಾ ಮಾಡುವವರನ್ನು ಕೇಳಬಹುದು. ಯಾವ ರೀತಿಯ ಎಣ್ಣೆ ಬಳಸಬೇಕು. ದೇಹಕ್ಕೆ ಯಾವ ರೀತಿಯ ಒತ್ತಡವನ್ನು ಹಾಕಬೇಕು. ಆರಾಮದಾಯಕವಾಗಿ ಸ್ಪಾ ಹಾಗೂ ಮಸಾಜ್ ಹೇಗೆ ಮಾಡಿಸಿಕೊಳ್ಳುವುದು ಹೇಗೆ ಎಲ್ಲವು ನೀವು ಯಾವ ಮಸಾಜ್ ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಪರವಾನಗಿ ಪಡೆದ  ತಜ್ಞರಿಂದಲೇ ಸ್ಪಾ ಮಾಡಿಸಿಕೊಳ್ಳಬೇಕು. ಯಾವಾಗಲೂ ಉತ್ತಮ ಸ್ಪಾ ಸೆಂಟರ್ ಅನ್ನೇ ಆಯ್ಕೆ ಮಾಡಿಕೊಳ್ಳಬೇಕು.

5 ನಿಮಗೆ ಅಲರ್ಜಿ ಇದ್ದರೆ ತಿಳಿಸಿ

ಆಗಾಗ್ಗೇ ತುಂಬಾ ಜನರು ಸ್ಪಾ, ಹಾಗೂ ಬಾಡಿ ಮಸಾಜ್ ಮಾಡಿಸುವಾಗ ಅಲರ್ಜಿ ಹಾಗೂ ಇತರ ಸಮಸ್ಯೆಗಳ ಬಗ್ಗೆ ಹೇಳದೇ ತಪ್ಪು ಮಾಡಿತ್ತಿರುತ್ತಾರೆ. ತುಂಬಾ ಜನರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ಅವರಿಗೆ ಲೋಷನ್ ಹಾಗೂ ದೇಹದ ವಾಯಿಶ್ಚರೈಸರ್ ಬಳಕೆಯ ಸಮಸ್ಯೆಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ ಮಸಾಜ್ ಮಾಡುವ ಮೊದಲು, ನೀವು ಸ್ಪಾ ತಜ್ಞರಿಗೆ ಅಲರ್ಜಿ ಬಗ್ಗೆ ಹೇಳಬೇಕು. ನಿಮ್ಮ ಚಿಕಿತ್ಸೆಕರಿಗೆ ಹೇಳದಿದ್ದರೆ ನಂತರ ಸಮಸ್ಯೆ ಅಥವಾ ಚರ್ಮದ ಕಿರಿಕಿರಿ, ನೋವು ಅನುಭವಿಸಬೇಕಾಗಿ ಬರಬಹುದು.. ಈ ಕಡೆ ಗಮನ ನೀಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ